For Quick Alerts
ALLOW NOTIFICATIONS  
For Daily Alerts

ರದ್ದಾದ ನೋಟುಗಳಿದ್ದರೆ 50 ಸಾವಿರ ದಂಡ!

ರೂ. 500, 1000 ಮುಖಬೆಲೆಯ ನೋಟುಗಳ ನಿಷೇಧದ ನಂತರ ಕಪ್ಪುಹಣ ತಡೆಗಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿ ತರುತ್ತಿದ್ದು, ಡಿಸೆಂಬರ್ 30ರ ನಂತರವೂ ಹಳೆ ನೋಟುಗಳನ್ನು ಇಟ್ಟುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ.

By Siddu
|

ರೂ. 500, 1000 ಮುಖಬೆಲೆಯ ನೋಟುಗಳ ನಿಷೇಧದ ನಂತರ ಕಪ್ಪುಹಣ ತಡೆಗಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿ ತರುತ್ತಿದ್ದು, ಡಿಸೆಂಬರ್ 30ರ ನಂತರವೂ ಹಳೆ ನೋಟುಗಳನ್ನು ಇಟ್ಟುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ.

ರದ್ದಾದ ನೋಟುಗಳನ್ನು ಡಿಸೆಂಬರ್ 30ರ ನಂತರ ಹತ್ತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇಟ್ಟುಕೊಳ್ಳುವವರ ಮೇಲೆ ದಂಡ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರದ್ದು ಮಾಡಲಾಗಿರುವ ನೋಟುಗಳನ್ನು ಹತ್ತಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ(ಐದು ಸಾವಿರ) ಹೊಂದಿದ್ದರೆ ರೂ. 50 ಸಾವಿರ ದಂಡ ಅಥವಾ ಇರುವ ಹಣದ ಐದರಷ್ಟು ದಂಡ ವಿಧಿಸುವ ಸುಗ್ರೀವಾಜ್ಞೆ ಹೊರಡಿಸಲಿದೆ ಎನ್ನಲಾಗಿದೆ.

ಡಿಸೆಂಬರ್ 31ರ ವರೆಗೆ ಹಳೆ ನೋಟುಗಳನ್ನು ಜಮೆ ಮಾಡಲು ಅವಕಾಶವಿದ್ದು, ಡಿಸೆಂಬರ್ 31ರ ನಂತರ ಜಮೆ ಮಾಡುವ ಹಣಕ್ಕೆ ಬ್ಯಾಂಕು ಅಧಿಕಾರಿಗಳಿಗೆ ಅಫಿಡವಿಟ್ ನಲ್ಲಿ ಸಲ್ಲಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ತಡವಾಗಿದ್ದಕ್ಕಾಗಿ ಕೇಳಲಾಗುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಬೇಕಾಗುತ್ತದೆ. ಒಂದು ವೇಳೆ ಗ್ರಾಹಕರು ನೀಡುವ ಉತ್ತರಗಳು ಸಮರ್ಪಕವಾಗಿರದಿದ್ದಲ್ಲಿ ಹೆಚ್ಚು ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳುವುದರ ಬಗ್ಗೆ ಸರ್ಕಾರ ಹೇಳಿತ್ತು. ಹೀಗಾಗಿ ಪ್ರಸ್ತುತ ಕೇಂದ್ರ ಸರ್ಕಾರ ಹೊರಡಿಸಲು ಮುಂದಾಗಿರುವ ನೂತನ ಸುಗ್ರೀವಾಜ್ಞೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ರದ್ದಾದ ನೋಟುಗಳಿದ್ದರೆ 50 ಸಾವಿರ ದಂಡ!

Read more about: rbi narendra modi black money
English summary

After Dec 30 may attract minimum Rs 50,000 penalty

With the old Rs 500 and Rs 1000 currency notes set to become completely illegal post December 30, the government is likely to come up with a new ordinance in regards to the usage of the old notes.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X