For Quick Alerts
ALLOW NOTIFICATIONS  
For Daily Alerts

ಗ್ರಾಮೀಣ ಭಾಗಗಳಿಗೆ 40% ನೋಟು ಪೂರೈಕೆಗೆ ಆರ್ಬಿಐ ಸೂಚನೆ

ಗ್ರಾಮೀಣ ಭಾಗದ ಜನರ ಮತ್ತು ರೈತರ ನಗದು ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆರ್ಬಿಐ ಗ್ರಾಮೀಣ ಭಾಗಗಳಿಗೆ ಶೇ. 40ರಷ್ಟು ನೋಟುಗಳನ್ನು ಪೂರೈಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿದೆ.

By Siddu
|

ಗ್ರಾಮೀಣ ಭಾಗದ ಜನರ ಮತ್ತು ರೈತರ ನಗದು ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆರ್ಬಿಐ ಗ್ರಾಮೀಣ ಭಾಗಗಳಿಗೆ ಶೇ. 40ರಷ್ಟು ನೋಟುಗಳನ್ನು ಪೂರೈಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿದೆ.

ನೋಟು ರದ್ದತಿ ನಂತರ ಜನರ ಅಗತ್ಯಕ್ಕೆ ಅನುಗುಣವಾಗಿ ನಗದು ಸಿಗದೆ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. 50 ದಿನಗಳ ಗಡುವು ಕಳೆದರೂ ಇನ್ನೂ ಸಮತೋಲನ ಸಾಧಿಸಲು ಸಾಧ್ಯವಾಗಿಲ್ಲ.

ಸ್ಥಳೀಯ ಅಗತ್ಯಗಳಿಗನುಗುಣವಾಗಿ ಹಣ ಪೂರೈಕೆಯಾಗದೆ ಇರುವುದರಿಂದ ಗ್ರಾಮೀಣ ಭಾಗದ ಬಡವರಿಗೆ ಮತ್ತು ರೈತರಿಗೆ ನಗದು ಸಮಸ್ಯೆ ತೀವ್ರವಾಗಿ ಎದುರಾಗಿತ್ತು. ಹೀಗಾಗಿ ಗ್ರಾಮೀಣ ಭಾಗಗಳಿಗೆ ಶೇ. 40ರಷ್ಟು ನಗದು ಪೂರೈಕೆ ಮಾಡುವಂತೆ ತಿಳಿಸಲಾಗಿದೆ.

ಜನೆವರಿ 1ರಿಂದ ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡುವ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕು ಹೆಚ್ಚಿಸಿದ್ದು, ದಿನವೊಂದಕ್ಕೆ ರೂ. 4500 ವಿತ್ ಡ್ರಾ ಮಾಡಬಹುದು. ನೋಟು ನಿಷೇಧದ ನಂತರ ಒಂದು ದಿನಕ್ಕೆ ರೂ. 2500 ವಿತ್ ಡ್ರಾ ಮಾಡುವ ಮಿತಿ ನಿಗದಿ ಪಡಿಸಲಾಗಿತ್ತು. ಆದರೆ 2017ರ ಹೊಸ ವರ್ಷದಿಂದ ಎಟಿಎಂಗಳಿಂದ ಒಂದು ದಿನಕ್ಕೆ ರೂ. 4500 ಪಡೆಯಬಹುದು. ಬ್ಯಾಂಕುಗಳಿಂದ ವಿತ್ ಡ್ರಾ ಮಾಡುವ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಮೊದಲೇ ನಿದಗಿ ಪಡಿಸಿದಂತೆ ವಾರಕ್ಕೆ ರೂ. 24 ಸಾವಿರ ವಿತ್ ಡ್ರಾ ಮಾಡಬಹುದು ಎಂದು ಆರ್‌ಬಿಐ ತಿಳಿಸಿದೆ.

ಗ್ರಾಮೀಣ ಭಾಗಗಳಿಗೆ 40% ನೋಟು ಪೂರೈಕೆಗೆ ಆರ್ಬಿಐ ಸೂಚನೆ

Read more about: rbi bank demonetization
English summary

RBI asks banks to supply 40% of notes to rural areas

To mitigate hardships of poor and marginal farmers due to cash deficit following demonetisation, the Reserve Bank today directed banks to distribute at least 40 per cent of currency notes in rural areas.
Story first published: Wednesday, January 4, 2017, 12:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X