For Quick Alerts
ALLOW NOTIFICATIONS  
For Daily Alerts

ನೋಟು ನಿಷೇಧದಿಂದ ದೇಶದ ಮೇಲಾಗುವ ಪರಿಣಾಮಗಳೇನು?

ರೂ. 500, 1000 ಮುಖಬೆಲೆಯ ನೋಟುಗಳ ನಿಷೇಧದಿಂದ ದೇಶದ ಆರ್ಥಿಕತೆಯ ಮೇಲೆ, ಜನಸಾಮಾನ್ಯರ ಮೇಲಾಗುವ ಪರಿಣಾಮಗಳೇನು? ದೇಶಕ್ಕಾಗುವ ಪ್ರಯೋಜನಗಳೇನು? ಇತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ.

By Siddu
|

ದೇಶದ ಅರ್ಥವ್ಯವಸ್ಥೆ ಒಂದು ಮಹಾ ಕ್ರಾಂತಿಗೆ ಮುನ್ನುಡಿ ಬರೆದಿದೆ. ಕೇಂದ್ರ ಸರ್ಕಾರ ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆ ನಿಷೇಧಿಸಿದೆ. ಕಪ್ಪುಹಣ, ಖೋಟಾ ನೋಟು, ಭ್ರಷ್ಟಾಚಾರ, ಭಯೋತ್ಪಾಧನೆ ತಡೆಗೆ ಮಹತ್ವದ ಹೆಜ್ಜೆ ಇಟ್ಟಿದೆ.

ಕಳೆದ ಕೆಲ ವರ್ಷಗಳಿಂದ ಕಪ್ಪುಹಣ, ಖೋಟಾ ನೋಟು, ಭ್ರಷ್ಟಾಚಾರ ನಿಯಂತ್ರಣ ಕುರಿತು ಹಲವು ಚರ್ಚೆಗಳು ನಡೆಯುತ್ತಿದ್ದವು. ಈ ಹಿನ್ನೆಲೆಯಲ್ಲಿಯೇ ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆ ನಿರ್ಬಂಧಿಸಲಾಗಿದೆ. ರೂ. 2000 ನೋಟಿನ ವಿಶೇಷತೆಗಳೇನು? ತಪ್ಪದೆ ನೋಡಿ..

ಆದರೆ ರೂ. 500, 1000 ಮುಖಬೆಲೆಯ ನೋಟುಗಳ ನಿಷೇಧದಿಂದ ದೇಶದ ಆರ್ಥಿಕತೆಯ ಮೇಲೆ, ಜನಸಾಮಾನ್ಯರ ಮೇಲಾಗುವ ಪರಿಣಾಮಗಳೇನು? ದೇಶಕ್ಕಾಗುವ ಪ್ರಯೋಜನಗಳೇನು? ಧನಾತ್ಮಕ ಹಾಗೂ ನಕರಾತ್ಮಕ ಪರಿಣಾಮಗಳೇನು? ಇತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ. ನೋಟು ನಿಷೇಧ: ನಗದು ಮತ್ತು ವಿತ್ ಡ್ರಾ ವ್ಯವಹಾರ ಮಿತಿಯಲ್ಲಿ ಏರಿಕೆ

ನೋಟುಗಳ ನಿಷೇಧದಿಂದಾಗಬಹುದಾದ ಪರಿಣಾಮ ಹಾಗೂ ಪ್ರಯೋಜನಗಳ ಕುರಿತಾಗಿ ಕ್ರಿಸಿಲ್ ಸಂಶೋಧನೆ ಕೈಗೊಂಡಿದ್ದು, ಅವರು ಪ್ರಕಟಿಸಿರುವ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

1. ತತ್ ಕ್ಷಣದ ಪರಿಣಾಮಗಳೇನು?

1. ತತ್ ಕ್ಷಣದ ಪರಿಣಾಮಗಳೇನು?

ರೂ. 500, 1000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿ ರೂ. 2000 ಮುಖಬೆಲೆಯ ನೋಟುಗಳನ್ನು ಚಾಲನೆಗೆ ತರುವುದರಿಂದ ತತ್ ಕ್ಷಣದಲ್ಲಿ ಅನೇಕ ಪರಿಣಾಮಗಳು ಬೀರುವುದು ಸಹಜ.
- ದೇಶದ ಜಿಡಿಪಿ(GDP) ಬೆಳೆವಣಿಗೆಯ ಮೇಲೆ ತಾತ್ಕಾಲಿಕವಾಘಿ ಪರಿಣಾಮ ಉಂಟಾಗಲಿದೆ. ಆದರೆ ದೀರ್ಘಾವಧಿಗೆ ಗಮನಾರ್ಹವಾದ ರಚನಾತ್ಮಕ ಪ್ರಯೋಜನಗಳನ್ನು ಒದಗಿಸಲಿದೆ.
- ನಗದು ಅವಲಂಬನೆ, ಅನುಬೋಗ ವಲಯ, ಹೂಡಿಕೆ ಬೇಡಿಕೆ ಮೇಲೆ ತಾತ್ಕಾಲಿಕ ಪರಿಣಾಮ ಆಗಲಿದೆ.
- ಬೇಡಿಕೆ ಕಡಿಮೆ ಆಗುವುದರಿಂದ ಹಣದುಬ್ಬರದ ಮೇಲೆ ಅಲ್ಪಾವಧಿಗೆ ಪರಿಣಾಮ ಬೀರಲಿದೆ.
- ಪ್ರಸ್ತುತ ಪರಿಸ್ಥಿತಿಯಲ್ಲಿ ಸಾರ್ವಜನಿಕರು ನೋಟುಗಳ ವಿನಿಮಯ/ಬದಲಾವಣೆಗಾಗಿ ಪರದಾಡುವಂತಾಗಿದೆ. ಆದರೆ ಈ ಸನ್ನಿವೇಶ ಮುಂದಿನ 10-15 ದಿನಗಳಲ್ಲಿ ಸಮತೋಲನಕ್ಕೆ ಬರಲಿದೆ.

2. ಸೂಕ್ಷ್ಮ ಆರ್ಥಿಕ ವವ್ಯಸ್ಥೆ ಸ್ವರೂಪ

2. ಸೂಕ್ಷ್ಮ ಆರ್ಥಿಕ ವವ್ಯಸ್ಥೆ ಸ್ವರೂಪ

ಮಧ್ಯಮ ಅವಧಿಯಿಂದ ದೀರ್ಘಾವಧಿಯಲ್ಲಿ ದೇಶದ ಆದಾಯ ಸಲ್ಪಮಟ್ಟಿಗೆ ಆಯೊಮಯವಾಗಬಹುದು. ನೇರವಾದ ಧನಾತ್ಮಕ ಪರಿಣಾಮವೆಂದರೆ ಸರ್ಕಾರದ ತೆರಿಗೆ ಸಂಗ್ರಹ ಹೆಚ್ಚಾಗುತ್ತದೆ. ಮೂಲಸೌಕರ್ಯ ಹೂಡಿಕೆ ಮತ್ತು ಬೆಳವಣಿಗೆ ಮೇಲೆ ವೆಚ್ಚ ಮಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ. ನಗದು ವ್ಯವಹಾರದಲ್ಲಿ ಇಳಿಕೆಯಾಗುವುದರಿಂದ ಹಣದುಬ್ಬರದಲ್ಲಿ ಅಲ್ಪಾವಧಿಗೆ ಇಳಿಮುಖದ ಒತ್ತಡ ಉಂಟಾಗಬಹುದು. ದೀರ್ಘಾವಧಿಯಲ್ಲಿ ಉದ್ಯೋಗ ಮತ್ತು ಆದಾಯದಲ್ಲಿ ಸರ್ಕಾರದ ವೆಚ್ಚ ಏರಿಕೆಯಿಂದಾಗಿ ಪುನಶ್ಚೇತನವಾಗಲಿದೆ. ತಾತ್ಕಾಲಿಕವಾಗಿ ಹಣದುಬ್ಬರದ ಮೇಲೆ ಪರಿಣಾಮ ಉಂಟಾದರೂ ಮಧ್ಯಮ ಹಾಗೂ ದೀರ್ಘಾವಧಿಗೆ ತಟಸ್ಥ ಸ್ಥಿತಿಗೆ ಬರಲಿದೆ.

3. ತೆರಿಗೆ-ಜಿಡಿಪಿ ಸುಧಾರಣೆ
 

3. ತೆರಿಗೆ-ಜಿಡಿಪಿ ಸುಧಾರಣೆ

ಆದಾಯ ತೆರಿಗೆ ಸಂಗ್ರಹ ಏರುಮುಖವಾಗಲಿದೆ. ಈ ಹಿಂದೆ ತೆರಿಗೆ ಕಟ್ಟದೆ ಬಚ್ಚಿಟ್ಟಿರುವ ಹಣವನ್ನು ಜನರು ಬ್ಯಾಂಕಿನಲ್ಲಿ ವಿನಿಮಯ ಮಾಡಿಕೊಳ್ಳುವುದರಿಂದ ಅದು ತೆರಿಗೆ ಆಯಾಮಕ್ಕೆ ಬರಲಿದೆ. ಬ್ಯಾಂಕಿಂಗ್ ವ್ಯಸ್ಥೆಯಲ್ಲಿ ನಮೂದಾಗಿ ತೆರಿಗೆಗ ಒಳಪಡಲಿದೆ. ತೆರಿಗೆ ಸಂಗ್ರಹದ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ. ಈಗಾಗಲೇ ಸರ್ಕಾರ ಅಘೋಷಿತ ಹಣದ ಮೇಲೆ ಆಸ್ತಿಗೆ ಅನುಗುಣವಾಗಿ ಶೇ. 30 ರಿಂದ 120ರಷ್ಟು ಪೆನಾಲ್ಟಿ ವಿಧಿಸಲಾಗುವುದು ಎಂದು ಹೇಳಿದೆ. ಪ್ರಸ್ತುತ ನೇರ ತೆರಿಗೆ ಸಂಗ್ರಹ ಕೇವಲ ಶೇ. 5.5 ಆಗಿದೆ.

4. ಸಾರ್ವಜನಿಕ ಹೂಡಿಕೆ ಹೆಚ್ಚಳ: ಉದ್ಯೋಗ ಮತ್ತು ಆದಾಯಕ್ಕೆ ಚಾಲನೆ

4. ಸಾರ್ವಜನಿಕ ಹೂಡಿಕೆ ಹೆಚ್ಚಳ: ಉದ್ಯೋಗ ಮತ್ತು ಆದಾಯಕ್ಕೆ ಚಾಲನೆ

ಅತಿ ಹೆಚ್ಚಿನ ನೇರ ತೆರಿಗೆ ಸಂಗ್ರಹದಿಂದ ಸರ್ಕಾರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಹೆಚ್ಚು ಖರ್ಚುಮಾಡಲಿದೆ. ಇದು ಉದ್ಯೋಗ ಮತ್ತು ಆದಾಯದ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಹೂಡಿಕೆ ಆರ್ಥಿಕತೆಯ ಪೂರೈಕೆ ಸಾಮರ್ಥ್ಯ ಹೆಚ್ಚಲಿದೆ. ದೀರ್ಘಾವಧಿಗಾಗಿ ಒಟ್ಟಾರೆ ಜಿಡಿಪಿ ಬೆಳವಣಿಗೆ ಹೆಚ್ಚಲಿದೆ.
2013ರ ವರದಿ ಪ್ರಕಾರ ಭಾರತದಲ್ಲಿನ ನಗದು ವ್ಯವಹಾರದ ಮೌಲ್ಯ ಶೇ. 86ರಷ್ಟು 2012 ರಲ್ಲಿತ್ತು. ಕಳೆದ ಕೆಲ ಸಾಲಿನಲ್ಲಿ ಇದರ ಪ್ರಮಾಣ ಇಳಿಮುಖವಾಗಿತ್ತು. ಆದರೆ ಈಗ ಅದರ ಪ್ರಮಾಣ ಸಲ್ಪ ಮಟ್ಟಿಗೆ ಹೆಚ್ಚಾಗಿದೆ.

5. ತೆರಿಗೆ ದರ ತಗ್ಗುವ ಸಾಧ್ಯತೆ

5. ತೆರಿಗೆ ದರ ತಗ್ಗುವ ಸಾಧ್ಯತೆ

ಹೆಚ್ಚು ಆದಾಯ ತೆರಿಗೆ ಸಂಗ್ರಹದಿಂದಾಗಿ ದೀರ್ಘಾವಧಿಯಲ್ಲಿ ತೆರಿಗೆ ದರಗಳು ಕಡಿಮೆಯಾಗುವ ಸಾಧ್ಯತೆ ಇದೆ. ಈಗ ಪ್ರಸ್ತುತ ಸನ್ನಿವೇಶದಲ್ಲಿ ಹೆಚ್ಚೆಚ್ಚು ಆದಾಯ ತೆರಿಗೆ ಸಂಗ್ರಹ ಆಗುವ ನಿರೀಕ್ಷೆ ಇರುವುದರಿಂದ ಮುಂದಿನ ದಿನಗಳಲ್ಲಿ ತೆರಿಗೆ ದರ ಪ್ರಮಾಣ ಗಣನೀಯವಾಗಿ ಇಳಿಯಲಿದೆ. ಇದು ಅನುಭೋಗ ಬೇಡಿಕೆ ಮೇಲೆ ದೀರ್ಘಾವಧಿಗೆ ಧನಾತ್ಮಕ ಪರಿಣಾಮ ಬೀರಲಿದೆ.

6. ಹಣದುಬ್ಬರ ಇಳಿಮುಖ ಒತ್ತಡ

6. ಹಣದುಬ್ಬರ ಇಳಿಮುಖ ಒತ್ತಡ

ಮುಂಬರುವ ಕೆಲವು ತಿಂಗಳುಗಳಲ್ಲಿ ಹಣದುಬ್ಬರ ಮೇಲೆ ಇಳಿಮುಖದ ಒತ್ತಡ ಬೀರಬಹುದು ಎಂದು ನಿರೀಕ್ಷಿಸಬಹುದು. ಬರುವ ದಿನಗಳಲ್ಲಿ ಗೃಹ ನಿರ್ಮಾಣ, ಸಾರಿಗೆ ಮತ್ತು ಆಹಾರಗಳ ಮೇಲೆ ಬೆಲೆ ಒತ್ತಡ ಇಳಿಮುಖವಾಗಬಹುದು.

ಗ್ರಾಮೀಣ ಪ್ರದೇಶಗಳಲ್ಲಿ ನಗದು ವ್ಯವಹಾರ ಹೆಚ್ಚು ಪ್ರಮಾಣದಲ್ಲಿ ಆಗುವುದರಿಂದ ಹಣದುಬ್ಬರದಲ್ಲಿ ಇಳಿಮುಖ ಒತ್ತಡ ಆಗಲಿದೆ.

7. ಲಿಕ್ವಿಡಿಟಿ

7. ಲಿಕ್ವಿಡಿಟಿ

ಧನಾತ್ಮಕ: ದ್ರವ್ಯತೆ ಹೆಚ್ಚಳದಿಂದಾಗಿ ಬ್ಯಾಂಕು ವ್ಯವಸ್ಥೆಯಲ್ಲಿ ಡಿಪಾಸಿಟ್ ವ್ಯವಹಾರ ಹೆಚ್ಚಾಗಲಿದೆ. ಇದು ಅಲ್ಪಾವಧಿಯಲ್ಲಿ FCNR ಖಾತೆಯಲ್ಲಿನ ದ್ರವ್ಯತೆ ತಗ್ಗಿಸಲು ಸಹಕಾರಿಯಾಗಬಲ್ಲದು.
ತಟಸ್ಥತೆ: ಬ್ಯಾಂಕು ವ್ಯವಸ್ಥೆಯಲ್ಲಿ ತಟಸ್ಥ ದ್ರವ್ಯತೆ ನಿರ್ವಹಿಸವುದು ಆರ್ಬಿಐ ನಿಲುವು ಆಗಿದೆ.

8. ಖೋಟಾ ನೋಟು/ಕಪ್ಪುಹಣ ತಡೆ

8. ಖೋಟಾ ನೋಟು/ಕಪ್ಪುಹಣ ತಡೆ

ರೂ. 500, 1000 ನೋಟುಗಳ ನಿಷೇಧದಿಂದಾಗಿ ಖೋಟಾ ನೋಟುಗಳ ತಡೆಗೆ, ಭಯೋತ್ಪಾದನೆ ನಿಯಂತ್ರಣ ಸಾಧ್ಯ ಆಗಲಿದೆ. ಭಯೋತ್ಪಾದಕರು ಖೋಟಾ ನೋಟುಗಳನ್ನು ತಮ್ಮ ಕಾರ್ಯಚರಣೆ ಬಳಸುವುದು ಸಾಮಾನ್ಯವಾಗಿರುತ್ತದೆ. ಆದರೆ ನೀತಿಯಿಂದಾಗಿ ಖೋಟಾ ನೋಟುಗಳ ನಿಯಂತ್ರಣ ಸಾಧ್ಯ ಆಗಲಿದೆ. ದೇಶ ಆರ್ಥಿಕತೆಗೆ ಮಾರವಾಗಿರುವ ಕಪ್ಪು ಹಣ ತಡೆಯಲು ಅನುಕೂಲವಾಗಲಿದೆ.

9. ಡಿಜಿಟಲ್ ಪಾವತಿ

9. ಡಿಜಿಟಲ್ ಪಾವತಿ

ಜನರು ಡಿಜಿಟಲ್ ಪಾವತಿಯನ್ನು ಪರ್ಯಾಯವಾಗಿ ಬಳಸಬಹುದು. ಈಗಾಗಲೇ ಡಿಜಿಟಲ್ ಪಾವತಿ ಮೂಲಕ ವ್ಯವಹಾರ ಮಾಡುವವರ ಪ್ರಮಾಣ ಹೆಚ್ಚಾಗಿದೆ. ಡಿಜಿಟಲ್ ಪಾವತಿಯಿಂದಾಗಿ ಯುನಿಪೈಡ್ ಪೇಮೆಂಟ್ಸ್ ಇಂಟರ್ಫೇಸ್(UPI) ಹೆಚ್ಚು ಪ್ರಾಮುಖ್ಯತೆ ಪಡೆಯಲಿದೆ. ದೀರ್ಘಾವಧಿಗೆ ಇದು ಧನಾತ್ಮಕ ಪರಿಣಾಮ ಉಂಟು ಮಾಡಲಿದೆ.

10. ಆಭರಣ ವ್ಯಾಪಾರ

10. ಆಭರಣ ವ್ಯಾಪಾರ

ಸರ್ಕಾರದ ಪಾಲಿಸಿ ನಿರ್ಬಂಧದಿಂದಾಗಿ ಈಗಾಗಲೇ ಚಿನ್ನದ ಬೇಡಿಕೆಯಲ್ಲಿ ಇಳಿಕೆಯಾಗಿದೆ. ಇದರಿಂದಾಗಿ ಚಿನ್ನದ ಅಮದು ಮಾಡುವ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಶೇ. 80ರಷ್ಟು ಚಿನ್ನದ ಬೇಡಿಕೆ ನಗದು ಮೂಲಕ ವ್ಯವಹರಿಸಲಾಗುತ್ತದೆ. ಆದರೆ ಬಂಧಿಸಲ್ಪಟ್ಟ ಬೇಡಿಕೆ ಹೆಚ್ಚಿನ ಅಮದಿಗೆ ಕಾರಣ ಆಗಲೂ ಬಹುದು.

English summary

Impact of Notes ban on different sectors in India

"It will create havoc for a little while and the economy will also destablise. But overall, it is going to be good for the country. In fact, the jewellery industry will thrive as people will have more trust on jewellery than currency notes.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X