For Quick Alerts
ALLOW NOTIFICATIONS  
For Daily Alerts

ಇನ್ನುಮುಂದೆ ಆನ್ಲೈನ್ ನಲ್ಲಿ ಪಿಂಚಣಿ ಪ್ರಕರಣಗಳ ವಿವರ ಕಡ್ಡಾಯ

ವ್ಯವಹಾರದಲ್ಲಿ ಪಾರದರ್ಶಕತೆ ತರುವ ಮತ್ತು ಅನಗತ್ಯ ವಿಳಂಬ ನೀತಿಯನ್ನು ತಡೆಯುವ ಉದ್ದೇಶದಿಂದ ಎಲ್ಲ ಪಿಂಚಣಿ ಸಂಬಂಧಿತ ಪ್ರಕರಣಗಳನ್ನು ಕಡ್ಡಾಯವಾಗಿ ಆನ್ಲೈನ್ ವ್ಯವಸ್ಥೆಯೊಳಗೆ ತರುವಂತೆ ಸರ್ಕಾರ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದೆ.

By Siddu
|

ವ್ಯವಹಾರದಲ್ಲಿ ಪಾರದರ್ಶಕತೆ ತರುವ ಮತ್ತು ಅನಗತ್ಯ ವಿಳಂಬ ನೀತಿಯನ್ನು ತಡೆಯುವ ಉದ್ದೇಶದಿಂದ ಎಲ್ಲ ಪಿಂಚಣಿ ಸಂಬಂಧಿತ ಪ್ರಕರಣಗಳನ್ನು ಕಡ್ಡಾಯವಾಗಿ ಆನ್ಲೈನ್ ವ್ಯವಸ್ಥೆಯೊಳಗೆ ತರುವಂತೆ ಕೇಂದ್ರ ಸರ್ಕಾರ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದೆ.

 

ಕೇಂದ್ರದ ಈ ಕ್ರಮದಿಂದ ನಿವೃತ್ತಿ ನಂತರ ಸೂಕ್ತ ಸಮಯಕ್ಕೆ ಪಿಂಚಣಿ ಅನುದಾನ ಪ್ರಯೋಜನಗಳು ಸಿಗಲಿದೆ.

ವ್ಯವಹಾರಗಳಲ್ಲಿ ಕಟ್ಟುನಿಟ್ಟಿನ ಪಾರದರ್ಶಕತೆ, ವಿಳಂಬ ನೀತಿ, ಭ್ರಷ್ಟಾಚಾರ ತಡೆಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳ ಅನುಷ್ಟಾನಕ್ಕೆ ಮುಂದಾಗುತ್ತಿದೆ.

ಕೇಂದ್ರ ಸರ್ಕಾರ ಸೂಚನೆ

ಕೇಂದ್ರ ಸರ್ಕಾರ ಸೂಚನೆ

ನೌಕರರ ಪಿಂಚಣಿ ಸಂಬಂಧಿತ ಎಲ್ಲ ವಿವರಗಳನ್ನೂ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ ಸಚಿವಾಲಯ ಹಾಗೂ ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳಿಗೆ ಸೂಚಿಸಿದೆ.

ಪಿಂಚಣಿ ಸಚಿವಾಲಯ ಅಸಮಾಧಾನ

ಪಿಂಚಣಿ ಸಚಿವಾಲಯ ಅಸಮಾಧಾನ

ಕಟ್ಟುನಿಟ್ಟಿನ ಮಾರ್ಗಸೂಚಿ ಮತ್ತು ನಿರ್ದೇಶನಗಳಿದ್ದರೂ ಹೆಚ್ಚು ಸಂಖ್ಯೆಯ ಕಾರ್ಮಿಕರಿಗೆ ನಿವೃತ್ತಿ ಪ್ರಯೋಜನಗಳು ಮತ್ತು ಪಿಂಚಣಿ (ಪಿಪಿಒ) ಸೂಕ್ತ ಸಮಯಕ್ಕೆ ದೊರಕುತ್ತಿಲ್ಲ ಎಂದು ಪಿಂಚಣಿ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಭವಿಷ್ಯ ಆನ್ಲೈನ್
 

ಭವಿಷ್ಯ ಆನ್ಲೈನ್

ಕಾರ್ಮಿಕರಿಗೆ ಪಿಂಚಣಿ ಪ್ರಯೋಜನಗಳನ್ನು ಒದಗಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ಭವಿಷ್ಯ ಎಂಬ ಆನ್ಲೈನ್ ಕಾರ್ಯನಿರತವಾಗಿದೆ. ಈ ಅಂತರ್ಜಾಲ ಮೂಲಕ ಅಧಿಕಾರಿಗಳು ಹಾಗೂ ನಿವೃತ್ತ ನೌಕರರು ವಿವರಗಳನ್ನು ಪರಿಶೀಲನೆ ಮಾಡಬಹುದು.

ಜನವರಿ 1ರಿಂದ ದಾಖಲಿಕರಣ

ಜನವರಿ 1ರಿಂದ ದಾಖಲಿಕರಣ

ಪಿಂಚಣಿ ಯೋಜನೆಗಳ ಪ್ರಕ್ರಿಯೆಗಳನ್ನು ‘ಭವಿಷ್ಯ' ಅಂತರ್ಜಾಲ ಮೂಲಕ ನಡೆಸುವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ. ನಿವೃತ್ತಿ ಆಗಲಿರುವ ನೌಕರರಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನೂ ಜನವರಿ 1ರಿಂದ ಭವಿಷ್ಯ ದಲ್ಲಿ ದಾಖಲಿಸಿಬೇಕು. ಇದರ ಮೂಲಕ ಪಿಂಚಣಿ ಪ್ರಕರಣದಲ್ಲಿ ವಿಳಂಬವಾಗಬಾರದು ಎಂದು ತಿಳಿಸಿದೆ.

English summary

Go online, cut delays in pension cases

The Centre has asked secretaries of all departments to ensure that all pension-related cases are mandatorily processed through an online system in order to check delays and bring in more transparency.
Story first published: Tuesday, January 10, 2017, 15:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X