For Quick Alerts
ALLOW NOTIFICATIONS  
For Daily Alerts

ಎಚ್1- ಬಿ ವೀಸಾ ಎಫೆಕ್ಟ್: ಐ.ಟಿ ಕ್ಷೇತ್ರಕ್ಕೆ 22 ಸಾವಿರ ಕೋಟಿ ನಷ್ಟ

ಅಮೆರಿಕಾಕ್ಕೆ ಹೋಗಲು ವರವಾಗಿದ್ದ ಎಚ್‌1ಬಿ ವೀಸಾ ಮಸೂದೆಯನ್ನು ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಅಮೆರಿಕ ಸಂಸತ್ತಿನಲ್ಲಿ ಮರು ಮಂಡಿಸಿರುವುದು ಮಾಹಿತಿ ತಂತ್ರಜ್ಙಾನ ಕ್ಷೇತ್ರದ ಮೇಲೆ ಭಾರೀ ಪರಿಣಾಮ ಬೀರಿದೆ.

By Siddu
|

ಅಮೆರಿಕಾಕ್ಕೆ ಹೋಗಲು ವರವಾಗಿದ್ದ ಎಚ್‌1ಬಿ ವೀಸಾ ಮಸೂದೆಯನ್ನು ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಅಮೆರಿಕ ಸಂಸತ್ತಿನಲ್ಲಿ ಮರು ಮಂಡಿಸಿರುವುದು ಮಾಹಿತಿ ತಂತ್ರಜ್ಙಾನ ಕ್ಷೇತ್ರದ ಮೇಲೆ ಭಾರೀ ಪರಿಣಾಮ ಬೀರಿದೆ. ಟ್ರಂಪ್ ಹೊಸ ನೀತಿ ಭಾರತೀಯ ಐಟಿ ರಂಗಕ್ಕೆ ಭೀತಿ!

ಷೇರು ಮೌಲ್ಯ ಕುಸಿತ

ಷೇರು ಮೌಲ್ಯ ಕುಸಿತ

ಬಿಎಸ್ಇ ಐ.ಟಿ ಸೂಚ್ಯಂಕ ಶೇ. 2.5ರಷ್ಟು ಕುಸಿತ ಕಂಡು 9,880 ಅಂಶಗಳಲ್ಲಿ ಅಂತ್ಯ ಕಂಡಿದೆ. ಇನ್ಫೊಸಿಸ್‌, ವಿಪ್ರೊ, ಎಚ್‌ಸಿಎಲ್‌ ಟೆಕ್‌ ಒಟ್ಟು ರೂ. 22,000 ಕೋಟಿ ಮಾರುಕಟ್ಟೆ ಮೌಲ್ಯ ನಷ್ಟ ಅನುಭವಿಸಿವೆ.
ದೇಶದ ಪ್ರಮುಖ ಐಟಿ ಕಂಪೆನಿಗಳಾದ ಇನ್ಫೊಸಿಸ್‌ ಷೇರುಗಳ ಮೌಲ್ಯ ಶೇ. 2.5, ಟಿಸಿಎಸ್ ಶೇ. 2, ಟೆಕ್‌ ಮಹೀಂದ್ರ ಶೇ. 3.80, ಹೆಕ್ಸಾವೇರ್‌ ಟೆಕ್ನಾಲಜೀಸ್‌ ಶೇ 3.73, ಎಚ್‌ಸಿಎಲ್‌ ಟೆಕ್‌ ಶೇ. 3.5 ಷೇರುಗಳ ಮೌಲ್ಯ ಕುಸಿತ ಕಂಡಿವೆ.

ಎಚ್‌1ಬಿ ವೀಸಾ ನಿರ್ಬಂಧ

ಎಚ್‌1ಬಿ ವೀಸಾ ನಿರ್ಬಂಧ

ಅಮೆರಿಕಾದ ಸ್ಥಳೀಯರಿಗೆ ನೌಕರಿ ನೀಡುವ ಉದ್ದೇಶದಿಂದ ಎಚ್‌1ಬಿ ವೀಸಾ ಮೇಲೆ ನಿರ್ಬಂಧ ಹಾಕಲು ಅಮೆರಿಕದ ಹೊಸ ಸರ್ಕಾರ ಮುಂದಾಗಿದ್ದು, ಈ ಭೀತಿಯಿಂದ ದೇಶದ ಪ್ರಮುಖ ಐ.ಟಿ ಕಂಪೆನಿಗಳ ಷೇರುಗಳು ಭಾರಿ ಕುಸಿತ ಕಂಡಿವೆ.

ಐಟಿ ಸೇವಾ ಕ್ಷೇತ್ರ ಆತಂಕ

ಐಟಿ ಸೇವಾ ಕ್ಷೇತ್ರ ಆತಂಕ

ವೀಸಾ ನೀತಿಯ ಹಿನ್ನೆಲೆಯಲ್ಲಿ ಅಮೆರಿಕಾದ ಸ್ಥಳೀಯರಿಗೆ ಮಾತ್ರ ಉದ್ಯೋಗ ಯೋಜನೆಗಳನ್ನು ಜಾರಿಗೊಳಿಸಿದರೆ ಟಿಸಿಎಸ್, ಇನ್ಫೋಸಿಸ್ ಹಾಗೂ ವಿಪ್ರೋಗೆ ಸೇರಿದಂತೆ ದೇಶದ ಐಟಿ ಕಂಪನಿಗಳ ಮೇಲೆ ಭಾರಿ ಹೊಡೆತ ಬೀಳಲಿದೆ. ಅಮೆರಿಕಕ್ಕೆ ಹೋಗಲು ವರವಾಗಿದ್ದ ಎಚ್1- ಬಿ ವೀಸಾವನ್ನು ತೆಗೆದು ಹಾಕಿದಲ್ಲಿ ಸುಮಾರು 150 ಬಿಲಿಯನ್ ಡಾಲರ್ ಐಟಿ ಸೇವಾ ಕ್ಷೇತ್ರ ಆತಂಕ ಎದುರಿಸಲಿದೆ. 2014-15ರ ಅವಧಿಯಲ್ಲಿ ಟಿಸಿಎಸ್, ವಿಪ್ರೋ, ಇನ್ಫೋಸಿಸ್ ಕಂಪೆನಿಗಳು ಎಚ್1-ಬಿ ವೀಸಾದ ಅಡಿಯಲ್ಲಿ ಒಟ್ಟು 86 ಸಾವಿರದಷ್ಟು ಸಾಪ್ಟ್ವೇರ್ ಉದ್ಯೋಗಿಗಳನ್ನು ಅಮೆರಿಕಕ್ಕೆ ಕಳುಹಿಸಿತ್ತು.

Read more about: india donald trump usa tcs infosys
English summary

H-1B Visa Concerns: Top IT Companies Lose 22,000 Crores

Shares of information technology companies such as HCL Technologies, Infosys, Wipro, TCS, Tech Mahindra, Mindtree, Persistent Systems and Mphasis came under heavy selling pressure today after a bill backing key changes in the H-1B programme was reintroduced in the US.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X