For Quick Alerts
ALLOW NOTIFICATIONS  
For Daily Alerts

ಉತ್ತಮ ಆರೋಗ್ಯ ವಿಮೆ(Health Policy) ಯಾವುವು ಗೊತ್ತೆ?

ಸುವ ಮುಂದಾಲೋಚನೆ ನಮಗಿರಬೇಕಾಗುತ್ತದೆ. ಆರೋಗ್ಯ ಪಾಲಿಸಿಗಳನ್ನು ಕಾಯಿಲೆ ಬಂದಾಗಲೇ ಮಾಡಬೇಕೆಂದೆನಿಲ್ಲ. ಮುಂಚಿತವಾಗಿ ಮಾಡುವುದರಿಂದ ಆಪತ್ ಕಾಲದಲ್ಲಿ ಆಪತ್ಬಾಂಧವನಾಗಿ ಅವು ಕೈಹಿಡಿಯುತ್ತವೆ.

By Siddu
|

ಜೀವನದಲ್ಲಿ ಕಷ್ಟಗಳಾಗಲಿ, ಆನಾರೋಗ್ಯವಾಗಲಿ ಹೇಳಿ ಕೇಳಿ ಬರುವಂತದಲ್ಲ. ಇಂದಿನ ಕಾಲದಲ್ಲಿ ಆರೋಗ್ಯವಂತರಾಗಿ ಬಾಳುವುದು ತುಂಬ ಮುಖ್ಯವಾಗಿದೆ. ಕೆಲ ಸಂದರ್ಭಗಳಲ್ಲಿ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು ಎದುರಾದಾಗ ಕಂಗಾಲಾಗಿ ಬಿಡುತ್ತೇವೆ. ಅಲ್ಲದೆ ತುಂಬಾ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಆರೋಗ್ಯ ಪಾಲಿಸಿಗಳನ್ನು ಮಾಡಿಸುವ ಮುಂದಾಲೋಚನೆ ನಮಗಿರಬೇಕಾಗುತ್ತದೆ. ಆರೋಗ್ಯ ಪಾಲಿಸಿಗಳನ್ನು ಕಾಯಿಲೆ ಬಂದಾಗಲೇ ಮಾಡಬೇಕೆಂದೆನಿಲ್ಲ. ಮುಂಚಿತವಾಗಿ ಮಾಡುವುದರಿಂದ ಆಪತ್ ಕಾಲದಲ್ಲಿ ಆಪತ್ಬಾಂಧವನಾಗಿ ಅವು ಕೈಹಿಡಿಯುತ್ತವೆ.

ನಮ್ಮ ದೇಶದಲ್ಲಿ ನೂರಾರು ಆರೋಗ್ಯ ಪಾಲಿಸಿ/ವಿಮೆಗಳಿದ್ದು, ಅವುಗಳಲ್ಲಿ ಕೆಲ ಮುಖ್ಯ ಆರೋಗ್ಯ ಪಾಲಿಸಿಗಳ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದೆ. ಭವಿಷತ್ತಿನಲ್ಲಿ ಇವು ಉತ್ತಮ ಪರಿಹಾರಗಳನ್ನು ಕೊಡಬಲ್ಲವು.

1. ಅಫೋಲೊ ಮ್ಯುನಿಚ್

1. ಅಫೋಲೊ ಮ್ಯುನಿಚ್

ಈ ಪ್ರಮಖವಾದ ವಿಮೆಯ ಅಡಿಯಲ್ಲಿ ವಿಶೇಷವಾಗಿ ಗುರುತಿಸಲ್ಪಡುವ ಮಾರಕ ಕಾಯಿಲೆ ಅಥವಾ ಶಸ್ತ್ರಚಿಕಿತ್ಸೆಗಳ ಮೇಲೆ ನಗದು ಹಣವನ್ನು ನೀಡಲಾಗುತ್ತದೆ. ಅನಾರೋಗ್ಯವನ್ನು ಸರಿಪಡಿಸಲು ಇದು ಅತ್ಯುತ್ತಮ ಪಾಲಿಸಿಯಾಗಿದೆ. 10 ಲಕ್ಷದ ಪಾಲಿಸಿ ಮೇಲೆ 10,000 ರೂ. ವಿಮೆ ಸಿಗುತ್ತದೆ.

2. ರೆಲಿಗೆರ್ ಆರೋಗ್ಯ ವಿಮೆ

2. ರೆಲಿಗೆರ್ ಆರೋಗ್ಯ ವಿಮೆ

ರೆಲಿಗೆರ್ ಆರೋಗ್ಯ ವಿಮೆ 20 ಕ್ಕಿಂತಲೂ ಹೆಚ್ಚಿನ ಕಾಯಿಲೆಗಳಿಗೆ ಅನ್ವಯಿಸುತ್ತದೆ. ವೈಯಕ್ತಿಕವಾಗಿ ಅಪಘಾತವಾದರೆ 100% ಮೊತ್ತವನ್ನು ನೀಡಲಾಗುತ್ತದೆ. ಈ ವಿಮೆ ಪ್ರಕಾರ ಆರೋಗ್ಯವನ್ನು ಮೇಲಿಂದ ಮೇಲೆ ಪರಿಶೀಲಿಸುತ್ತಿರಬೇಕು. ಈ ವಿಮೆ 14,000 ರೂ.ಗಳಿಗಿಂತಲೂ ಕಡಿಮೆ ಇರುತ್ತದೆ.

3. ಭಾರ್ತಿ ಆಕ್ಷಾ ಹೆಲ್ತ್ ಕ್ರಿಟಿಕಲ್ ಇಲ್ನೆಸ್
 

3. ಭಾರ್ತಿ ಆಕ್ಷಾ ಹೆಲ್ತ್ ಕ್ರಿಟಿಕಲ್ ಇಲ್ನೆಸ್

20 ಕ್ಕಿಂತಲೂ ಹೆಚ್ಚಿನ ಕಾಯಿಲೆಗಳು ಈ ಪಾಲಿಸಿಯ ವ್ಯಾಪ್ತಿಯಲ್ಲಿ ಬರುತ್ತವೆ. ಎಲ್ಲ ಆರೋಗ್ಯ ವಿಮೆಗಳಿಗೆ 80D ಅಡಿಯಲ್ಲಿ ತೆರಿಗೆ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

4. ಏಗೊನ್(Aegon) ಲೈಫ್ ಐ ಕ್ಯಾನ್ಸರ್

4. ಏಗೊನ್(Aegon) ಲೈಫ್ ಐ ಕ್ಯಾನ್ಸರ್

ಏಗೊನ್(Aegon) ಲೈಫ್ ಐ ಕ್ಯಾನ್ಸರ್ ಯಾವುದೇ ನಿರ್ಬಂಧಗಳಿಲ್ಲದೆ ಎಲ್ಲಾ ಪ್ರಕಾರದ ಕ್ಯಾನ್ಸರ್ ನಿಗ್ರಹಿಸಲು ಸಹಕಾರಿಯಾಗಿದೆ. ವಿಮೆಯ ಮೊತ್ತವನ್ನು ಕ್ಯಾನ್ಸರಿನ ವಿವಿಧ ಹಂತಗಳಲ್ಲಿ ಪಾವತಿಸಲಾಗುತ್ತದೆ.
ತುಂಬಾ ಗಂಭೀರ ಸ್ಥಿತಿಯಲ್ಲಿದ್ದಾಗ 150% ಮೊತ್ತದ ಸೌಲಭ್ಯ ಒದಗಿಸಲಾಗುತ್ತದೆ. 10 ಲಕ್ಷದ ಪಾಲಿಸಿ ಮೇಲೆ 4036 ರೂ. ಪ್ರಿಮಿಯಂ ಮೊತ್ತ ಇರುತ್ತದೆ.

5. ಎಡೆಲ್ವಿಯೆಸ್ ಟೊಕಿಯೊ ದಿಂದ ಇಟಿ ಸರ್ಟಿಫಿಕೇಟ್

5. ಎಡೆಲ್ವಿಯೆಸ್ ಟೊಕಿಯೊ ದಿಂದ ಇಟಿ ಸರ್ಟಿಫಿಕೇಟ್

ಈ ವಿಮೆ ಅಡಿಯಲ್ಲಿ ಮೂರಕ್ಕಿಂತಲು ಹೆಚ್ಚಿನ ಬಾರಿ ಸೌಲಭ್ಯವನ್ನು ಪಡೆಯಬಹುದಾಗಿದೆ. ಇದು 17 ಕ್ಕಿಂತಲೂ ಹೆಚ್ಚಿನ ಕಾಯಿಲೆಗಳನ್ನು ಅನ್ವಯವಾಗುತ್ತದೆ. 1 ಕೋಟಿಯಷ್ಟು ಭಾರಿ ಮೊತ್ತವನ್ನು ಪಡೆಯಬಹುದಾಗಿದೆ. 10 ಲಕ್ಷ ರೂ. ಕವರ್ ಮಾಡಲು ರೂ. 5990 ನೀವು ಭರಿಸಬೇಕಾಗುತ್ತದೆ.

6. HDFC ಲೈಫ್ ಕ್ಯಾನ್ಸರ್ ಕೇರ್ ಸಿಲ್ವರ್

6. HDFC ಲೈಫ್ ಕ್ಯಾನ್ಸರ್ ಕೇರ್ ಸಿಲ್ವರ್

ಈ ವಿಮೆ ಖರೀದಿಸಿದ ನಂತರ ಕ್ಯಾನ್ಸರ್ ಇದೆಯೆಂದು ಪತ್ತೆಯಾದಲ್ಲಿ ನಿಮಗೆ ಭಾರಿ ಮೊತ್ತ ಸಿಗುತ್ತದೆ. ಒಂದು ವೇಳೆ ನೀವು 10 ಲ್ಷಕ ಗಳ ಕವರೆಜ್ ಪಡೆಯಬೇಕೆಂದು ಬಯಸಿದ್ದಲ್ಲಿ ಪ್ರೀಮಿಯಂ ಮೊತ್ತ 2048 ರೂ. ಇರುತ್ತದೆ. ಈ ಪಾಲಿಸಿಯ ಅಡಿಯಲ್ಲಿ ಪ್ರಿಮಿಯಂ 3 ವರ್ಷ ಬಿಟ್ಟು ಕೊಡುವಿಕೆಗೆ ಅವಕಾಶ ಇರುತ್ತದೆ.

7. ಮ್ಯಾಕ್ಸ್ ಬ್ಯುಪಾ ಆರೋಗ್ಯ ಅಶ್ಯೂರೆನ್ಸ್ ಕ್ರಿಟಿಕಲ್ ಇಲ್ನೆಸ್ (MAX Bupa Health Assurance Critical Illness )

7. ಮ್ಯಾಕ್ಸ್ ಬ್ಯುಪಾ ಆರೋಗ್ಯ ಅಶ್ಯೂರೆನ್ಸ್ ಕ್ರಿಟಿಕಲ್ ಇಲ್ನೆಸ್ (MAX Bupa Health Assurance Critical Illness )

20 ಕ್ಕಿಂತಲೂ ಹೆಚ್ಚಿನ ಕಾಯಿಲೆಗಳು ಈ ಪಾಲಿಸಿಯ ವ್ಯಾಪ್ತಿಯಲ್ಲಿ ಗುಣಪಡಿಸಲಾಗುತ್ತವೆ. ಈ ಪಾಲಿಸಿ ಅಡಿಯಲ್ಲಿ ಯಾವುದೇ ವೈದ್ಯಕೀಯ ಅವಶ್ಯಕತೆ ಇರುವುದಿಲ್ಲ. ಹೆಚ್ಚು ಕಡಿಮೆ 8300 ರೂ. ಪ್ರಿಮಿಯಂ ಮೊತ್ತ ಇರುತ್ತದೆ.

Read more about: insurance money ವಿಮೆ
English summary

Best Health Policies you should Take

Critical illness coverage through health policies are always good, as they avoid a financial strain on you and your family members. The treatment of some diseases like cancer can be horribly expensive. Here are 7 critical illness policies that offer good coverage.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X