For Quick Alerts
ALLOW NOTIFICATIONS  
For Daily Alerts

"ರಿಲಾಯನ್ಸ್ ಜಿಯೊ" ಟೆಲಿಕಾಂ ಮಾರುಕಟ್ಟೆಯಲ್ಲಿನ ವಾಸ್ತವ ಅಂಶಗಳು ಯಾವವು?

4ಜಿ ಸಿಮ್ ಕೊಡುಗೆ ಅಗಣಿತ ಉಚಿತ ಧ್ವನಿ ಮತ್ತು ಉಚಿತ ಅನಿಯಮಿತ ಡೇಟಾ, ಎಸ್ಎಂಎಸ್, ವಿಡಿಯೋ ಕರೆ ಮತ್ತು ಜಿಯೊ ಆಪ್ಸ್ ಗಳನ್ನು ಒಳಗೊಂಡಿರುತ್ತದೆ. ಈ ಸೇವೆಗಳನ್ನು 90 ದಿನಗಳವರೆಗೆ ಉಚಿತವಾಗಿ ನೀಡುತ್ತಿದೆ.

By Siddu
|

ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸಂಚಲನದ ಬಿರುಗಾಳಿಯನ್ನು ಎಬ್ಬಿಸಿರುವ ಜಿಯೊ ಎಲ್ಲೆಲ್ಲೂ ಸದ್ದು ಮಾಡಿ ಜಿಯೊ ಜೀ ಭರಕೆ... ಎನ್ನುತ್ತಿರುವುದು ಗೊತ್ತಿರುವ ವಿಚಾರ.

 

ಭಾರತದ ಸಿರಿವಂತ ವ್ಯಕ್ತಿಯೆನಿಸಿದ ಮುಖೇಶ್ ಅಂಬಾನಿ ಬಿಸಿನೆಸ್ ಯುದ್ದಗಳಲ್ಲಿ ಹೊಡೆದಾಡಲು ಇಷ್ಟಪಡುವ ವ್ಯಕ್ತಿ. ದೇಶದ ಬಹುದೊಡ್ಡ ವ್ಯಾಪಾರ ಸಾಮ್ರಾಜ್ಯವನ್ನು ಹೊಂದಿರುವ ಅಂಬಾನಿಯವರ ಕನಸಿನ ಕೂಸು ರಿಲಾಯನ್ಸ್ ಜಿಯೊ.

ಜಿಯೊ ಯಾವುದೇ ವೇಗದಲ್ಲೂ ನಡೆಯುತಿದ್ದರೂ ಅದರಲ್ಲಿ ಹಲವು ಸಾಧಕ-ಬಾಧಕಗಳು ಇರುವುದಂತು ನಿಜ. ಹಾಗಿದ್ದರೆ ಆ ವಾಸ್ತವ ಸಂಗತಿಗಳು ಯಾವವು ಎಂಬುದನ್ನು ನೋಡೋಣ. ರಿಲಾಯನ್ಸ್ ಜಿಯೊ 4ಜಿ ಫ್ರೀ ವೆಲ್‌ಕಮ್ ಆಫರ್ ಸ್ಟಾರ್ಟ್

1. ಜಿಯೊಗಾಗಿ ಹೋರಾಟ

1. ಜಿಯೊಗಾಗಿ ಹೋರಾಟ

ಹೊಸದಾಗಿ ಬಿಡುಗಡೆಗೊಳಿಸಿರುವ ರಿಲಾಯನ್ಸ್ ಜಿಯೊ ಯೋಜನೆಯ ಯಶಸ್ಸಿಗಾಗಿ ಟೆಲಿಕಾಂ ರಂಗದ ಮಾರುಕಟ್ಟೆಯಲ್ಲಿ ತೀವ್ರ ಹೋರಾಟ ಮಾಡಬೇಕಾಗಿದೆ. ಏಕೆಂದರೆ ಏರ್ಟೆಲ್, ಐಡಿಯಾ, ವೋಡಾಫೋನ್ ನಂತಹ ಬಲಿಷ್ಠ ಸಂಸ್ಥೆಗಳೊಂದಿಗೆ ಸ್ಫರ್ಧಿಸುವುದು ಸುಲಭದ ಮಾತಲ್ಲ. ಹೀಗಾಗಿ ಜಿಯೊ ಯಶಸ್ಸಿಗಾಗಿ ಅಂಬಾನಿ ಹೋರಾಡುತ್ತಲೆ ಇದ್ದಾರೆ.

2. ಜಿಯೊ ಉಚಿತ ಸೇವೆಗಳ ಗಣಿ

2. ಜಿಯೊ ಉಚಿತ ಸೇವೆಗಳ ಗಣಿ

4ಜಿ ಸಿಮ್ ಕೊಡುಗೆ ಅಗಣಿತ ಉಚಿತ ಧ್ವನಿ ಮತ್ತು ಉಚಿತ ಅನಿಯಮಿತ ಡೇಟಾ, ಎಸ್ಎಂಎಸ್, ವಿಡಿಯೋ ಕರೆ ಮತ್ತು ಜಿಯೊ ಆಪ್ಸ್ ಗಳನ್ನು ಒಳಗೊಂಡಿರುತ್ತದೆ. ಈ ಸೇವೆಗಳನ್ನು 90 ದಿನಗಳವರೆಗೆ ಉಚಿತವಾಗಿ ನೀಡುತ್ತಿದೆ. ಇದರ ಜತೆಗೆ ಸ್ಟ್ರೀಮಿಂಗ್ ಮ್ಯೂಸಿಕ್, ಹೈ ಡೆಫಿನಿಷನ್ ವಿಡಿಯೋ ಸ್ಟ್ರೀಮಿಂಗ್ ಮ್ಯೂಸಿಕ್ ಮತ್ತು ಡಿಜಿಟಲ್ ಹಣ ಪಾವತಿ ಒಳಗೊಂಡಂತೆ ಅನೇಕ ಸೇವೆಗಳನ್ನು ಒದಗಿಸುತ್ತಿದೆ.

3. ಏರ್ಟೆಲ್ ಮತ್ತು ಐಡಿಯಾ ಮೇಲೆ ಒತ್ತಡ
 

3. ಏರ್ಟೆಲ್ ಮತ್ತು ಐಡಿಯಾ ಮೇಲೆ ಒತ್ತಡ

ರಿಲಾಯನ್ಸ್ ಜಿಯೊ ಪರಿಣಾಮ ಟೆಲಿಕಾಂ ರಂಗದಲ್ಲಿ ಸಮರರಿಲಾಯನ್ಸ್ ಜಿಯೊ ಪರಿಣಾಮ ಟೆಲಿಕಾಂ ರಂಗದಲ್ಲಿ ಸಮರ

4. ಜಿಯೊ ಸ್ಪೀಡ್ ತುಂಬಾ ಕಡಿಮೆ

4. ಜಿಯೊ ಸ್ಪೀಡ್ ತುಂಬಾ ಕಡಿಮೆ

ಸೆಪ್ಟಂಬರ್ 5ರ ಮುಂಚೆ ಜಿಯೊ ಬಿಡುಗಡೆಯಾಗುವ ಮುನ್ನ ಇದು 4G ನೆಟವರ್ಕ್ ನಲ್ಲಿ 135Mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿತ್ತು. ಆದರೆ ವಾಸ್ತವದಲ್ಲಿ 4G ನೆಟವರ್ಕ್ ನಲ್ಲಿ ಈ ವೇಗದಲ್ಲಿ ಕಾರ್ಯನಿರ್ವಹಿಸುವುದು ಅಸಾದ್ಯವಾದ ವಿಚಾರವಾಗಿತ್ತು. ಆದರೆ ಹೆಚ್ಚಿನ ಗ್ರಾಹಕರ ಅನುಭವದ ಪ್ರಕಾರ ಜಿಯೊ ವೇಗ ಕೇವಲ 50Mbps ಆಗಿದೆ ಎನ್ನಲಾಗಿದೆ. ಅಂದರೆ 4G ನೆಟವರ್ಕ್ ನಲ್ಲಿ 2G ವೇಗ. ರಿಲಾಯನ್ಸ್ ಜಿಯೊ ಕನಿಷ್ಟ ವೇಗ 0.49Mbps ಹಾಗೂ ಗರಿಷ್ಠ ವೇಗ 0.8Mbps ಆಗಿದೆ.

5. ಜಿಯೊ Vs ಏರ್ಟೆಲ್

5. ಜಿಯೊ Vs ಏರ್ಟೆಲ್

ರಿಲಾಯನ್ಸ್ ಜಿಯೊ ಮತ್ತು ಏರ್ಟೆಲ್ ಸೇವೆಯ ವೇಗಗಳನ್ನು ಗಮನಿಸಿದರೆ ಏರ್ಟೆಲ್ ವೇಗವೇ ಉತ್ತಮವಾಗಿದೆ. ಏರ್ಟೆಲ್ ಡೌನ್ಲೋಡ್ ವೇಗ 11.02Mbps ಆಗಿದ್ದರೆ ಜಿಯೊ ಡೌನ್ಲೋಡ್ ವೇಗ 2.51Mbps ಆಗಿದೆ. ಏರ್ಟೆಲ್ ಅಪ್ಲೋಡ್ ವೇಗ 0.54Mbps ಆಗಿದ್ದು, ಜಿಯೊ ಅಪ್ಲೋಡ್ ವೇಗ 0.36 ಆಗಿದೆ. ರಿಲಾಯನ್ಸ್ ಜಿಯೊ-ಏರ್‌ಟೆಲ್‌ ನಡುವೆ ಸಮರ

6. ಉತ್ತಮ ಯೋಜನೆ, ಕಳಪೆ ನಿರ್ವಹಣೆ?

6. ಉತ್ತಮ ಯೋಜನೆ, ಕಳಪೆ ನಿರ್ವಹಣೆ?

ಕೆಲ ಗ್ರಾಹಕರ ಹಾಗೂ ತಜ್ಞರ ಪ್ರಕಾರ ಇದು ಉತ್ತಮ ಯೋಜನೆ ಆದರೆ ಕಳಪೆ ನಿರ್ವಹಣೆ ಹೊಂದಿದೆ ಎಂಬುದಾಗಿದೆ. ಆದರೆ ಮುಖೇಶ್ ಅಂಬಾನಿ ಪ್ರಕಾರ ಇದು ರೂ. 2,50,000 ಕೋಟಿ ಹೂಡಿಕೆಯ ಯೋಜನೆಯಾಗಿದ್ದು, ಉನ್ನತ ಚಿಂತನೆ ಹಾಗೂ ಉತ್ತಮ ಪರಿಸರ, ಅತ್ಯುನ್ನತ ನಿರ್ವಹಣೆ ಹೊಂದಿರುವ ಯೋಜನೆಯಾಗಿದೆ.

7. ಜಿಯೊದಿಂದ ಹಿಂದೆ ಸರಿಯಲ್ಲ

7. ಜಿಯೊದಿಂದ ಹಿಂದೆ ಸರಿಯಲ್ಲ

2016ರ ಫೋರ್ಬ್ಸ್ ವರದಿ ಪ್ರಕಾರ 23.4 ಬಿಲಿಯನ್ ನಿವ್ವಳ ಆಸ್ತಿ ಹೊಂದಿರುವ ಮುಖೇಶ್ ಅಂಬಾನಿ ಜಿಯೊ ಹಿನ್ನೆಲೆಯಲ್ಲಿ ಸೋಲುವ ಮಾತಾಗಲಿ ಇಲ್ಲವೇ ನಮ್ಮ ಬಿಸಿನೆಸ್ ನಿಂದ ಹಿಂದೆ ಸರಿಯುವುದಾಗಲಿ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ವಿದ್ಯಾರ್ಥಿ ದೆಶೆಯಿಂದಲೇ ಕಷ್ಟಪಟ್ಟು ಬೆಳೆದಿರುವ ನನಗೆ ಇದೇಲ್ಲವೂ ಸಾಮಾನ್ಯ ವಿಚಾರ.

8. 20 ಬ್ರ್ಯಾಂಡ್ ಗಳೊಂದಿಗೆ ಒಪ್ಪಂದ

8. 20 ಬ್ರ್ಯಾಂಡ್ ಗಳೊಂದಿಗೆ ಒಪ್ಪಂದ


ಜಿಯೊ ಸೇವೆಯನ್ನು ತೀವ್ರಗೊಳಿಸಲು ಹಾಗೂ ಗ್ರಾಹಕರನ್ನು ಸೆಳೆಯಲು 20 ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳೊಂದಿಗೆ ರಿಲಾಯನ್ಸ್ ಜಿಯೊ ಒಪ್ಪಂದ ಮಾಡಿಕೊಂಡಿದೆ.
ಸ್ಯಾಮ್ಸಂಗ್, ಎಲ್ ಜಿ, ಫ್ಲಿಪ್ಕಾರ್ಟ್, ಮೈಕ್ರೊಮ್ಯಾಕ್ಸ್ ಮತ್ತು ಪಾನಾಸೋನಿಕ್ ಪ್ರಮುಖ ಸಂಸ್ಥೆಗಳಾಗಿವೆ.

English summary

Reliance Jio: Which Are the Virtual Factors of Telecom Sector

The users of the Jio SIM can enjoy free and unlimited 4G data, unlimited and free calls, and messages till the end of this year as a part of the Welcome Offer. Here are some real factors had given for brief view.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X