For Quick Alerts
For Daily Alerts
ರೆಪೊ ದರ ಎಫೆಕ್ಟ್: ಸೆನ್ಸೆಕ್ಸ್ 156 ಅಂಕ ಕುಸಿತ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ತನ್ನ ಹಣಕಾಸು ನೀತಿ ಪ್ರಕಟಿಸಿದ್ದು, ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಇರುವುದು ದೇಶಿಯ ಷೇರುಪೇಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
|
ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ತನ್ನ ಹಣಕಾಸು ನೀತಿ ಪ್ರಕಟಿಸಿದ್ದು, ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಇರುವುದು ದೇಶಿಯ ಷೇರುಪೇಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಎಂಪಿಸಿ ರೆಪೊ ದರ ಘೋಷಿಸಿದ ತಕ್ಷಣದಲ್ಲಿ ಸೆನ್ಸೆಕ್ಸ್ ಸೂಚ್ಯಂಕ 300 ಅಂಕಗಳಷ್ಟು ಕುಸಿತ ಕಂಡಿತ್ತು. ಆದರೆ ನಂತರ ಚೇತರಿಕೆ ಕಂಡಿದ್ದು 26,236.87 ಅಂಶಗಳೊಂದಿಗೆ 155.89 ಅಂಕಗಳ ನಷ್ಟದಲ್ಲಿ ದಿನದ ವಹಿವಾಟನ್ನು ಮುಗಿಸಿದೆ. ನಿಪ್ಟಿ ಸೂಚ್ಯಂಕ 41.1 ಅಂಕಗಳ ಕುಸಿತದೊಂದಿಗೆ ಅಂತ್ಯ ಕಂಡಿದೆ.
ಸನ್ ಫಾರ್ಮಾ(-5.96%), ಆಕ್ಸಿಸ್ ಬ್ಯಾಂಕ್(-2.00%), ಎಸ್ಬಿಐ(-1.47%), ಟಿಸಿಎಸ್(-1.47%) ಮತ್ತು ಟಾಟಾ ಸ್ಟೀಲ್(-1.4%)ಇವು ಪ್ರಮುಖ ಸೆನ್ಸೆಕ್ಸ್ ನಷ್ಟ ಅನುಭವಿಸಿದ್ದರೆ, ಅದಾನಿ ಪೋರ್ಟ್(+1.86% ), ಎಚ್ಡಿಎಫ್ಸಿ(+1.74%), ಹೀರೋ ಮೋಟಾರ್ ಕಾರ್ಪೋರೇಶನ್(+1.31%), ಟಾಟಾ ಮೋಟಾರ್ಸ್(+0.88%) ಮತ್ತು ಎಂ & ಎಂ(+0.77%) ಇವು ಅಗ್ರ ಲಾಭದಾರರಾಗಿದ್ದಾರೆ.
English summary