For Quick Alerts
ALLOW NOTIFICATIONS  
For Daily Alerts

ಪ್ಲಾಸ್ಟಿಕ್ ನೋಟು ಮುದ್ರಣ: ಸಾಧಕ-ಬಾಧಕಗಳೇನು?

ಆರ್ಬಿಐ ಸುಮಾರು ದಿನಗಳ ಹಿಂದೆಯೇ ಪ್ಲಾಸ್ಟಿಕ್ ನೋಟು ಮುದ್ರಣಕ್ಕೆ ಯೋಜನೆ ಹಾಕಿದ್ದು, ಉದ್ದೇಶವನ್ನು ತಿಳಿಸಲಾಗಿದೆ. ಪ್ಲಾಸ್ಟಿಕ್ ನೋಟಗಳ ಪರೀಕ್ಷೆಯನ್ನು ಕೊಚ್ಚಿ, ಮೈಸೂರು, ಶಿಮ್ಲಾ ಹಾಗೂ ಭುವನೇಶ್ವರದಲ್ಲಿ ಮಾಡಲಾಗಿದೆ.

By Siddu
|

ಪ್ಲಾಸ್ಟಿಕ್ ನೋಟುಗಳ ಮುದ್ರಣ ಮಾಡಲು ನಿರ್ಧರಿಸಲಾಗಿದ್ದು, ಅದರ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ವಿತ್ತ ಸಚಿವಾಲಯ ಸಂಸತ್ತಿನಲ್ಲಿ ಹೇಳಿದೆ.

 

ಕಾಗದದ ನೋಟುಗಳಿಗೆ ಬದಲಾಗಿ ಪ್ಲಾಸ್ಟಿಕ್ ಅಥವಾ ಪಾಲಿಮರ್ ಕರೆನ್ಸಿಗಳನ್ನು ಮುದ್ರಿಸುವ ಕುರಿತು ನಿರ್ಧಾರವಾಗಿದ್ದು, ಅದಕ್ಕೆ ಬೇಕಾದ ವಸ್ತುಗಳನ್ನು ಸಂಗ್ರಹಿಸುವ ಕೆಲಸ ಶುರುವಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಲೋಕಸಭೆಗೆ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನೋಟು ರದ್ದು ಮಾಡಿದ ಹೆಚ್ಚಿನ ದೇಶಗಳು ವಿಫಲ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಸುಮಾರು ದಿನಗಳ ಹಿಂದೆಯೇ ಪ್ಲಾಸ್ಟಿಕ್ ನೋಟು ಮುದ್ರಣಕ್ಕೆ ಯೋಜನೆ ಹಾಕಿದ್ದು, ಪ್ಲಾಸ್ಟಿಕ್ ನೋಟು ಮುದ್ರಣದ ಉದ್ದೇಶವನ್ನು ಈಗಾಗಲೇ ತಿಳಿಸಲಾಗಿದೆ. ಪ್ಲಾಸ್ಟಿಕ್ ನೋಟಗಳ ಪರೀಕ್ಷೆಯನ್ನು ಕೊಚ್ಚಿ, ಮೈಸೂರು, ಶಿಮ್ಲಾ ಹಾಗೂ ಭುವನೇಶ್ವರದಲ್ಲಿ ಮಾಡಲಾಗಿದೆ.

ಪ್ಲಾಸ್ಟಿಕ್ ನೋಟು ಮುದ್ರಣದಿಂದ ಆಗಬಹುದಾದ ಸಾಧಕ-ಬಾಧಕಗಳೇನು ಎಂಬುದನ್ನು ನೋಡೋಣ...

ಪ್ಲಾಸ್ಟಿಕ್ ನೋಟುಗಳ ಅನುಕೂಲ

ಪ್ಲಾಸ್ಟಿಕ್ ನೋಟುಗಳ ಅನುಕೂಲ

* ನಕಲು ಮಾಡುವುದು ಕಷ್ಟ
* ದೀರ್ಘಕಾಲ ಬಾಳಿಕೆ
* ಬದಲಿಸುವ ವೆಚ್ಚ ಕಡಿಮೆ
* ಹೆಚ್ಚು ಸುರಕ್ಷಿತ
* ಸಾಕಷ್ಟು ಪ್ರಮಾಣದಲ್ಲಿ ಕಾಗದ ಉಳಿಸಬಹುದು
* ಮರಗಳ ನಾಶ ತಡೆಯುವುದರ ಜತೆ ಪರಿಸರ ಸಂರಕ್ಷಣೆ
* ಪ್ಲಾಸ್ಟಿಕ್ ಮುದ್ರಣ ಆರಂಭಿಕ ಹಂತದಲ್ಲಿ ದುಬಾರಿ ಎನಿಸಿದರೂ ದೀರ್ಘಾವಧಿಯಲ್ಲಿ ಅಗ್ಗವಾಗುವುದು.
* ಕೊಳೆಯಾದರೂ, ತೋಯ್ದರೂ ನೋಟುಗಳಿಗೆ ಧಕ್ಕೆಯಿಲ್ಲ. ತುಂಬಾ ಸ್ವಚ್ಛವಾಗಿರುತ್ತವೆ.
* ನೋಟುಗಳು ವಾಟರ್ ಪ್ರೂಫ್

ಪ್ಲಾಸ್ಟಿಕ್ ನೋಟುಗಳ ಅನಾನುಕೂಲ

ಪ್ಲಾಸ್ಟಿಕ್ ನೋಟುಗಳ ಅನಾನುಕೂಲ

* ಮುದ್ರಣ ವೆಚ್ಚ ದುಬಾರಿ
* ಪ್ಲಾಸ್ಟಿಕ್ ನೋಟು ಮಡಚುವುದು ಕಷ್ಟ
* ಸುಲಭವಾಗಿ ಜಾರಿ ಹೋಗುವುದರಿಂದ ಎಣಿಕೆ ಮಾಡುವುದು ಕಷ್ಟ
* ಎಟಿಎಂ ಯಂತ್ರಗಳನ್ನು ಪ್ಲಾಸ್ಟಿಕ್ ನೋಟಿಗೆ ಮರು ಹೊಂದಾಣಿಕೆ ಮಾಡುವುದು ಕಷ್ಟ
* ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ವೆಚ್ಚದಾಯಕ ನೋಟುಗಳನ್ನು ಜಾರಿ ತರುವುದು ಹಾಗೂ ಯೋಜನೆಯನ್ನು ಯಶಸ್ವಿಯಾಗಿ ರೂಪಿಸುವುದು ಅಷ್ಟೊಂದು ಸುಲಭವಲ್ಲ.

ಯಾವ ದೇಶದಲ್ಲಿ ಪ್ಲಾಸ್ಟಿಕ್ ನೋಟು ಬಳಕೆ ಇದೆ
 

ಯಾವ ದೇಶದಲ್ಲಿ ಪ್ಲಾಸ್ಟಿಕ್ ನೋಟು ಬಳಕೆ ಇದೆ

ಈಗಾಗಲೇ ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್, ಕೆನಡಾ, ರೊಮೇನಿಯ, ಬ್ರೂನೈ, ಚಿಲಿ, ಸಿಂಗಪುರ, ಕುವೈತ್, ಇಂಗ್ಲೆಂಡ್, ನೇಪಾಳ, ಮಾಲ್ಡೀವ್ಸ್ ಹೀಗೆ ಹಲವು ದೇಶಗಳು ಪ್ಲಾಸ್ಟಿಕ್ ನೋಟುಗಳ ಬಳಕೆ ಮಾಡುತ್ತಿವೆ.

Read more about: rbi money narendra modi
English summary

Plastic currency- Here are the pros and cons

The government informed the Parliament on Friday that it intends printing plastic currency notes.The process for the same has started, the Ministry of Finance informed the Lok Sabha.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X