For Quick Alerts
ALLOW NOTIFICATIONS  
For Daily Alerts

ಆರ್‌ಬಿಐ: ರೂ. 100 ಮುಖಬೆಲೆಯ ಹೊಸ ನೋಟು ಮುದ್ರಣ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಶೀಘ್ರದಲ್ಲಿಯೇ ರೂ. 100 ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆಗೊಳಿಸಲಿದ್ದು, ಈಗಾಗಲೇ ಚಾಲ್ತಿಯಲ್ಲಿರುವ ಹಳೆ ರೂ. 100 ಮುಖಬೆಲೆಯ ನೋಟುಗಳು ಚಾಲನೆಯಲ್ಲಿ ಇರಲಿವೆ ಎಂದು ತಿಳಿಸಿದೆ.

By Siddu
|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಶೀಘ್ರದಲ್ಲಿಯೇ ರೂ. 100 ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆಗೊಳಿಸಲಿದ್ದು, ಈಗಾಗಲೇ ಚಾಲ್ತಿಯಲ್ಲಿರುವ ಹಳೆ ರೂ. 100 ಮುಖಬೆಲೆಯ ನೋಟುಗಳು ಚಾಲನೆಯಲ್ಲಿ ಇರಲಿವೆ ಎಂದು ತಿಳಿಸಿದೆ.

 

ರೂ. 100 ಹೊಸ ನೋಟುಗಳನ್ನು ಆರ್‌ಬಿಐ ಮುದ್ರಿಸಲಿದ್ದು, ಇದರಲ್ಲಿ ಮಹಾತ್ಮ ಗಾಂಧಿ ಸೀರೀಸ್ 2005, ಆರ್ಬಿಐ ಗವರ್ನರ್ ಡಾ. ಉರ್ಜಿತ್ ಪಟೇಲ್ ಅವರ ಹಸ್ತಾಕ್ಷರವಿದ್ದು ಮುದ್ರಣ ಇಸವಿ 2016 ಎಂದಿರುತ್ತದೆ ಎಂದು ತಿಳಿಸಿದೆ.

 

ಕೇಂದ್ರ ಸರ್ಕಾರ ಕಪ್ಪುಹಣ ತಡೆಯಲು ಹಳೆ ರೂ. 500, 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದೆ. ಇದಕ್ಕೆ ಪೂರಕವಾಗಿಯೇ ಈಗ ರೂ. 100 ಹೊಸ ಕರೆನ್ಸಿಗಳನ್ನು ಮುದ್ರಣ ಮಾಡಲಾಗುತ್ತಿದೆ.

ಹೊಸ ನೋಟುಗಳ ವಿನ್ಯಾಸ ಮತ್ತು ಭದ್ರತೆ ವೈಶಿಷ್ಟ್ಯಗಳು ಮಹಾತ್ಮ ಗಾಂಧಿ ಸರಣಿ-2005ರ ಹಳೆ ನೋಟುಗಳಂತೆ ಇರಲಿದೆ ಎಂದು ಆರ್ಬಿಐ ತಿಳಿಸಿದೆ.
ಕಳೆದ ವಾರ ಆರ್ಬಿಐ ರೂ. 20 ಮತ್ತು 50 ಮುಖಬೆಲೆಯ ಹೊಸ ನೋಟುಗಳನ್ನು ಮುದ್ರಿಸಲಿದೆ ಎಂದು ಘೋಷಿಸಿತ್ತು.

ಆರ್‌ಬಿಐ: ರೂ. 100 ಮುಖಬೆಲೆಯ ಹೊಸ ನೋಟು ಮುದ್ರಣ

Read more about: rbi money
English summary

RBI To Issue New Rs 100 Currency Notes Soon

The Reserve Bank of India is to issue new Rs 100 currency notes soon. All the banknotes in the denomination of Rs 100 issued by the Bank in the past will continue to be legal tender.
Story first published: Wednesday, December 7, 2016, 15:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X