For Quick Alerts
ALLOW NOTIFICATIONS  
For Daily Alerts

ಹಣಕಾಸು ವರ್ಷ ಬದಲಾವಣೆಗೆ ಕೇಂದ್ರ ಚಿಂತನೆ

By Siddu
|

ಕೇಂದ್ರ ಸರ್ಕಾರ ಹಣಕಾಸು ವರ್ಷ(ಆರ್ಥಿಕ ವರ್ಷ) ಬದಲಿಸುವ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ನಿರೀಕ್ಷಿಸಿದ್ದು, ಸರ್ಕಾರ ಈ ಬಗ್ಗೆ ವ್ಯಾಪಕ ಚರ್ಚೆಗೆ ಆಹ್ವಾನ ಕೊಟ್ಟಿದೆ.

ಬಜೆಟ್ ಪ್ರಕ್ರಿಯೆ ಹಾಗೂ ನಗದು ನಿರ್ವಹಣೆಯನ್ನು ಸುಧಾರಿಸಲು ಆರ್ಥಿಕ ವರ್ಷವನ್ನು ಬದಲಿಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಸೆಪ್ಟಂಬರ್ 30ರ ಒಳಗೆ ಅಭಿಪ್ರಾಯಗಳನ್ನು ಸಲ್ಲಿಸಬಹುದು ಎಂದು ಸರ್ಕಾರ ತಿಳಿಸಿದೆ.

ಹಣಕಾಸು ವರ್ಷ ಬದಲಾವಣೆಗೆ ಕೇಂದ್ರ ಚಿಂತನೆ

ಭಾರತದಲ್ಲಿ ಪ್ರಸ್ತುತ ಏಪ್ರಿಲ್ 1ರಿಂದ ಮಾರ್ಚ್ 31ರ ಒಳಗಿನ ಅವಧಿಯನ್ನು ಹಣಕಾಸು ವರ್ಷ ಎಂದು ಪರಿಗಣಿಸಲಾಗುತ್ತದೆ. ಇದರ ಅನುಸಾರವಾಗಿ ಎಲ್ಲ ಸಂಸ್ಥೆಗಳು ತಮ್ಮ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸುತ್ತವೆ.

ಹಣಕಾಸು ವರ್ಷದ ಬದಲಾವಣೆಯ ಪರ ಮತ್ತು ವಿರೋಧ ಹಲವಾರು ವಾದಗಳಿವೆ. ತೆರಿಗೆ ಮೌಲ್ಯಮಾಪನ, ಕಾರ್ಪೋರೇಟ್ ಲೆಕ್ಕಪತ್ರ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂಬ ಪರ ವಿರೋಧ ವಾದಗಳಿವೆ ಎಂದು ತಿಳಿದು ಬಂದಿದೆ.

ಹಣಕಾಸು ವರ್ಷ ಬದಲಾಯಿಸುವುದರಿಂದ ಯಾವುದೇ ಉಪಯೋಗವಿಲ್ಲ ಎಂದು ಕೈಗಾರಿಕಾ ಮಂಡಳಿ ಅಸೊಚೆಮ್ ಅಭಿಪ್ರಾಯ ಪಟ್ಟಿದೆ.

English summary

Central thinks for Changes in Financial Year

central government is expected public opinion to change financial year, so the government has given to the wider debate.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X