For Quick Alerts
ALLOW NOTIFICATIONS  
For Daily Alerts

ಭಾರತದ 10 ಅತಿದೊಡ್ಡ ಮೀಡಿಯಾ, ಬ್ರಾಡ್ಕ್ಯಾಸ್ಟಿಂಗ್ ಕಂಪನಿಗಳು

By Siddu
|

ನಮ್ಮ ದೇಶದಲ್ಲಿ ಬಹು ಪ್ರಸಿದ್ದವಾಗಿರುವ, ಜಾಗತಿಕವಾಗಿ ಮನ್ನಣೆ ಪಡೆದಿರುವ ಹಾಗೂ ತನ್ನ ವ್ಯಾಪಕ ಜಾಲವನ್ನು ಹೊಂದಿರುವ ಅನೇಕ ಮಾದ್ಯಮ ಮತ್ತು ಪ್ರಸಾರ (media and broadcasting) ಸಂಸ್ಥೆಗಳಿವೆ. ಈ ಸಂಸ್ಥೆಗಳು ಭಾರತದಲ್ಲಿ 2015-16ರಲ್ಲಿ ಮೊದಲ ಹತ್ತು ಸ್ಥಾನಗಳನ್ನು ಪಡೆದ ಮಾದ್ಯಮ ಮತ್ತು ಪ್ರಸಾರ ಕ್ಷೇತ್ರದ ನಮ್ಮ ಹೆಮ್ಮೆಯ ಕಂಪನಿಗಳಾಗಿವೆ.

ಪ್ರಸಾರ ಮತ್ತು ಮಾದ್ಯಮಲ್ಲಿನ ಹೊಸ ತಂತ್ರಜ್ಞಾನದ ಅನ್ವೇಷಣೆಯಿಂದಾಗಿ ಇದು ಒಂದು ಬೃಹತ್ ಉದ್ಯಮವಾಗಿ ರೂಪಾಂತರಗೊಳ್ಳುತ್ತಿದ್ದು, ಜಾಗತಿಕವಾಗಿ ತನ್ನ ವ್ಯಾಪಕ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದೆ.

ಹಾಲಿವುಡ್ ನಂತರ ಭಾರತ ಅತ್ಯಧಿಕ ಚಲನಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ. ಇದರಲ್ಲಿ ಬಾಲಿವುಡ್ ಮತ್ತು ಸೌತ್ ಇಂಡಿಯಾದ ಸಿನಿಮಾಗಳು ಬಹುಪಾಲನ್ನು ಪಡೆದಿವೆ. ಬಾರತದ ಮಾರುಕಟ್ಟೆಯನ್ನು ವ್ಯಾಪಕವಾಗಿ ವಿಸ್ತರಿಸುವಲ್ಲಿ ಈ ಉದ್ಯಮ ಖಂಡಿತವಾಗಿಯೂ ತುಂಬಾ ನೇರವಾಗಿದೆ.

ಭಾರತದಲ್ಲಿನ ಪ್ರಸಿದ್ದ ಅಗ್ರ ಹತ್ತು ಮಾದ್ಯಮ ಮತ್ತು ಪ್ರಸಾರ (media and broadcasting) ಕಂಪನಿಗಳ ವಿವರ ಇಲ್ಲಿದೆ ನೋಡಿ.

ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್

ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್

ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ ಮಾಧ್ಯಮ, ದೂರದರ್ಶನ ಮತ್ತು ಮನೋರಂಜನಾ ಕ್ಷೇತ್ರದ ಪ್ರಮುಖ ಕಂಪನಿಯಾಗಿದೆ.
1982ರಲ್ಲಿ ಇದನ್ನು ಸ್ಥಾಪಿಸಲಾಗಿದ್ದು, ಹಿಂದೆ ಝೀ ಟೆಲಿಫಿಲ್ಮ್ಸ್ ಲಿಮಿಟೆಡ್ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿತ್ತು. ಇದು 3000 ಚಲನಚಿತ್ರಗಳ ಶೀರ್ಷಿಕೆ ಹಕ್ಕನ್ನು ಹೊಂದಿದ್ದು, ಜಗತ್ತಿನ 167 ದೇಶಗಳಲ್ಲಿ ೫೦೦ ಮಿಲಿಯನ್ ವೀಕ್ಷಕರನ್ನು ಹೊಂದಿದೆ.
ಝೀ ಟಿವಿ, ಝೀ ಸಿನಿಮಾ, ಝೀ ಪ್ರೀಮಿಯರ್, ಝೀ ಆಕ್ಷನ್, ಝೀ ಕ್ಲಾಸಿಕ್, ಟೆನ್ ಕ್ರಿಕೆಟ್, ಟೆನ್ ಆಕ್ಷನ್ ಮುಂತಾದ ಬ್ರಾಂಡುಗಳು ಹೆಸರುವಾಸಿಯಾಗಿವೆ.
ಇದು 1998ರಲ್ಲಿ ಝೀ ಸಿನಿ ಪ್ರಶಸ್ತಿಯನ್ನು ಪ್ರಾರಂಭಿಸಿದೆ.
1999-2000 ವರ್ಷದ ಅವಧಿಯಲ್ಲಿ ಹಲವಾರು ಪ್ರಾದೇಶಿಕ ಚಾನೆಲ್ ಮತ್ತು ಇಟಿಸಿ ನೆಟ್ವರ್ಕ್ ಗಳನ್ನು ವಿಲೀನ ಮತ್ತು ಅವಿಲೀನ ಮಾಡಿದೆ.
ಈ ಸಂಸ್ಥೆಯ ನಿವ್ವಳ ಲಾಭ ರೂ. 831.77 ಕೋಟಿ ಹಾಗೂ ಒಟ್ಟು ಆದಾಯ 3426.18 ಕೋಟಿ ರೂ. ಇದೆ.

ಸನ್ ಟಿವಿ ನೆಟ್ವರ್ಕ್

ಸನ್ ಟಿವಿ ನೆಟ್ವರ್ಕ್

 ಇದು 1985ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಮೂಲತಹ ತಮಿಳು ಚಾನೆಲ್ ಆಗಿ ಪ್ರಾರಂಭವಾಗಿ ನಂತರ ದಕ್ಷಿಣ ಭಾರತದ ಕನ್ನಡ, ತೆಲುಗು, ಮಲಯಾಳಂ ಭಾಷೆಗಳಿಗೆ ವಿಸ್ತರಣೆಯಾಯಿತು.
ಸನ್ ಟಿವಿ, ಕೆಟಿವಿ, ಜೆಮಿನಿ ನ್ಯೂಸ್, ಜೆಮಿನಿ ಮ್ಯೂಸಿಕ್, ಸನ್ ಮ್ಯೂಸಿಕ್, ಸನ್ ನ್ಯೂಸ್, ಸೂರ್ಯ ಟಿವಿ, ಜೆಮಿನಿ ಟಿವಿ, ತೇಜ ನ್ಯೂಸ್, ಉದಯ ಟಿವಿ, ಉದಯ ಮೂವಿಸ್, ಉದಯ ನ್ಯೂಸ್ ಆಗಿ ಈ ಚಾನೆಲ್ ವ್ಯಾಪಕ ಪ್ರಸಿದ್ದಿ ಪಡೆದಿದೆ.
ಆಸ್ಟ್ರೇಲಿಯಾ, ಯುರೋಪ್, ಯುಎಸ್ಎ, ಏಷಿಯಾ, ದಕ್ಷಿಣ ಆಪ್ರಿಕಾ ಸೇರಿದಂತೆ ಅನೇಕ ದೇಶಗಳಲ್ಲಿ ಸನ್ ಟಿವಿ ನೆಟ್ವರ್ಕ್ ಲಭ್ಯವಿದೆ. ೨೦೦೧ರಲ್ಲಿ ಇಂಡಿಯನ್ ಟೆಲಿವಿಷನ್ ಅಕೆಡೆಮಿ ಪ್ರಶಸ್ತಿಯನ್ನು ತೆಲುಗು, ಕನ್ನಡ, ತಮಿಳು, ಮಲಯಾಳಂ ಉತ್ತಮ ಟಿವಿ ಚಾನೆಲ್ ಗಾಗಿ ಪಡೆದಿದೆ.
2003ರಲ್ಲಿ ರೇಡಿಯೊ ಕಾರ್ಯಕ್ರಮಗಳು ಆರಂಭವಾಗಿದ್ದು, ಭಾರತದಾದ್ಯಂತ ೪೫ ಎಫ್ಎಂ ಬಾನುಲಿ ಕೇಂದ್ರದ ಪರವಾನಗಿಯನ್ನು ಹೊಂದಿದೆ.
ಸನ್ ಟಿವಿ ನೆಟ್ವರ್ಕ್ ಕಂಪನಿಯ ನಿವ್ವಳ ಲಾಭ 737.23 ಕೋಟಿ ರೂಪಾಯಿ ಆಗಿದ್ದು, ಒಟ್ಟು ಆದಾಯ 2243.62 ಕೋಟಿ ರೂಪಾಯಿ ಆಗಿದೆ.

ಡಿಬಿ ಕಾರ್ಪ್ ಲಿಮಿಟೆಡ್

ಡಿಬಿ ಕಾರ್ಪ್ ಲಿಮಿಟೆಡ್

ದೈನಿಕ್ ಭಾಸ್ಕರ್ , ದಿವ್ಯ ಭಾಸ್ಕರ್, ದೈನಿಕ್ ದಿವ್ಯ ಮರಾಠಿ, ಬ್ಯುಸಿನೆಸ್ ಭಾಸ್ಕರ್, ಡಿಬಿ ಸ್ಟಾರ್ , ಡಿಬಿ ಗೋಲ್ಡ್, ಡಿಎನ್ಎ ( ಫ್ರಾಂಚೈಸಿ ಆಧಾರದ ಮೇಲೆ) ಮತ್ತು ಸೌರಾಷ್ಟ್ರ ಸಮಾಚಾರ್ ಇವೇಲ್ಲವೂ ಡಿಬಿ ಕಾರ್ಪ್ ಲಿಮಿಟೆಡ್ ಸಂಸ್ಥೆಯ ಪ್ರಮುಖ ಪತ್ರಿಕೆಗಳೆಂದು ಹೆಸರುವಾಸಿಯಾಗಿದೆ.
ಇದು 1995ರಲ್ಲಿ ಮಲ್ಟಿ ಟೆಕ್ ಎನರ್ಜಿ ಲಿಮಿಟೆಡ್ ಆಗಿಅಸ್ತಿತ್ವಕ್ಕೆ ಬಂದಿತ್ತು.
ಕಂಪನಿಯು ವಿವಿಧ ವಯೋಮಾನದವರಿಗಾಗಿ ಮಾಸಿಕ ಪತ್ರಿಕೆಗಳಾದ ಆಹಾ ಜಿಂದಗಿ, ಬಾಲ ಭಾಸ್ಕರ್, ಯುವ ಭಾಸ್ಕರ್ ಗಳನ್ನು ಹೊರಡಿಸುತ್ತಿದೆ.
ಇದು ಭಾರತದ ಅತಿದೊಡ್ಡ ವಾರ್ತಾಪತ್ರಿಕೆ ಉತ್ಪಾದನಾ ಮತ್ತು ವಿತರಣಾ ಜಾಲ ಹೊಂದಿದೆ.

ಮೈ ಎಪ್ಎಂ (My FM) ಹೆಸರಿನಲ್ಲಿ ದೇಶದಾದ್ಯಂತ ಉತ್ತಮ ಸಂಪರ್ಕ ಜಾಲವನ್ನು ಹೊಂದಿದ್ದು, ಜೈಪುರ, ಅಹಮ್ಮದಾಬಾದ್, ಇಂದೋರ್, ಉದಯಪುರ, ಭೂಪಾಲ್, ಸೂರತ್ ಹೀಗೆ ದೇಶದ ೧೭ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. 2014ರ ಹಣಕಾಸು ವರ್ಷದಲ್ಲಿ 306.65 ಕೋಟಿ ರೂ. ಹಾಗೂ 2015ರ ಹಣಕಾಸು ವರ್ಷದಲ್ಲಿ 316.98 ಕೋಟಿ ರೂಪಾಯಿ ತೆರಿಗೆ ನಂತರದ ಲಾಭ ಪಡೆದಿದೆ.
ಡಿಬಿ ಕಾರ್ಪ್ ಲಿಮಿಟೆಡ್ ಸಂಸ್ಥೆಯ ನಿವ್ವಳ ಲಾಭ 316.98 ಕೋಟಿ ರೂ. ಹಾಗೂ ಒಟ್ಟು ಆದಾಯ 2009 ಕೋಟಿ ರೂಪಾಯಿ ಹೊಂದಿದೆ.

ಜಾಗರಣ್ ಪ್ರಕಾಶನ

ಜಾಗರಣ್ ಪ್ರಕಾಶನ

ಜಾಗ್ರಣ್ ಪ್ರಕಾಶನ ಲಿಮಿಟೆಡ್ 1975ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಪ್ರಕಾಶನ ಕ್ಷೇತ್ರದಲ್ಲಿ ವ್ಯಾಪಕ ವ್ಯವಹಾರವನ್ನು ಹೊಂದಿದೆ. ಜಾಗರಣ್ ಪ್ರಕಾಶನ ಲಿಮಿಟೆಡ್ ( ಜೆಪಿಎಲ್ ) ಸಂಸ್ಥೆ ಪ್ರಧಾನವಾಗಿ ಮ್ಯಾಗಜಿನ್ಸ್, ನಿಯತಕಾಲಿಕೆ ಮತ್ತು ಮಾಧ್ಯಮ ಸಂಬಂಧಿತ ಮುದ್ರಣ ಮತ್ತು ಪ್ರಕಾಶನ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ.

ಈ ಕಂಪನಿ ಜನಪ್ರಿಯ ದೈನಿಕ್ ಜಾಗರಣ್ ಪತ್ರಿಕೆಯನ್ನು ಕಾನ್ಪುರ್, ಗೋರಕ್ಪುರ ಮುಂತಾದ ಕಡೆಗಳಲ್ಲಿ ಸ್ವಾಧೀನ ಮಾಡಿಕೊಂಡಿದೆ. 1997ರಲ್ಲಿ ವಿವಿಧ ಉದ್ದೇಶಗಳಿಗಾಗಿ www.jagran.com ವೆಬ್ಸೈಟ್ ನ್ನು ಆರಂಭಿಸಿತು.
ಯಾಹೂ ಇಂಡಿಯಾದೊಂದಿಗೆ ಸಹ ಪ್ರಾಯೋಜಕತ್ವದಲ್ಲಿ ಹಿಂದಿ ನ್ಯೂಸ್ ಚಾನೆಲ್ ಮತ್ತು ಪ್ರಸ್ತುತ ವ್ಯವಹಾರಗಳ ಇಂಟರ್‌ನೆಟ್ ಪ್ರಾಪರ್ಟಿ ಪ್ರಾರಂಭಿಸಲು ೨೦೦೭ರಲ್ಲಿ ಜಂಟಿಯಾಗಿ ಸೇರ್ಪಡೆಗೊಂಡಿದೆ.

ಜಾಗರಣ್ ಪ್ರಕಾಶನ ಸಂಸ್ಥೆಯು ಮಿಡ್ ಡೇ ಇನ್ಫೋಮೀಡಿಯಾ ಲಿಮಿಟೆಡ್, Suvi ಇನ್ಫೋಮೀಡಿಯಾ ಮ್ಯಾನೇಜ್ಮೆಂಟ್ (ಇಂಡೋರ್) ಪ್ರೈವೇಟ್ ಲಿಮಿಟೆಡ್, ನಯಿ ದುನಿಯಾ ಮೀಡಿಯಾ ಲಿಮಿಟೆಡ್ ಇತ್ಯಾದಿ ಅಂಗಸಂಸ್ಥೆಗಳೊಂದಿಗೆ ಹೊರಾಂಗಣ ಜಾಹೀರಾತು, ಈವೆಂಟ್ ನಿರ್ವಹಣಾ ಸೇವೆಗಳು ಮತ್ತು ಡಿಜಿಟಲ್ ವ್ಯಾಪಾರ ನಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.
ಜಾಗರಣ್ ಪ್ರಕಾಶನ ಸಂಸ್ಥೆಯ ನಿವ್ವಳ ಲಾಭ 223.55 ಕೋಟಿ ರೂ. ಹಾಗೂ ಒಟ್ಟು ಆದಾಯ 1616.69 ಕೋಟಿ ರೂಪಾಯಿ ಆಗಿದೆ.

ಎರೋಸ್(Eros) ಇಂಟರ್ನ್ಯಾಷನಲ್ ಮೀಡಿಯಾ ಲಿಮಿಟೆಡ್

ಎರೋಸ್(Eros) ಇಂಟರ್ನ್ಯಾಷನಲ್ ಮೀಡಿಯಾ ಲಿಮಿಟೆಡ್

ಎರೋಸ್ ಇಂಟರ್ನ್ಯಾಷನಲ್ ಮೀಡಿಯಾ ಲಿಮಿಟೆಡ್ ಎರೋಸ್ ಗ್ರೂಪಿನ ಒಂದು ಭಾಗವಾಗಿದ್ದು, Rishima ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ 1994 ರಲ್ಲಿ ಒಂದು ಖಾಸಗಿ ಕಂಪನಿಯಾಗಿ ಸಂಘಟಿಸಲಾಯಿತು.

ಮಾದ್ಯಮ ಮತ್ತು ಮನರಂಜನಾ ವಲಯದೊಳಗೆ ಜಾಗತಿಕ ಸ್ಪರ್ಧಿಯಾಗಿದೆ. ಭಾರತ, ಅಮೆರಿಕಾ, ಯುಕೆ ಯುಎಇ, ಸಿಂಗಾಪುರ್ ಮುಂತಾದ ದೇಶಗಳಲ್ಲಿ ಕಚೇರಿಗಳನ್ನು ಹೊಂದಿದೆ. ಹೋಮ್ ಎಂಟರ್ಟೈನ್ಮೆಂಟ್, ಚಿತ್ರಮಂದಿರಗಳು, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮವಾಗಿ ಹಲವಾರು ವ್ಯವಹಾರ ಮೂಲಕ ಆದಾಯ ಗಳಿಸುತ್ತದೆ.

ಮುಘಲ್ ಎ ಅಜಮ್, ಲಗೇ ರಹೋ ಮುನ್ನಾಭಾಯಿ ಸೇರಿದಂತೆ ಸಾವಿರಕ್ಕೂ ಹೆಚ್ಚಿನ ಚಿತ್ರಗಳ ಹಕ್ಕನ್ನು ಹೊಂದಿದೆ. ಭಾರತೀಯ ಚಿತ್ರಗಳನ್ನು ಚಿತ್ರಮಂದಿರಗಳಿಗೆ, ಹೋಮ್ ಎಂಟರ್ಟೈನ್ಮೆಂಟ್ (ಡಿವಿಡಿ, VCDs ಮತ್ತು ಆಡಿಯೋ CD ರೂಪದಲ್ಲಿ), ಮತ್ತು ಕೆಬಲ್ ಟೆಲೆವಿಜನ್ ಚಾನೆಲ್ ಗಳಿಗೆ ವಿತರಣೆ ಮಾಡುವ ಮೂಲಕ ಆದಾಯ ಗಳಿಸುತ್ತಿದೆ.
ಸ್ಟಾರ್ ನೆಟ್ವರ್ಕ್ ಮತ್ತು T Series ಎರೋಸ್ ಉದ್ಯಮದ ಒಂದು ಭಾಗವಾಗಿವೆ.
ಪ್ರಸ್ತುತ ಸುನೀಲ್ ಲುಲ್ಲಾ ಇದರ ನೇತೃತ್ವ ವಹಿಸಿದ್ದು, ನಿವ್ವಳ ಲಾಭ 1071.70 ಕೋಟಿ ರೂ. ಹಾಗೂ ಒಟ್ಟು ಆದಾಯ 124.19 ಕೋಟಿ ರೂಪಾಯಿ ಹೊಂದಿದೆ.

HT ಮೀಡಿಯ

HT ಮೀಡಿಯ

ದೈನಂದಿನ ಪ್ರಸಾರದ ಹಿನ್ನೆಲೆಯಲ್ಲಿ HT ಮೀಡಿಯ ಲಿಮಿಟೆಡ್ ಭಾರತದ ಎರಡನೇ ಅತಿದೊಡ್ಡ ಕಂಪನಿ. ಹಿಂದುಸ್ಥಾನ್ ಟೈಮ್ಸ್ ಇದರ ಜನಪ್ರಿಯ ಪತ್ರಿಕೆಯಾಗಿದೆ.
ಹಿಂದೂಸ್ತಾನ್ ಮೀಡಿಯಾ ವೆಂಚರ್ ಲಿಮಿಟೆಡ್, HT ಮ್ಯೂಸಿಕ್ ಮತ್ತು ಎಂಟರ್ಟೈನ್ಮೆಂಟ್ ಕಂಪನಿ ಲಿಮಿಟೆಡ್, HT ಡಿಜಿಟಲ್ ಮೀಡಿಯ ಹೋಲ್ಡಿಂಗ್ ಲಿಮಿಟೆಡ್, HT ಗ್ಲೋಬಲ್ ಎಜುಕೇಷನ್, HT ಬುರ್ಡಾ ಮೀಡಿಯಾ ಲಿಮಿಟೆಡ್, ED ವಲ್ಡ್ ಪ್ರೈವೇಟ್ ಲಿಮಿಟೆಡ್ , HT ಮೀಡಿಯ ಲಿಮಿಟೆಡ್ ಇವು ಹಿಂದೂಸ್ತಾನ್ ಟೈಮ್ಸ್ ಲಿಮಿಟೆಡ್ ನ ಪ್ರಸಿದ್ದ ಅಂಗಸಂಸ್ಥೆಗಳಾಗಿವೆ. Livemint.com ವೆಬ್ಸೈಟ್, ಸಂಯೋಜಿತ ಹಣಕಾಸು ಪೋರ್ಟಲ್ ಹಾಗೂ 104 FM ರೇಡಿಯೋ ಕ್ಷೇತ್ರದಲ್ಲೂ HT ಮೀಡಿಯ ತನ್ನ ಛಾಪನ್ನು ಒತ್ತಿದೆ.
ಜತೆಗೆ HT ಮೀಡಿಯ ರೇಡಿಯೋ, ಆನ್ಲೈನ್, ಈವೆಂಟ್, ಮೊಬೈಲ್ ಮಾರುಕಟ್ಟೆ ಇತ್ಯಾದಿ ಇತರ ವಿಭಾಗಗಳಲ್ಲೂ ತೊಡಗಿಸಿಕೊಂಡಿದೆ.
HT ಮೀಡಿಯ ಸಂಸ್ಥೆಯ ನಿವ್ವಳ ಲಾಭ 113.67 ಕೋಟಿ ರೂ. ಹಾಗೂ ಒಟ್ಟು ಆದಾಯ 1436.56 ಕೋಟಿ ರೂಪಾಯಿ ಆಗಿದೆ.

ಎಂಟರ್ಟೈನ್ಮೆಂಟ್ ನೆಟ್ವರ್ಕ್ (ಇಂಡಿಯ) ಲಿಮಿಟೆಡ್(ENIL)

ಎಂಟರ್ಟೈನ್ಮೆಂಟ್ ನೆಟ್ವರ್ಕ್ (ಇಂಡಿಯ) ಲಿಮಿಟೆಡ್(ENIL)

ಈ ಸಂಸ್ಥೆ 1999ರಲ್ಲಿ ಟೈಮ್ಸ್ ಇನ್ಫೋಟೈನ್ಮೆಂಟ್ ಇಂಡಿಯ ಲಿಮಿಟೆಡ್ ಮಾಲಿಕತ್ವದಲ್ಲಿ ಅಸ್ತಿತ್ವಕ್ಕೆ ಬೋದಿದೆ. ಈ ಸಂಸ್ಥೆ ರೇಡಿಯೋ ಮಿರ್ಚಿ ಬ್ರಾಂಡ್ ಹೆಸರಿನಲ್ಲಿ ದೇಶದಾದ್ಯಂತ ರೇಡಿಯೋ ಪ್ರಸಾರದಲ್ಲಿ ಹೆಸರುವಾಸಿಯಾಗಿದೆ.
ಈವೆಂಟ್ ನಿರ್ವಹಣೆ ಜತೆಗೆ 360 ಡಿಗ್ರಿ ಮತ್ತು ಟೈಮ್ಸ್ ಔಟ್ ಆಫ್ ಹೋಮ್ ಮೀಡಿಯ ಎಂಬ ಬ್ರ್ಯಾಂಡ್ ಅಡಿಯಲ್ಲಿ ವ್ಯವಹಾರ ನಡೆಸುತ್ತಿದೆ. ಕಂಪನಿ 32 ನಗರಗಳಲ್ಲಿ ದೊಡ್ಡ ಸಂಖ್ಯೆಯ ರೇಡಿಯೋ ಪರವಾನಗಿಗಳನ್ನು ಪಡೆದಿದೆ.

ENIL ಸಹ ಐದು ENIL 17 ರೇಡಿಯೋ ದೂರಸಂಪರ್ಕ ಜಾಲಗಳಲ್ಲಿ ಲಭ್ಯವಿದೆ IVR ಡಯಲ್-ಇನ್ ವೇದಿಕೆ, ಆಹಾರವಾಗಿ ನೀಡುತ್ತದೆ.
ENIL ಒಂಬತ್ತು ಆನ್ಲೈನ್ ಕೇಂದ್ರಗಳು ಹೊಂದಿದ್ದು, ಅವುಗಳಲ್ಲಿ ಐದು ಕೇಂದ್ರಗಳನ್ನು 2013 ರಲ್ಲಿ ಬಿಡುಗಡೆ ಮಾಡಲಾಯಿತು.
2014ರ ಹಣಕಾಸು ವರ್ಷದಲ್ಲಿ ರೂ. 82.45 ಕೋಟಿ ಮತ್ತು 2015ರಲ್ಲಿ 105.97 ಕೋಟಿ ರೂಪಾಯಿ ತೆರಿಗೆ ನಂತರ ಲಾಭವನ್ನು ಪಡೆದಿದೆ.
ENIL ಸಂಸ್ಥೆಯ ನಿವ್ವಳ ಲಾಭ ರೂ. 105.97 ಕೋಟಿ ಹಾಗೂ ಒಟ್ಟು ಆದಾಯ 438.48 ಕೋಟಿ ರೂಪಾಯಿ ಹೊಂದಿದೆ. ಇದು 1999ರಲ್ಲಿ ಡಿಸೆಂಬರ್ ನಲ್ಲಿ ಅಸ್ತಿತ್ವಕ್ಕೆ ಬಂದಿತು.

ಟಿವಿ ಟುಡೇ ನೆಟ್ವರ್ಕ್

ಟಿವಿ ಟುಡೇ ನೆಟ್ವರ್ಕ್

ಟಿವಿ ಟುಡೇ ನೆಟ್ವರ್ಕ್ ಲಿಮಿಟೆಡ್ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳ ಪ್ರಮುಖ ನ್ಯೂಸ್ ಟೆಲಿವಿಷನ್ ಆಗಿದೆ. ಇದು 24 ಗಂಟೆ ಸೇವೆ ಒದಗಿಸಿದ ಭಾರತದ ಮೊದಲ ಹಿಂದಿ ನ್ಯೂಸ್ ಚಾನೆಲ್ ಆಗಿದೆ.
ಇದು ಆಜ್ ತಕ್ (ಹಿಂದಿ, 2000), ಹೆಡ್ಲೈನ್ಸ್ ಟುಡೇ (ಇಂಗ್ಲೀಷ್, 2003), ತೇಜ್ (ಹಿಂದಿ), ಬಿಜಿನೆಸ್ ಟುಡೇ (ಇಂಗ್ಲೀಷ್) ಮತ್ತು ದಿಲ್ಲಿ ಆಜ್ ತಕ್ (ಹಿಂದಿ 2006) ಮುಂತಾದ ಜನಪ್ರಿಯ ವಾರ್ತಾವಾಹಿನಿಗಳನ್ನು ಒಳಗೊಂಡಿದೆ. ಆಜ್ ತಕ್ ಚಾನೆಲ್ ಸತತವಾಗಿ 12 ವರ್ಷ ಭಾರತೀಯ ಟೆಲಿವಿಷನ್ ಅಕಾಡೆಮಿ ನೀಡುವ ಅತ್ಯುತ್ತಮ ನ್ಯೂಸ್ ಚಾನೆಲ್ ಪ್ರಶಸ್ತಿಗೆ ಭಾಜನವಾಗಿದೆ.
ಟಿವಿ ಟುಡೇ ನೆಟ್ವರ್ಕ್ ಸಂಸ್ಥೆಯ ನಿವ್ವಳ ಲಾಭ 81.03 ಕೋಟಿ ರೂ. ಹಾಗೂ ಒಟ್ಟು ಆದಾಯ 474.70 ಕೋಟಿ ರೂಪಾಯಿ ಆಗಿದೆ.

TV18 ಬ್ರಾಡ್ಕಾಸ್ಟ್ ಲಿಮಿಟೆಡ್

TV18 ಬ್ರಾಡ್ಕಾಸ್ಟ್ ಲಿಮಿಟೆಡ್

IBN18 ಬ್ರಾಡ್ಕಾಸ್ಟ್ ಲಿಮಿಟೆಡ್ ಸಂಸ್ಥೆ ಭಾರತೀಯ ಮೂಲದ ಕಂಪೆನಿಯಾಗಿದ್ದು, ಬ್ರಾಡ್ಕಾಸ್ಟಿಂಗ್, ದೂರದರ್ಶನ ಪ್ರಸಾರ ಮತ್ತು ಸಾಮಾನ್ಯ ಸುದ್ದಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ವ್ಯವಾಹಾರ ಮಾಡುತ್ತದೆ.
ಜಾಗತಿಕ ಬ್ರಾಡ್ಕಾಸ್ಟ್ ನ್ಯೂಸ್ ಪ್ರೈ. ಲಿಮಿಟೆಡ್ ಆಗಿ 2005ರಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಕಂಪನಿ 24 ಗಂಟೆಗಳ ಕಾಲ CNN IBN ಮತ್ತು IBN 7 ಸುದ್ದಿ ವಾಹಿನಿಗಳನ್ನು ನಡೆಸುತ್ತಿದೆ.
ಇದು ಮುಖ್ಯವಾಗಿ ಮಾದ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇದು Viacom18 ಮೀಡಿಯಾ ಪ್ರೈವೇಟ್ ಲಿಮಿಟೆಡ್, ಜಾಗರಣ್ ಟಿವಿ ಪ್ರೈವೇಟ್ ಲಿಮಿಟೆಡ್ ಮತ್ತು ಬಿ.ಕೆ. Fincap ಪ್ರೈವೇಟ್ ಲಿಮಿಟೆಡ್ ಕಂಪನಿಗಳೊಂದಿಗೆ ಮನರಂಜನೆ ಕ್ಷೇತ್ರದಲ್ಲಿ ಜಂಟಿ ಒಪ್ಪಂದ ಮಾಡಿಕೊಂಡಿದೆ.
TV18 ಬ್ರಾಡ್ಕಾಸ್ಟ್ ಲಿಮಿಟೆಡ್ ಸಂಸ್ಥೆಯ ನಿವ್ವಳ ಲಾಬ 14.63 ಕೋಟಿ ರೂ. ಹಾಗೂ ಒಟ್ಟು ಆದಾಯ 605.61 ಕೋಟಿ ರೂಪಾಯಿ ಆಗಿದೆ.

ಪಿವಿಆರ್

ಪಿವಿಆರ್

ಪಿವಿಆರ್ ಲಿಮಿಟೆಡ್ ಭಾರತದಲ್ಲಿನ ಅತ್ಯಂತ ಜನಪ್ರಿಯ ಮಲ್ಟಿಪ್ಲೆಕ್ಸ್ ಸಿನಿಮಾ ಪ್ರದರ್ಶನ ಕಂಪನಿಯಾಗಿದೆ. ಇದು 1995ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಇದು ದೊಡ್ಡ ಸಂಖ್ಯೆಯ (ಹೆಚ್ಚು 500) ಪರದೆಗಳನ್ನು ಹೊಂದಿದ್ದು, ಭಾರತದ ಮೊದಲ ಮಲ್ಟಿಪ್ಲೆಕ್ಸ್ ಸಿನಿಮಾ ಸಂಸ್ಥೆ ಆಗಿದೆ. ಇದು ಸಿನಿಮಾ ಪ್ರಸಾರ, ಜಾಹೀರಾತುಗಳು ಮತ್ತು ಮಲ್ಟಿಪ್ಲೆಕ್ಸ್ ಆವರಣದಲ್ಲಿ ಆಹಾರ ಮತ್ತು ಪಾನೀಯಗಳ ಮಾರಾಟದಿಂದ ಆದಾಯವನ್ನು ಗಳಿಸುತ್ತದೆ.
ಸನ್ ರೈಸ್ ಇಫೋಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್, ಪಿವಿಆರ್ ಪಿಕ್ಚರ್ಸ್ ಲಿಮಿಟೆಡ್, ಸಿಆರ್ ಚಿಲ್ಲರೆ ಮಳಿಗೆಗಳು (ಇಂಡಿಯ) ಪ್ರೈವೇಟ್ ಲಿಮಿಟೆಡ್ ಮತ್ತು ಪಿವಿಆರ್ bluO ಎಂಟರ್ಟೇನ್ಮೆಂಟ್ ಲಿಮಿಟೆಡ್ ಇದರ ಅಂಗ ಸಂಸ್ಥೆಗಳಾಗಿವೆ.
ಪಿವಿಆರ್ ಲಿಮಿಟೆಡ್ ಕಂಪನಿಯ ನಿವ್ವಳ ಆದಾಯ ರೂ. 13.61 ಕೋಟಿ ಹಾಗೂ ಒಟ್ಟು ಆದಾಯ 1383.98 ಕೋಟಿ ರೂಪಾಯಿ ಹೊಂದಿದೆ.

English summary

Top 10 Media and Broadcasting companies in India

Media of India consist of several different types of Indian communications media: television, radio, cinema, newspapers, magazines, and Internet-based Web sites. Many of the media are controlled by large, for-profit corporations which reap revenue from advertising, subscriptions, and sale of copyrighted mate.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X