For Quick Alerts
For Daily Alerts
ಎನ್ಎಸ್ಇ ಸಿಇಒ ಚಿತ್ರಾ ರಾಮಕೃಷ್ಣ ರಾಜೀನಾಮೆ
ದೇಶದ ದೊಡ್ಡ ಸ್ಟಾಕ್ ಎಕ್ಸಚೆಂಜ್ ಆಗಿರುವ ನ್ಯಾಷನಲ್ ಸ್ಟಾಕ್ ಎಕ್ಸಚೆಂಜ್(ಎನ್ಎಸ್ಇ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಚಿತ್ರಾ ರಾಮಕೃಷ್ಣ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
|
ದೇಶದ ದೊಡ್ಡ ಸ್ಟಾಕ್ ಎಕ್ಸಚೆಂಜ್ ಆಗಿರುವ ನ್ಯಾಷನಲ್ ಸ್ಟಾಕ್ ಎಕ್ಸಚೆಂಜ್(ಎನ್ಎಸ್ಇ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಚಿತ್ರಾ ರಾಮಕೃಷ್ಣ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ತತ್ ಕ್ಷಣದಲ್ಲಿ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ. 2013ರ ರಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರು.
ಚಿತ್ರಾ ರಾಮಕೃಷ್ಣ ನೀಡಿರುವ ರಾಜೀನಾಮೆ ತಕ್ಷಣದಿಂದಲೇ ಜಾರಿಗೆ ಬಂದಿದೆ. ಎನ್ಎಸ್ಇ ನಿರ್ದೇಶಕ ಮಂಡಳಿಯ ಸದಸ್ಯರ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಚಿತ್ರಾ ಅವರು ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಅವರ ನಿರ್ಗಮನದಿಂದಾಗಿ ಮುಂಬರುವ ಎನ್ಎಸ್ಇ ಐಪಿಒ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆಯೆಂದು ಎಕ್ಸಚೆಂಜ್ ಮೂಲಗಳು ತಿಳಿಸಿವೆ.
English summary
Chitra Ramkrishna Quits NSE, J Ravichandran Interim Chief
Story first published: Saturday, December 3, 2016, 13:59 [IST]