For Quick Alerts
ALLOW NOTIFICATIONS  
For Daily Alerts

ವಿಶ್ವದ ಅತಿ ಬಡ ದೇಶಗಳು ಯಾವುವು ಗೊತ್ತೆ?

ದೇಶಗಳ ಸಂಪತ್ತು, ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಡಿಪಿ), ತಲಾದಾಯ, ಉದ್ಯೋಗ ದರ, ಸಾಕ್ಷರತೆ ದರ, ಕೊಳ್ಳುವ ಸಾಮರ್ಥ್ಯ(ಪಿಪಿಪಿ) ಹೀಗೆ ಹಲವು ಮಾನದಂಡಗಳ ಆಧಾರದ ಮೇಲೆ ಒಂದು ದೇಶ ಶ್ರೀಮಂತಿಕೆ ಹಾಗೂ ಬಡತನ ನಿರ್ಧರಿಸಲಾಗುತ್ತದೆ.

By Siddu
|

ದೇಶಗಳ ಸಂಪತ್ತು, ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಡಿಪಿ), ತಲಾದಾಯ, ಉದ್ಯೋಗ ದರ, ಸಾಕ್ಷರತೆ ದರ, ಕೊಳ್ಳುವ ಸಾಮರ್ಥ್ಯ(ಪಿಪಿಪಿ) ಹೀಗೆ ಹಲವು ಮಾನದಂಡಗಳ ಆಧಾರದ ಮೇಲೆ ಒಂದು ದೇಶದ ಶ್ರೀಮಂತಿಕೆ ಹಾಗೂ ಬಡತನ ನಿರ್ಧರಿಸಲಾಗುತ್ತದೆ.

 

ಜಗತ್ತಿನ ಹಲವು ದೇಶಗಳು ತುಂಬಾ ಕೆಳಮಟ್ಟದ ಜಿಡಿಪಿಯನ್ನು ಹೊಂದಿವೆ. ನೈಸರ್ಗಿಕವಾಗಿ ಸಂಪದ್ಭರಿತವಾಗಿದ್ದರೂ ಕಡು ಬಡ ರಾಷ್ಟ್ರಗಳಾಗಿ ಉಳಿದಿವೆ. ಅವುಗಳ ವಾರ್ಷಿಕ ಒಟ್ಟು ರಾಷ್ಟ್ರೀಯ ಉತ್ಪನ್ನ $10000ಕ್ಕಿಂತಲೂ ಕಡಿಮೆ ಇದೆ. ಇಲ್ಲಿ ವಿಶ್ವದ ಟಾಪ್ 15 ಅತಿ ಬಡ ದೇಶಗಳನ್ನು ಮತ್ತು ಚಿಂತಾಜನಕ ಕುತೂಹಲಕಾರಿ ಅಂಶಗಳನ್ನು ಪಟ್ಟಿ ಮಾಡಲಾಗಿದೆ.

1. ಬುರುಂಡಿ

1. ಬುರುಂಡಿ

ಜಿಡಿಪಿ ತಲಾದಾಯ: 275.98 ಡಾಲರ್
ದೇಶದ ಜಿಡಿಪಿ: 3,093,647,227 ಡಾಲರ್
ಜನಸಂಖ್ಯೆ: 11,179,000
ಸರ್ಕಾರ ವಿಧ: ರಿಪಬ್ಲಿಕ್
ಆಫ್ರಿಕನ್ ದೇಶವಾಗಿರುವ ಬುರುಂಡಿಯಲ್ಲಿ ಭ್ರಷ್ಟಾಚಾರ, ಯುದ್ಧ, ರಾಜಕೀಯ ಬಿಕ್ಕಟ್ಟು, ಅನಕ್ಷರತೆ ಮತ್ತು ಆರ್ಥಿಕ ಅಸ್ಥಿರತೆ ತಾಂಡವಾಡುತ್ತಿದೆ. ಬುರುಂಡಿ ತುಂಬಾ ಹಸಿವಿನಿಂದ ನರಳುತ್ತಿರುವ ದೇಶ.

2. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್

2. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್

ಜಿಡಿಪಿ ತಲಾದಾಯ: 306.78 ಡಾಲರ್
ದೇಶದ ಜಿಡಿಪಿ: 1,503,299,944 ಡಾಲರ್
ಜನಸಂಖ್ಯೆ: 4,900,000
ಸರ್ಕಾರ ವಿಧ: ರಿಪಬ್ಲಿಕ್
ನೈಸರ್ಗಿಕವಾಗಿ ಶ್ರೀಮಂತವಾಗಿರುವ ಮಧ್ಯ ಆಫ್ರಿಕಾದ ಗಣರಾಜ್ಯ ವಿವಿಧ ನೈಸರ್ಗಿಕ ಸಂಪನ್ಮೂಲ, ಯುರೇನಿಯಂ, ಮರದ ದಿಮ್ಮಿ, ಕಚ್ಚಾ ತೈಲ, ವಜ್ರಗಳು, ಚಿನ್ನ ಮತ್ತು ಹೈಡ್ರೋಪವರ್ ಖನಿಜ ಹೊಂದಿದೆ. ಆದರೂ ಜಗತ್ತಿನ ಬಡ ದೇಶಗಳಲ್ಲಿರುವುದು ಆಶ್ಚರ್ಯಕರವಾಗಿದೆ.

3. ನೈಜರ್
 

3. ನೈಜರ್

ಜಿಡಿಪಿ ತಲಾದಾಯ: 358.96 ಡಾಲರ್
ದೇಶದ ಜಿಡಿಪಿ: 7,142,951,342 ಡಾಲರ್
ಜನಸಂಖ್ಯೆ: 19,899,000
ಸರ್ಕಾರ ವಿಧ: ಅಧ್ಯಕ್ಷೀಯ ಸರ್ಕಾರ

ನೈಜರ್ ಪಶ್ಚಿಮ ಆಫ್ರಿಕಾದ ನೆಲಾವೃತ್ತವಾದ ಗಣರಾಜ್ಯ. ವಿಶ್ವದ ಬಡ ರಾಷ್ಟ್ರಗಳ ಸಾಲಿನಲ್ಲಿ ನೈಜರ್ ಮೂರನೇ ಸ್ಥಾನದಲ್ಲಿದೆ.

4. ಮಲಾವಿ

4. ಮಲಾವಿ

ಜಿಡಿಪಿ ತಲಾದಾಯ: 381.37 ಡಾಲರ್
ದೇಶದ ಜಿಡಿಪಿ: 6,565,382,259 ಡಾಲರ್
ಜನಸಂಖ್ಯೆ: 17,215,000
ಸರ್ಕಾರ ವಿಧ: ಅಧ್ಯಕ್ಷೀಯ ಸರ್ಕಾರ

ಮಲಾವಿ ಅಗ್ನೇಯ ಆಫ್ರಿಕಾ ದೇಶವಾಗಿದ್ದು, ಜಗತ್ತಿನ ಅತಿ ಬಡ ರಾಷ್ಟ್ರ ಎನಿಸಿದೆ. ಆಫ್ರಿಕಾದ ಅತಿ ಚಿಕ್ಕ ಜಿಡಿಪಿ ಹೊಂದಿದ ದೇಶವಾಗಿದ್ದು, ಶಿಶು ಮರಣ ದರ ಹೆಚ್ಚಿದೆ. ತುಂಬಾ ಕಡಿಮೆ ಜೀವಿತಾವಧಿ ಹೊಂದಿರುವ ಈ ದೇಶದ ಜೀವನಶೈಲಿ ತೀರಾ ಕೆಳಮಟ್ಟದಲ್ಲಿದೆ.

5. ಮಡಗಾಸ್ಕರ್

5. ಮಡಗಾಸ್ಕರ್

ಜಿಡಿಪಿ ತಲಾದಾಯ: 411.82 ಡಾಲರ್
ದೇಶದ ಜಿಡಿಪಿ: 9,980,522,718 ಡಾಲರ್
ಜನಸಂಖ್ಯೆ: 24,235,000
ಸರ್ಕಾರ ವಿಧ: ರಿಪಬ್ಲಿಕ್

ಮಡಗಾಸ್ಕರ್ ಮಹಾಸಾಗರದಲ್ಲಿರುವ ಸುಂದರ ದ್ವೀಪ ದೇಶ. ಆರ್ಥಿಕ ದೌಬರ್ಲ, ಕಡಿಮೆ ಗುಣಮಟ್ಟದ ಜೀವನಶೈಲಿ, ರಾಜಕೀಯ ಅರಾಜಕತೆ ದೇಶದ ಬಡತನಕ್ಕೆ ಕಾರಣವಾಗಿದೆ.

6. ಗಾಂಬಿಯಾ

6. ಗಾಂಬಿಯಾ

ಜಿಡಿಪಿ ತಲಾದಾಯ: 441.29 ಡಾಲರ್
ದೇಶದ ಜಿಡಿಪಿ: 850,903,179 ಡಾಲರ್
ಜನಸಂಖ್ಯೆ: 1,991,000
ಸರ್ಕಾರ ವಿಧ: ರಿಪಬ್ಲಿಕ್

ಗಾಂಬಿಯಾ ಪಶ್ಚಿಮ ಆಫ್ರಿಕಾದ ಚಿಕ್ಕ ದೇಶ. ಈ ದೇಶ ಪ್ರವಾಸೋದ್ಯಮ, ಕೃಷಿ ಮತ್ತು ಮೀನುಗಾರಿಕೆ ಆಧರಿಸಿದೆ. ಗಾಂಬಿಯಾ ಅತ್ಯಂತ ಕಡಿಮೆ ವಾರ್ಷಿಕ ಆದಾಯ ಹೊಂದಿದ್ದು, ಅಂತಾರಾಷ್ಟ್ರೀಯ ಬಡತನ ರೇಖೆಗಿಂತ ಕೆಳಗಿದೆ.

7. ಲಿಬೇರಿಯಾ

7. ಲಿಬೇರಿಯಾ

ಜಿಡಿಪಿ ತಲಾದಾಯ: 455.87 ಡಾಲರ್
ದೇಶದ ಜಿಡಿಪಿ: 2,053,000,000 ಡಾಲರ್
ಜನಸಂಖ್ಯೆ: 4,503,000
ಸರ್ಕಾರ ವಿಧ: ರಿಪಬ್ಲಿಕ್

ಪಶ್ಚಿಮ ಆಫ್ರಿಕಾದ ದೇಶವಾಗಿರುವ ಲಿಬೇರಿಯಾ ಸತತ ನಾಗರಿಕ ಯುದ್ದಗಳಿಗೆ ಸಿಲುಕಿ ಇದರ ಆರ್ಥಿಕತೆ ದ್ವಂಸವಾಗಿದೆ.

8. ದಿ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ದಿ ಕಾಂಗೋ

8. ದಿ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ದಿ ಕಾಂಗೋ

ಜಿಡಿಪಿ ತಲಾದಾಯ: 456.05 ಡಾಲರ್
ದೇಶದ ಜಿಡಿಪಿ: 35,237,742,278 ಡಾಲರ್
ಜನಸಂಖ್ಯೆ: 77,267,000
ಸರ್ಕಾರ ವಿಧ: ರಿಪಬ್ಲಿಕ್
ವಿಶ್ವದ ಬಡ ದೇಶಗಳ ಪಟ್ಟಿಯಲ್ಲಿ ಸೇರಿರುವ ಪ್ರಜಾಸತ್ತಾತ್ಮಕ ಕಾಂಗೋ ಗಣರಾಜ್ಯ ಸೆಟ್ರಲ್ ಆಫ್ರಿಕನ್ ದೇಶ.ಕಾಂಗೋ ನೈಸರ್ಗಿಕ ಸಂಪನ್ಮೂಲಗಳ ಅತ್ಯಂತ ಸಮೃದ್ಧವಾಗಿದೆ. ಆದರೆ ರಾಜಕೀಯ ಅಸ್ಥಿರತೆ, ಮೂಲಸೌಕರ್ಯ, ಭ್ರಷ್ಟಾಚಾರ ಸಮಸ್ಯೆಗಳಿಂದಾಗಿ ಅಸ್ಥಿರವಾಗಿದೆ.

9. ಮೊಜಾಂಬಿಕ್

9. ಮೊಜಾಂಬಿಕ್

ಜಿಡಿಪಿ ತಲಾದಾಯ: 525.01 ಡಾಲರ್
ದೇಶದ ಜಿಡಿಪಿ: 14,688,606,238 ಡಾಲರ್
ಜನಸಂಖ್ಯೆ: 27,978,000
ಸರ್ಕಾರ ವಿಧ: ರಿಪಬ್ಲಿಕ್

10. ಗಿನಿ

10. ಗಿನಿ

ಜಿಡಿಪಿ ತಲಾದಾಯ: 531.32 ಡಾಲರ್
ದೇಶದ ಜಿಡಿಪಿ: 6,699,203,543 ಡಾಲರ್
ಜನಸಂಖ್ಯೆ: 12,609,000
ಸರ್ಕಾರ ವಿಧ: ರಿಪಬ್ಲಿಕ್

11. ಟೊಗೊ

11. ಟೊಗೊ

ಜಿಡಿಪಿ ತಲಾದಾಯ: 547.97 ಡಾಲರ್

ದೇಶದ ಜಿಡಿಪಿ: 4,002,723,817 ಡಾಲರ್
ಜನಸಂಖ್ಯೆ: 7,305,000
ಸರ್ಕಾರ ವಿಧ: ರಿಪಬ್ಲಿಕ್

12. ಸೊಮಾಲಿಯಾ

12. ಸೊಮಾಲಿಯಾ

ಜಿಡಿಪಿ ತಲಾದಾಯ: 551.86 ಡಾಲರ್

ದೇಶದ ಜಿಡಿಪಿ: 5,953,000,000 ಡಾಲರ್
ಜನಸಂಖ್ಯೆ: 10,787,000
ಸರ್ಕಾರ ವಿಧ: ರಿಪಬ್ಲಿಕ್

13. ಗಿನಿ ಬಿಸ್ಸಾವ್

13. ಗಿನಿ ಬಿಸ್ಸಾವ್

ಜಿಡಿಪಿ ತಲಾದಾಯ: 573.03 ಡಾಲರ್
ದೇಶದ ಜಿಡಿಪಿ: 1,056,851,008 ಡಾಲರ್
ಜನಸಂಖ್ಯೆ: 11,844,000
ಸರ್ಕಾರ ವಿಧ: ರಿಪಬ್ಲಿಕ್

14. ಅಫ್ಘಾನಿಸ್ತಾನ

14. ಅಫ್ಘಾನಿಸ್ತಾನ

ಜಿಡಿಪಿ ತಲಾದಾಯ: 590.27 ಡಾಲರ್
ದೇಶದ ಜಿಡಿಪಿ: 20,038,215,159 ಡಾಲರ್
ಜನಸಂಖ್ಯೆ: 2,527,000
ಸರ್ಕಾರ ವಿಧ: ರಿಪಬ್ಲಿಕ್

15. ಬುರ್ಕಿನಾ ಫಾಸೊ

15. ಬುರ್ಕಿನಾ ಫಾಸೊ

ಜಿಡಿಪಿ ತಲಾದಾಯ: 613.04 ಡಾಲರ್

ದೇಶದ ಜಿಡಿಪಿ: 12,542,221,942 ಡಾಲರ್
ಜನಸಂಖ್ಯೆ: 18,106,000
ಸರ್ಕಾರ ವಿಧ: ರಿಪಬ್ಲಿಕ್

16. ಇಥಿಯೋಪಿಯ

16. ಇಥಿಯೋಪಿಯ

ಜಿಡಿಪಿ ತಲಾದಾಯ: 619.14 ಡಾಲರ್
ದೇಶದ ಜಿಡಿಪಿ: 61,537,143,095 ಡಾಲರ್
ಜನಸಂಖ್ಯೆ: 99,391,000
ಸರ್ಕಾರ ವಿಧ: ಪೆಢರಲ್ ರಿಪಬ್ಲಿಕ್

English summary

The Poorest Countries in the World

The country can be configured rich and poor with its gross domestic product per capita (GDP per capita), employment rate, literacy rate, purchasing power parity (PPP) and many other parameters.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X