For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ಸಿಒಒ, ಸಿಎಫ್ಒ ಸಂಬಳ ಏರಿಕೆ!

By Mahesh
|

ಬೆಂಗಳೂರು, ಅಕ್ಟೋಬರ್ 14: ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ತನ್ನ ಎರಡನೇ ತ್ರೈಮಾಸಿಕ ವರದಿಯಲ್ಲಿ ಭರ್ಜರಿ ಫಲಿತಾಂಶ ಹೊರ ಹಾಕಿದೆ. ಇದರ ಬೆನ್ನಲ್ಲೇ ಸಂಸ್ಥೆಯ ಪ್ರಮುಖ ಅಧಿಕಾರಿಗಳ ಸಂಬಳವೂ ಏರಿಕೆಯಾಗಿದೆ.

ಚೀಫ್ ಆಪರೇಟಿಂಗ್ ಆಫೀಸರ್ (ಸಿಒಒ) ಯು.ಬಿ ಪ್ರವೀಣ್ ರಾವ್ ಹಾಗೂ ಚೀಫ್ ಫೈನಾನ್ಶಿಯಲ್ ಆಫೀಸರ್ (ಸಿಎಫ್ಒ) ಎಂಡಿ ರಂಗನಾಥ್ ಅವರ ಸಂಬಳ ವಿವರ ಬಹಿರಂಗ ಪಡಿಸಲಾಗಿದೆ.

ಇದೇ ವೇಳೆ ಆಕ್ಟೋಬರ್ 14,2016ರಿಂದ ಜಾರಿಗೆ ಬರುವಂತೆ ಸೂರ್ಯ ಸಾಫ್ಟ್ ವೇರ್ ಸಿಸ್ಟಮ್ಸ್ ನ ಸಿಇಒ ಡಿಎನ್ ಪ್ರಹ್ಲಾದ್ ಅವರನ್ನು ಸ್ವತಂತ್ರ ನಿರ್ದೇಶಕರಾಗಿ ಇನ್ಫೋಸಿಸ್ ಬೋರ್ಡಿಗೆ ಸೇರಿಸಿಕೊಳ್ಳಲಾಗುತ್ತಿದೆ.[ಸಿಇಒ ವಿಶಾಲ್ ಸಿಕ್ಕಾ ಸಂಬಳ ವಿವರ]

ಇನ್ಫೋಸಿಸ್ ಸಿಒಒ, ಸಿಎಫ್ಒ ಸಂಬಳ ಏರಿಕೆ!

ಪ್ರವೀಣ್ ರಾವ್ ಅವರಿಗೆ ಈಗ 4.62 ಕೋಟಿ ವಾರ್ಷಿಕ ಸಂಬಳ ಹಾಗೂ ವಾರಿಯಬಲ್ ಪೇ 3.88 ಕೋಟಿ ರು ವಾರ್ಷಿಕ ಸಿಗಲಿದೆ. 2016ರ ಆರ್ಥಿಕ ವರ್ಷದ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ರಾವ್ ಅವರಿಗೆ 27,25೦ ನಿರ್ಬಂಧಿತ ಸ್ಟಾಕ್ ಯೂನಿಟ್(ಆರ್ ಎಸ್ ಯು) ಹಾಗೂ 43,000 ಸ್ಟಾರ್ ಆಯ್ಕೆಗಳನ್ನು ನೀಡಲಾಗಿದೆ. ಇದರ ಅವಧಿ 4 ವರ್ಷಗಳಾಗಿದೆ.[2ನೇ ತ್ರೈಮಾಸಿಕದಲ್ಲಿ ಇನ್ಫಿ ಲಾಭ ಶೇ.4.95ರಷ್ಟು ಏರಿಕೆ]

ಇದೇ ವೇಳೆ ರಂಗನಾಥ್, ಮೋಹಿತ್ ಜೋಶಿ (ಫೈನಾನ್ಸ್ ಸರ್ವೀಸಸ್), ಸಂದೀಪ್ ದದ್ಲಾನಿ (ಅಮೆರಿಕಾದ ಕಚೇರಿ ಮುಖ್ಯಸ್ಥ), ರಾಜೇಶ್ ಕೆ ಮೂರ್ತಿ (ಯುರೋಪಿನ ಮುಖ್ಯಸ್ಥ), ರವಿಕುಮಾರ್ ಎಸ್ (ಡೆಲಿವರಿ ಅಧಿಕಾರಿ), ಡೇವಿಡ್ ಕೆನಡಿ (Chief Compliance Officer), ಕೃಷ್ಣಮೂರ್ತಿ ಶಂಕರ್ (ಗ್ರೂಪ್ ಹೆಡ್, ಎಚ್ ಆರ್ ಡಿ), ಮಣಿಕಾಂತ ಎಜಿಎಸ್ (ಕಂಪನಿ ಕಾರ್ಯದರ್ಶಿ) ಅವರ ಸಂಬಳಗಳು ನವೆಂಬರ್ 01, 2016ರಿಂದ ಬದಲಾವಣೆಗೆ ಒಳಪಟ್ಟಿದೆ ಎಂದು ಇನಫೋಸಿಸ್ ಪ್ರಕಟಿಸಿದೆ. ಒಟ್ಟಾರೆ ಸಂಬಳ ಬದಲಾವಣೆ 24 ಕೋಟಿ ರು ನಿಂದ 20 ಕೋಟಿ ರು ನಷ್ಟಿದೆ.(ಗುಡ್ ರಿಟರ್ನ್ಸ್.ಇನ್)

English summary

Infosys Salary Revision: What Is The Salary Structure Of The CFO, COO?

Infosys along with announcing results said that it has revised the pay packages of its top leadership, which includes Chief Operating Officer U B Pravin Rao and Chief Financial Officer M D Ranganath.
Story first published: Friday, October 14, 2016, 13:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X