For Quick Alerts
ALLOW NOTIFICATIONS  
For Daily Alerts

ಪಡಿತರ ವಿತರಣೆಗೆ ನಗದು ರಹಿತ ವ್ಯವಸ್ಥೆ

ಕೇಂದ್ರ ಸರ್ಕಾರದ ಕ್ಯಾಶ್ ಲೆಸ್ ವ್ಯವಹಾರಗಳಿಗೆ ಬೆಂಬಲ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಪಡಿತರ ವಿತರಣೆಗೆ ನಗದು ರಹಿತ ವ್ಯವಸ್ಥೆ ಕಾರ್ಯರೂಪಕ್ಕೆ ತರಲು ಚಿಂತನೆ ನಡೆಸಿದೆ.

By Siddu
|

ನವೆಂಬರ್ 8ರ ಮಧ್ಯರಾತ್ರಿಯಿಂದ ಕೇಂದ್ರ ಸರ್ಕಾರ ಹಳೆ ನೋಟುಗಳ ರದ್ದು ಮಾಡಿದ ನಂತರ ನಗದು ರಹಿತ ವ್ಯವಹಾರ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿದೆ. ಇದೀಗ ಡೆಬಿಟ್/ಕ್ರೆಡಿಟ್ ಕಾರ್ಡುಗಳ ಮೂಲಕ ನಡೆಯುತ್ತಿದ್ದ ನಗದು ರಹಿತ ವ್ಯವಹಾರ ಈಗ ಪಡಿತರ ವಿತರಣೆಗೂ ಅನ್ವಯವಾಗುತ್ತಿದೆ.

 

ಕೇಂದ್ರ ಸರ್ಕಾರದ ಕ್ಯಾಶ್ ಲೆಸ್ ವ್ಯವಹಾರಗಳಿಗೆ ಬೆಂಬಲ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಪಡಿತರ ವಿತರಣೆಗೆ ನಗದು ರಹಿತ ವ್ಯವಸ್ಥೆ ಕಾರ್ಯರೂಪಕ್ಕೆ ತರಲು ಚಿಂತನೆ ನಡೆಸಿದೆ.

 

ಕೂಪನ್ ಮೂಲಕ ಪಡಿತರ ವಿತರಿಸಲಾಗುತ್ತಿದ್ದು, ಈಗಾಗಲೇ ಪಡಿತರ ಚೀಟಿದಾರರನ್ನು ಆಧಾರ್ ನಂಬರ್ ಗೆ ಲಿಂಕ್ ಮಾಡಲಾಗಿದೆ. ಇನ್ನು ಮುಂದೆ ಪಡಿತರ ವಿತರಣೆ ಕೂಡ ನಗದು ರಹಿತ ಆಗಲಿದೆ. ಈ ನಿಟ್ಟಿನಲ್ಲಿ ಆಹಾರ ಇಲಾಖೆ ಕ್ರಮ ಕೈಗೊಂಡಿದ್ದು, ಫಲಾನುಭವಿಗಳು ಆಧಾರ್ ಲಿಂಕ್ ಹೊಂದಿರುವ ತಮ್ಮ ಜನ್ ಧನ್ ಖಾತೆಗೆ ಮೊಬೈಲ್ ಸಂಖ್ಯೆ ಒದಗಿಸಬೇಕು. ತದನಂತರ ಪಡಿತರ ಕಾರ್ಡುದಾರರಿಗೆ ಸಿಕ್ರೆಟ್ ಪಿನ್ ನಂಬರ್ ನೀಡಲಾಗುವುದು.

ನಗದು ರಹಿತ ಪಡಿತರ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬರುವ ಜನವರಿಯಿಂದ ಕ್ಯಾಶ್ ಲೆಸ್ ಪಡಿತರ ವಿತರರಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಪಡಿತರ ವಿತರಣೆಗೆ ನಗದು ರಹಿತ ವ್ಯವಸ್ಥೆ

Read more about: debit card money
English summary

State Govt Launches Cashless Transaction In Ration Shop

In coming days State Govt Launches Cashless Transaction In Ration Shop.
Story first published: Saturday, December 3, 2016, 16:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X