For Quick Alerts
ALLOW NOTIFICATIONS  
For Daily Alerts

ಜನಧನ ಖಾತೆ: ಬರೊಬ್ಬರಿ 64 ಸಾವಿರ ಕೋಟಿ ಜಮಾ!

ಹಳೆ ರೂ. 500, 1000 ಮುಖ ಬೆಲೆಯ ನೋಟುಗಳ ನಿಷೇಧದ ಬಳಿಕ ಜನಧನ ಖಾತೆಗಳಿಗೆ ಕೋಟಿ-ಕೋಟಿ ಹಣ ಹರಿದು ಬರತೊಡಗಿದೆ. ನ.8ರ ಮಧ್ಯರಾತ್ರಿ ನೋಟು ನಿಷೇಧದ ನಂತರ ಇಲ್ಲಿಯವರೆಗೆ ಒಟ್ಟು 64,252.15 ಸಾವಿರ ಕೋಟಿ ರೂ. ಮೊತ್ತ ಜನಧನ ಖಾತೆಗೆ ಜಮಾ ಆಗಿದೆ.

By Siddu
|

ಹಳೆ ರೂ. 500, 1000 ಮುಖ ಬೆಲೆಯ ನೋಟುಗಳ ನಿಷೇಧದ ಬಳಿಕ ಜನಧನ ಖಾತೆಗಳಿಗೆ ಕೋಟಿ-ಕೋಟಿ ಹಣ ಹರಿದು ಬರತೊಡಗಿದೆ. ನ.8ರ ಮಧ್ಯರಾತ್ರಿ ನೋಟು ನಿಷೇಧದ ನಂತರ ಇಲ್ಲಿಯವರೆಗೆ ಒಟ್ಟು 64,252.15 ಸಾವಿರ ಕೋಟಿ ರೂ. ಮೊತ್ತ ಜನಧನ ಖಾತೆಗೆ ಜಮಾ ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪ್ರಧಾನಮಂತ್ರಿ ಜನಧನ ಯೋಜನೆ ಎಂದರೇನು?

 

ಇಲ್ಲಿಯವರೆಗೆ ದೇಶದಾದ್ಯಂತ 25.68 ಕೋಟಿ ಜನಧನ ಖಾತೆಗಳನ್ನು ತೆರೆಯಲಾಗಿದ್ದು, ನ.16ರ ವರೆಗೆ ಒಟ್ಟು 64,252.15 ಕೋಟಿ ರೂ. ಜಮಾ ಆಗಿದೆ ಕೇಂದ್ರ ಹೇಳಿದೆ.

 

ಜನಧನ ಖಾತೆಗೆ ಹಣ ಜಮಾವಣೆಯಾಗಿರುವುದರಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ 3.79 ಕೋಟಿ ಖಾತೆಗಳಲ್ಲಿ 10,670.62 ಕೋಟಿ ಜಮಾ ಆಗಿದೆ. ಪಶ್ಚಿಮ ಬಂಗಾಳದಲ್ಲಿ 2.44 ಕೋಟಿ ಖಾತೆಯಲ್ಲಿ 7,826.44 ಕೋಟಿ, ರಾಜಸ್ಥಾನದ 1.89 ಕೋಟಿ ಖಾತೆಗಳಲ್ಲಿ 4,912.79 ಕೋಟಿ ಹಣ ಜಮಾ ಆಗಿದೆ.

ದೇಶದಲ್ಲಿ ಒಟ್ಟು 25.68 ಕೋಟಿ ಜನಧನ ಖಾತೆಗಳಿದ್ದು. ಇವುಗಳಲ್ಲಿ 5.98 ಕೋಟಿ ಖಾತೆಗಳು ಸೊನ್ನೆ(0) ಬ್ಯಾಲೆನ್ಸ್ ಹೊಂದಿವೆ.

ಜನಧನ ಖಾತೆ: ಬರೊಬ್ಬರಿ 64 ಸಾವಿರ ಕೋಟಿ ಜಮಾ!

Read more about: government schemes money bank
English summary

Deposits in Jan Dhan accounts rise to Rs 64 Crore

Total deposits in Jan Dhan accounts have increased to Rs 64,252.15 crore, with Uttar Pradesh leading the chart with Rs 10,670.62 crore deposits followed by West Bengal and Rajasthan, the government said today.
Story first published: Saturday, November 26, 2016, 16:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X