For Quick Alerts
ALLOW NOTIFICATIONS  
For Daily Alerts

ಇವು ವಿಶ್ವದಲ್ಲಿನ ಅತಿ ಶ್ರೀಮಂತ ಸ್ಟಾರ್ಟ್ಅಪ್ಸ್

ಇದು ನವೋದ್ಯಮದ(ಸ್ಟಾರ್ಟ್ಅಪ್ಸ್) ಕಾಲ. ಭಾರತದಲ್ಲಿ ಅಷ್ಟೇ ಅಲ್ಲದೆ ಜಗತ್ತಿನ ಎಲ್ಲೆಡೆ ಇದರ ಕ್ರೇಜ್ ತುಂಬಾನೇ ಇದೆ. ಯುವಕರೆಲ್ಲರೂ ಸ್ಟಾರ್ಟ್ಅಪ್ಸ್ ಕಡೆಗೆ ಮುಖಮಾಡಿ ಹೊಸ ಕನಸುಗಳನ್ನು ಕಟ್ಟುತ್ತಾ, ಅಂದುಕೊಂಡಿದ್ದನ್ನು ಸಾಧಿಸುತ್ತಿದ್ದಾರೆ. ನೂರ

By Siddu
|

ಇದು ನವೋದ್ಯಮದ(ಸ್ಟಾರ್ಟ್ಅಪ್ಸ್) ಕಾಲ. ಭಾರತದಲ್ಲಿ ಅಷ್ಟೇ ಅಲ್ಲದೆ ಜಗತ್ತಿನ ಎಲ್ಲೆಡೆ ಇದರ ಕ್ರೇಜ್ ತುಂಬಾನೇ ಇದೆ. ಯುವಕರೆಲ್ಲರೂ ಸ್ಟಾರ್ಟ್ಅಪ್ಸ್ ಕಡೆಗೆ ಮುಖಮಾಡಿ ಹೊಸ ಕನಸುಗಳನ್ನು ಕಟ್ಟುತ್ತಾ, ಅಂದುಕೊಂಡಿದ್ದನ್ನು ಸಾಧಿಸುತ್ತಿದ್ದಾರೆ. ನೂರಾರು ಹೊಸ ಹೊಸ ಸ್ಟಾರ್ಟ್ಅಪ್ಸ್ ಜನ್ಮ ತಾಳುತ್ತಲೇ ಇವೆ.

 

ಜಾಗತಿಕ ಮಟ್ಟದಲ್ಲಿ ಉಬರ್ ನೊಂದಿಗೆ ಯಾವುದೇ ಕಂಪನಿ ಟ್ಯಾಕ್ಸಿ ಸೇವೆಯಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗಿಲ್ಲ. ಭಾರತದಲ್ಲಿ ಪೇಟಿಎಂ ನಂತಹ ಸ್ಟಾರ್ಟ್ಅಪ್ಸ್ ಗಳು ಮುಂಚೂಣಿಯಲ್ಲಿವೆ.

ಜಾಗತಿಕವಾಗಿ ಅತಿ ಹೆಚ್ಚು ಮೌಲ್ಯ, ಸಂಪತ್ತು, ಶ್ರೀಮಂತಿಕೆ, ಪ್ರಖ್ಯಾತಿ ಹೊಂದಿರುವ ಹಾಗೂ ಬೇರೆ ಯಾವುದೇ ಕಂಪನಿಗಳು ಇವುಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗದಿರುವ ಅತಿ ಪ್ರಸಿದ್ದ ಸ್ಟಾರ್ಟ್ಅಪ್ಸ್ ಗಳ ಕುತೂಹಲಕಾರಿ ಚಿತ್ರಣ ಇಲ್ಲಿದೆ.

1. ಉಬರ್

1. ಉಬರ್

ಮೌಲ್ಯಾಂಕನ - 66 ಬಿಲಿಯನ್
ಇಂಡಸ್ಟ್ರಿ - ಕಾರು(ಟ್ಯಾಕ್ಸಿ) ಸೇವೆ
ಒಟ್ಟು ಪಡೆದ ಫಂಡ್ - 15.8 ಬಿಲಿಯನ್
5 ತಿಂಗಳ ಮೌಲ್ಯ ಬದಲಾವಣೆ - 5.6%

66 ಶತಕೋಟಿ ಮೌಲ್ಯದ ಉಬರ್ ಕಂಪನಿ ಇಂದು ವಿಶ್ವದ ಸ್ಟಾರ್ಟ್ಅಪ್ ಕ್ಷೇತ್ರದ ಅತಿದೊಡ್ಡ ಕಥೆಯಾಗಿ ನಿಂತಿದೆ. ನಿಮ್ಮ ಫೋನಿನ ಬಟನ್ ಒತ್ತಿದರೆ ಸಾಕು ಉಬರ್ ಸೇವೆ ನಿಮ್ಮ ಮುಂದೆ ಇರುತ್ತದೆ ಎನ್ನುವಷ್ಟರ ಮಟ್ಟಿಗೆ ಇದು ಸರಳ. ಇದು ರೈಡ್ ಶೇರಿಂಗ್, ಲಾಜಿಸ್ಟಿಕ್ ನೆಟ್ವರ್ಕ್ ಮತ್ತು ಡೆಲಿವರಿ ಸೇವೆಗಳನ್ನು ಸೌಲಭ್ಯ ಒದಗಿಸುತ್ತಿದೆ.
66 ಬಿಲಿಯನ್ ಜಾಗತಿಕ ಮೌಲ್ಯದೊಂದಿಗೆ ವಿಶ್ವದ ನಂಬರ್ ಒನ್ ಸ್ಟಾರ್ಟ್ಅಪ್ ಎಂಬ ಗರಿಮೆ ಹೊಂದಿದೆ.

2. Xiaomi

2. Xiaomi

ಮೌಲ್ಯಾಂಕನ - 46 ಬಿಲಿಯನ್
ಇಂಡಸ್ಟ್ರಿ - ಎಲೆಕ್ಟ್ರಾನಿಕ್ ಉತ್ಪಾದನೆ
ಒಟ್ಟು ಫಂಡ್ - 1.5 ಬಿಲಿಯನ್
5 ತಿಂಗಳ ಮೌಲ್ಯ ಬದಲಾವಣೆ - ಇಲ್ಲ

2010 ರಲ್ಲಿ ಸ್ಥಾಪಿಸಲ್ಪಟ್ಟ Xiaomi ಚೀನಾ ಮೂಲದ 46 ಶತಕೋಟಿ ಮೌಲ್ಯದ ಸ್ಟಾರ್ಟ್ಅಪ್ ಆಗಿದ್ದು, ಎಲೆಕ್ಟ್ರಾನಿಕ್ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಉತ್ಪಾದನೆ ಮಾಡುತ್ತದೆ.
ಉತ್ಪನ್ನಗಳ ಪೈಕಿ ಸ್ಮಾರ್ಟ್ಫೋನ್, ಮೀಡಿಯಾ ಪ್ಲೇಯರ್, ಹೆಡ್ ಫೋನ್ ಮತ್ತು ಬಾಹ್ಯ ಬ್ಯಾಟರಿಗಳು ಸೇರಿವೆ.
46 ಬಿಲಿಯನ್ ವಿಶ್ವದ ಮೌಲ್ಯದೊಂದಿಗೆ ಎರಡನೇ ಸ್ಥಾನ ಅಲಂಕರಿಸಿದೆ.

3. Airbnb
 

3. Airbnb

ಮೌಲ್ಯಾಂಕನ - 30 ಬಿಲಿಯನ್
ಇಂಡಸ್ಟ್ರಿ - ವಿಹಾರ ಬಾಡಿಗೆ (Vacation rentals)
ಒಟ್ಟು ಫಂಡ್ - 4.2 ಬಿಲಿಯನ್
5 ತಿಂಗಳ ಮೌಲ್ಯ ಬದಲಾವಣೆ - 17.6%

2008ರಲ್ಲಿ ಈ ಕಂಪನಿಯನ್ನು ಸ್ಥಾಪಿಸಲ್ಪಟ್ಟಿದ್ದು, 191 ರಾಷ್ಟ್ರಗಳ 34,000 ನಗರಗಳಲ್ಲಿ ಸೇವಾ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು, 60 ಮಿಲಿಯನ್ ವ್ಯವಹಾರಗಳನ್ನು ಸರಾಗಗೊಳಿಸಿದೆ.
Airbnb ಅತಿಥಿ ಸತ್ಕಾರ ಉದ್ಯಮದಲ್ಲಿ ಮುಖ್ಯ ಸ್ಟಾರ್ಟ್ಅಪ್ ಆಗಿದ್ದು, ಪ್ರಯಾಣಿಕರಿಗೆ ವಸತಿ ಮತ್ತು ಆತಿಥ್ಯವನ್ನು ಒದಗಿಸುತ್ತಿದೆ.

4. Didi Chuxing Technology Co

4. Didi Chuxing Technology Co

ಮೌಲ್ಯಾಂಕನ - 28 ಬಿಲಿಯನ್
ಇಂಡಸ್ಟ್ರಿ - ಕಾರು ಸೇವೆ
ಒಟ್ಟು ಪಡೆದ ಫಂಡ್ - 10.5 ಬಿಲಿಯನ್
5 ತಿಂಗಳ ಮೌಲ್ಯ ಬದಲಾವಣೆ - 70.7%

ಇದು ಕಾರು ಸೇವೆ ಒದಗಿಸುವ ಕಂಪನಿಯಾಗಿದೆ. ಚೀನಾ ಡಿವಿಷನ್ ನಿಂದ ದಿದಿ ಕಂಪನಿಗೆ ಉಬರ್ ಇತ್ತೀಚಿಗೆ ಮಾರಾಟ ಮಾಡಿತ್ತು. ಉಬರ್ ಉತ್ತರ ಅಮೇರಿಕಾದ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದ್ದು, ಚೀನಾದಲ್ಲಿ ನಷ್ಟ ಅನುಭವಿಸಿತ್ತು. ಪ್ರಸ್ತುತ Didi Chuxing Technology Co 28 ಬಿಲಿಯನ್ ಮೌಲ್ಯ ಹೊಂದಿದೆ. ಆಪಲ್ ಕಂಪನಿ ಕೂಡ 1 ಬಿಲಿಯನ್ ಹೂಡಿಕೆ ಮಾಡಿದೆ.

5. Palantir

5. Palantir

ಮೌಲ್ಯಾಂಕನ - 20.3 ಬಿಲಿಯನ್
ಇಂಡಸ್ಟ್ರಿ - ಡೇಟಾ ವಿಶ್ಲೇಷಣೆ
ಒಟ್ಟು ಪಡೆದ ಫಂಡ್ - 2 ಬಿಲಿಯನ್
5 ತಿಂಗಳ ಮೌಲ್ಯ ಬದಲಾವಣೆ - ಇಲ್ಲ

ವೆಂಚರ್ ಕ್ಯಾಪಿಟಲಿಸ್ಟ್ ಮತ್ತು ಭವಿಷ್ಯತಾವಾದಿ ಆಗಿರುವ ಪೀಟರ್ ಥಿಯೆಲ್ Palantir ಉದ್ಯಮದ ಸಹಸಂಸ್ಥಾಪಕರಾಗಿದ್ದಾರೆ.
ವಿಮೆಗಾರರಿಗೆ, ಬ್ಯಾಂಕು ಮತ್ತು ಸೈಬರ್ ಸೆಕ್ಯುರಿಟಿ ಉದ್ಯಮಗಳಿಗೆ ಡೇಟಾ ಪರಿಹಾರಗಳನ್ನು Palantir ಒದಗಿಸುತ್ತದೆ. ಅಮೇರಿಕಾದ ಸರ್ಕಾರದೊಂದಿಗೆ ಇದು ಒಪ್ಪಂದ ಮಾಡಿಕೊಂಡು ಸಿಐಎ, ರಕ್ಷಣಾ ಇಲಾಖೆ, ಎನ್ಎಸ್ಎ ಗಳಲ್ಲಿ ಸೇವೆ ಸಲ್ದಲಿಸುತ್ತಿದೆ.
2016ರಲ್ಲಿ ಹತ್ತಕ್ಕಿಂತ ಹೆಚ್ಚು ಬಾರಿ ಫಂಡ್ ಪಡೆದಿದೆ. ಪ್ರಸ್ತುತ 20 ಬಿಲಿಯನ್ ಜಾಗತಿಕ ಮೌಲ್ಯದೊಂದಿಗೆ ಐದನೇ ಸ್ಥಾನ ಪಡೆದಿದೆ.

6. Snapchat

6. Snapchat

ಮೌಲ್ಯಾಂಕನ - 20 ಬಿಲಿಯನ್
ಇಂಡಸ್ಟ್ರಿ - ಸೋಷಿಯಲ್ ಮೀಡಿಯಾ
ಒಟ್ಟು ಪಡೆದ ಫಂಡ್ - 2.6 ಬಿಲಿಯನ್
5 ತಿಂಗಳ ಮೌಲ್ಯ ಬದಲಾವಣೆ - 45.6%

Snapchat ಸಿಇಒ ಮತ್ತು ಸಹ ಸಂಸ್ಥಾಪಕ ಇವಾನ್ ಸ್ಪೀಗೆಲ್ 2011 ರಲ್ಲಿ ಅಪ್ಲಿಕೇಶನ್ ಪ್ರಕಟಪಡಿಸಿದರು. ಈ ಆಪ್ ಮೂಲಕ ಪೋಟೋಗ್ರಾಪ್ ಮತ್ತು ವಿಡಿಯೋ ಗಳನ್ನು ಹಂಚಿಕೊಳ್ಳಬಹುದಾಗಿದ್ದು, ಕೆಲವೇ ಸೆಕೆಂಡುಗಳಲ್ಲಿ ಅವು ಮರೆಯಾಗುತ್ತವೆ. ಇದರಿಂದಾಗಿ ಜನರು ಚಿತ್ರಗಳನ್ನು ಆರಾಮದಾಯಕವಾಗಿ ಹಂಚಿಕೊಳ್ಳಬಹುದಾಗಿದೆ. ಫೇಸ್ಬುಕ್ ನಂತೆ ಇಲ್ಲಿ ಯಾವುದೇ ಸಮಸ್ಯೆಗಳಿರುವುದಿಲ್ಲ.

7. Lufax

7. Lufax

ಮೌಲ್ಯಾಂಕನ - 18.5 ಬಿಲಿಯನ್
ಇಂಡಸ್ಟ್ರಿ - Peer to peer lending
ಒಟ್ಟು ಪಡೆದ ಫಂಡ್ - 1.7 ಬಿಲಿಯನ್
5 ತಿಂಗಳ ಮೌಲ್ಯ ಬದಲಾವಣೆ - ಇಲ್ಲ
2012ರಲ್ಲಿ ಈ ಉದ್ಯಮ ಸ್ಥಾಪಿಸಲಾಗಿದ್ದು, 18.5 ಬಿಲಿಯನ್ ಜಾಗತಿಕ ಮೌಲ್ಯ ಹೊಂದಿದೆ. Lufax ಕಂಪನಿ ಆರಂಭಿಕ ಕಂಪನಿಗಳಿಗೆ, ಸ್ಟಾರ್ಟ್ಅಪ್ ಗಳಿಗೆ ಸಾಂಪ್ರದಾಯಿಕ ಸಾಲವನ್ನು ನೀಡುತ್ತದೆ.
ಈ ಹೊಸ ತರದ ಸಾಲದ ಮೂಲಕ Lufax ಶಾಂಘೈ, ಚೀನಾದಲ್ಲಿ ತುಂಬಾ ವೇಗವಾಗಿ ಬೆಳೆಯುತ್ತಿರುವ ವೇದಿಕೆಯಾಗಿದೆ.

8. China Internet Plus (ಚೀನಾ ಇಂಟರ್ನೆಟ್ ಪ್ಲಸ್)

8. China Internet Plus (ಚೀನಾ ಇಂಟರ್ನೆಟ್ ಪ್ಲಸ್)

ಮೌಲ್ಯಾಂಕನ - 18 ಬಿಲಿಯನ್
ಇಂಡಸ್ಟ್ರಿ - ಇಂಟರ್ನೆಟ್ ತಂತ್ರಜ್ಞಾನ
ಒಟ್ಟು ಪಡೆದ ಫಂಡ್ - 3.3 ಬಿಲಿಯನ್
5 ತಿಂಗಳ ಮೌಲ್ಯ ಬದಲಾವಣೆ - ಇಲ್ಲ

ಚೀನಾ ಇಂಟರ್ನೆಟ್ ಪ್ಲಸ್ ಉದ್ಯಮ ಒಂದೇ ವೇದಿಕೆಯಲ್ಲಿ ಇಂಟರ್ನೆಟ್ ಆಪ್ಲಿಕೇಷನ್ ಗಳನ್ನು ಬಹುವಿಧದ ಗ್ರಾಹಕರಿಗೆ ನೀಡುವಲ್ಲಿ ಸಂಯೋಜಿಸುತ್ತದೆ.
ಊಟ ಮತ್ತು ವ್ಯಾಪಾರ ಉದ್ಯಮಗಳ ದಕ್ಷತೆ ಹೆಚ್ಚಿಸಿ ಗ್ರಾಹಕರ ಅನುಭವಗಳನ್ನು ಸುಧಾರಿಸುವುದು ಇದರ ಮೂಲ ಗುರಿಯಾಗಿದೆ.
ಜೂನ್ ೨೦೧೬ರಲ್ಲಿ ಕಂಪನಿ 600 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಇದರ ಒಟ್ಟು ಜಾಗತಿಕ ಮೌಲ್ಯ 18 ಬಿಲಿಯನ್.

9. WeWork

9. WeWork

ಮೌಲ್ಯಾಂಕನ - 16 ಬಿಲಿಯನ್
ಇಂಡಸ್ಟ್ರಿ - Shared office space
ಒಟ್ಟು ಪಡೆದ ಫಂಡ್ - 1.4 ಬಿಲಿಯನ್
5 ತಿಂಗಳ ಮೌಲ್ಯ ಬದಲಾವಣೆ - 60%

2010ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ವೃತ್ತಿಪರರಿಗೆ, ವ್ಯವಹಾರಸ್ಥರಿಗೆ, ಉದ್ಯಮಿಗಳು, ವಕೀಲರು, ಸಲಹೆಗಾರರು ಅಥವಾ ಸ್ವತಂತ್ರೋದ್ಯೋಗಿಗಳಿಗೆ ಒಂದು ಉತ್ತಮವಾಗಿರುವ ಕಮ್ಯೂನಲ್ ವಾತಾವರಣ ಒದಗಿಸುವ ಉದ್ದೇಶ ಹೊಂದಿದೆ.
ನಾಲ್ಕು ಖಂಡಗಳ 24 ನಗರಗಳಲ್ಲಿ WeWork ಉದ್ಯಮ ಕಚೇರಿಗಳನ್ನು ಹೊಂದಿದೆ. 16 ಬಿಲಿಯನ್ ಜಾಗತಿಕ ಮೌಲ್ಯದೊಂದಿಗೆ 9ನೇ ಸ್ಥಾನದಲ್ಲಿದೆ.

10. SpaceX (ಸ್ಪೇಸ್ ಎಕ್ಸ್)

10. SpaceX (ಸ್ಪೇಸ್ ಎಕ್ಸ್)

ಮೌಲ್ಯಾಂಕನ - 15 ಬಿಲಿಯನ್
ಇಂಡಸ್ಟ್ರಿ - ಸ್ಪೇಸ್ ತಂತ್ರಜ್ಞಾನ
ಒಟ್ಟು ಪಡೆದ ಫಂಡ್ - 1.2 ಬಿಲಿಯನ್
5 ತಿಂಗಳ ಮೌಲ್ಯ ಬದಲಾವಣೆ - 25%

ಎಲೆಕ್ಟ್ರಿಕ್ ಕಾರ್ ಕಂಪನಿಯಾದ ಟೆಸ್ಲಾ ಮೋಟಾರ್ಸ್ ಸಂಸ್ಥಾಪಕರಾದ ಟೆಕ್ ಉದ್ಯಮಿ ಎಲಾನ್ ಮಸ್ಕ್ SpaceX ನ ಸ್ಥಾಪಕರಾಗಿದ್ದಾರೆ.
ಆಕಾಶಯಾನ ವಲಯಕ್ಕೆ ಹೆಚ್ಚು ಕೊಡುಗೆ ಕೊಡುತ್ತಿರುವ ಖಾಸಗಿ ವಲಯದ ಕಂಪನಿಯಾಗಿದೆ.
15 ಬಿಲಿಯನ್ ಜಾಗತಿಕ ಮೌಲ್ಯ ಹೊಂದುವುದರ ಮೂಲಕ ೧೦ನೇ ಸ್ಥಾನದಲ್ಲಿದೆ.

11. Pinterest

11. Pinterest

ಮೌಲ್ಯಾಂಕನ - 11 ಬಿಲಿಯನ್
ಇಂಡಸ್ಟ್ರಿ - ಸೋಷಿಯಲ್ ಮೀಡಿಯಾ
ಒಟ್ಟು ಪಡೆದ ಫಂಡ್ - 1.3 ಬಿಲಿಯನ್
5 ತಿಂಗಳ ಮೌಲ್ಯ ಬದಲಾವಣೆ - ಇಲ್ಲ

12. Dropbox

12. Dropbox

ಮೌಲ್ಯಾಂಕನ - 10.5 ಬಿಲಿಯನ್
ಇಂಡಸ್ಟ್ರಿ - ಕ್ಲೌಡ್ ಕಂಪ್ಯೂಟಿಂಗ್
ಒಟ್ಟು ಪಡೆದ ಫಂಡ್ - 607 ಮಿಲಿಯನ್
5 ತಿಂಗಳ ಮೌಲ್ಯ ಬದಲಾವಣೆ - ಇಲ್ಲ

13. DJI

13. DJI

ಮೌಲ್ಯಾಂಕನ - 10 ಬಿಲಿಯನ್
ಇಂಡಸ್ಟ್ರಿ - ಕ್ಲೌಡ್ ಕಂಪ್ಯೂಟಿಂಗ್
ಒಟ್ಟು ಪಡೆದ ಫಂಡ್ - 105 ಮಿಲಿಯನ್
5 ತಿಂಗಳ ಮೌಲ್ಯ ಬದಲಾವಣೆ - ಇಲ್ಲ

ಸಾಮಾನ್ಯವಾಗಿ ಕಂಪನಿಗಳನ್ನು ಪ್ರಸ್ತುತ ಮತ್ತು ಭವಿಷ್ಯದ ಕಾರ್ಯಾಚರಣೆಗಳು ಹಾಗೂ ಹಣಕಾಸಿನ ಮೌಲ್ಯದ ಆಧಾರದ ಮೇಲೆ ಸ್ಥಾಪಿಸಲಾಗುತ್ತದೆ.

English summary

The World’s Most Valuable and Famous Startups

Every tech startup wants to become a unicorn — a private company valued at more than $1 billion. Because they typically dominate a new business or technology, unicorns are able to raise billions of dollars from investors on the speculation.For example, in the case of ride-sharing service Uber, the world’s hig
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X