For Quick Alerts
ALLOW NOTIFICATIONS  
For Daily Alerts

ರಿಲಾಯನ್ಸ್ ಜಿಯೊ Vs ಟೆಲಿಕಾಂ ಸಂಸ್ಥೆ COAI ನಡುವೆ ಸಮರ

By Siddu
|

ರಿಲಾಯನ್ಸ್ ಜಿಯೊ ಆಗಮನದಿಂದ ಎದ್ದಿರುವ ಬಿರುಗಾಳಿ ಶಮನಗೊಳ್ಳುವ ಯಾವ ಲಕ್ಷಣಗಳು ಗೊಚರಿಸುತ್ತಿಲ್ಲ. ದಿನೇ ದಿನೇ ಇದರ ರಭಸ ಬಿರುಸಾಗುತ್ತಲೇ ಇದೆ. ಜಿಯೊ ಮತ್ತು ಟೆಲಿಕಾಂ ಉದ್ಯಮಗಳ ನಡುವಿನ ಸಮರ ಅಂತ್ಯ ಕಾಣದೆ ಕಾವು ಪಡೆಯುತ್ತಲೇ ಸಾಗಿದೆ. ಇದು ರಿಲಾಯನ್ಸ್ ಜಿಯೊ Vs ಟೆಲಿಕಾಂ ರಂಗ ಎನ್ನುವಂತಾಗಿದೆ.

 

ಟೆಲಿಕಾಂ ಕಂಪನಿಗಳ ಈ ನಡೆಯಿಂದ ಗ್ರಾಹಕರು ಮತ್ತು ಮಾರುಕಟ್ಟೆ ವಿಶ್ಲೇಷಕರಲ್ಲಿ ಕುತೂಹಲ ಮನೆ ಮಾಡಿದೆ. ಇದರಿಂದ ಲಾಭ ಪಡೆಯುವವರು ಯಾರು? ಗ್ರಾಹಕರೋ.. ಟೆಲಿಕಾಂ ಕಂಪನಿಗಳೋ... ಕಾದು ನೋಡಬೇಕಿದೆ.

1. COAI ವಿರುದ್ದವೇ ಜಿಯೊ

1. COAI ವಿರುದ್ದವೇ ಜಿಯೊ

ದೇಶದ ಟೆಲಿಕಾಂ ರಂಗದ ಪ್ರಮುಖ ಕಂಪನಿಗಳಾದ ಏರ್ಟೆಲ್, ಐಡಿಯಾ, ವೋಡಾಫೋನ್ ಈ ಹಿಂದೆ ಟೆಲಿಕಾಂ ಉದ್ಯಮ ಸಂಸ್ಥೆ COAI(ಸೆಲ್ಯುಲರ್ ಅಪರೇಟರ್ಸ್ ಅಸೋಸಿಯೆಷನ್ ಆಫ್ ಇಂಡಿಯ) ದೂರು ನೀಡಿದ್ದವು. ಈಗ ಮತ್ತೆ ಅದೇ ರೀತಿಯ ವಾತಾವರಣ ಸೃಷ್ಟಿಯಾಗಿದ್ದು ದೂರಸಂಪರ್ಕ ಉದ್ಯಮದ ಸಂಸ್ಥೆಯಾದ COAI ವಿರುದ್ದವೇ ರಿಲಾಯನ್ಸ್ ದೂರು ನೀಡಿದೆ.

2. ಜಿಯೊ ಪ್ರವೇಶಕ್ಕೆ ತಡೆ

2. ಜಿಯೊ ಪ್ರವೇಶಕ್ಕೆ ತಡೆ

ಟೆಲಿಕಾಂ ಕಂಪನಿಗಳ ಚಾಡಿ ಮತ್ತು ಹುನ್ನಾರದಿಂದಾಗಿ ಕೆಲ ಸ್ಥಳೀಯ ಅಪರೇಟರ್ಸ್ ಗಳು ಜಿಯೊ ಪ್ರವೇಶವನ್ನು ತಡೆಯುವ ಕುತಂತ್ರ ಮಾಡುತ್ತಿದ್ದಾರೆ. ಇದರಿಂದಾಗಿ ಜಿಯೊಗೆ ಹಿನ್ನೆಡೆಯಾಗುತ್ತಿದೆ ಎಂದು ರಿಲಾಯನ್ಸ್ ಆಡಳಿತ ಮಂಡಳಿ ಅಪಾದಿಸಿ COAI ಗೆ ಕೂಲಂಕುಷವಾಗಿ ಪತ್ರ ಬರೆದಿದೆ.

3. ಬ್ಯಾಕ್ ಡೋರ್ ಅಪರೇಟರ್
 

3. ಬ್ಯಾಕ್ ಡೋರ್ ಅಪರೇಟರ್

ಬ್ಯಾಕ್ ಡೋರ್ ಅಪರೇಟರ್(ಹಿಂದಿನ ಬಾಗಿಲ ಆಯೋಜಕ) ಆಗಿ ಟೆಲಿಕಾಂ ರಂಗಕ್ಕೆ ಪ್ರವೇಶಿಸಿದ ಜಿಯೊ ವನ್ನು ಪೂರ್ಣ ಪ್ರಮಾಣದಲ್ಲಿ COAI ಸ್ವಾಗತಿಸಿತ್ತು ಎಂದು COAI ನಿರ್ದೇಶಕ ರಾಜನ್ ಎಸ್ ಮ್ಯಾಥ್ಯೂ ರಿಲಾಯನ್ಸ್ ಪತ್ರಕ್ಕೆ ತಿರುಗೇಟು ನೀಡಿದ್ದಾರೆ.

4. ಫ್ರಂಟ್ ಎನ್ಟಿಟಿಯ ಶಿಶು

4. ಫ್ರಂಟ್ ಎನ್ಟಿಟಿಯ ಶಿಶು

ರಿಲಾಯನ್ಸ್ ಜಿಯೊ ಯುನಿಫೈಡ್ ಲೈಸೆನ್ಸ್ ಗೆ ಎಂದಿಗೂ ಅರ್ಜಿ ಹಾಕಲಿಲ್ಲ. ಯಾವುದೇ ಟೆಲಿಕಾಂ ಕಂಪನಿ ಧ್ವನಿ ಸಂವಹನ, ವಿಡಿಯೋ, ಡೇಟಾ ಸೇವೆಗಳನ್ನು ಒದಗಿಸುವಾಗ ಟ್ರಾಯ್ ನಿಂದ ಯುನಿಫೈಡ್ ಲೈಸೆನ್ಸ್ ಪತ್ರ ಪಡೆಯಬೇಕಾಗುತ್ತದೆ. ಆದರೆ ಜಿಯೊ ಬ್ರಾಡ್ ಬ್ಯಾಂಡ್ ವೈರ್ಲೆಸ್ ಅಕ್ಸೆಸ್ ಫ್ರಂಟ್ ಎನ್ಟಿಟಿ ಮೂಲಕ ಪಡೆದುಕೊಂಡಿದೆ ಎಂದು ಆರೋಪಿಸಿದೆ.

5. 2010ರಲ್ಲಿ ಘೋಷಣೆ

5. 2010ರಲ್ಲಿ ಘೋಷಣೆ

ರಿಲಾಯನ್ಸ್ ಜಿಯೊ 2010ರಲ್ಲಿ ಬ್ಯಾಂಡ್ ವೈರ್ಲೆಸ್ ಅಕ್ಸೆಸ್(BWA) ಸ್ಪೆಕ್ಟ್ರಮ್ ಸ್ವಾಧೀನಪಡಿಸಿಕೊಂಡಿತ್ತು. ಆದರೆ ಕಂಪನಿ ವಾಣಿಜ್ಯಾತ್ಮಕವಾಗಿ ಸೆಪ್ಟಂಬರ್ ೫ ರಂದು ಸೇವೆಗಳನ್ನು ಬಿಡುಗಡೆಗೊಳಿಸಿತು.

6. ಬೃಹತ್ ಕಂಪನಿಗಳೊಂದಿಗೆ ವಾಕ್ಸಮರ

6. ಬೃಹತ್ ಕಂಪನಿಗಳೊಂದಿಗೆ ವಾಕ್ಸಮರ

ಇದರ ಪ್ರಯೋಗಾತ್ಮಕ ಅವಧಿಯಿಂದಲೂ ರಿಲಾಯನ್ಸ್ ಸ್ಥಳಿಯ ಅಪರೇಟರ್ಸ್ ಗಳೊಂದಿಗೆ ವಾಕ್ಸಮರ ಮಾಡುತ್ತಲೇ ಬಂದಿದೆ. ಇದರಲ್ಲಿ ಏರ್ಟೆಲ್, ಐಡಿಯ, ವೋಡಾಫೋನ್ ನಂತಹ ಬೃಹತ್ ಕಂಪನಿಗಳು ಸೇರಿವೆ.

7. COAI ವಿರುದ್ದ ಜಿಯೊ ದೂರು

7. COAI ವಿರುದ್ದ ಜಿಯೊ ದೂರು

ಟೆಲಿಕಾಂ ಕಂಪನಿಗಳ ವಿರುದ್ದ ಅಷ್ಟೆ ಅಲ್ಲದೇ ಈಗ ಸೆಲ್ಯುಲರ್ ಅಪರೇಟರ್ಸ್ ಅಸೋಸಿಯೆಷನ್ ಆಫ್ ಇಂಡಿಯ ವಿರುದ್ದವೇ ದೂರು ನೀಡಿದೆ. ಸದಸ್ಯ ಕಂಪನಿಗಳ ಒಟ್ಟು ಆದಾಯದ ಹಿನ್ನೆಲೆಯಲ್ಲಿರುವ ಮತದಾನ ನಿಯಮಗಳನ್ನು ಟೀಕಿಸಿದೆ.

8. ಮಾರುಕಟ್ಟೆಯ ಪ್ರಬಲ ಸ್ಥಾನ

8. ಮಾರುಕಟ್ಟೆಯ ಪ್ರಬಲ ಸ್ಥಾನ

ಟೆಲಿಕಾಂ ಮಾರುಕಟ್ಟೆಯಲ್ಲಿ ಆದಾಯದ ಆಧಾರದ ಮೇಲೆ ಶೇ. 60.84ರಷ್ಟು ಷೇರು ವ್ಯವಹಾರ ಇರುವ IDOs (ಸ್ಥಾನಿಕ ಪ್ರಬಲ ನಿರ್ವಾಹಕರು) ಪ್ರಬಲ ಸ್ಥಾನವನ್ನು ಪಡೆಯುತ್ತಾರೆ. ಸದಸ್ಯತ್ವದಲ್ಲೂ ತಾರತಮ್ಯ ನಡೆದಿದೆ ಎಂದು ಜಿಯೊ ಆರೋಪಿಸಿದೆ.

9. COAI ನೀತಿ

9. COAI ನೀತಿ

ಸೆಲ್ಯುಲರ್ ಅಪರೇಟರ್ಸ್ ಅಸೋಸಿಯೆಷನ್ ಆಫ್ ಇಂಡಿಯ(COAI) ತನ್ನ ಆಡಳಿತ ನೀತಿ-ನಿಯಮ, ಅನುಪಾತದ ಮತದಾನ ಎಲ್ಲವೂ ಸಂಪೂರ್ಣವಾಗಿ ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ನಡೆಯುತ್ತಿದೆ. ಹಾಗೂ ಪ್ರಜಾಪ್ರಭುತ್ವದ ಮತದಾನ ಸ್ಥಾಪಿತ ಮಾದರಿಯನ್ನು ಹೊಂದಿದೆ ಎಂದು COAI ತಿರುಗೇಟು ನೀಡಿದೆ.

English summary

Reliance Jio VS Ttelecom Industry: COAI Called Jio Back Door Operator

There is absolutely no end in sight to the Reliance Jio Vs Telecom Industry battle, in fact it is getting uglier by the day. After a massive slugfest with the top three operators of the country Airtel, Vodafone and Idea, Mukesh Ambani led Relinace Jio is now up against the Telecom Industry body COAI.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X