For Quick Alerts
ALLOW NOTIFICATIONS  
For Daily Alerts

ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ 39ನೇ ಸ್ಥಾನಕ್ಕೇರಿದ ಭಾರತ

By Siddu
|

ವಿಶ್ವ ಆರ್ಥಿಕ ವೇದಿಕೆ ತಯಾರಿಸಿರುವ ಜಾಗತಿ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತ 16 ಸ್ಥಾನಗಳ ಏರಿಕೆ ಕಂಡು 39ನೇ ಸ್ಥಾನ ಪಡೆದಿದೆ.
ನರೇಂದ್ರ ಮೋದಿ ಪ್ರಧಾನಿಯಾದ ನಂತರ ಭಾರತ ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿದ್ದು, ಕೇಂದ್ರ ಸರ್ಕಾರದ ಸುಧಾರಣಾ ಕ್ರಮಗಳಿಗೆ ಈ ಫಲಿತಾಂಶ ದೊಡ್ಡ ಮಟ್ಟದಲ್ಲಿ ಉತ್ತೇಜನ ಶಕ್ತಿಯಾಗಲಿದೆ.

ಮಾನದಂಡ

ಮಾನದಂಡ

ವಿಶ್ವ ಆರ್ಥಿಕ ವೇದಿಕೆಯು ಭೂದೃಶ್ಯ ಮೌಲ್ಯಮಾಪನ, ದೇಶದ ಉತ್ಪಾದನೆ, ಸಮೃದ್ದತೆ ಅಂಶಗಳನ್ನು ಮಾನದಂಡವನ್ನಾಗಿ ಇಟ್ಟುಕೊಂಡು ಈ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ೧೩೮ ದೇಶಗಳ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ನರೇಂದ್ರ ಮೋದಿ ಸುಧಾರಣಾ ಕ್ರಮ

ನರೇಂದ್ರ ಮೋದಿ ಸುಧಾರಣಾ ಕ್ರಮ

2015-16ರ ಸಾಲಿನಲ್ಲಿ ಭಾರತ ವಿಶ್ವ ಮಟ್ಟದ ಆರ್ಥಿಕತೆಯಲ್ಲಿ 55ನೇ ಸ್ಥಾನದಲ್ಲಿತ್ತು. ನರೇಂದ್ರ ಮೋದಿಯವರು ಆರ್ಥಿಕ ಸುಧಾರಣೆಗಳಿಗೆ ನೀಡಿದ ವೇಗದಿಂದಾಗಿ ಈ ಸಾಧನೆ ಸಾಧ್ಯವಾಗಿದೆ ಎನ್ನಲಾಗಿದೆ.

ಬ್ರಿಕ್ಸ್ ರಾಷ್ಟ್ರಗಳಲ್ಲಿ ಭಾರತಕ್ಕೆ 2ನೇ ಸ್ಥಾನ

ಬ್ರಿಕ್ಸ್ ರಾಷ್ಟ್ರಗಳಲ್ಲಿ ಭಾರತಕ್ಕೆ 2ನೇ ಸ್ಥಾನ

ಬ್ರಿಕ್ಸ್ ರಾಷ್ಟ್ರಗಳಲ್ಲಿ ಭಾರತ ಅತಿ ಹೆಚ್ಚು ಸ್ಪರ್ಧೆ ಒಡ್ಡುವ ಎರಡನೇ ದೇಶವಾಗಿದೆ. 28ನೇ ಸ್ಥಾನದೊಂದಿಗೆ ಚೀನಾ ಮೊದಲನೆ ಸ್ಥಾನದಲ್ಲಿದೆ. ಸತತ 8ನೇ ಬಾರಿ ಸ್ವಿಟ್ಜರ್ಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಸಿಂಗಾಪೂರ ಎರಡನೇ ಮತ್ತು ಅಮೆರಿಕಾ ಮೂರನೇ ಸ್ಥಾನದಲ್ಲಿವೆ.

ಸ್ಪರ್ಧಾತ್ಮಕ ಸುಧಾರಣೆ

ಸ್ಪರ್ಧಾತ್ಮಕ ಸುಧಾರಣೆ

ಸೂಚ್ಯಂಕದಲ್ಲಿ ಭಾರತ 4.52ರಲ್ಲಿದ್ದರೆ, ಸ್ವಿಜರ್ಲೆಂಡ್ ನ ಸೂಚ್ಯಂಕ 5.81ರಷ್ಟಿದೆ. ಸರಕು ಮಾರುಕಟ್ಟೆಯ ದಕ್ಷತೆ, ವ್ಯಾಪಾರ ಸಂಕೀರ್ಣತೆ ಮತ್ತು ನಾವೀನ್ಯತೆ ವಿಷಯದಲ್ಲಿ ಭಾರತದ ಸ್ಪರ್ಧಾತ್ಮಕತೆ ಗಣನೀಯವಾಗಿ ಸುಧಾರಣೆಯಾಗಿದೆ.

Read more about: india investments ಭಾರತ
English summary

Global competitiveness index: India jumps 16 ranks

India has jumped 16 ranks to settle at the 39th spot on the global competitiveness index prepared by the World Economic Forum, that lists 138 countries. This is the second year in a row that India has jumped 16 spots. In the year 2015-16, India was ranked at the 55th place.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X