For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ, ಪಿಎನ್‌ಬಿ ಸಾಲಗಳ ಮೇಲಿನ ಬಡ್ಡಿದರ ಕಡಿತ

ಸರ್ಕಾರಿ ವಲಯದ ಪ್ರಮುಖ ಬ್ಯಾಂಕುಗಳಾದ ಭಾರತೀಯ ಸ್ಟೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕುಗಳು ತಮ್ಮ ಸಾಲಗಳ ಮೇಲಿನ ಬಡ್ಡಿದರ ಕಡಿತ ಮಾಡಲು ಮುಂದಾಗಿವೆ.

By Siddu
|

ಸರ್ಕಾರಿ ವಲಯದ ಪ್ರಮುಖ ಬ್ಯಾಂಕುಗಳಾದ ಭಾರತೀಯ ಸ್ಟೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕುಗಳು ತಮ್ಮ ಸಾಲಗಳ ಮೇಲಿನ ಬಡ್ಡಿದರ ಕಡಿತ ಮಾಡಲು ಮುಂದಾಗಿವೆ.

ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿದರವನ್ನು(MCLR) ಎಸ್ಬಿಐ ಶೇ. ೦.9ರಷ್ಟು ಕಡಿತಗೊಳಿಸಿದೆ. ಈಗ ಒಂದು ವರ್ಷದ ಅವಧಿಯ ಸಾಲದ ಬಡ್ಡಿ ದರ ಶೇ. 8.90 ರಿಂದ ಶೇ. 8ಕ್ಕೆ ಕಡಿತವಾಗಲಿದೆ. ಎರಡು ವರ್ಷದ ಸಾಲದ ಬಡ್ಡಿ ಶೇ. 8.10 ಮತ್ತು 3 ವರ್ಷದ ಸಾಲದ ಬಡ್ಡಿ ದರ ಶೇ. 8.15ರಷ್ಟು ಇಳಿಕೆ ಆಗಲಿದೆ.

ಎಸ್‌ಬಿಐ, ಪಿಎನ್‌ಬಿ ಸಾಲಗಳ ಮೇಲಿನ ಬಡ್ಡಿದರ ಕಡಿತ

ಬಡವರು ಮತ್ತು ಕೆಳ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಬಡ್ಡಿದರದಲ್ಲಿ ಸಾಲ ನೀಡುವಂತೆ ದೇಶದ ಬ್ಯಾಂಕುಗಳಿಗೆ ಪ್ರಧಾನಿ ಮೋದಿಯವರು ಕೇಳಿಕೊಂಡ ಹಿನ್ನೆಲೆಯಲ್ಲಿ ಬ್ಯಾಂಕುಗಳು ಈ ಕ್ರಮಕ್ಕೆ ಮುಂದಾಗಿವೆ. ಅಲ್ಲದೆ ಆರ್ ಬಿಐ ತನ್ನ ವಿತ್ತೀಯ ನೀತಿ ಘೋಷಣೆ ಸಂದರ್ಭದಲ್ಲಿ ಬಡ್ಡಿದರ ಇಳಿಕೆ ಮಾಡುವ ಮುನ್ಸೂಚನೆ ನೀಡಿತ್ತು.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಯೂನಿಯನ್‌ ಬ್ಯಾಂಕ್‌ ಕ್ರಮವಾಗಿ ಶೇ. 0.70 ಮತ್ತು ಶೇ. 0.90ರಷ್ಟು ಬಡ್ಡಿ ದರ ಕಡಿತಗೊಳಿಸಿವೆ. ಯೂನಿಯನ್‌ ಬ್ಯಾಂಕ್‌ ತನ್ನ ಒಂದು ವರ್ಷದ MCLR ಶೇ. 0.65ರಷ್ಟು ತಗ್ಗಿಸಿದೆ. ಐಡಿಬಿಐ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರವಾಂಕೂರ್‌ ಕೂಡ ಬಡ್ಡಿ ದರ ಕಡಿತಗೊಳಿಸಿವೆ. ಪ್ರಸ್ತುತ ಹೊಸ ಬಡ್ಡಿ ದರಗಳು ಜನೆವರಿ 2, 2017ರಿಂದ ಜಾರಿಗೆ ಬರಲಿವೆ.

ಗೃಹ ಸಾಲ ಪಡೆಯುವ ಮಹಿಳೆಯರಿಗೆ ಎಸ್‌ಬಿಐ ಶೇ. 8.20 ಮತ್ತು ಇತರರಿಗೆ ಶೇ. 8.25ಕ್ಕೆ ಸಾಲ ವಿತರಣೆ ಮಾಡಲಿದೆ ಎಂದು ತಿಳಿದು ಬಂದಿದೆ.

ಎಸ್‌ಬಿಐ, ಪಿಎನ್‌ಬಿ ಸಾಲಗಳ ಮೇಲಿನ ಬಡ್ಡಿದರ ಕಡಿತ

Read more about: sbi interest rates bank
English summary

SBI cuts lending rate by 0.9%

A day after Prime Minister Narendra Modi asked banks to priorities lending towards poor and lower middle class, country’s largest lender SBI on Sunday cut benchmark interest rate across various maturities by 0.9 per cent, effective from January 1, a move that is expected to be shortly followed by other banks.
Story first published: Monday, January 2, 2017, 14:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X