For Quick Alerts
ALLOW NOTIFICATIONS  
For Daily Alerts

30 ಕಂಪನಿಗಳಿಗೆ ನೇಮಕಾತಿ ಪ್ರಕ್ರಿಯೆಯಿಂದ ಹೊರ ಹಾಕಿದ ಐಐಟಿ

By Siddu
|

ಈ ವರ್ಷ ದೇಶದಾದ್ಯಂತ ಐಐಟಿಗಳಲ್ಲಿನ 30 ಕಂಪನಿಗಳನ್ನು ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ. ಇವುಗಳಲ್ಲಿ 28 ಸ್ಟಾರ್ಟ್ಅಪ್ ಗಳು ಸೇರಿವೆ. ವಿದ್ಯಾರ್ಥಿಗಳ ಹಿತಾಸಕ್ತಿಯಿಂದ ಐಐಟಿಗಳು ಈ ಕ್ರಮ ಕೈಗೊಳ್ಳಲು ಮುಂದಾಗಿವೆ.

ಈ ಕಂಪನಿಗಳನ್ನು ಯಾತಕ್ಕಾಗಿ ಕಪ್ಪುಪಟ್ಟಿಗೆ ಸೇರಿಸಲ್ಪಟ್ಟಿದೆ ಎಂಬುದರ ಸಂಕ್ಷೀಪ್ತ ವಿವರ ಮತ್ತು ಆ ಕಂಪನಿಗಳ ಮಾಹಿತಿ ಇಲ್ಲಿದೆ.

ಕಂಪನಿಗಳಿಗೆ ಎಚ್ಚರಿಕೆ

ಕಂಪನಿಗಳಿಗೆ ಎಚ್ಚರಿಕೆ

ನವೋದ್ಯಮಗಳು ಕ್ಯಾಂಪಸ್ ಸಂದರ್ಶನ ನಡೆಸಿದ ನಂತರ ಉದ್ಯೋಗ ನೀಡದೆ ಸತಾಯಿಸುತ್ತಿರುವುದು ಇದಕ್ಕೆ ಕಾರಣವಾಗಿದೆ. ಇದಲ್ಲದೆ 12 ಕಂಪನಿಗಳಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ.

ವಿದ್ಯಾರ್ಥಿಗಳ ಹಿತಾಸಕ್ತಿ

ವಿದ್ಯಾರ್ಥಿಗಳ ಹಿತಾಸಕ್ತಿ

ವಿದ್ಯಾರ್ಥಿಗಳ ಹಿತಾಸಕ್ತಿಯಿಂದ ಐಐಟಿಗಳು ಈ ಕ್ರಮ ಕೈಗೊಳ್ಳಲು ಮುಂದಾಗಿವೆ. ಈ ಹಿನ್ನೆಲೆ ಐಐಟಿಗಳ ನೇಮಕಾತಿ ಸಮಿತಿಗಳು ಆಗಸ್ಟ್ 14ರಂದು ಐಐಟಿ ಕಾನ್ಪುರದಲ್ಲಿ ನಡೆದ ಸಭೆಯಲ್ಲಿ ಈ ತಿರ್ಮಾನವನ್ನು ತೆಗೆದುಕೊಂಡಿವೆ ಎಂದು ಎಐಐಪಿಸಿ ಸಮಿತಿ ತಿಳಿಸಿದೆ.

ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಡಲು ಕಾರಣ

ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಡಲು ಕಾರಣ

* ಉದ್ಯೋಗ ಪ್ರಸ್ತಾಪಗಳನ್ನು ರದ್ದುಗೊಳಿಸಿರುವುದು.
* ಸೇರ್ಪಡೆ ದಿನಾಂಕದಲ್ಲಿ ವಿಳಂಬ
* ವೇತನ ಪ್ಯಾಕೇಜ್ ನಲ್ಲಿ ಕಡಿತ

ಫ್ಲಿಪ್ಕಾರ್ಟ್ ವಿರುದ್ಧ ಕ್ರಮ ಕೈಗೊಂಡಿಲ್ಲ

ಫ್ಲಿಪ್ಕಾರ್ಟ್ ವಿರುದ್ಧ ಕ್ರಮ ಕೈಗೊಂಡಿಲ್ಲ

ಎಐಐಪಿಸಿ ಫ್ಲಿಪ್ಕಾರ್ಟ್ ವಿರುದ್ದ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಫ್ಲಿಪ್ಕಾರ್ಟ್ ಆರಂಭದ ಹಂತದ ಬಿಕ್ಕಟ್ಟು ಮತ್ತು ಗೊಂದಲಗಳನ್ನು ಸರಿಪಡಿಸಿಕೊಂಡಿದೆ ಎಂದು ಎಐಐಪಿಸಿ ತಿಳಿಸಿದೆ.

ಕಪ್ಪು ಪಟ್ಟಿಗೆ ಸೇರಿದ ಕಂಪನಿಗಳು

ಕಪ್ಪು ಪಟ್ಟಿಗೆ ಸೇರಿದ ಕಂಪನಿಗಳು

* ಜೆಟ್ಟಾಟ
* ಪೆಪ್ಪರ್ ಟ್ಯಾಪ್
* ನೌಫ್ಲೋಟ್ಸ್
* ಜಿಂಪ್ಲಿ
* ಬಾಬಾಜಾಬ್ಸ್
*ಪೋರ್ಟಿ ಮೆಡಿಕಲ್
* ಹೋಪ್ ಸ್ಕಾಚ್
* ಕ್ರೆಯಾನ್ ಡೇಟಾ ಇಂಡಿಯಾ
* ಗ್ಲೋವ್ ಹೋಮ್ಸ್ ಟೆಕ್ನಾಲಜೀಸ್
* ಟೆಸ್ಕಾರ್ ಸಾಪ್ಟವೇರ್
* ಗ್ರೋಫರ್ಸ್
* ಫಂಡಮೆಂಟಲ್ ಎಜ್ಯುಕೇಶನ್
*ಕ್ಲಿಕ್ ಲ್ಯಾಬ್ಸ್
* ಮೆಡ್ ಇತ್ಯಾದಿ ಕಂಪನಿಗಳು ಸೇರಿವೆ.

English summary

IIT placement ban on 30 firms that went back on job offers

31 companies blacklisted by the Indian IITs and barred from taking part in the placement process this year. Companied had revoked offer letters or delaying joining dates. Most of the barred companies are startups.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X