For Quick Alerts
ALLOW NOTIFICATIONS  
For Daily Alerts

ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ಸಿಇಒ

By Siddu
|

ಭಾರತ ಅನೇಕ ಪ್ರಥಮಗಳಿಗೆ, ಸಾಧನೆ-ಸಾಹಸಗಳಿಗೆ ಪಾತ್ರವಾಗಿರುವ ದೇಶ. ಆರ್ಥಿಕತೆ, ತಂತ್ರಜ್ಞಾನ, ನವೋದ್ಯಮ ಹೀಗೆ ಅನೇಕ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಾ ವೇಗವಾಗಿ ಬೆಳೆಯುತ್ತಿರುವ ದೇಶ.

ಭಾರತದಲ್ಲಿ ವಿಶ್ವದ ಶ್ರೀಮಂತ ಉದ್ಯಮಿಗಳಿದ್ದಾರೆ. ಜತೆಗೆ ಏಷಿಯಾದ ಸಿರಿವಂತ ಬಿಲಿಯನೇರ್ ಗಳ ಪಟ್ಟಿಯಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿದೆ.

ಬ್ಯುಸಿನೆಸ್ ಇನ್ಸೈಡರ್ ನಿಯತಕಾಲಿಕೆ ಭಾರತದಲ್ಲಿ 2015ರಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ಸಿಇಒಗಳ ಪಟ್ಟಿಯನ್ನು ಮಾಡಿದೆ. ಕಲಾನಿಧಿ ಮಾರನ್ ಮೊದಲ ಸ್ಥಾನದಲ್ಲಿ, ಪವನ್ ಮಂಜುಲ್ ಐದನೇ ಮತ್ತು ಮುರುಳಿ ಕೆ ದಿವಿ ಹತ್ತನೇ ಸ್ಥಾನದಲ್ಲಿದ್ದಾರೆ. ಅದರ ವಿವರ ಇಲ್ಲಿದೆ ನೋಡಿ.

ಕಲಾನಿಧಿ ಮಾರನ್

ಕಲಾನಿಧಿ ಮಾರನ್

ಕಲಾನಿಧಿ ಮಾರನ್ ಭಾರತೀಯ ಮಾದ್ಯಮದ ಬ್ಯಾರನ್ ಆಗಿದ್ದಾರೆ. ಇವರು 56.25 ಕೋಟಿ ರೂಪಾಯಿ ವಾರ್ಷಿಕ ವೇತನವನ್ನು ಪಡೆಯುತ್ತಿದ್ದಾರೆ.
ಪ್ರಸ್ತುತ ಏಷಿಯಾದಲ್ಲಿಯೇ ಅತಿಹೆಚ್ಚು ಲಾಭದಲ್ಲಿರುವ ಮೀಡಿಯಾ ಸಂಸ್ಥೆ ಸನ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಕಲಾನಿಧಿ ಮಾರನ್ ದೂರದರ್ಶನ ವಾಹಿನಿಗಳು, ಪತ್ರಿಕೆಗಳು, ಸಾಪ್ತಾಹಿಕಗಳು, ಎಫ್ಎಂ ರೇಡಿಯೋ ಕೇಂದ್ರ, ಡಿಟಿಎಚ್ ಸೇವೆ ಮತ್ತು ಚಿತ್ರ ನಿರ್ಮಾಣ ಸಂಸ್ಥೆಗಳನ್ನು ಹೊಂದಿದ್ದಾರೆ.

ಕಾವೇರಿ ಕಲಾನಿಧಿ

ಕಾವೇರಿ ಕಲಾನಿಧಿ

ಇವರು ಕಲಾನಿಧಿ ಮಾರನ್ ಹೆಂಡತಿಯಾಗಿದ್ದು, ಸನ್ ಟಿವಿ ನೆಟ್ವರ್ಕ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಕಾವೇರಿ ಕಲಾನಿಧಿ ಭಾರತದ ಎರಡನೇ ಅತಿಹೆಚ್ಚು ಸಂಭಾವನೆ ಪಡೆಯುವ ಸಿಇಒ ಆಗಿದ್ದು, ಇವರ ವಾರ್ಷಿಕ ಸಂಭಾವನೆ 56.24 ಕೋಟಿ ರೂಪಾಯಿ ಆಗಿದೆ.
ಫಾರ್ಚುನ್ ನಿಯತಕಾಲಿಕೆ ಪ್ರಕಾರ ಇವರು ಭಾರತದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಸಿಇಒ.

ನವೀನ್ ಜಿಂದಾಲ್

ನವೀನ್ ಜಿಂದಾಲ್

ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಡೆಟ್ ಸಂಸ್ಥೆಯಲ್ಲಿ ನವೀನ್ ಜಿಂದಾಲ್ ಅಧ್ಯಕ್ಷರಾಗಿದ್ದಾರೆ. ಇವರು ಪಾರ್ಲಿಮೆಂಟಿನ ಸದಸ್ಯರಾಗಿದ್ದು, ಹರಿಯಾಣದ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ನವೀನ್ ಜಿಂದಾಲ್ ರ ವಾರ್ಷಿಕ ಸಂಭಾವನೆ 54.98 ಕೋಟಿ ಆಗಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.

ಕುಮಾರ್ ಮಂಗಳಂ ಬಿರ್ಲಾ

ಕುಮಾರ್ ಮಂಗಳಂ ಬಿರ್ಲಾ

ಕುಮಾರ್ ಮಂಗಳಂ ದಿತ್ಯ ಬಿರ್ಲಾ ಗ್ರೂಪ್ ನ ಪ್ರಸ್ತುತ ಚೇರಮನ್ ಆಗಿದ್ದಾರೆ. ಇವರು ತಮ್ಮ ತಂದೆಯ ನಿಧನದ ನಂತರ 1995ರಲ್ಲಿ 28 ವಯಸ್ಸಿನಲ್ಲಿ ಬಿರ್ಲಾ ಗ್ರೂಪಿನ ಅಧ್ಯಕ್ಷರಾದರು.
1995ರಲ್ಲಿದ್ದ 2 ಬಿಲಿಯನ್ ಡಾಲರ್ ವಹಿವಾಟನ್ನು ಇಂದು 40 ಬಿಲಿಯನ್ ಡಾಲರ್ ನಷ್ಟು ಹೆಚ್ಚಿಸಿದ್ದು, ಕುಮಾರ್ ಮಂಗಳಂ ಬಾರತ ಮತ್ತು ಜಾಗತಿಕವಾಗಿ 17 ವರ್ಷಗಳಲ್ಲಿ 26ಸ್ವಾಧೀನಗಳನ್ನು ಮಾಡಿದ್ದಾರೆ.
ಕುಮಾರ್ ಮಂಗಳಂ ಬಿರ್ಲಾ ವಾರ್ಷಿಕ ಸಂಭಾವನೆ 49.62 ಕೋಟಿ.

ಪವನ್ ಮಂಜುಲ್

ಪವನ್ ಮಂಜುಲ್

ಪವನ್ ಮಂಜುಲ್ ಹೀರೋ ಮೋಟೊ ಕಾರ್ಪ್ ಸಂಸ್ಥೆಯ ಎಂಡಿ ಮತ್ತು ಸಿಇಒ ಆಗಿದ್ದು, ಭಾರತದಲ್ಲಿ ಅತಿಹೆಚ್ಚು ವೇತನ ಪಡೆಯುವ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಇವರ ವಾರ್ಷಿಕ ವೇತನ 32.80 ಕೋಟಿ ಆಗಿದೆ.
ಹೀರೋ ಮೋಟೊ ಕಾರ್ಪ್ ನ ಯಶಸ್ಸಿನ ಹಿಂದಿರುವ ಪ್ರಮುಖ ಆಧಾರ ಸ್ಥಂಭವಾಗಿದ್ದಾರೆ. ಇವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಲಕ್ನೋ ಮಂಡಳಿಯ ಸದಸ್ಯರಾಗಿದ್ದಾರೆ.

ಬ್ರಿಜ್ ಮೋಹನ್ ಲಾಲ್ ಮಂಜುಳ್

ಬ್ರಿಜ್ ಮೋಹನ್ ಲಾಲ್ ಮಂಜುಳ್

ಇವರು ಹೀರೊ ಗ್ರೂಪ್ ನ ಸಂಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷರಾಗಿದ್ದಾರೆ. ವಾರ್ಷಿಕ ವೇತನ 32.63 ಕೋಟಿ ಆಗಿದೆ.
ಬ್ರಿಜ್ ಮೋಹನ್ ಲಾಲ್ ಮಂಜುಳ್ ಆರ್ಬಿಐ ಮಂಡಳಿಯ ಸದಸ್ಯರಾಗಿದ್ದಾರೆ. ಭಾರತ ಸರ್ಕಾರದ ಪದ್ಮ ಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ.

ಸುನೀಲ್ ಕಾಂತ್ ಮಂಜುಳ್

ಸುನೀಲ್ ಕಾಂತ್ ಮಂಜುಳ್

ಸುನೀಲ್ ಕಾಂತ್ ಮಂಜುಳ್ ಇವರನ್ನು 2011ರಲ್ಲಿ ಹೀರೋ ಮೋಟೊ ಕಾರ್ಪ್ ಸಂಸ್ಥೆ ಜಂಟಿ ನಿರ್ವಾಹಕ ನಿರ್ದೇಶಕರಾಗಿ ಐದು ವರ್ಷಗಳ ಕಾಲದ ಅವಧಿಗೆ ನೇಮಕ ಮಾಡಿದೆ.
2006ರಲ್ಲಿ ನಿರ್ದೇಶಕರ ಮಂಡಳಿಗೆ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ನೇಮಿಸಲಾಯಿತು.
ಇವರ ವಾರ್ಷಿಕ ಸಂಭಾವನೆ 31.51 ಕೋಟಿ ಆಗಿದೆ.

ಪಿಆರ್ ರಾಮಸುಬ್ರಮ್ಹಣ್ಯ ರಾಜಾ

ಪಿಆರ್ ರಾಮಸುಬ್ರಮ್ಹಣ್ಯ ರಾಜಾ

ಪಿಆರ್ ರಾಮಸುಬ್ರಮ್ಹಣ್ಯ ರಾಜಾ ರಾಮ್ಕೊ ಸಿಮೆಂಟ್ ಕಂಪನಿಯ ಅಧ್ಯಕ್ಷ ಮತ್ತು ನಿರ್ವಾಹಕ ನಿರ್ದೇಶಕರಾಗಿದ್ದಾರೆ. ಇವರ ವಾರ್ಷಿಕ ಸಂಭಾವನೆ 30.96 ಕೋಟಿ.
ಸಿಮೆಂಟ್, ಪವನ ಶಕ್ತಿ ಉತ್ಪಾದನೆ, ಒಣ ಗಾರೆ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಪಿಆರ್ ರಾಮಸುಬ್ರಮ್ಹಣ್ಯ ರಾಜಾ ರಾಮ್ಕೊ ಸಿಮೆಂಟ್ ಕಂಪನಿಯನ್ನು ಯಶಸ್ಸಿನತ್ತ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿಂಜೋ ನಕಾನಿಸಿ

ಶಿಂಜೋ ನಕಾನಿಸಿ

ಶಿಂಜೋ ನಕಾನಿಸಿ 2007ರಿಂದ ಮಾರುತಿ ಸುಜುಕಿಯ ಚುಕ್ಕಾಣಿಯನ್ನು ಹಿಡಿದಿದ್ದು, ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಇವರ ವಾರ್ಷಿಕ ವೇತನ 30.90 ಕೋಟಿ.
ಶಿಂಜೋ ನಕಾನಿಸಿ ಸುಜುಕಿ ಮೋಟಾರ್ ಕಾರ್ಪೊರೇಷನ್ ನಲ್ಲಿ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಾರ್ಯನಿರ್ವಾಹಕ ಜನರಲ್ ಮ್ಯಾನೇಜರ್ ಆಗಿದ್ದಾರೆ.

ಮುರುಳಿ ಕೆ ದಿವಿ

ಮುರುಳಿ ಕೆ ದಿವಿ

ದಿವಿ ಲ್ಯಾಬೊರೇಟರಿಸ್ ನಲ್ಲಿ ಮುರುಳಿ ಕೆ ದಿವಿ ಚೇರಮನ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಇವರ ವಾರ್ಷಿಕ ಸಂಭಾವನೆ ರೂ. 26.46 ಕೋಟಿ.
ಔಷಧಿಯ ಉದ್ಯಮದಲ್ಲಿ 30 ವರ್ಷಗಳಿಗಿಂತಲೂ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ.
ಮುರುಳಿ ಕೆ ದಿವಿ ಅಮೆರಿಕನ್ ಔಷಧೀಯ ಅಸೋಸಿಯೇಷನ್, ಅಮೇರಿಕನ್ ಕಾಸ್ಮೆಟಿಕ್ ಸೊಸೈಟಿ, ಅಮೆರಿಕನ್ ಕೆಮಿಕಲ್ ಸೊಸೈಟಿ ಮತ್ತು ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಎಂಜಿನೀಯರ್ಸ್ ಮುಂತಾದ ಅನೇಕ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದಾರೆ.

ಪ್ರಪಂಚದ 10 ಶ್ರೀಮಂತ ದೇಶಗಳ ಸಾಲಿನಲ್ಲಿ ಭಾರತಪ್ರಪಂಚದ 10 ಶ್ರೀಮಂತ ದೇಶಗಳ ಸಾಲಿನಲ್ಲಿ ಭಾರತ

English summary

Highest paid executives in India

Media baron and Chairman and MD of Sun Group Kalanithi Maran tops the list of highest paid executives in India.India is a home to some of the most well paid executives also along with second highest number of billionaires in Asia. India is home to Asia's second richest billionaire.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X