For Quick Alerts
ALLOW NOTIFICATIONS  
For Daily Alerts

ಫಾರ್ಚೂನ್ ಪಟ್ಟಿಯಲ್ಲಿ ಭಾರತದ ಪ್ರಭಾವಶಾಲಿ ಮಹಿಳೆಯರು

By Siddu
|

ಫಾರ್ಚೂನ್ ನಿಯತಕಾಲಿಕೆ ಪ್ರಕಟಿಸಿದ ಏಷಿಯಾ-ಪೆಸಿಪಿಕ್ ನ ಅತಿ ಹೆಚ್ಚು ಪ್ರಭಾವಶಾಲಿ ಮಹಿಳೆಯರಲ್ಲಿ 8 ಭಾರತೀಯ ಮಹಿಳೆಯರಿದ್ದಾರೆ. ವಿಶ್ವವನ್ನು ಹೊಸ ಜಗತ್ತಿನಡೆಗೆ ನಡೆಸಬಲ್ಲ 25 ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯನ್ನು ಫಾರ್ಚೂನ್(ಪೆಸಿಫಿಕ್ ಏಷಿಯಾ) ಪ್ರಕಟಿಸಿದೆ. ಅದರಲ್ಲಿ ಸ್ಥಾನ ಪಡೆದ 8 ಭಾರತೀಯ ಮಹಿಳೆಯರ ವಿವರ ಇಲ್ಲಿದೆ.

 

1. ಚಂದಾ ಕೊಚ್ಚರ್

1. ಚಂದಾ ಕೊಚ್ಚರ್

ಭಾರತೀಯ ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಚಂದಾ ಕೊಚ್ಚರ್ ಮೊದಲ ಸ್ಥಾನದಲ್ಲಿದ್ದಾರೆ. ಏಷಿಯಾ ಪೆಸಿಫಿಕ್ ವಲಯದಲ್ಲಿ ಎರಡನೇ ಪ್ರಭಾವಶಾಲಿ ಮಹಿಳೆಯಾಗಿದ್ದಾರೆ.

ಚಂದಾ ಕೊಚ್ಚರ್ ಐಸಿಐಸಿಐ ಬ್ಯಾಂಕಿನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. 1984ರಲ್ಲಿ ಐಸಿಐಸಿಐ ಬ್ಯಾಂಕಿನ ಮ್ಯಾನೆಜ್ಮೆಂಟ್ ಟ್ರೈನಿಯಾಗಿ ಸೇರಿದರು. ಚಂದಾ ಕೊಚ್ಚರ್ 2009ರಲ್ಲಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡರು. ಇವರು 2010ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜರಾಗಿದ್ದಾರೆ.
ಐಸಿಐಸಿಐ ಭಾರತದಲ್ಲಿನ ಖಾಸಗಿ ವಲಯದ ದೊಡ್ಡ ಬ್ಯಾಂಕಾಗಿದೆ.

2. ಅರುಂಧತಿ ಭಟ್ಟಾಚಾರ್ಯ

2. ಅರುಂಧತಿ ಭಟ್ಟಾಚಾರ್ಯ

ಅರುಂಧತಿ ಭಟ್ಟಾಚಾರ್ಯ ಏಷಿಯಾ ಪೆಸಿಫಿಕ್ ನ ನಾಲ್ಕನೇ ಪ್ರಭಾವಶಾಲಿ ಮಹಿಳೆಯಾಗಿದ್ದು, ಭಾರತದ 2ನೇ ಪ್ರಭಾವಶಾಲಿ ಮಹಿಳೆ ಎನಿಸಿದ್ದಾರೆ. ಭಾರತದ ದೊಡ್ಡ ಬ್ಯಾಂಕಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಮೊದಲ ಮಹಿಳಾ ಅಧ್ಯಕ್ಷರಾಗಿದ್ದಾರೆ.
ಪ್ರೊಬೆಷನರಿ ಅಧಿಕಾರಿಯಾಗಿ 1977ರಲ್ಲಿ ಎಸ್ಬಿಐ ಗೆ ಸೇರಿದರು. ಫೋರ್ಬ್ಸ್ ಪ್ರಕಟಿಸಿದ ವಿಶ್ವದ ಅತ್ಯಂತ ಪ್ರಭಾಶಾಲಿ ಮಹಿಳೆಯರ ಪಟ್ಟಿಯಲ್ಲಿ 25ನೇ ಸ್ಥಾನ ಪಡೆದಿದ್ದರು.

3. ನಿಶಿ ವಾಸುದೇವ
 

3. ನಿಶಿ ವಾಸುದೇವ

ಹಿಂದುಸ್ಥಾನ ಪೆಟ್ರೋಲಿಯಂ ಕಾರ್ಪೋರೇಷನ್ ಸಂಸ್ಥೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಏಷಿಯಾ ಪೆಸಿಫಿಕ್ ಪಟ್ಟಿಯಲ್ಲಿ 5ನೇ ಪ್ರಭಾವಶಾಲಿ ಮಹಿಳೆ ಹಾಗೂ ಭಾರತದ 3ನೇ ಪ್ರಭಾವಶಾಲಿ ಮಹಿಳೆ ಎನಿಸಿದ್ದಾರೆ.
ಪೆಟ್ರೋಲಿಯಂ ಇಂಡಸ್ಟ್ರಿಯಲ್ಲಿ ಇವರಿಗೆ 34 ವರ್ಷಗಳ ಅನುಭವ ಇದೆ.

4. ಶಿಖಾ ಶರ್ಮಾ

4. ಶಿಖಾ ಶರ್ಮಾ

 ಶಿಖಾ ಶರ್ಮಾ ಆಕ್ಸಿಸ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಆಗಿದ್ದಾರೆ. ಏಷಿಯಾ ಪೆಸಿಫಿಕ್ ಪಟ್ಟಿಯಲ್ಲಿ 10ನೇ ಪ್ರಭಾವಶಾಲಿ ಮಹಿಳೆಯಾಗಿ ಸ್ಥಾನ ಪಡೆದಿದ್ದಾರೆ.

1980ರಲ್ಲಿ ಐಸಿಐಸಿಐ ಬ್ಯಾಂಕಿನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಇವರು ಹಣಕಾಸು ವಲಯದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದಾರೆ. 2009ರಲ್ಲಿ ಆಕ್ಸಿಸ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಆಗಿ ನೇಮಕಗೊಂಡರು. ಇವರ ಅವಧಿಯಲ್ಲಿ ಬ್ಯಾಮಕ್ ಆಫ್ ದಿ ಇಯರ್ ಇನ್ ಇಂಡಿಯಾ, ಮೊಸ್ಟ್ ಟ್ರಸ್ಟೆಡ್ ಪ್ರೈವೆಟ್ ಸೆಕ್ಟರ್ ಬ್ಯಾಂಕ್ ಮುಂತಾದ ಪುರಸ್ಕಾರಗಳು ಆಕ್ಸಿಸ್ ಬ್ಯಾಂಕಿಗೆ ದೊರಕಿವೆ.

5. ಕಿರಣ್ ಮಜುಂದಾರ್

5. ಕಿರಣ್ ಮಜುಂದಾರ್

ಕಿರಣ್ ಮಜುಂದಾರ್ ಭಾರತೀಯ ಪ್ರಸಿದ್ದ ಉದ್ಯಮಿಯಾಗಿದ್ದು, ಏಷಿಯಾ ಪೆಸಿಫಿಕ್ ಪಟ್ಟಿಯಲ್ಲಿ ಇವರು 19ನೇ ಪ್ರಭಾವಶಾಲಿ ಮಹಿಳೆ.
ಕಿರಣ್ ಮಜುಂದಾರ್ ಬಯೋಕಾನ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥೆ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇದು ಬೆಂಗಳೂರು ಮೂಲದ ಬಯೋಟೆಕ್ನಾಲಜಿ ಕಂಪನಿ.

1989 ರಲ್ಲಿ ಪದ್ಮಶ್ರೀ, 2005ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಯೋಕಾನ್ ಫೌಂಡೆಷನ್ ಮೂಲಕ ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಮಾಜಸೇವೆಯನ್ನು ಮಾಡುತ್ತಿದ್ದಾರೆ.

6. ಚಿತ್ರಾ ರಾಮಕೃಷ್ಣ

6. ಚಿತ್ರಾ ರಾಮಕೃಷ್ಣ

ಚಿತ್ರಾ ರಾಮಕೃಷ್ಣ ಏಷಿಯಾ ಪೆಸಿಫಿಕ್ ಪಟ್ಟಿಯಲ್ಲಿನ 22ನೇ ಪ್ರಭಾವಶಾಲಿ ಮಹಿಳೆ. ಇವರು ನ್ಯಾಷನಲ್ ಸ್ಟಾಕ್ ಎಕ್ಸಚೆಂಜ್ (ಎನ್ಎಸ್ಇ) ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ.

ಫೋರ್ಬ್ಸ್ ಪ್ರಕಟಿತ 2013ರಲ್ಲಿ 'ವರ್ಷದ ಮಹಿಳಾ ನಾಯಕಿ' ಅವಾರ್ಡ್ ಪಡೆದಿದ್ದಾರೆ.

7. ನೈನಾ ಲಾಲ್ ಕಿದ್ವಾಯಿ

7. ನೈನಾ ಲಾಲ್ ಕಿದ್ವಾಯಿ

ನೈನಾ ಲಾಲ್ ಕಿದ್ವಾಯಿ ಇಂಡಿಯನ್ ಬ್ಯಾಂಕರ್, ಚಾರ್ಟರ್ಡ್ ಅಕೌಂಟಂಟ್ ಮತ್ತು ಬಿಸಿನೆಸ್ ಎಕ್ಸಕ್ಯೂಟಿವ್. 2006ರಿಂದ ಎಚ್ಎಸ್ ಬಿಸಿ ಬ್ಯಾಂಕಿನ ಮುಖ್ಯಸ್ಥೆ ಮತ್ತು ಗ್ರೂಪ್ ಜನರಲ್ ಮ್ಯಾನೆಜರ್ ಆಗಿ ಕಾರ್ಯನಿರತರಾಗಿದ್ದಾರೆ. ಇವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನೈನಾ ಲಾಲ್ ಕಿದ್ವಾಯಿ ಫಾರ್ಚೂನ್ ಏಷಿಯಾ ಪೆಸಿಫಿಕ್ ಪಟ್ಟಿಯಲ್ಲಿ 23ನೇ ಸ್ಥಾನದಲ್ಲಿದ್ದಾರೆ.

8. ಮಲ್ಲಿಕಾ ಶ್ರೀನಿವಾಸನ್

8. ಮಲ್ಲಿಕಾ ಶ್ರೀನಿವಾಸನ್

ಮಲ್ಲಿಕಾ ಶ್ರೀನಿವಾಸನ್ ಫಾರ್ಚೂನ್ ಪಟ್ಟಿಯ ಏಷಿಯಾ ಪೆಸಿಫಿಕ್ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ 25ನೇ ಸ್ಥಾನದಲ್ಲಿದ್ದಾರೆ.
ಟ್ರ್ಯಾಕರ್ಸ್ ಮತ್ತು ಫಾರ್ಮ್ ಈಕ್ವಿಪ್ಮೆಂಟ್ ಲಿಮಿಟೆಡ್(TAFE) ಸಂಸ್ಥೆಯ ಮುಖ್ಯಸ್ಥೆ ಮತ್ತು ಸಿಇಒ ಆಗಿ ಕಾರ್ಯನಿರತರಾಗಿದ್ದಾರೆ.

ಶಂಕರ್ ನೇತ್ರಾಲಯದ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.2014ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ, ಫಾರ್ಚೂನ್ ಏಷಿಯಾ ಪ್ರಕಟಿತ ಭಾರತದ ಅತ್ಯಂತ ಪ್ರಭಾವಶಾಲಿ ಮಹಿಳೆ ಬಿರುದಿಗೆ ಪಾತ್ರರಾಗಿದ್ದಾರೆ.

English summary

8 Indian women in Fortune list

India’s top women bankers, SBI chief Arundhati Bhattacharya, ICICI head Chanda Kochhar and Axis Bank CEO Shikha Sharma, are among the 50 most powerful women based outside the US, according to a list by Fortune
Story first published: Friday, September 16, 2016, 11:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X