For Quick Alerts
ALLOW NOTIFICATIONS  
For Daily Alerts

ಟ್ರಂಪ್, ಹಿಲರಿ ಎಫೆಕ್ಟ್ ರೂಪಾಯಿ ಮೌಲ್ಯ ಕುಸಿತ!

ಹಿಲರಿ ಮತ್ತು ಟ್ರಂಪ್ ನಡುವೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಾಗಿ ಪೈಪೋಟಿ ತೀವ್ರವಾಗಿ ನಡೆಯುತ್ತಿದ್ದಂತೆ ಸೆನ್ಸೆಕ್ಸ್ 349 ಅಂಕಗಳ ಭಾರಿ ಕುಸಿತ ಕಂಡಿದೆ.

By Siddu
|

ಭಾರತೀಯ ಷೇರಪೇಟೆ ಹಾಗೂ ಅಮೆರಿಕಾದ ಚುನಾವಣೆಗೆ ಏನು ಸಂಬಂಧ? ಅಮೆರಿಕದ ಅಧ್ಯಕ್ಷೀಯ ಚುನಾವಣೆ ದೇಶದ ಷೇರುಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಏಕೆ? ಇತ್ಯಾದಿ ಪ್ರಶ್ನೆಗಳು ಕಾಡುವುದು ಸಹಜ.

ಹೌದು. ಹಿಲರಿ ಮತ್ತು ಟ್ರಂಪ್ ನಡುವೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಾಗಿ ಪೈಪೋಟಿ ತೀವ್ರವಾಗಿ ನಡೆಯುತ್ತಿದ್ದಂತೆ ಸೆನ್ಸೆಕ್ಸ್ 369 ಅಂಕಗಳ ಭಾರಿ ಕುಸಿತ ಕಂಡಿದೆ.

ಹಿಲರಿ ಕ್ಲಿಂಟನ್ ಚುನಾವಣೆಯಲ್ಲಿ ಮುನ್ನಡೆ ಸಾಧಿಸಬಹುದು ಎನ್ನುವುದು ಜಗತ್ತಿನಾದ್ಯಂತ ಎಲ್ಲರ ಅಭಿಪ್ರಾಯ. ಅದೇ ರೀತಿ ಭಾರತೀಯ ಷೇರುದಾರರು ಕೂಡ ಹಿಲರಿ ಜಯ ಸಾಧಿಸಬಹುದು ಎಂದುಕೊಂಡಿದ್ದಾರೆ. ಆದರೆ ಡೊನಾಲ್ಡ್ ಟ್ರಂಪ್ ಹಿಲರಿಗೆ ತೀವ್ರವಾದ ಪೈಪೋಟಿ ನೀಡುತ್ತಿರುವ ಹಿನ್ನಲೆಯ ಪರಿಣಾಮ ಷೇರುಪೇಟೆಯ ಮೇಲೂ ಬೀಳುತ್ತಿದೆ ಎನ್ನಲಾಗಿದೆ.

ಹಲವು ಕ್ಷೇತ್ರಗಳಲ್ಲಿ ಹಿಲರಿ ಕ್ಲಿಂಟನ್ ಡೊನಾಲ್ಡ್ ಟ್ರಂಪ್ ಗಿಂತ ಹಿನ್ನಡೆ ಅನುಭವಿಸಿದ್ದು, ಈ ವ್ಯತಿರಿಕ್ತ ಪರಿಣಾಮ ಷೇರುಪೇಟೆಯ ಕುಸಿತಕ್ಕೆ ಕಾರಣವಾಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಟ್ರಂಪ್, ಹಿಲರಿ ಎಫೆಕ್ಟ್ ರೂಪಾಯಿ ಮೌಲ್ಯ ಕುಸಿತ!

ರೂಪಾಯಿ ಮೌಲ್ಯ ಕುಸಿತ
ಹಿಲರಿ ಕ್ಲಿಂಟನ್ ಮತ್ತು ಡೊನಾಲ್ಡ್ ಟ್ರಂಪ್ ನಡುವಿನ ಅಧ್ಯಕ್ಷೀಯ ಚುನಾವಣೆ ಪರಿಣಾಮ ಷೇರುಪೇಟೆ ಮೇಲೆ ಮಾತ್ರವಲ್ಲ ಭಾರತದ ರೂಪಾಯಿ ಮೌಲ್ಯದ ಮೇಲೂ ಪರಿಣಾಮ ಬೀರಿದೆ. ರೂಪಾಯಿ ಮೌಲ್ಯ ಕೂಡ ಕುಸಿತ ಕಂಡಿದೆ.

3.13 ಗಂಟೆಗೆ ಸೆನ್ಸೆಕ್ಸ್ 27,508 ಅಂಶಗಳೊಂದಿಗೆ 369 ಅಂಕ ಕುಸಿತ ಕಂಡಿತ್ತು. ನಿಪ್ಟಿ 8509 ಅಂಶ ವಹಿವಾಟನ್ನು ನಡೆಸಿ 118 ಅಂಕಗಳಷ್ಟು ಕುಸಿತ ಕಂಡಿದೆ.

English summary

Sensex Slumps 349 Points, As Trump Ahead Of Clinton In Opinion Poll

The Sensex slumped over 350 points today amid a global selloff in equities. The tightening of the race between Hillary Clinton and Donald Trump for the White House, just days before the November 8 vote, has introduced a new element of uncertainty into financial markets, analysts said.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X