For Quick Alerts
ALLOW NOTIFICATIONS  
For Daily Alerts

30 ಲಕ್ಷ ಎಟಿಎಂ/ಡೆಬಿಟ್ ಕಾರ್ಡುಗಳಿಗೆ ಭದ್ರತೆ ಇಲ್ಲ

ಎಟಿಎಂನಲ್ಲಿ ಬಳಸಲಾಗುವ ಸುಮಾರು 30 ಲಕ್ಷ ಡೆಬಿಟ್‌ ಕಾರ್ಡುಗಳಿಗೆ ಭದ್ರತೆಯ ಅಪಾಯ ಎದುರಾಗಿದೆ ಎಂಬ ಅಘಾತಕಾರಿ ಮಾಹಿತಿ ವರದಿ ಆಗಿದೆ.

By Siddu
|

ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯ ಮತ್ತು ಅದರ ಸಹವರ್ತಿ ಬ್ಯಾಂಕುಗಳ ಅಸಂಖ್ಯಾತ ಎಟಿಎಂ ಕಾರ್ಡ್‌ಗಳ ಗುಪ್ತ ಮಾಹಿತಿಯನ್ನು ವಂಚಕರು ದೋಚಿದ್ದಾರೆ ಎಂಬ ಸಂಗತಿ ಬಯಲಾಗುತ್ತಿದ್ದಂತೆಯೇ ಇದೀಗ ಎಟಿಎಂನಲ್ಲಿ ಬಳಸಲಾಗುವ ಸುಮಾರು 30 ಲಕ್ಷ ಡೆಬಿಟ್‌ ಕಾರ್ಡುಗಳಿಗೆ ಭದ್ರತೆಯ ಅಪಾಯ ಎದುರಾಗಿದೆ ಎಂಬ ಅಘಾತಕಾರಿ ಮಾಹಿತಿ ವರದಿ ಆಗಿದೆ.

 

ಎಟಿಎಂ ವಂಚನೆಯಿಂದಾಗಿ ಭದ್ರತೆಯ ಅಪಾಯ ಎದುರಾಗಿರುವುದರಿಂದ ಎಸ್‌ಬಿಐ ಈಗಾಗಲೇ ಸುಮಾರು ಆರು ಲಕ್ಷ ಎಟಿಎಂ ಕಾರ್ಡ್‌ಗಳನ್ನು ಬ್ಲಾಕ್‌ ಮಾಡಿ, ಅವುಗಳಿಗೆ ಬದಲಿಯಾಗಿ ಹೊಸ ಕಾರ್ಡುಗಳನ್ನು ನೀಡಲಾಗುವುದು ಎಂದು ಹೇಳಿದೆ.

 
30 ಲಕ್ಷ ಎಟಿಎಂ/ಡೆಬಿಟ್ ಕಾರ್ಡುಗಳಿಗೆ ಭದ್ರತೆ ಇಲ್ಲ

ಬ್ಯಾಂಕಿಂಗ್‌ ತಜ್ಞರ ಪ್ರಕಾರ ದೇಶದ ಇತರ ಹಲವು ಬ್ಯಾಂಕುಗಳ ಅಸಂಖ್ಯಾತ ಎಟಿಎಂ/ಡೆಬಿಟ್‌ ಕಾರ್ಡುಗಳಿಗೂ ಕೂಡ ಭದ್ರತಾ ಅಪಾಯ ಎದುರಾಗಿದೆ.
ಗ್ರಾಹಕರು ಎಟಿಎಂನಲ್ಲಿ ಡೆಬಿಟ್‌ ಕಾರ್ಡ್‌ಗಳನ್ನು ಬಳಸುತ್ತಿದ್ದಂತೆಯೇ ಅವುಗಳ ಪಿನ್‌ ಇತ್ಯಾದಿ ರಹಸ್ಯ ಮಾಹಿತಿಗಳನ್ನು ಕದಿಯುವ ಮಾಲ್‌ವೇರ್‌ ತಂತ್ರಾಂಶ ತನ್ನಿಂತಾನೇ ಸಕ್ರಿಯವಾಗುವುದನ್ನು ಶಂಕಿಸಲಾಗಿದೆ.

ಎಸ್ಬಿಐ, ಎಚ್ಡಿಎಫ್ಸಿ, ಐಸಿಐಸಿಐ, ಯೆಸ್ ಮತ್ತು ಎಕ್ಸಿಸ್ ಬ್ಯಾಂಕುಗಳ ಡೆಬಿಟ್ ಕಾರ್ಡುಗಳ ಕಾರ್ಯನಿರ್ವಹಣೆ ಅಷ್ಟೊಂದು ಸುರಕ್ಷಿತವಲ್ಲ ಎಂದು ಜನರು ಹೇಳಿದ್ದಾರೆ.

ಈಗ ಹಲವು ಖಾಸಗಿ ಬ್ಯಾಂಕುಗಳು ತಜ್ಞರ ಸಲಹೆ-ಸೇವೆಯನ್ನು ಪಡೆದುಕೊಂಡು ಎಟಿಎಂ ಜಾಲವನ್ನು ಪರೀಕ್ಷಿಸುತ್ತಿವೆ. ಡೆಬಿಟ್‌ ಕಾರ್ಡುಗಳ ಬಳಕೆಯಲ್ಲಿ ಯಾವ ಬಗೆಯ ಅಪಾಯಗಳು ಎದುರಾಗುತ್ತಿವೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ ಎಂದು ವರದಿಯಾಗಿದೆ.

English summary

30 lakh Debit Cards Under Threat

Banks in India will either replace or ask users to change the security codes of as many as 3.2 million debit cards.
Story first published: Thursday, October 20, 2016, 15:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X