For Quick Alerts
ALLOW NOTIFICATIONS  
For Daily Alerts

ಆದಾಯ ಅಸಮಾನತೆ ಭಾರತಕ್ಕೆ 2ನೇ ಸ್ಥಾನ

By Siddu
|

ಅಭಿವೃದ್ಧಿಶೀಲ ದೇಶಗಳ ಪೈಕಿ ಭಾರತ ಅತ್ಯಂತ ಕಡಿಮೆ ಆದಾಯ ಅಸಮಾನತೆ ಹೊಂದಿದೆ. ಆದರೆ ಅಭಿವೃದ್ಧಿ ಹೊಂದಿದ ದೇಶಗಳ ಪೈಕಿ ಭಾರತದ ಆದಾಯ ಅಸಮಾನತೆ ಗರಿಷ್ಠವಾಗಿದೆ. ರಷ್ಯಾ ಮೊದಲ ಸ್ಥಾನದಲ್ಲಿ, ನಂತರ ಭಾರತ, ಯುಕೆ, ಯುಎಸ್, ಆಸ್ಟ್ರೇಲಿಯ ಮತ್ತು ಜಪಾನ್ ದೇಶಗಳಿವೆ ಎಂದು ನ್ಯೂ ವರ್ಲ್ಡ್ ವೆಲ್ತ್ ವರದಿ ಮಾಡಿದೆ.

ವ್ಯಕ್ತಿಗಳ ನಿವ್ವಳ ಆಸ್ತಿಯು ಸಂಪತ್ತನ್ನು ಸೂಚಿಸುತ್ತದೆ. ಆದಾಯ ಅಸಮಾನತೆಯನ್ನು ಆಸ್ತಿ, ನಗದು, ಷೇರುಗಳು, ವ್ಯವಹಾರ ಇತ್ಯಾದಿ ಅಂಶಗಳಿಂದ ಅಳೆಯಲಾಗುತ್ತದೆ. ಆದರೆ ಸರ್ಕಾರದ ನಿಧಿಯ ಅಂಕಿ-ಅಶಗಳು ಇದರಿಂದ ಹೊರಗಿಡಲ್ಪಟ್ಟಿದೆ ಎಂದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಭಾರತ 2ನೇ ಅಸಮಾನತೆ ದೇಶ

ಭಾರತ 2ನೇ ಅಸಮಾನತೆ ದೇಶ

ಭಾರತ ಎರಡನೇ ಆದಾಯ ಅಸಮಾನತೆ ಹೊಂದಿರುವ ದೇಶವಾಗಿದ್ದು, ರಷ್ಯಾ ನಂತರದ ಸ್ಥಾನದಲ್ಲಿದೆ. ಭಾರತದ ಲಕ್ಷಾಧಿಪತಿಗಳು ಒಟ್ಟು ಸಂಪತ್ತಿನಲ್ಲಿ ಅರ್ಧಕ್ಕಿಂತ ಹೆಚ್ಚಿನ ಸಂಪತ್ತನ್ನು ನಿಯಂತ್ರಿಸುತ್ತಿದ್ದಾರೆ ಎಂದು ನ್ಯೂ ವರ್ಲ್ಡ್ ವೆಲ್ತ್ ವರದಿ ಮಾಡಿದೆ.

54% ಸಂಪತ್ತು ಲಕ್ಷಾಧಿಪತಿಗಳಿಂದ ನಿಯಂತ್ರಣ

54% ಸಂಪತ್ತು ಲಕ್ಷಾಧಿಪತಿಗಳಿಂದ ನಿಯಂತ್ರಣ

ಭಾರತದ ಶೇ. 54ರಷ್ಟು ಸಂಪತ್ತು ಲಕ್ಷಾಧಿಪತಿಗಳಿಂದ ನಿಯಂತ್ರಿಸಲ್ಪಟ್ಟಿದೆ. ಅದಾಗ್ಯೂ 5,600 ಬಿಲಿಯನ್ ಡಾಲರ್ ನೊಂದಿಗೆ ಭಾರತ ಜಗತ್ತಿನ 7ನೇ ಸಿರಿವಂತ ರಾಷ್ಟ್ರವಾಗಿದ್ದು, ಮೊದಲ ಹತ್ತರಲ್ಲಿ ಸ್ಥಾನ ಪಡೆದಿದೆ. ದೇಶದ ಸಂಪತ್ತನ್ನು ಶೇ. 50ರಷ್ಟು ಲಕ್ಷಾಧಿಪತಿಗಳಿಂದ ನಿಯಂತ್ರಿಸಲ್ಪಟ್ಟರೆ ಉಳಿದ 50% ಮಧ್ಯಮ ವರ್ಗದ ಸಂಪತ್ತಿನಿಂದ ನಿಯಂತ್ರಿಸಲ್ಪಟ್ಟಿದೆ ಎಂದು ವರದಿ ತಿಳಿಸಿದೆ.

ರಷ್ಯಾ ನಂಬರ್ ಒನ್

ರಷ್ಯಾ ನಂಬರ್ ಒನ್

ಜಗತ್ತಿನಲ್ಲಿ ಅತಿ ಆದಾಯ ಅಸಮಾನತೆ ಹೊಂದಿರುವ ದೇಶ ರಷ್ಯಾ. ರಷ್ಯಾದ ಒಟ್ಟು ಸಂಪತ್ತಿನಲ್ಲಿ ಶೇ. 62ರಷ್ಟು ಸಂಪತ್ತು ಲಕ್ಷಾಧಿಪತಿಗಳಿಂದ ನಿಯಂತ್ರಸಲ್ಪಟ್ಟಿದೆ.

ಯುಕೆ

ಯುಕೆ

ಬ್ರಿಟನ್ ದೇಶ ಮೂರನೇ ಸ್ಥಾನದಲ್ಲಿದ್ದು, ಅಮೆರಿಕಾಗಿಂತ ಹೆಚ್ಚಿನ ಆದಾಯ ಅಸಮಾನತೆಯನ್ನು ಹೊಂದಿದೆ. ಯುಕೆಯ ಒಟ್ಟು ಸಂಪತ್ತಿನಲ್ಲಿ ಶೇ. 35ರಷ್ಟು ಸಂಪತ್ತು ಲಕ್ಷಾಧಿಪತಿಗಳಿಂದ ನಿಯಂತ್ರಿಸಲ್ಪಟ್ಟಿದೆ ಎಂದು ವರದಿ ಮಾಡಿದೆ.

ಯುಎಸ್

ಯುಎಸ್

ಅಮೆರಿಕಾ ಆದಾಯ ಅಸಮಾನತೆಯಲ್ಲಿ ಜಗತ್ತಿನ ೪ನೇ ದೇಶವಾಗಿ ಹೊರಹೊಮ್ಮಿದೆ. ದೇಶದ ಒಟ್ಟು ಶೇ. 32ರಷ್ಟು ಸಂಪತ್ತು ಮಾತ್ರ ಲಕ್ಷಾಧಿಪತಿಗಳಿಂದ ನಿಯಂತ್ರಿಸಲ್ಪಟ್ಟಿದೆ. ಯುಎಸ್ ಆಶ್ಚರ್ಯಕರವಾಗಿ ಕಡಿಮೆ ಮಟ್ಟದ ಅಸಮಾನತೆ ಹೊಂದಿದೆ ಎಂದು ವರದಿ ಹೇಳಿದೆ.

ಆಸ್ಟ್ರೇಲಿಯ

ಆಸ್ಟ್ರೇಲಿಯ

ಆಸ್ಟ್ರೇಲಿಯ ಜಗತ್ತಿನ 5ನೇ ಅದಾಯ ಅಸಮಾನತೆಯ ದೇಶ. ದೇಶದ ಒಟ್ಟು ಸಂಪತ್ತಿನ ಶೇ. 28ರಷ್ಟು ಸಂಪತ್ತು ಮಾತ್ರ ಲಕ್ಷಾಧಿಪತಿಗಳಿಂದ ನಿಯಂತ್ರಿಸಲ್ಪಟ್ಟಿದೆ.

ಜಪಾನ್

ಜಪಾನ್

ಆದಾಯ ಅಸಮಾನತೆಯಲ್ಲಿ ಸ್ಥಾನ ಪಡೆದ ಏಷಿಯಾದ ಇನ್ನೊಂದು ದೇಶ ಜಪಾನ್. ಜಪಾನ್ ನಲ್ಲಿ ಕೇವಲ ಶೇ. 22ರಷ್ಟು ದೇಶದ ಸಂಪತ್ತು ಮಾತ್ರ ಲಕ್ಷಾಧಿಪತಿಗಳಿಂದ ನಿಯಂತ್ರಿಸಲ್ಪಟ್ಟಿದೆ.

English summary

India Ranks Second in Income Inequalities

India is the second most "unequal" country in the world after Russia, with millionaires controlling more than half of its total wealth, a report by Johannesburg-based wealth research firm New World Wealth said earlier this week.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X