For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ಭಾರಿ ಏರಿಕೆ: ಷೇರುಪೇಟೆಯಲ್ಲಿ ಗೂಳಿ ಓಟ

ಬಿಎಸ್ಇ ಸೂಚ್ಯಂಕ ಭಾರಿ ಏರಿಕೆಯೊಂದಿಗೆ 457.41 ಅಂಕಗಳಲ್ಲಿ ದಿನದ ವಹಿವಾಟನ್ನು ಮುಗಿಸಿದ್ದು, ಎನ್ಎಸ್ಇ ಸೂಚ್ಯಂಕ 144.80 ಅಂಕ ಲಾಭದೊಂದಿಗೆ ಅಂತ್ಯ ಕಂಡಿದೆ.

By Siddu
|

ನಿನ್ನೆ ಏರಿಳಿತಕ್ಕೆ ಒಳಗಾಗಿದ್ದ ಷೇರುಪೇಟೆ ಇಂದು ಉತ್ತಮ ಚೇತರಿಕೆ ಕಂಡು ಗೂಳಿ ಓಟಕ್ಕೆ ಕಾರಣವಾಯಿತು.

 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಇರುವುದರಿಂದ ನಿನ್ನೆ ದೇಶಿಯ ಷೇರುಗಳು ಕುಸಿತ ಕಂಡು ದಿನದ ಅಂತ್ಯಕ್ಕೆ ಚೇತರಿಕೆ ಕಂಡಿದ್ದವು.

 
ಸೆನ್ಸೆಕ್ಸ್ ಭಾರಿ ಏರಿಕೆ: ಷೇರುಪೇಟೆಯಲ್ಲಿ ಗೂಳಿ ಓಟ

ಇಂದು ಜಾಗತಿಕ ಸೂಚ್ಯಂಕ ಉತ್ತಮ ಚೇತರಿಕೆ ಕಂಡಿರುವುದು ದೇಶಿಯ ಸೆನ್ಸೆಕ್ಸ್ ಮತ್ತು ನಿಪ್ಟಿ ಸೂಚ್ಯಂಕಗಳ ಮೇಲೆ ಧನಾತ್ಮಕ ಪರಿಣಾಮ ಬಿರಿದೆ.
ಬಿಎಸ್ಇ ಸೂಚ್ಯಂಕ ಭಾರಿ ಏರಿಕೆಯೊಂದಿಗೆ 457.41 ಅಂಕಗಳಲ್ಲಿ ದಿನದ ವಹಿವಾಟನ್ನು ಮುಗಿಸಿದ್ದು, ಎನ್ಎಸ್ಇ ಸೂಚ್ಯಂಕ 144.80 ಅಂಕ ಲಾಭದೊಂದಿಗೆ ಅಂತ್ಯ ಕಂಡಿದೆ.

ಬಿಎಸ್ಇ ವಲಯದ ಸೂಚ್ಯಂಕಗಳಾದ, ಲೋಹ ಸೂಚ್ಯಂಕ ಶೇ. 2.93, ಆಟೋ ಶೇ. 2.63, ಇನ್ಫ್ರಾಸ್ಟ್ರಕ್ಚರ್ ಶೇ. 1.87, ಐಟಿ ಶೇ. 1.74ರಷ್ಟು ಲಾಭಾಂಶ ಗಳಿಸಿವೆ.

ಟಾಟಾ ಸ್ಟೀಲ್(+ 4.62%), ಟಾಟಾ ಮೋಟಾರ್ಸ್(+ 3.6%), ಅದಾನಿ ಪೋರ್ಟ್(+ 3.3%), ಬಜಾಜ್ ಆಟೋ(+ 2.77%), ಹೀರೊ ಮೊಟೊಕಾರ್ಪ್(+ 2.53%)ಇವು ಅಗ್ರ ಐದು ಸೆನ್ಸೆಕ್ಸ್ ಲಾಭದಾರರಾಗಿದ್ದು, NTPS(-0.06%)ನಷ್ಟ ಅನುಭವಿಸಿದೆ.

ಸೆನ್ಸೆಕ್ಸ್ ಭಾರಿ ಏರಿಕೆ: ಷೇರುಪೇಟೆಯಲ್ಲಿ ಗೂಳಿ ಓಟ

Read more about: sensex bse nse
English summary

Sensex rallies 457 points on global cues

The 30-share BSE index Sensex closed higher by 457.41 points or 1.74 per cent at 26,694.28 and the 50-share NSE index Nifty was up 144.8 points or 1.79 per cent at 8,246.85.
Story first published: Thursday, December 8, 2016, 17:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X