For Quick Alerts
ALLOW NOTIFICATIONS  
For Daily Alerts

ಭಾರತೀಯ ಸೇನೆ ದಾಳಿಗೆ ಉದ್ಯಮ ಬೆಂಬಲ

By Siddu
|

ಭಾರತೀಯ ಸೇನೆ ನಿಯಂತ್ರಣ ಗಡಿ ರೇಖೆ(LOC) ದಾಟಿ ಪಾಕ್ ಆಕ್ರಮಿತ ಕಾಶ್ಮಿರದ (ಪಿಒಕೆ) ಉಗ್ರರ 7 ಅಡಗುತಾಣಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿರುವುದರಿಂದ ದೇಶದ ವಾಣಿಜ್ಯ ಮತ್ತು ಆರ್ಥಿಕ ವಹಿವಾಟಿನ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಭಾರತೀಯ ಉದ್ಯಮಗಳು ಅಭಿಪ್ರಾಯ ಪಟ್ಟಿವೆ.

ಭಾರತೀಯ ಸೇನೆಯ ಪ್ಯಾರಾ ಕಮಾಂಡೊಗಳು ನಡೆಸಿದ ಸರ್ಜಿಕಲ್ ಕಾರ್ಯಾಚರಣೆಯನ್ನು ಉದ್ಯಮ ವಲಯ ಮತ್ತು ಕಂಪನಿಗಳು ಬೆಂಬಲಿಸಿ ಭಯೋತ್ಪಾಧನೆ ವಿರುದ್ದ ಸರಿಯಾದ ಕ್ರಮ ಕೈಗೊಳ್ಳಲು ಇದು ಸಕಾಲ ಎಂದು ಹೇಳಿವೆ.

ಭಾರತೀಯ ಸೇನೆ ದಾಳಿಗೆ ಉದ್ಯಮ ಬೆಂಬಲ

ಗಡಿಯಲ್ಲುಂಟಾಗಿರುವ ವ್ಯತಿರಿಕ್ತ ಬೆಳವಣಿಗೆ ದುಷ್ಪರಿಣಾಮ ಎದುರಿಸುವ ಶಕ್ತಿ ನಮ್ಮ ಅರ್ಥವ್ಯವಸ್ಥೆಗೆ ಇದೆ ಎಂದು ಅಸೋಚಾಂ ಪ್ರಧಾನ ಕಾರ್ಯದರ್ಶಿ ಡಿ.ಎಸ್. ರಾವತ್ ಹೇಳಿದರು.

ಹಣಕಾಸು ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿರುವ ಏರುಪೇರು ಕ್ಷಣಿಕ. ಈ ಬೆಳವಣಿಗೆ ದೇಶದ ವ್ಯಾಪಾರ, ವಹಿವಾಟಿನ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಮಹೇಶ್ ಗುಪ್ತಾ ಅಭಿಪ್ರಾಯ ಪಟ್ಟಿದ್ದಾರೆ.

English summary

Industry Supported Indian Army Surgical Attack

The Indian Army in the border line of control (LOC), crossing the Pakistan-occupied kasmirada (pioke) surgical attacks on terrorists, the country's commercial and economic trade-led Indian businesses will not have any effect on the policy.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X