For Quick Alerts
ALLOW NOTIFICATIONS  
For Daily Alerts

2016ರ ಟಾಪ್ 10 ಟೆಕ್ ಬಿಲಿಯನೇರ್

ಮಾರ್ಕ್ ಜುಗರ್ ಬರ್ಗ್ ನಿಂದ ಲ್ಯಾರಿ ಎಲಿಸನ್ ವರೆಗೆ ಹಲವು ಟೆಕ್ ಲೋಕದ ನಾಯಕರು ಎಲ್ಲವೂ ಸಾಧ್ಯವಿದೆ ಎಂಬುದನ್ನು ಸಾಧಿಸಿದ್ದಾರೆ.

By Siddu
|

2016ನೇ ವರ್ಷದಲ್ಲಿ ಸೆಲ್ಫ್ ಡ್ರೈವಿಂಗ್ ಟೆಕ್ನಾಲಜಿ ಪ್ರಗತಿಯ ಮಹಾಪೂರವೇ ಹರಿದು ಬಂದಿದೆ. ನಮ್ಮ ದೈನಂದಿನ ಜೀವನದಲ್ಲಿ ತಂತ್ರಜ್ಞಾನ ಹಾಸುಹೊಕ್ಕಿದ್ದು, ಜೀವನದ ಒಂದು ಭಾಗವಾಗಿದೆ. ವಿಶ್ವದ ಅನೇಕ ಶತಕೋಟ್ಯಾಧಿಪತಿಗಳು ಟೆಕ್ ರಂಗದಿಂದ ಬಂದಿದ್ದಾರೆಂದರೆ ಅಶ್ಚರ್ಯ ಪಡಬೇಕಿಲ್ಲ. ಮಾರ್ಕ್ ಜುಗರ್ ಬರ್ಗ್ ನಿಂದ ಲ್ಯಾರಿ ಎಲಿಸನ್ ವರೆಗೆ ಹಲವು ಟೆಕ್ ಲೋಕದ ನಾಯಕರು ಎಲ್ಲವೂ ಸಾಧ್ಯವಿದೆ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಪೋರ್ಬ್ಸ್: 100 ಶ್ರೀಮಂತರ ಪಟ್ಟಿಯಲ್ಲಿ ಭಾರತದ ಅಜೀಂ ಪ್ರೇಮ್ ಜಿ, ಶಿವ ನಾಡಾರ್

 

ಹೀಗೆ ಹಲವರು ಹೊಸತನದೊಂದಿಗೆ ತಂತ್ರಜ್ಞಾನ ಉದ್ಯಮದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ. 2016ರ ರಲ್ಲಿ ಟೆಕ್ ಉದ್ಯಮದ ಟಾಪ್ 10 ಟೆಕ್ ಬಿಲಿಯನೇರ್ಸ್ ಯಾರು ಎಂಬುದನ್ನು ನೋಡೋಣ...

1. ಬಿಲ್ ಗೇಟ್ಸ್

1. ಬಿಲ್ ಗೇಟ್ಸ್

ಸಂಸ್ಥೆ: ಮೈಕ್ರೊಸಾಪ್ಟ್
ಆಸ್ತಿ ಮೌಲ್ಯ: USD 78.4 ಬಿಲಿಯನ್
ಬಿಲ್ ಗೇಟ್ಸ್ ಅಮೆರಿಕಾದ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿ ಮೈಕ್ರೊಸಾಪ್ಟ್ ಸಂಸ್ಥಾಪಕರು. ಇದು ಲೈಸೆನ್ಸ್, ಕಂಪ್ಯೂಟರ್ ಸಾಪ್ಟ್ವೇರ್, ಎಲೆಕ್ಟ್ರಾನಿಕ್ಸ್, ಪರ್ಸನಲ್ ಕಂಪ್ಯೂಟರ್ಸ್ ಮತ್ತು ಸೇವೆಗಳನ್ನು ಒದಗಿಸುತ್ತದೆ.
ಪೋರ್ಬ್ಸ್ ಬಿಡುಗಡೆ ಮಾಡಿರುವ 2016ರ ವಿಶ್ವದ ನೂರು ಶ್ರೀಮಂತ ಶತಕೋಟಿ ಉದ್ಯಮಿಗಳ ಪಟ್ಟಿಯಲ್ಲಿ ಮೈಕ್ರೊಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ಈ ಬಾರಿಯೂ ಅಗ್ರ ಸ್ಥಾನ ಪಡೆದಿದ್ದಾರೆ. ಮೈಕ್ರೊಸಾಪ್ಟ್ ಕಂಪ್ಯೂಟರ್ ಕ್ಷೇತ್ರದಲ್ಲಿ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ.

2. ಜೆಫ್ ಬೆಜೊಸ್

2. ಜೆಫ್ ಬೆಜೊಸ್

ಸಂಸ್ಥೆ: ಅಮೆಜಾನ್.ಕಾಮ್
ಆಸ್ತಿ ಮೌಲ್ಯ: USD 66.2 ಬಿಲಿಯನ್
ಜೆಫ್ ಬೆಜೊಸ್ ಅಮೆಜಾನ್.ಕಾಮ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ. ಅಮೆಜಾನ್ ವಿಶ್ವದ ದೊಡ್ಡ ಆನ್ಲೈನ್ ಶಾಪಿಂಗ್ ಮಳಿಗೆ. ಜೆಫ್ ಬಿಜೋಸ್ ಪೋರ್ಬ್ಸ್ ಬಿಡುಗಡೆ ಮಾಡಿರುವ 2016ರ ವಿಶ್ವದ ನೂರು ಶ್ರೀಮಂತ ಶತಕೋಟಿ ಉದ್ಯಮಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅಮೆಜಾನ್.ಕಾಮ್ ಜಗತ್ತಿನ ಪ್ರತಿಷ್ಠಿತ ಇ-ಕಾಮರ್ಸ್, ಆನ್ಲೈನ್ ಮಾರುಕಟ್ಟೆಯ ಬೃಹತ್ ಕಂಪನಿಯಾಗಿದೆ.

3. ಮಾರ್ಕ್ ಜುಗರ್ ಬರ್ಗ್
 

3. ಮಾರ್ಕ್ ಜುಗರ್ ಬರ್ಗ್

ಸಂಸ್ಥೆ: ಪೇಸ್ಬುಕ್
ಆಸ್ತಿ ಮೌಲ್ಯ: USD 54 ಬಿಲಿಯನ್
ಅಮೆರಿಕಾ ಮೂಲದ ಮಾರ್ಕ್ ಜುಗರ್ ಬರ್ಗ್ ಪ್ರಸಿದ್ದ ಅಂತರ್ಜಾಲ ಉದ್ಯಮಿ ಹಾಗೂ ಪ್ರೋಗ್ರಾಮರ್ ಆಗಿದ್ದಾರೆ. ಇವರು ಪೇಸ್ಬುಕ್ ಸಂಸ್ಥೆಯ ಅಧ್ಯಕ್ಷ, ಸಿಇಒ ಮತ್ತು ಸಹಸಂಸ್ಥಾಪಕರಾಗಿದ್ದಾರೆ. ಇವರ ನೇತೃತ್ವದಲ್ಲಿ ಸಾಮಾಜಿಕ ಮಾದ್ಯಮವಾದ ಪೇಸ್ಬುಕ್ ಸಂಸ್ಥೆ ಮಹತ್ತರ ಸಾಧನೆ ಮಾಡಿದೆ. ಪೇಸ್ಬುಕ್ ವಿಶ್ವದ ಪ್ರಸಿದ್ದ ಸಾಮಾಜಿಕ ಜಾಲತಾಣವಾಗಿದೆ.

4. ಲ್ಯಾರಿ ಎಲಿಸನ್

4. ಲ್ಯಾರಿ ಎಲಿಸನ್

ಸಂಸ್ಥೆ: ಓರಾಕಲ್
ಆಸ್ತಿ ಮೌಲ್ಯ: USD 51.7 ಬಿಲಿಯನ್
ಲ್ಯಾರಿ ಎಲಿಸನ್ ಅಮೆರಿಕಾದ ಉದ್ಯಮಿ ಹಾಗೂ ಓರಾಕಲ್ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಸಿಇಒ. ಓರಾಕಲ್ ಕಂಪನಿ ಅಮೆರಿಕಾದ ಬಹುರಾಷ್ಟ್ರೀಯ ಕಂಪ್ಯೂಟರ್ ಟೆಕ್ನಾಲಜಿ ಕಾರ್ಪೋರೇಷನ್ ಆಗಿದೆ.

5. ಲ್ಯಾರಿ ಪೇಜ್

5. ಲ್ಯಾರಿ ಪೇಜ್

ಸಂಸ್ಥೆ: ಗೂಗಲ್ ಇಂಕ್
ಆಸ್ತಿ ಮೌಲ್ಯ: USD 39 ಬಿಲಿಯನ್
ಲ್ಯಾರಿ ಪೇಜ್ ಅಮೆರಿಕಾದ ಕಂಪ್ಯೂಟರ್ ವಿಜ್ಞಾನಿ ಮತ್ತು ಅಂತರ್ಜಾಲ ಉದ್ಯಮಿ. ಗೂಗಲ್ ಪೇರೆಂಟ್ ಮತ್ತು ಅಲ್ಫಾಬೆಟ್ ಇಂಕ್. ಕಂಪನಿಯ ಸಿಇಒ.

6. ಸೆರ್ಗೆ ಬ್ರಿನ್

6. ಸೆರ್ಗೆ ಬ್ರಿನ್

ಸಂಸ್ಥೆ: ಗೂಗಲ್
ಆಸ್ತಿ ಮೌಲ್ಯ: USD 38.2 ಬಿಲಿಯನ್
ಗೂಗಲ್ ಪೇರೆಂಟ್ ಮತ್ತು ಅಲ್ಫಾಬೆಟ್ ಇಂಕ್. ಕಂಪನಿಯ ಅಧ್ಯಕ್ಷ ಹಾಗೂ ಗೂಗಲ್ ಸಹಸಂಸ್ಥಾಪಕರು. ಇವರು ಕಂಪ್ಯೂಟರ್ ವಿಜ್ಞಾನಿ ಮತ್ತು ಅಂತರ್ಜಾಲ ಉದ್ಯಮಿ. ಗೂಗಲ್ ಜಗತ್ತಿನ ಪ್ರಸಿದ್ದ ಸರ್ಚ್ ಇಂಜಿನ್ ಆಗಿದೆ.

7. ಸ್ಟೀವನ್ ಬಾಲ್ಮರ್

7. ಸ್ಟೀವನ್ ಬಾಲ್ಮರ್

ಸಂಸ್ಥೆ: ಮೈಕ್ರೊಸಾಫ್ಟ್ ಮತ್ತು ಲಾಸ್ ಎಂಜೆಲ್ಸ್ ಕ್ಲಿಪ್ಪರ್ಸ್ ಮಾಲೀಕ
ಆಸ್ತಿ ಮೌಲ್ಯ: USD 27.7 ಬಿಲಿಯನ್
ಸ್ಟೀವನ್ ಬಾಲ್ಮರ್ ಅಮೆರಿಕಾದ ಉದ್ಯಮಿ ಹಾಗೂ ಮೈಕ್ರೊಸಾಫ್ಟ್ ಸಂಸ್ಥೆಯ ಮಾಜಿ ಸಿಇಒ(2000-14).

8. ಜಾಕ್ ಮಾ

8. ಜಾಕ್ ಮಾ

ಸಂಸ್ಥೆ: ಅಲಿಬಾಬಾ ಗ್ರೂಪ್
ಆಸ್ತಿ ಮೌಲ್ಯ: USD 26.8 ಬಿಲಿಯನ್
ಜಾಕ್ ಮಾ ಚೀನಾ ಉದ್ಯಮ ದಿಗ್ಗಜ ಮತ್ತು ಸಮಾಜ ಸೇವಕ. ಇ-ಕಾಮರ್ಸ್ ಕಂಪನಿ ಅಲಿಬಾಬಾ ಗ್ರೂಪ್ ನ ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಇದು ಇಂಟರ್‌ನೆಟ್ ಕ್ಷೇತ್ರದ ಬೃಹತ್ ಕಂಪನಿಯಾಗಿದೆ. ಪೋರ್ಬ್ಸ್ ಬಿಡುಗಡೆ ಮಾಡಿರುವ 2016ರ ವಿಶ್ವದ ನೂರು ಶ್ರೀಮಂತ ಶತಕೋಟಿ ಉದ್ಯಮಿಗಳ ಪಟ್ಟಿಯಲ್ಲಿ ಎಂಟನೇ ಸ್ಥಾನ ಪಡೆದಿದ್ದು, ಏಷ್ಯಾದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

9. ಮಾ ಹುವಾತೆಂಗ್(Ma Huateng)

9. ಮಾ ಹುವಾತೆಂಗ್(Ma Huateng)

ಸಂಸ್ಥೆ: ಟೆನ್ಸೆಂಟ್ ಇಂಕ್
ಆಸ್ತಿ ಮೌಲ್ಯ: USD 22 ಬಿಲಿಯನ್
ಮಾ ಹುವಾತೆಂಗ್ ಚೀನಾದ ಇಂಟರ್‌ನೆಟ್ ಉದ್ಯಮಿಯಾಗಿದ್ದು, ಟೆನ್ಸೆಂಟ್ ಇಂಕ್ ಸಂಸ್ಥೆಯ ಸ್ಥಾಪಕ, ಸಿಇಒ ಹಾಗೂ ಅಧ್ಯಕ್ಷರಾಗಿದ್ದಾರೆ. ಇದು ಚೀನಾದ ಬೃಹತ್ ಇಂಟರ್ನೇಟ್ ಕಂಪನಿ.

10. ಮೈಕೆಲ್ ಡೆಲ್

10. ಮೈಕೆಲ್ ಡೆಲ್

ಸಂಸ್ಥೆ: ಡೆಲ್
ಆಸ್ತಿ ಮೌಲ್ಯ: USD 20 ಬಿಲಿಯನ್
ಮೈಕೆಲ್ ಡೆಲ್ ಅಮೆರಿಕಾದ ಉದ್ಯಮಿ, ಹೂಡಿಕೆದಾರ, ಸಮಾಜ ಸೇವಕ ಮತ್ತು ಲೇಖಕ.
ಇವರು ಡೆಲ್ ಸಂಸ್ಥೆಯ ಸ್ಥಾಪಕ ಹಾಗೂ ಸಿಇಒ ಆಗಿದ್ದು, ಡೆಲ್ ಜಗತ್ತಿನಲ್ಲಿ ಹೆಚ್ಚು ಪರ್ಸನಲ್ ಕಂಪ್ಯೂಟರ್ಸ್(PCs) ಮಾರಾಟ ಮಾಡುವ ಕಂಪನಿ.

English summary

2016's Top 10 Tech Billionaires

From developments in robotics to an influx of self-driving technology, 2016 has been an exciting year. And with the proliferation of tech in our daily lives, it’s no wonder that some of the world’s top billionaires come from the tech space.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X