For Quick Alerts
ALLOW NOTIFICATIONS  
For Daily Alerts

ಪೇಟಿಎಂ ಪೇಮೆಂಟ್ ಬ್ಯಾಂಕ್ ಗೆ ಆರ್ಬಿಐ ಅನುಮತಿ

ದೇಶದ ಪ್ರಮುಖ ಮೊಬೈಲ್ ವಾಲೆಟ್ ಮತ್ತು ಇ-ಕಾಮರ್ಸ್ ಕಂಪನಿ ‘ಪೇಟಿಎಂ’ ಶೀಘ್ರದಲ್ಲೇ ಪೇಮೆಂಟ್ ಬ್ಯಾಂಕ್ ಗಳನ್ನು ಆರಂಭಿಸುತ್ತಿದೆ.

By Siddu
|

ದೇಶದ ಪ್ರಮುಖ ಮೊಬೈಲ್ ವಾಲೆಟ್ ಮತ್ತು ಇ-ಕಾಮರ್ಸ್ ಕಂಪನಿ 'ಪೇಟಿಎಂ' ಶೀಘ್ರದಲ್ಲೇ ಪೇಮೆಂಟ್ ಬ್ಯಾಂಕ್ ಗಳನ್ನು ಆರಂಭಿಸುತ್ತಿದೆ.

 

ಪೇಮೆಂಟ್ ಬ್ಯಾಂಕ್ ಗಳನ್ನು ಆರಂಭಿಸಲು ಆರ್ ಬಿ ಐನಿಂದ ಪರವಾನಗಿ ಸಿಕ್ಕಿದ್ದು, ಬರುವ ತಿಂಗಳು ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.

ಒಂದು ಲಕ್ಷ ಠೇವಣಿ

ಒಂದು ಲಕ್ಷ ಠೇವಣಿ

ಪೇಮೆಂಟ್ ಬ್ಯಾಂಕ್ ವ್ಯಕ್ತಿಗಳಿಂದ ಮತ್ತು ಸಣ್ಣ ವ್ಯಾಪಾರಸ್ಥರಿಂದ ಒಂದು ಖಾತೆಗೆ ಒಂದು ಲಕ್ಷದವರೆಗೆ ಠೇವಣಿಗಳನ್ನು ಸ್ವೀಕರಿಸಬಹುದು. ಗ್ರಾಹಕರಿಗೆ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಕೊಡುವುದಿಲ್ಲ. ಪೇಟಿಎಂ ಪೇಮೆಂಟ್ ಬ್ಯಾಂಕ್ ಡೆಬಿಟ್ ಕಾರ್ಡ್ ಒದಗಿಸುವ ಸಾಧ್ಯತೆ ಇದೆ.
NEFT, RTGS ಮತ್ತು UPI ಮೂಲಕ ವ್ಯವಹರಿಸಲು ಗ್ರಾಹಕರಿಗೆ ಅವಕಾಶ ನೀಡಬಹುದು.

‘ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್'

‘ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್'

ಕಳೆದ 2016 ರ ನವೆಂಬರ್ ತಿಂಗಳಲ್ಲಿ ರಾಜಸ್ತಾನದಲ್ಲಿ ‘ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್' ಲಾಂಚ್ ಮಾಡಲಾಗಿತ್ತು. ಈಗ ಸದ್ಯದಲ್ಲೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗಳು ಕೂಡ ಅಸ್ತಿತ್ವಕ್ಕೆ ಬರಲಿವೆ. ಈ ವಿಚಾರ ಪೇಟಿಎಂ ಸಂಸ್ಥಾಪಕ ವಿಜಯ್ ಶರ್ಮಾ ಈ ವಿಚಾರವನ್ನು ಬ್ಲಾಗ್ ಸ್ಪಾಟ್ ನಲ್ಲಿ ಹಂಚಿಕೊಂಡಿದ್ದಾರೆ.

ಪೇಟಿಎಂ ವಾಲೆಟ್ ಮೂಲಕ ಬಿಲ್ ಪಾವತಿ ಹೇಗೆ?
 

ಪೇಟಿಎಂ ವಾಲೆಟ್ ಮೂಲಕ ಬಿಲ್ ಪಾವತಿ ಹೇಗೆ?

1. ಪೇಟಿಎಂ ಆಪ್ ಅಥವಾ ವೆಬ್ಸೈಟ್ ನಲ್ಲಿ ಎಲೆಕ್ಟ್ರಿಸಿಟಿ ಐಕಾನ್ ಆಯ್ಕೆ ಮಾಡಿ.
2. ಎಲೆಕ್ಟ್ರಿಸಿಟಿ ಬೋರ್ಡ್ ಆಯ್ಕೆ ಮಾಡಿ
3. ವಿದ್ಯುತ್ ಬಿಲ್ ಮೇಲೆ ನಮೂದಿಸಿರುವಂತೆ ಗ್ರಾಹಕರ ಹೆಸರನ್ನು ನಮೂದಿಸಿ.
4. ಬಿಲ್ ಮಾಹಿತಿ ಪಡೆಯಲು Proceed ಮೇಲೆ ಕ್ಲಿಕ್ ಮಾಡಿ.
5. ಬಿಲ್ ವಿವರವನ್ನು ಪರಿಶೀಲಿಸಿ.
6. ನಿಶ್ಚಿತ ಮೊತ್ತವನ್ನು ನಮೂದಿಸಿ ಪಾವತಿಸಿ.
7. ನಂತರ ಕೂಪನ್ಸ್/ಪ್ರೋಮೊ ಕೋಡ್ ಸ್ಕ್ರೀನ್ ಗೆ ಹೊಗುವಿರಿ.
8. ಪ್ರೋಮೊ ಕೋಡ್ ಇದ್ದವರು ಈ ಸ್ಕ್ರೀನ್ ಮೇಲೆ ಅಪ್ಲೈ ಮಾಡಿ. ಅದೇ ರೀತಿ ಕೂಪನ್ಸ್ ಮೇಲೆ ಆಸಕ್ತಿ ಇದ್ದರೆ ಅದನ್ನು ಆಯ್ಕೆ ಮಾಡಿ.
9. ಪಾವತಿಯ ವಿಧಾನ ಆಯ್ಕೆ ಮಾಡಿ ಮತ್ತು ವಿವರವನ್ನು ನಮೂದಿಸಿ.
10 ಬಿಲ್ ಪಾವತಿಯ ವಿವರವನ್ನು ಪಡೆಯಿರಿ.

English summary

Paytm gets RBI approval for payments bank Read more at: http://economictimes.indiatimes.com/articleshow/56326779.cms?utm_source=contentofinterest&utm_medium=text&utm_campaign=cppst

Paytm today said it has received final approval of the Reserve Bank to formally launch its payments bank and it expects to start operations next month.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X