For Quick Alerts
ALLOW NOTIFICATIONS  
For Daily Alerts

ರಿಲಾಯನ್ಸ್ ಜಿಯೊ ದೂರು: ಏರ್ಟೆಲ್, ವೊಡಾಫೋನ್, ಐಡಿಯಾಗೆ 3050 ಕೋಟಿ ದಂಡ

ಜಿಯೋಗೆ ಸಮರ್ಪಕವಾಗಿ ಇಂಟರ್ ಕನೆಕ್ಟ್ ಪಾಯಿಂಟ್ ಗಳನ್ನು ನೀಡದೇ ಇದ್ದ ಕಾರಣ ಏರರ್ಟೆಲ್ ಮತ್ತು ವೋಡಾಫೋನ್ ಕಂಪನಿಗಳಿಗೆ ತಲಾ 1050 ಕೋಟಿ ರೂ. ಹಾಗೂ ಐಡಿಯಾಗೆ 950 ಕೋಟಿ ರೂ. ದಂಡ ವಿಧಿಸುವಂತೆ ಟ್ರಾಯ್ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

By Siddu
|

ರಿಲಾಯನ್ಸ್ ಜಿಯೊಗೆ ಸಮರ್ಪಕವಾಗಿ ಇಂಟರ್ ಕನೆಕ್ಟ್ ಪಾಯಿಂಟ್ ಗಳನ್ನು ನೀಡದೇ ಇದ್ದ ಕಾರಣ ಏರ್ ಟೇಲ್, ವೋಡಾಫೋನ್ ಹಾಗೂ ಐಡಿಯಾ ಕಂಪನಿಗಳಿಗೆ ಭಾರತೀಯ ಟೆಲಿಕಾಂ ನಿತಂತ್ರಣ ಪ್ರಾದಿಕಾರ(ಟ್ರಾಯ್) ದಂಡ ವಿಧಿಸಿದೆ.

 

ರಿಲಾಯನ್ಸ್ ಜಿಯೊ ನೀಡುತ್ತಿರುವ ಸ್ಪರ್ಧೆಯನ್ನು ಹತ್ತಿಕ್ಕಲು ಈ ಮೂರು ಕಂಪನಿಗಳು ಹುನ್ನಾರ ನಡೆಸಿದ್ದು, ಉದ್ದೇಶಪೂರ್ವಕವಾಗಿ ಅಂತರ್ ಸಂಪರ್ಕ ನೀಡುತ್ತಿಲ್ಲ ಎಂದು ಟ್ರಾಯ್ ಸ್ಪಷ್ಟ ಪಡಿಸಿದೆ.

1. ಗ್ರಾಹಕ ವಿರೋಧಿ ಕೃತ್ಯ

1. ಗ್ರಾಹಕ ವಿರೋಧಿ ಕೃತ್ಯ

ಟೆಲಿಕಾಂ ರಂಗದಲ್ಲಿ ಭಾರಿ ಸಂಚಲನ ಉಂಟಾಗಿದ್ದು, ಮತ್ತೆ ಪ್ರತಿಷ್ಟಿತ ಕಂಪನಿಗಳ ಮಧ್ಯೆ ಸಮರ ಪ್ರಾರಂಭವಾದಂತಾಗಿದೆ. ದೂರಸಂಪರ್ಕ ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘಿಸುವ ಮೂಲಕ ಈ ಮೂರು ಮೊಬೈಲ್ ಸೇವಾ ಕಂಪನಿಗಳು ಉತ್ತಮ ಅಂತರ್ ಸಂಪರ್ಕ ಕಲ್ಪಿಸದೆ ಗ್ರಾಹಕ ವಿರೋಧಿ ಕೃತ್ಯಗಳಲ್ಲಿ ತೊಡಗಿವೆ ಎಂದು ಟ್ರಾಯ್ ತಿಳಿಸಿದೆ.

2. 3050 ಕೋಟಿ ದಂಡ

2. 3050 ಕೋಟಿ ದಂಡ

ಏರರ್ಟೆಲ್ ಮತ್ತು ವೋಡಾಫೋನ್ ಕಂಪನಿಗಳಿಗೆ ತಲಾ 1050 ಕೋಟಿ ರೂ. ಹಾಗೂ ಐಡಿಯಾಗೆ 950 ಕೋಟಿ ರೂ. ದಂಡ ವಿಧಿಸುವಂತೆ ಟ್ರಾಯ್ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಪ್ರತಿ ಲೈಸೆನ್ಸ್ ಸರ್ವಿಸ್ ಏರಿಯಾಗೆ ರೂ.50 ಕೋಟಿ ದಂಡ ವಿಧಿಸಿದೆ.

3. ದಂಡಕ್ಕೆ ಕಾರಣಗಳೇನು?
 

3. ದಂಡಕ್ಕೆ ಕಾರಣಗಳೇನು?

ಜಿಯೋ ತನ್ನ ಉಚಿತ ಸೇವೆಗಳಿಂದಾಗಿಯೇ ಟೆಲಿಕಾಮ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿತ್ತು. ಈ ಹಿನ್ನಲೆಯಲ್ಲಿ ಏರ್ ಟೆಲ್, ವೊಡಾಫೋನ್, ಐಡಿಯಾ ಸಂಸ್ಥೆಗಳೊಂದಿಗೆ ಸೇರಿ ಪರಸ್ಪರ ನೆಟ್ವರ್ಕ್ ಸಿಗ್ನಲ್ ಪಡೆಯುವ ಪಿಒಐ (Point of interface) ಒಪ್ಪಂದ ಮಾಡಿಕೊಂಡಿತ್ತು. ಆದರೆ ಜಿಯೋ ಗ್ರಾಹಕರಿಗೆ ಉತ್ತಮ ನೆಟ್ವರ್ಕ್ ಸಿಗದೇ ಕಾಲ್ ಡ್ರಾಪ್ ಆಗುತ್ತಿರುವ ಕುರಿತು ಸಾಕಷ್ಟು ದೂರುಗಳು ಕೇಳಿ ಬಂದಿದ್ದವು.
ಈ ಹಿನ್ನಲೆಯಲ್ಲಿ ರಿಲಾಯನ್ಸ್ ಜಿಯೋ ಟ್ರಾಯ್ ಗೆ ದೂರು ನೀಡಿತ್ತು. ದೂರಿನಲ್ಲಿ ಒಪ್ಪಂದದ ಹೊರತಾಗಿಯೂ ಈ ಸಂಸ್ಥೆಗಳು ಅಂತರ್ ಸಂಪರ್ಕ ಸೇವೆ ನೀಡುತ್ತಿಲ್ಲ. ಮಾರುಕಟ್ಟೆ ಪೈಪೋಟಿಯನ್ನು ತಡೆಯುವ ನಿಟ್ಟಿನಲ್ಲಿ ಜಿಯೋ ಗ್ರಾಹಕರಿಗೆ ನೆಟ್ವರ್ಕ್ ಸಮಸ್ಯೆಯನ್ನು ಒಡ್ಡುತ್ತಿವೆ ಎಂದು ಜಿಯೋ ಆರೋಪಿಸಿತ್ತು.

4. ಕೇಂದ್ರದಿಂದ ಸುಪ್ರೀಂಕೋರ್ಟ್ ಗೆ ಮಾಹಿತಿ

4. ಕೇಂದ್ರದಿಂದ ಸುಪ್ರೀಂಕೋರ್ಟ್ ಗೆ ಮಾಹಿತಿ

ದೇಶದ ಈ ಬೃಹತ್ ಟೆಲಿಕಾಂ ಕಂಪೆನಿಗಳು ಲಕ್ಷಾಂತರ ಗ್ರಾಹಕರನ್ನು ಹೊಂದಿವೆ. ಈ ಕಂಪೆನಿಗಳಿಗೆ ಪ್ರತಿದಿನ 250 ಕೋಟಿ ವರಮಾನವಿದ್ದರೂ ಕರೆ ಕಡಿತ ತಪ್ಪಿಸಲು ಅಗತ್ಯವಾದ ಸಂಪರ್ಕ ಜಾಲ ಸುಧಾರಣೆ ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

5. ಪರವಾನಗಿ ರದ್ದತಿಗೆ ಜಿಯೊ ಆಗ್ರಹ

5. ಪರವಾನಗಿ ರದ್ದತಿಗೆ ಜಿಯೊ ಆಗ್ರಹ

ಜಿಯೊ ಕರೆಗಳು ವಿಫಲಗೊಳ್ಳುತ್ತಿರುವುದಕ್ಕೆ ಏರ್ ಟೆಲ್, ವೊಡಾಫೋನ್, ಐಡಿಯಾ ಸಂಸ್ಥೆಗಳು ಕಾರಣವಾಗಿದ್ದು, ಅವುಗಳ ಪರವಾನಗಿಯನ್ನು ರದ್ದು ಮಾಡುವಂತೆ ಟ್ರಾಯ್ ಗೆ ಆಗ್ರಹ ಮಾಡಿದೆ. ಆದರೆ ಈ ಮೂರು ಕಂಪನಿಗಳ ಪರವಾನಗಿ ರದ್ದತಿ ಮಾಡುವುದರಿಂದ ತುಂಬಾ ಗ್ರಾಹಕರಿಗೆ ಅನಾನುಕೂಲ ಉಂಟಾಗಲಿದೆ. ಅಲ್ಲದೆ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅವುಗಳಿಗೆ ದಂಡ ವಿಧಿಸಲು ಶಿಫಾರಸ್ಸು ಮಾಡುವುದಾಗಿ ಟ್ರಾಯ್ ಸ್ಪಷ್ಟಪಡಿಸಿದೆ.

6. ದಂಡದ ಕ್ರಮ ಸಮರ್ಥನೆ

6. ದಂಡದ ಕ್ರಮ ಸಮರ್ಥನೆ

ಕುರಿಯನ್ ಜೋಸೆಫ್ ಮತ್ತು ಆರ್. ಎಫ್. ನಾರಿಮನ್ ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠದ ಎದುರು ಕರೆ ಕಡಿತಕ್ಕೆ ಸಂಬಂಧಿಸಿದಂತೆ ಭಾರತೀಯ ಟೆಲಿಕಾಂ ನಿತಂತ್ರಣ ಪ್ರಾದಿಕಾರ ವಿಧಿಸಿರುವ ದಂಡದ ಕ್ರಮವನ್ನು ಅಟಾರ್ನಿ ಜನರಲ್‌ ಮುಕುಲ್ ರೋಹಟಗಿ ಸಮರ್ಥಿಸಿಕೊಂಡರು. ಪ್ರತಿವರ್ಷ ಈ ಕಂಪೆನಿಗಳು ಒಂದು ಲಕ್ಷ ಕೋಟಿ ಆದಾಯ ಗಳಿಸುತ್ತಿವೆ. ಆದ್ದರಿಂದ ದಂಡದ ಮೊತ್ತ ಅಷ್ಟೊಂದು ದೊಡ್ಡದಲ್ಲ ಎಂದು ತಿಳಿಸಿದರು.

7. ಟ್ರಾಯ್ ವಿರುದ್ಧ ಸುಪ್ರೀಂಗೆ ಮೇಲ್ಮನವಿ

7. ಟ್ರಾಯ್ ವಿರುದ್ಧ ಸುಪ್ರೀಂಗೆ ಮೇಲ್ಮನವಿ

ಕರೆ ಕಡಿತಕ್ಕೆ ಗ್ರಾಹಕರಿಗೆ ಪರಿಹಾರ ನೀಡಬೇಕು ಎಂಬ ಟ್ರಾಯ್ ಆದೇಶದ ವಿರುದ್ಧ ವೊಡಾಫೋನ್, ಭಾರ್ತಿ ಏರ್‌ಟೆಲ್ ಮತ್ತು ಐಡಿಯಾ ಕಂಪೆನಿಗಳು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿವೆ. ಅಲ್ಲದೇ ಟ್ರಾಯ್ ಆದೇಶ ಏಕಪಕ್ಷೀಯವಾಗಿದೆ ಎಂದು ಆರೋಪ ಮಾಡಿವೆ.

8. ಗ್ರಾಹಕರ ಸಂಖ್ಯೆ ಗಣನೀಯವಾಗಿ ಹೆಚ್ಚಳ

8. ಗ್ರಾಹಕರ ಸಂಖ್ಯೆ ಗಣನೀಯವಾಗಿ ಹೆಚ್ಚಳ

ಟೆಲಿಕಾಂ ಕಂಪೆನಿಗಳ ಗ್ರಾಹಕರ ಸಂಖ್ಯೆ 2009 ರಿಂದ 2015ರ ಅವಧಿಯಲ್ಲಿ ಶೇ 61ರಷ್ಟು ಗಣನೀಯವಾಗಿ ಹೆಚ್ಚಾಗಿದ್ದು, ಹೆಚ್ಚು ಲಾಭ ಮಾಡುವ ಉದ್ದೇಶದಿಂದ ತರಂಗಾಂತರವನ್ನು ಡೇಟಾ ವರ್ಗಾವಣೆಗೆ ಬಳಸುತ್ತಿವೆ ಎಂದು ರೋಹಟಗಿ ಹೇಳಿದರು. ಈ ಕಂಪೆನಿಗಳು ಉಚಿತವಾಗಿ ಸೇವೆ ಸಲ್ಲಿಸುತ್ತಿಲ್ಲ. ಬದಲಿಗೆ ಲಕ್ಷಾಂತರ ಗ್ರಾಹಕರಿಂದ ಸಾಕಷ್ಟು ಲಾಭ ಮಾಡಿಕೊಳ್ಳುತ್ತಿವೆ. ಆದ್ದರಿಂದ ಈ ಕಂಪೆನಿಗಳು ದಂಡ ಭರಿಸಲಾರದಷ್ಟು ಬಡ ಕಂಪೆನಿಗಳೇನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

9. ಟೆಲಿಕಾಂ ಕಂಪನಿಗಳ ಕುಂಟು ನೆಪ

9. ಟೆಲಿಕಾಂ ಕಂಪನಿಗಳ ಕುಂಟು ನೆಪ

ಟೆಲಿಕಾಂ ಕಂಪನಿಗಳು ಕರೆ ಕಡಿತಕ್ಕೆ ತರಂಗಾಂತರ ಕೊರತೆ ಕಾರಣ ಎಂದು ಹೇಳಿದ್ದವು. ಆದರೆ ಈ ಕಾರಣಗಳೆಲ್ಲವೂ ಬರೀ ನೆಪಗಳಾಗಿದ್ದು, ತಂತ್ರಜ್ಞಾನ ಸುಧಾರಣೆಗೆ ಹೆಚ್ಚಿನ ಬಂಡವಾಳ ಹೂಡುವುದನ್ನು ತಪ್ಪಿಸಿಕೊಳ್ಳಲು ಇಂತಹ ನೆಪಗಳನ್ನು ಟೆಲಿಕಾಂ ಕಂಪೆನಿಗಳು ಹೇಳುತ್ತಿವೆ ಎಂದು ರೋಹಟಗಿ ನ್ಯಾಯಪೀಠದ ಗಮನಕ್ಕೆ ತಂದರು.

English summary

Reliance Jio Complaint: Airtel, Idea and Vodafone face ₹3,050-cr penalty

According to TRAI, Airtel and Vodafone have to pay ₹1,050 crore each and Idea Cellular ₹950 crore. The penalty has been imposed for violating quality of service norms.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X