For Quick Alerts
ALLOW NOTIFICATIONS  
For Daily Alerts

ಭಾರತ-ಪಾಕ್ ನಡುವಿನ ಸಮಾಜೋ-ಆರ್ಥಿಕ ಭಿನ್ನತೆ ಏನು?

By Siddu
|

ಭಾರತ ಮತ್ತು ಪಾಕಿಸ್ತಾನ ಇತ್ತೀಚಿನ ದಿನಗಳಲ್ಲಿ ಗಡಿ ನಿಯಂತ್ರಣ ರೇಖೆ(LOC) ಅನೇಕ ಅಹಿತಕರ ಘಟನೆಗಳಿಂದಾಗಿ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ. ಈ ಉದ್ವಿಗ್ನತೆಯಿಂದಾಗಿ ಪಾಕಿಸ್ತಾನ ಸಮಾಜೋ-ಆರ್ಥಿಕ ಸಮಸ್ಯೆಗಳೊಂದಿಗೆ ದೇಶದೊಳಗೆ ಹೋರಾಡುವಂತಾಗಿದೆ. ಈ ಸಮಸ್ಯೆ ಭಾರತವನ್ನು ಸಹ ಕಾಡುತ್ತಿದೆ.

ಪಾಕಿಸ್ತಾನ ಇತ್ತೀಚಿನ ವರ್ಷಗಳಲ್ಲಿ ಬಡತನ, ನಿರುದ್ಯೋಗ, ಸಾಕ್ಷರತೆ, ಅಪೌಷ್ಟಿಕತೆ ಮತ್ತು ಇಂಧನ ಬಿಕ್ಕಟ್ಟಿನಿಂದಾಗಿ ಕೆಟ್ಟ ಅಂಕಿ-ಅಂಶಗಳನ್ನು ಹೊಂದಿದೆ.
ಪಾಕಿಸ್ತಾನ ಗಡಿ ಭಾಗದ ಉದ್ವಿಗ್ನತೆ ಮೇಲೆ ಹೆಚ್ಚು ಗಮನ ಕೇಂದ್ರಿಕರಿಸುವ ಬದಲು ದೇಶದೊಳಗಿನ ಸಮಸ್ಯೆಗಳ ಮೇಲೆ ಹೆಚ್ಚು ಗಮನಹರಿಸಬೇಕಾಗಿದ್ದು, ಅದರ ಪ್ರಮುಖ ಅಂಶಗಳ ವಿವರ ಇಲ್ಲಿದೆ.

1. ನಿಧಾನ ಆರ್ಥಿಕ ಬೆಳವಣಿಗೆ

1. ನಿಧಾನ ಆರ್ಥಿಕ ಬೆಳವಣಿಗೆ

ಭಾರತದ ಜಿಡಿಪಿಯಲ್ಲಿ ಜಾಗತಿಕವಾಗಿ 8ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 41ನೇ ಸ್ಥಾನದಲ್ಲಿದೆ. ಭಾರತದ ಜಿಡಿಪಿ ಬೆಳವಣಿಗೆ ದರ ಶೇ. 7.57 ಆಗಿದ್ದರೆ ಪಾಕಿಸ್ತಾನದ ಜಿಡಿಪಿ ಬೆಳವಣಿಗೆ ಶೇ. 5.54ರಷ್ಟಿದೆ. ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನ ತುಂಬಾ ನಿಧಾನಗತಿಯಲಿ ಆರ್ಥಿಕವಾಗಿ ಬೆಳವಣಿಗೆಯಾಗುತ್ತಿದೆ.

2. ಹೆಚ್ಚು ನಿರುದ್ಯೋಗ

2. ಹೆಚ್ಚು ನಿರುದ್ಯೋಗ


ವಿಶ್ವಬ್ಯಾಂಕಿನ ಪ್ರಕಾರ 2014ರಲ್ಲಿ ಭಾರತದ ನಿರುದ್ಯೋಗದ ಪ್ರಮಾಣ ಶೇ. 3.6 ಆಗಿದ್ದರೆ, ಪಾಕಿಸ್ತಾನ ಶೇ. 5.2ರಷ್ಟು ನಿರುದ್ಯೋಗ ಪ್ರಮಾಣ ಹೊಂದಿದೆ.

3. ಇಂಧನ ಬಿಕ್ಕಟ್ಟು

3. ಇಂಧನ ಬಿಕ್ಕಟ್ಟು

ಇಂದನ ಬಿಕ್ಕಟ್ಟಿನಿಂದಾಗಿ ಉತ್ಪಾದನಾ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಿದೆ. ದೀರ್ಘ ವಿದ್ಯುತ್ ಸಮಸ್ಯೆಯಿಂದಾಗಿ ಜನಸಾಮಾನ್ಯರ ಜೀವನ ಕೂಡ ಆಯೋಮಯವಾಗಿದೆ. ಆದರೆ ಭಾರತದಲ್ಲಿ ವಿದ್ಯುತ್ ಸಮಸ್ಯೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿವಾರಿಸಲಾಗಿದೆ.

4. ಸಾಕ್ಷರತೆ

4. ಸಾಕ್ಷರತೆ

ವಿಶ್ವಬ್ಯಾಂಕಿನ ಪ್ರಕಾರ ಭಾರತದ ವಯಸ್ಕ ಸಾಕ್ಷರತಾ ಪ್ರಮಾಣ ಶೇ. 72.98(2011) ಮತ್ತು ಪಾಕಿಸ್ತಾನದಲ್ಲಿ ವಯಸ್ಕ ಸಾಕ್ಷರತಾ ಪ್ರಮಾಣ ಶೇ. 55(2010) ಇತ್ತು. ಅನಕ್ಷರಸ್ಥ ಪಾಲಕರು, ಊಳಿಗಮಾನ್ಯ ಸಮಾಜ, ಲಿಂಗ ತಾರತಮ್ಯದಿಂದಾಗಿ ಪಾಕಿಸ್ತಾನದಲ್ಲಿ ಶಾಲೆಗಳು ಸುಲಭವಾಗಿ ಲಭ್ಯವಿಲ್ಲ.

5. ಬಡತನ

5. ಬಡತನ

ಬಡತನ ಎಂಬುದು ಭಾರತ ಮತ್ತು ಪಾಕಿಸ್ತಾನದಲ್ಲಿನ ದೊಡ್ಡ ಸಮಸ್ಯೆಯಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ವಿಶ್ವಬ್ಯಾಂಕಿನ ಅಂಕಿಅಂಶಗಳ ಪ್ರಕಾರ ಭಾರತದ ಸ್ಥಾನಮಾನ ತುಂಬಾ ಸುಧಾರಿಸಿದೆ.
ಜನಸಂಖ್ಯೆ ದೃಷ್ಟಿಯಿಂದ 2013ರಲ್ಲಿ ಭಾರತ ಶೇ. 21.9ರಷ್ಟು ಮತ್ತು ಪಾಕಿಸ್ತಾನ ಶೇ. 29.5ರಷ್ಟು ಬಡತನದ ಅಡಿಯಲ್ಲಿ ಬರುತ್ತದೆ.

English summary

India - Pak socio-economic issues and Difference

India and Pakistan have been facing serious tensions due to recent incidents along the Line of Control. These tensions are straying Pakistan from critical socio-economic issues within the country.
Story first published: Thursday, October 6, 2016, 16:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X