For Quick Alerts
ALLOW NOTIFICATIONS  
For Daily Alerts

ಹೆಚ್ಚು ವೇತನ ಪಡೆಯುವ ವಿಶ್ವದ ಟಾಪ್ 10 ಮಹಿಳಾ ಸಿಇಒ

ಮರಿಸ್ಸ ಮೇಯರ್ ಅತಿ ಹೆಚ್ಚು ವೇತನ ಪಡೆಯುವ ಸಿಇಒ ಎನಿಸಿದ್ದಾರೆ. ನಂತರ ಕರೋಲ್ ಮೇರೊವಿಟ್ಜ್, ಮಾರ್ಗರೇಟ್ ವ್ಹಿಟ್ಮನ್ ಇದ್ದರೆ, ಭಾರತದ ಇಂದ್ರ ನೂಯಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

By Siddu
|

ಮಹಿಳೆಯರು ಯಾವ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ ಎಂಬುದಕ್ಕೆ ಜಗತ್ತಿನಾದ್ಯಂತ ಸಾವಿರಾರು ಮಹಿಳಾ ಸಾಧಕರು ಸಾಕ್ಷಿ ಆಗಿದ್ದಾರೆ. ಭಾರತೀಯ ಮಹಿಳೆಯರು ಸಹ ಇದಕ್ಕೆನು ಹೊರಾತಾಗಿಲ್ಲ ಎಂಬುದು ನಿರ್ವಿವಾದ ಸಂಗತಿ. ಇಂದು ಹಲವು ರಂಗದಲ್ಲಿ ಸ್ತ್ರೀಯರು ತಮ್ಮದೆ ಆದ ಛಾಪನ್ನು ಮೂಡಿಸಿದ್ದಾರೆ. ಹೆಜ್ಜೆಗಳನ್ನು ಇರಿಸಿದ್ದಾರೆ.

ಅಂತಹ ಕ್ಷೇತ್ರಗಳಲ್ಲಿ ಉದ್ಯಮ ವಲಯವು ಕೂಡ ತುಂಬಾ ಮುಖ್ಯ. ಪುರುಷರಿಗೆ ಸರಿಸಮನಾಗಿ ಮಹಿಳೆಯರು ಕಂಪನಿಗಳಲ್ಲಿ ಉನ್ನತ ಅಧಿಕಾರ ಹಾಗೂ ಅತಿ ಹೆಚ್ಚು ಸಂಬಳ ಪಡೆಯುತ್ತಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ಸಿಇಒ

ಅಮೆರಿಕಾದ ಮಹಿಳಾ ಸಿಇಒ ಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು. ಮರಿಸ್ಸ ಮೇಯರ್ ಅತಿ ಹೆಚ್ಚು ವೇತನ ಪಡೆಯುವ ಸಿಇಒ ಎನಿಸಿದ್ದಾರೆ. ನಂತರ ಕರೋಲ್ ಮೇರೊವಿಟ್ಜ್, ಮಾರ್ಗರೇಟ್ ವ್ಹಿಟ್ಮನ್ ಇದ್ದರೆ, ಭಾರತದ ಇಂದ್ರ ನೂಯಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಅಂತಹ ಜಗತ್ತಿನ ಪ್ರಮುಖ ಟಾಪ್ 10 ಮಹಿಳಾ ಸಿಇಒ ಗಳ ವಿವರವನ್ನು ಇಲ್ಲಿ ನೋಡೋಣ...

1. ಮರಿಸ್ಸ ಮೇಯರ್

1. ಮರಿಸ್ಸ ಮೇಯರ್

ಯಾಹೂ ಸಿಇಒ ಮರಿಸ್ಸ ಮೇಯರ್ ಜಗತ್ತಿನಲ್ಲಿ ಅತಿ ಹೆಚ್ಚು ವೇತನ ಪಡೆಯುವ ಸಿಇಒ ಎನಿಸಿದ್ದಾರೆ. ಇವರು ರೂ. 4.21 ಕೋಟಿ ಸಂಬಳ ಪಡೆಯುತ್ತಾರೆ.
2012ರಲ್ಲಿ ಮೇಯರ್ ರನ್ನು ಯಾಹೂ ಕಂಪನಿ ನೇಮಕ ಮಾಡಿದ ನಂತರ ಯಾಹೂ ಸ್ಟಾಕ್ ಬೆಲೆ ಶೇ. 177ರಷ್ಟು ಏರಿಕೆ ಕಂಡಿತು.

2. ಕರೋಲ್ ಮೇರೊವಿಟ್ಜ್

2. ಕರೋಲ್ ಮೇರೊವಿಟ್ಜ್

ಕರೋಲ್ ರೂ. 2.33 ಕೋಟಿ ವೇತನ ಪಡೆಯುತ್ತಿದ್ದಾರೆ. ಜನೆವರಿ 2007ರಿಂದ T.J.Maxx, ಮಾರ್ಷಲ್ಸ್ ಮತ್ತು ಇತರ ಸ್ಟೋರ್ಸ್ ಗಳನ್ನು ಇವರು ಮುನ್ನಡೆಸುತ್ತಿದ್ದಾರೆ.

3. ಮಾರ್ಗರೇಟ್ ವ್ಹಿಟ್ಮನ್

3. ಮಾರ್ಗರೇಟ್ ವ್ಹಿಟ್ಮನ್

ಮಾರ್ಗರೇಟ್ ವ್ಹಿಟ್ಮನ್ ಹೆವ್ಲೆಟ್ ಪ್ಯಾಕರ್ಡ್ ಸಂಸ್ಥೆಯ ಸಿಇಒ. ಜಗತ್ತಿನಲ್ಲಿ ಅತಿ ಹೆಚ್ಚು ವೇತನ ಪಡೆಯುವವರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇವರು ರೂ. 19.6 ಮಿಲಿಯನ್ ಸಂಬಳ ಪಡೆಯುತ್ತಾರೆ.
2014ರಲ್ಲಿ ಮಾರ್ಗರೇಟ್ ವ್ಹಿಟ್ಮನ್ ಮೂಲ ವೇತನ ಪ್ಯಾಕೇಜ್ 1.5 ದಶಲಕ್ಷಕ್ಕೆ ಏರಿಸಲು ಮಂಡಳಿ ನಿರ್ಧರಿಸಿತು.

4. ಇಂದ್ರಾ ನೂಯಿ

4. ಇಂದ್ರಾ ನೂಯಿ

ಇಂದ್ರಾ ನೂಯಿ ಜಗತ್ತಿನ ಎರಡನೇ ಅತಿದೊಡ್ಡ ಆಹಾರ ಮತ್ತು ಪಾನೀಯ ಕಂಪನಿ ಎಂಬ ಖ್ಯಾತಿ ಹೊಂದಿರುವ ಪೆಪ್ಸಿಕೋ ಕಂಪನಿಯ ಸಿಇಒ. ಇವರು ರೂ. 1.91 ಕೋಟಿ ವೇತನ ಪಡೆಯುತ್ತಿದ್ದು, ಜಾಗತಿಕವಾಗಿ ನಾಲ್ಕನೇ ಸ್ಥಾನ ಹಾಗೂ ದೇಶದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇಂದ್ರಾ ನೂಯಿ ಸಾಕಷ್ಟು ಅಂತರಾಷ್ಟ್ರೀಯ ಅನುಭವವನ್ನು ಹೊಂದಿದ್ದು, .ಅಂತರಾಷ್ಟ್ರೀಯ ಕಾರ್ಯಚರಣೆ ಹಾಗೂ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲರು.

5. ಫೆಬೆ ನೊವಾಕೊವಿಕ್

5. ಫೆಬೆ ನೊವಾಕೊವಿಕ್

ಫೆಬೆ ನೊವಾಕೊವಿಕ್ ಇವರು ಜನರಲ್ ಡೈನಮಿಕ್ಸ್ ಸಂಸ್ಥೆಯಲ್ಲಿ ಹಿರಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ವಿಶ್ವದ ಪ್ರಮುಖ ರಕ್ಷಣಾ ಗುತ್ತಿಗೆದಾರರೆನಿಸಿದ್ದಾರೆ. ಇವರು ರೂ. 1.90 ಕೋಟಿ ವೇತನ ಗಳಿಸುತ್ತಿದ್ದಾರೆ.

ಫೆಬೆ ನೊವಾಕೊವಿಕ್ ಸಿಇಒ ಆಗಿ ಜವಾಬ್ಧಾರಿ ವಹಿಸಿದ ನಂತರ ಜನರಲ್ ಡೈನಮಿಕ್ಸ್ ಷೇರುಗಳು ಎರಡು ಪಟ್ಟು ಏರಿಕೆ ಕಂಡವು.

6. ವರ್ಜಿನಿಯಾ ರೋಮಿಟಿ

6. ವರ್ಜಿನಿಯಾ ರೋಮಿಟಿ

ವರ್ಜಿನಿಯಾ ರೋಮೆಟಿ ಐಬಿಎಂ ಸಂಸ್ಥೆಯ ಸಿಇಒ. ಇವರು 1.79 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಉತ್ತಮ ಕಾರ್ಯನಿರ್ವಹಿಸಿದ್ದಕ್ಕಾಗಿ ಕಳೆದ ವರ್ಷ 3.6 ಮಿಲಿಯನ್ ಮೊತ್ತವನ್ನು ಬೋನಸ್ ರೂಪದಲ್ಲಿ ಪಡೆದರು.

7. ಮ್ಯಾರಿಲಿನ್ ಹೆವ್ಸನ್

7. ಮ್ಯಾರಿಲಿನ್ ಹೆವ್ಸನ್

ಮ್ಯಾರಿಲಿನ್ ಹೆವ್ಸನ್ ಲಾಕ್ಹೀಡ್ ಮಾರ್ಟಿನ್ ಕಂಪನಿಯ ಸಿಇಒ. ಪ್ರಸ್ತುತ ಇವರು ರೂ. 1.79 ಕೋಟಿ ಸಂಭಾವನೆ ಪಡೆಯುತ್ತಿದ್ದು, ಏಳನೇ ಸ್ಥಾನದಲ್ಲಿದ್ದಾರೆ.

ಲಾಕ್ಹೀಡ್ ಮಾರ್ಟಿನ್ ಸಂಸ್ಥೆಯಲ್ಲಿ 32 ವರ್ಷ ಅನುಭವ ಹೊಂದಿರುವ ಹಿರಿಯ ಅಧಿಕಾರಿ. ಕಂಪನಿಯ ಗಳಿಕೆ ಹೆಚ್ಚಾದಂತೆ ಇವರ ಸಂಭಾವನೆಯೂ ಹೆಚ್ಚಾಗತೊಡಗಿತು. ಲಾಕ್ಹೀಡ್ ಮಾರ್ಟಿನ್ ಸ್ಟಾಕ್ ಸುಮಾರು ಶೇ. 30ರಷ್ಟು ಲಾಭ ಗಳಿಸಿತು.

8. ಪೆಟ್ರೀಷಿಯಾ ವೋರ್ಟ್ಜ್

8. ಪೆಟ್ರೀಷಿಯಾ ವೋರ್ಟ್ಜ್

ಆರ್ಚರ್ ಡೇನಿಯಲ್ಸ್ ಮಿಡ್ ಲ್ಯಾಂಡ್ಸ್ ಸಂಸ್ಥೆಯಲ್ಲಿ ಪೆಟ್ರೀಷಿಯಾ ವೋರ್ಟ್ಜ್ ಸಿಇಒ. ಆರ್ಚರ್ ಡೇನಿಯಲ್ಸ್ ನಲ್ಲಿ 9 ವರ್ಷಗಳ ಕಾಲ ಸಿಇಒ ಆಗಿ ಕಾರ್ಯನಿರ್ವಹಿಸಿದ್ದು, ಇವರ ಅಧಿಕಾರ ಡಿಸೆಂಬರ್ ನಲ್ಲಿ ಕೊನೆಗೊಂಡಿತ್ತು. ಇವರು ರೂ. 1.63 ಕೋಟಿ ವೇತನ ಪಡೆಯುತ್ತಿದ್ದರು.

9. ಐರಿನ್ ರೊಸೆನ್ ಫೆಲ್ಡ್

9. ಐರಿನ್ ರೊಸೆನ್ ಫೆಲ್ಡ್

ಐರಿನ್ ರೊಸೆನ್ ಫೆಲ್ಡ್ ಇವರು ಮಾಂಡೆಲೆಜ್ ಇಂಟರ್ನ್ಯಾಷನಲ್ ಸಂಸ್ಥೆಯಲ್ಲಿ ಸಿಇಒ. ಇವರ ವೇತನ ರೂ. 1.59 ಕೋಟಿ.

ಮಾಂಡೆಲೆಜ್ ಇಂಟರ್ನ್ಯಾಷನಲ್ ಓರಿಯೊ ಕುಕ್ಕೀಸ್, ಕ್ಯಾಡ್ಬರಿ ಚಾಕೋಲೆಟ್ ಇನ್ನಿತರ ಆಹಾರ ತಯಾರಕ ಕಂಪನಿಯಾಗಿದೆ. ಕಂಪನಿ ಉತ್ತಮ ಲಾಭಗಳಿಕೆಯಲ್ಲಿದೆ.

10. ಎಲ್ಲೆನ್

10. ಎಲ್ಲೆನ್

ಎಲ್ಲೆನ್ ವಿಶ್ವದ ಟಾಪ್ ಟೆನ್ ಸಿಇಒ ಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ. ಇವರು ಡ್ಯುಪಾಂಟ್ ಕಂನಿ ಸಿಇಒ ಆಗಿದ್ದು, ಇವರು ರೂ. 1.31 ಕೋಟಿ ಸಂಭಾವನೆ ಗಳಿಸುತ್ತಿದ್ದಾರೆ.

English summary

The Top 10 highest-paid female CEOs

The top ten highest-paid female CEOs in 2014, according to a study carried out by executive compensation data firm Equilar and The Associated Press. Marissa Mayer, Yahoo in first place.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X