For Quick Alerts
ALLOW NOTIFICATIONS  
For Daily Alerts

IDS ಅಡಿಯಲ್ಲಿ 1,100 ಕೋಟಿ ಆದಾಯ ಘೋಷಣೆ

By Siddu
|

ಮುತ್ತಿನ ನಗರಿ ಖ್ಯಾತಿಯ ಸೂರತ್ ನಗರದ ತೆರಿಗೆದಾರರು ಆದಾಯ ಘೋಷಣೆ ಯೊಜನೆ(IDS) ಅಡಿಯಲ್ಲಿ ತೆರಿಗೆ ಇಲಾಖೆಗೆ ಘೋಷಿಸಿರುವ ಆದಾಯ 1,100 ರೂ. ಕೋಟಿ ಗಡಿಯನ್ನು ಮುಟ್ಟಿದೆ.

 

ವಜ್ರ, ಚಿನ್ನಾಭರಣ ವರ್ತಕರು, ಜವಳಿ ವ್ಯಾಪಾರಿಗಳು, ಮುದ್ರಣ, ಗಿರಣಿ ಮಾಲೀಕರು ಆದಾಯ ಘೋಷಣೆ ಯೊಜನೆ(IDS) ಅಡಿಯಲ್ಲಿ ಶುಕ್ರವಾರ ರೂ. 100 ಕೋಟಿ ಘೋಷಿಸಿದ್ದಾರೆ ಎಂದು ಆದಾಯ ತೆರಿಗೆ ಮೂಲ ಹೇಳಿದೆ.

 

IDS ಅಡಿಯಲ್ಲಿ ಪಾಲ್, ಸರೊಲಿ ಮತ್ತು ಮಾಗೊಬ್ ನಗರದ ವರ್ತಕರು ರೂ. 67 ಕೋಟಿ, ಅದರಲ್ಲಿ ರೂ. 10 ಕೋಟಿ ಜವಳಿ ಉದ್ಯಮದವರು, ರೂ. 1.50 ಕೋಟಿ ಜವಳಿ ಗಿರಣಿ ಮಾಲೀಕರು, ರೂ. 3.50 ಜವಳಿ ಗ್ರೂಪ್ ಮತ್ತು ರೂ. 18 ಕೋಟಿ ಪೆನಿ ಸ್ಟಾಕ್ ಅಡಿಯಲ್ಲಿ ಘೋಷಿಸಲಾಗಿದೆ.

IDS ಅಡಿಯಲ್ಲಿ 1,100 ಕೋಟಿ ಆದಾಯ ಘೋಷಣೆ

ಇದುವರೆಗೂ, ಐಡಿಎಸ್ ಅಡಿಯಲ್ಲಿ ನಗರದಲ್ಲಿ ಶೇ. 90ರಷ್ಟು ರಿಯಲ್ ಎಸ್ಟೇಟ್ ನವರು ಆದಾಯ ಘೋಷಿಸಿದ್ದಾರೆ. ತೆರಿಗೆ ಇಲಾಖೆ ವಜ್ರದ ಕಂಪನಿಗಳಿಂದ ತುಂಬಾ ಕಡಿಮೆ ಪ್ರಮಾಣದ ಮೊತ್ತವನ್ನು ಪಡೆದಿದೆ. ಹೆಚ್ಚಿನ ವಜ್ರ ಕಂಪನಿಗಳು ಮುಂಬೈನಲ್ಲಿ ಕಾರ್ಯಾಲಯಗಳನ್ನು ಹೊಂದಿವೆ.

ಐಡಿಎಸ್ ಅಡಿಯಲ್ಲಿ ಆದಾಯ ಇಲಾಖೆ ಅಘೋಷಿತ ಆದಾಯವನ್ನು ಘೋಷಿಸಲು ಸೆಪ್ಟಂಬರ್ 30ರವರೆಗೆ ಸಮಯ ನೀಡಿ ನೋಟಿಸ್ ಜಾರಿ ಮಾಡಿದೆ. ಇದರ ಒಳಗಾಗಿ ಆದಾಯ ಘೋಷಿಸಲು ವಿಫಲವಾಗುವವರ ವಿರುದ್ದ ಇಲಾಖೆ ಕಾನೂನು ಕ್ರಮ ಕೈಗೊಳ್ಳಲಿದೆ.

English summary

1,100 crore declare Under IDS in Surat

Taxpayers in the Diamond City have filled the coffers of income tax (I-T) department as their disclosures under Income Declaration Scheme (IDS) touched Rs1,100-crore mark on Friday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X