For Quick Alerts
ALLOW NOTIFICATIONS  
For Daily Alerts

ಮ್ಯೂಚುವಲ್ ಫಂಡ್ ಎಂದರೇನು? ಅದರ ಪ್ರಕಾರಗಳ್ಯಾವವು?

ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಮುಖಾಂತರ ಲಾಭ ಪಡೆದುಕೊಳ್ಳಬಹುದು. ಹೂಡಿಕೆದಾರಿಂದ ಹಣ ಸಂಗ್ರಹಣೆ ಮಾಡುವ ಕಂಪನಿಯೇ ಷೇರು ಖರೀದಿ ಮತ್ತು ಮಾರಾಟ ಮಾಡುತ್ತದೆ.

By Siddu
|

ಇದನ್ನು ಬಹಳ ಸರಳವಾಗಿ ಹೇಳಬಹುದು. ನೀವು ಒಬ್ಬ ಬಂಡವಾಳ ಹೂಡಿಕೆದಾರನಾಗಿದ್ದು ಷೇರು ಮಾರುಕಟ್ಟೆ ಬಗ್ಗೆ ಯಾವುದೇ ತಿಳಿವಳಿಕೆ ಹೊಂದಿಲ್ಲ ಎಂದಾದರೆ ಬೇರೋಬ್ಬರ ನೆರವನ್ನು ಪಡೆದುಕೊಳ್ಳಬೇಕಾಗುತ್ತದೆ. ಆದರೆ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಮುಖಾಂತರ ಲಾಭ ಪಡೆದುಕೊಳ್ಳಬಹುದು. ಹೂಡಿಕೆದಾರಿಂದ ಹಣ ಸಂಗ್ರಹಣೆ ಮಾಡುವ ಕಂಪನಿಯೇ ಷೇರು ಖರೀದಿ ಮತ್ತು ಮಾರಾಟ ಮಾಡುತ್ತದೆ.

ಉದಾಹರಣೆಯೊಂದಿಗೆ ನೋಡೋಣ
ಸೂಪರ್ ರಿಟರ್ನ್ಸ್ ಮ್ಯೂಚುವಲ್ ಫಂಡ್ ಎಂಬುವ ಒಂದು ಕಂಪನಿ ಇದೆ ಎಂದು ತಿಳಿದುಕೊಳ್ಳಿ. ಸೂಪರ್ ರಿಟರ್ನ್ಸ್ ರಿಟರ್ನ್ಸ್ ಅಸೆಟ್ ಕಂಪನಿ ಇದನ್ನು ಹೊರತಂದಿದೆ ಎಂದು ಇಟ್ಟುಕೊಳ್ಳೋಣ. ಯಾವ ಮೊತ್ತದ ಫಂಡ್ ನೊಂದಿಗೆ ಇದು ಹೊರಕ್ಕೆ ಬರುತ್ತದೆಯೋ ಅದನ್ನು ಸುಪರ್ ರಿಟರ್ನ್ಸ್ ಮಿಡ್ ಕ್ಯಾಪ್ ಎಂದು ಕರೆಯಲಾಗುತ್ತದೆ. ಹೂಡಿಕೆದಾರರಿಂದ 100 ಕೋಟಿ ರು. ಸಂಗ್ರಹ ಮಾಡಿತು ಎಂದು ಅಂದುಕೊಳ್ಳೋಣ. ಅದೆಲ್ಲನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಷೇರಿನ ಮೇಲೆ, ಬಾಂಡ್ ಗಳ ಮೇಲೆ ಡಿಚೆಂಚರ್ ಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ ಈಗ ಫಂಡ್ ನಿಮ್ಮ ಬಳಿ ಪ್ರತಿ ಯುನಿಟ್ ಗೆ 10 ರು. ಹೂಡಿಕೆ ಮಾಡಲು ತಿಳಿಸುತ್ತದೆ. ಒಂದು ಯುನಿಟ್ ಗೆ 10 ರೂ. ನೀಡಿ ಪಡೆದುಕೊಳ್ಳಬೇಕು. ಅಂದರೆ ನೀವು 1000 ಯುನಿಟ್ ಖರೀದಿ ಮಾಡಿದರೆ 10 ಸಾವಿರ ರೂ. ನೀಡಬೇಕಾಗುತ್ತದೆ. ಒಂದು ವರ್ಷದ ನಂತರ ಈ 10 ರು ಯುನಿಟ್ 12 ರೂ. ಗೆ ಏರಿತು ಎಂದು ಅಂದುಕೊಳ್ಳೋಣ. ಈಗ ನಿಮ್ಮ ಬಳಿ ಇರುವ ಯುನಿಟ್ ಗಳನ್ನು 12 ರು. ಮುಖಬೆಲೆಗೆ ಮಾರಾಟ ಮಾಡಬಹುದು. ಅಂದರೆ ನೀವು ಇಲ್ಲಿ 10 ಸಾವಿರ ಹೂಡಿಕೆ ಮಾಡಿ ಒಂದು ವರ್ಷಕ್ಕೆ 2 ಸಾವಿರ ರೂ. ಲಾಭ ಮಾಡಿಕೊಂಡಿರುತ್ತೀರಿ.

ಹೊಸ ಹೂಡಿಕೆದಾರ ಮಾರುಟ್ಟೆಗೆ ಪ್ರವೇಶ ಮಾಡಿದರೆ ಏನಾಗುತ್ತದೆ?

ಹೊಸ ಹೂಡಿಕೆದಾರ ಮಾರುಟ್ಟೆಗೆ ಪ್ರವೇಶ ಮಾಡಿದರೆ ಏನಾಗುತ್ತದೆ?

ಹೊಸದಾಗಿ ಮಾರುಕಟ್ಟೆ ಪ್ರವೇಶ ಮಾಡಿದವನು ಯುನಿಟ್ ಗೆ 12 ರೂ. ನೀಡಬೇಕಾಗುತ್ತದೆ. ಉದಾಹರಣೆ ನೀಡಿರುವ ಸುಪರ್ ರಿಟರ್ನ್ ಮಿಡ್ ಕ್ಯಾಪ್ ಫಂಡ್ ನ್ನು ಒಪನ್ ಎಂಡೆಡ್ ಕ್ಯಾಪ್ ಎಂದು ಕರೆಯಲಾಗುತ್ತದೆ. ಎಂಟ್ರಿ ಲೋಡ್ ಮತ್ತು ಎಕ್ಸಿಟ್ ಲೋಡ್ ಎಂಬ ಪದಗಳು ಗೊಂದಲದಲ್ಲಿ ಸಿಕ್ಕಿಸುವ ಕಾರಣ ಒಪನ್ ಎಂಡ್ , ಕ್ಲೋಸ್ ಎಂಡ್ ಎಂದು ಬಳಸುವುದೇ ಉತ್ತಮ.

1. ಈಕ್ವಿಟಿ ಫಂಡ್ಸ್

1. ಈಕ್ವಿಟಿ ಫಂಡ್ಸ್

ಈಕ್ವಿಟಿ ಫಂಡ್ಸ್ನಲ್ಲಿ ಹೂಡಿಕೆ ಮಾಡುವ ಬಹುತೇಕ ಹಣ ಬಂಡವಾಳದಾರರಿಂದ ಸಂಗ್ರಹಣೆ ಮಾಡಿದ್ದೇ ಆಗಿರುತ್ತದೆ. ಆದರೆ ಇದೊಂದು ಅತಿ ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಸ್ಕೀಮ್ ಆಗಿದ್ದು ಹೂಡಿಕೆದಾರರಿಗೂ ನಷ್ಟವಾಗುವ ಸಮಭವವಿರುತ್ತದೆ.ಲಾಭ ಗಳಿಸಲು ರಿಸ್ಕ್ ಆದರೂ ಅಡ್ಡಿಇಲ್ಲ ಎಂಬುಬವರಿಗೆ ಇದು ಹೇಳಿ ಮಾಡಿಸಿದ ಯೋಜನೆಯಾಗಿದೆ.

2. ಡೆಟ್ ಫಂಡ್ಸ್

2. ಡೆಟ್ ಫಂಡ್ಸ್

ಡೆಟ್ ಫಂಡ್ಸ್ ಹೆಚ್ಚಿನ ಹಣವನ್ನು ಡೆಟ್ ಗೆ ಸಂಬಂಧಿಸಿದ ಯೋಜನೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಕಾರ್ಪೋರೇಟ್ ಡೆಟ್, ಬ್ಯಾಂಕ್ ಡೆಟ್, ಗಿಫ್ಟ್ ಮತ್ತು ಸರ್ಕಾರಿ ಸುರಕ್ಷಾ ಪತ್ರಗಳಲ್ಲಿ ಹೂಡಿಕೆ ಮಾಡಲಾಗುವುದು, ಹೆಚ್ಚಿನ ರಿಸ್ಕ್‌ ತೆಗೆದುಕೊಳ್ಳಲು ಬಯಸದವರಿಗೆ ಈ ಯೋಜನೆಗಳು ಹೇಳಿ ಮಾಡಿಸಿದ್ದಾಗಿವೆ.

3. ಸಮತೋಲಿತ ಫಂಡ್ಸ್

3. ಸಮತೋಲಿತ ಫಂಡ್ಸ್

ಸಮತೋಲಿತ ಫಂಡ್ಸ್ ಬ್ಯಾಲೆನ್ಸ್ಡ್ ಫಂಡ್ಸ್ [ಸಮತೋಲಿತ ಹೂಡಿಕೆ] ಇಲ್ಲಿ ಹಣವನ್ನು ಈಕ್ವಿಟಿ ಮತ್ತು ಡೆಟ್ ಎರಡರಲ್ಲೂ ಹೂಡಿಕೆ ಮಾಡಲಾಗುತ್ತದೆ. ಆದರೆ ಸಾಮಾನ್ಯವಾಗಿ ಡೆಟ್ ಗಿಂತ ಈಕ್ವಿಟಿ ಫಂಡ್ಸ್ ನಲ್ಲಿಯೇ ಹೆಚ್ಚಿನ ಹಣ ಹೂಡಿಕೆ ಮಾಡಲಾಗುತ್ತದೆ. ಅಂತಿಮವಾಗಿ ಹೆಚ್ಚಿನ ಲಾಭ ಗಳಿಕೆಯೇ ಉದ್ದೇಶವಾದರೂ ಮಾರುಕಟ್ಟೆ ಪರಿಸ್ಥಿತಿ ಮತ್ತಿತರ ಸಮಸ್ಯೆಗಳಿಗೆ ತುತ್ತಾಗಿ ತೀವ್ರ ನಷ್ಟ ಅನುಭವಿಸಬಾರದು ಎಂಬುದು ಸಮತೋಲಿತ ಹೂಡಿಕೆಯ ಮೂಲ ತತ್ವ.

4. ಮನಿ ಮಾರ್ಕೆಟ್ ಮ್ಯೂಚುವಲ್ ಫಂಡ್ಸ್

4. ಮನಿ ಮಾರ್ಕೆಟ್ ಮ್ಯೂಚುವಲ್ ಫಂಡ್ಸ್

ಮನಿ ಮಾರ್ಕೆಟ್ ಮ್ಯೂಚುವಲ್ ಫಂಡ್ಸ್ ನ್ನು ಲಿಕ್ವಿಡ್ ಫಂಡ್ಸ್ ಎಂದು ಕರೆಯಲಾಗುತ್ತದೆ. ಜನರು ತಮ್ಮ ಹಣವನ್ನು ಸುರಕ್ಷತೆ ಶಾರ್ಟ್ ಟೈಮ್ ಲಾಭದ ಆಧಾರದಲ್ಲಿ ಹೂಡಿಕೆ ಮಾಡುತ್ತಾರೆ. ಡಿಪಾಸಿಟ್, ವಾಣಿಜ್ಯ ಉದ್ದೇಶದ ಪತ್ರಗಳು[ಟ್ರಿಸರಿ ಅಂಡ್ ಕಮರ್ಷಿಯಲ್ ಪೇಪರ್] ಮತ್ತಿತರ ಕಡೆ ತೊಡಗಿಸಲಾಗುತಯ್ತದೆ, ಹೆಚ್ಚಿನ ಹಣವನ್ನು ನಿಗದಿತ ಅವಧಿಗೆ ಮಾತ್ರ ಹೂಡಿಕೆ ಮಾಡಲಾಗುತ್ತದೆ.

5 ಗಿಲ್ಟ್ ಫಂಡ್ಸ್

5 ಗಿಲ್ಟ್ ಫಂಡ್ಸ್

ಗಿಲ್ಟ್ ಫಂಡ್ಸ್ ಇದು ಉಳಿದ ಎಲ್ಲ ಹೂಡಿಕೆಗಳಿಗೆ ಹೋಲಿಸಿದರೆ ಅತ್ಯಂತ ಸುರಕ್ಷಿತ ಎಂದೇ ಹೇಳಬಹುದು. ಹೂಡಿಕೆ ಮಾಡಿದ ಹೆಚ್ಚಿನ ಹಣಗಳು ಸರ್ಕಾರ ಅಭಯವಿರುವ ಕಡೆಯೇ ಇರುತ್ತವೆ. ಇಲ್ಲಿ ಹಣ ಕಳೆದುಕೊಳ್ಳುವ ಆತಂಕ ಇರುವುದಿಲ್ಲ.

English summary

What is a mutual fund? What are the Types?

Let's explain this term in a very simple way. Let's assume that you as an investor have no idea of shares and stocks. You need professional help and expertise. All you have to do is invest in a mutual fund scheme.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X