For Quick Alerts
ALLOW NOTIFICATIONS  
For Daily Alerts

ದೇಶದ ಸಣ್ಣ, ಮಧ್ಯಮ ಉದ್ಯಮಗಳ ಉತ್ತೇಜನಕ್ಕೆ ಹಲವು ಯೋಜನೆ: ಸುಂದರ್ ಪಿಚ್ಚೈ

ದೇಶದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ಆರ್ಥಿಕತೆಯ ಬೆನ್ನೆಲುಬಾಗಿದ್ದು, ಉತ್ತೇಜನ ನೀಡಲು ಗೂಗಲ್ ಸಿಇಒ ಸುಂದರ್ ಪಿಚ್ಚೈ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ.

By Siddu
|

ಭಾರತದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ಆರ್ಥಿಕತೆಯ ಬೆನ್ನೆಲುಬಾಗಿದ್ದು, ಉತ್ತೇಜನ ನೀಡಲು ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಗೂಗಲ್ ಸಿಇಒ ಸುಂದರ್ ಪಿಚ್ಚೈ ಹೇಳಿದ್ದಾರೆ.

ಭಾರತದಲ್ಲಿ 51 ಮಿಲಿಯನ್ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿದ್ದು, ದೇಶದ ಜಿಡಿಪಿಗೆ ಶೇ. 37ರಷ್ಟು ಕೊಡುಗೆಯನ್ನು ನೀಡುತ್ತಿವೆ. ಇದಲ್ಲದೆ ಭಾರತದಲ್ಲಿ ಕೇವಲ ಶೇ. 32ರಷ್ಟು ಜನರು ಮಾತ್ರ ಡಿಜಿಟಲ್ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ. ಉಳಿದ ಶೇ. 68 ಭಾಗವನ್ನು ಡಿಜಿಟಲೀಕರಣ ಮಾಡಲು ಗೂಗಲ್ ಇಂಡಿಯ ಬಯಸಿದೆ. ದೇಶದ ಆರ್ಥಿಕತೆಗೆ ದೇಶದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ಬೆನ್ನೆಲುಬು ಆಗಿರುವುದರಿಂದ ಎಲ್ಲರಿಗೂ ಅಂತರ್ಜಾಲ ಸಂಪರ್ಕ ಸಿಗಬೇಕು ಎಂದರು.

ದೇಶದ ಸಣ್ಣ, ಮಧ್ಯಮ ಉದ್ಯಮಗಳ ಉತ್ತೇಜನಕ್ಕೆ ಹಲವು ಯೋಜನೆ: ಸುಂದರ್ ಪಿಚ್

ಭಾರತೀಯ ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ ಒಕ್ಕೂಟ ಮತ್ತು ಗೂಗಲ್ ಸಹಯೋಗದಲ್ಲಿ ಡಿಜಿಟಲ್ ಅನ್ ಲಾಕಡ್ ಎಂಬ ತರಬೇತಿ ಅಭಿವೃದ್ಧಿ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಹೈದರಾಬಾದ್ ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಸಂಸ್ಥೆಯಿಂದ ಈ ತರಬೇತಿ ಪಡೆದವರಿಗೆ ಪ್ರಮಾಣಪತ್ರ ನೀಡಲಾಗುವುದು. ಆನ್ ಲೈನ್ ಮತ್ತು ಮೊಬೈಲ್ ಕೋರ್ಸ್ ಗಳ ಮೂಲಕ ದೇಶದಲ್ಲಿನ ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳು ತರಬೇತಿ ಪಡೆದುಕೊಳ್ಳಬಹುದಾಗಿದೆ.

ಇದರ ಜತೆಗೆ ಮುಂಬರುವ ಮೂರು ವರ್ಷದಲ್ಲಿ ದೇಶದ 40 ನಗರಗಳಲ್ಲಿ 5000 ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ಯೋಜನೆ ನಡೆಸಲಾಗುತ್ತಿದೆ ಎಂದಿದ್ದಾರೆ. ಹತ್ತು ನಿಮಿಷಗಳಲ್ಲಿ ವೆಬ್ ಸೈಟ್ ನಿರ್ಮಾಣ ಮಾಡಲು ಸಹಾಯವಾಗುವ ಮೈ ಬ್ಯುಸಿನೆಸ್ ವೆಬೆ ಸೈಟ್ ಆರಂಭಿಸಲಿದೆ ಎಂದರು.

Read more about: google online digital payments
English summary

Google’s Sundar Pichai unveils Digital Unlocked for Indian small businesses

India has 51 million small and medium businesses (SMBs) today that contribute 37% to India’s GDP. Out of these, only 32% are online or are leveraging the power of the digital. It is the balance 68% that Google India wants to digitally empower in 2017, according to global chief executive officer Sundar Pichai.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X