For Quick Alerts
ALLOW NOTIFICATIONS  
For Daily Alerts

ಜಿಎಸ್‌ಟಿ ವಿನಾಯಿತಿ ವಹಿವಾಟಿನ ಗರಿಷ್ಠ ಮಿತಿ 20 ಲಕ್ಷ

By Siddu
|

ವ್ಯಾಪಾರಸ್ಥರ ವಹಿವಾಟಿನ ಗರಿಷ್ಠ ವಿನಾಯಿತಿ ಮಿತಿಯನ್ನು ರೂ. 20 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಈಶಾನ್ಯ ರಾಜ್ಯಗಳಿಗೆ ಹೊರತುಪಡಿಸಿ ಎಲ್ಲ ರಾಜ್ಯಗಳಿಗೆ ಇದು ಅನ್ವಯವಾಗಲಿದೆ. ಈಶಾನ್ಯ ರಾಜ್ಯಗಳಿಗೆ ಈ ಮಿತಿ ರೂ. 10 ಲಕ್ಷಕ್ಕೆ ನಿಗದಿಯಾಗಲಿದೆ ಎಂದು ಸರಕು ಮತ್ತು ಸೇವಾ ತೆರಿಗೆ ಮಂಡಳಿ ನಿರ್ಧರಿಸಿದೆ.

 

ಸರಕು ಮತ್ತು ತೆರಿಗೆ ಮಸೂದೆ ಜಾರಿ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಲಿದೆ. ವಾರ್ಷಿಕ ರೂ. 20 ಲಕ್ಷದಷ್ಟು ವಹಿವಾಟು ನಡೆಸುವ ವ್ಯವಹಾರಸ್ಥರನ್ನು ಸರಕು ಮತ್ತು ಸೇವಾ ತೆರಿಗೆಯಿಂದ ಹೊರಗಿಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬಂದಿವೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು.

 
ಜಿಎಸ್‌ಟಿ ವಿನಾಯಿತಿ ವಹಿವಾಟಿನ ಗರಿಷ್ಠ ಮಿತಿ 20 ಲಕ್ಷ

ಸೆಪ್ಟಂಬರ್ 30ರಂದು ನಡೆಯಲಿರುವ ಸಭೆಯಲ್ಲಿ ವಿನಾಯಿತಿಗಳ ಜಾರಿ ಕುರಿತಾಗಿ ಕರಡನ್ನು ಅಂತಿಮಗೊಳಿಸಿ, ಅಕ್ಟೊಬರ್ 17ರಿಂದ ಮೂರು ದಿನಗಳ ಕಾಲ ನಡೆಯಲಿರುವ ಜಿಎಸ್ಟಿ ಮಂಡಳಿ ಸಭೆಯಲ್ಲಿ ತೆರಿಗೆ ದರಗಳನ್ನು ನಿಗದಿಗೊಳಿಸಲಾಗುವುದು.

English summary

GST council exemption limit fixed for tax at Rs.20 lakh

The Goods & Services Tax (GST) Council has decided that businesses in the Northeastern and hill states with annual turnover below Rs.10 lakh would be out of the GST net, while the threshold for the exemption in the rest of India would be an annual turnover of Rs.20 lakh.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X