For Quick Alerts
ALLOW NOTIFICATIONS  
For Daily Alerts

ಭಾರತದ ಆರ್ಥಿಕತೆ ಸದೃಢವಾಗಿದೆ: ವಿಶ್ವಬ್ಯಾಂಕ್

ನೋಟು ರದ್ದತಿ ನಂತರವೂ ಭಾರತದ ಆರ್ಥಿಕತೆ ದೃಢವಾಗಿದೆ ಎಂದು ವಿಶ್ವಬ್ಯಾಂಕ್ ತನ್ನ ವಿಶ್ವ ಆರ್ಥಿಕ ವರದಿಯಲ್ಲಿ ತಿಳಿಸಿದೆ.

By Siddu
|

ನೋಟು ರದ್ದತಿ ನಂತರವೂ ಭಾರತದ ಆರ್ಥಿಕತೆ ದೃಢವಾಗಿದೆ ಎಂದು ವಿಶ್ವಬ್ಯಾಂಕ್ ತನ್ನ ವಿಶ್ವ ಆರ್ಥಿಕ ವರದಿಯಲ್ಲಿ ತಿಳಿಸಿದೆ.

ಅನಾಣ್ಯೀಕರಣದ ನಂತರ ದೇಶದ ಜಿಡಿಪಿ ದರ 7.6 ರಿಂದ 7ಕ್ಕೆ ಕುಸಿತ ಕಂಡಿದ್ದರು, ಮುಂದಿನ ದಿನಗಳಲ್ಲಿ ಚೇತರಿಕೆ ಕಾಣಲಿದೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯ ಪಟ್ಟಿದೆ.

ಭಾರತದ ಆರ್ಥಿಕತೆ ಸದೃಢವಾಗಿದೆ: ವಿಶ್ವಬ್ಯಾಂಕ್

ಪ್ರಧಾನಿ ಮೋದಿಯವರ ನೋಟು ನಿಷೇಧ ಕ್ರಮ ವಿಶ್ವಬ್ಯಾಂಕ್ ಶ್ಲಾಘಿಸಿದ್ದು, ಭಾರತಕ್ಕೆ ಮುಂದಿನ ದಿನಗಳಲ್ಲಿ ಲಾಭವಾಗಲಿದೆ. ಪ್ರಸ್ತುತ ನೋಟು ರದ್ದತಿಯಿಂದಾಗಿ ಆರ್ಥಿಕ ಅಭಿವೃದ್ಧಿಯಲ್ಲಿ ಸಲ್ಪ ಹಿನ್ನೆಡೆಯಾದರೂ ಮುಂದಿನ ದಿನಗಳಲ್ಲಿ ಶೇ.7.8 ಪ್ರಗತಿ ಸಾಧಿಸುವುದರ ಮೂಲಕ ಆರ್ಥಿಕ ಚೇತರಿಕೆ ಆಗಲಿದೆ ಎಂದು ವಿಶ್ವಬ್ಯಾಂಕ್ ವರದಿ ಮಾಡಿದೆ.

ಭಾರತದ ಆರ್ಥಿಕತೆ ವಿಶ್ವದಲ್ಲೇ ಅತಿ ವೇಗದಲ್ಲಿ ಬೆಳೆಯುತ್ತಿದ್ದು ಏಷಿಯಾದ ಹಾಟ್ ಸ್ಪಾಟ್ ಆಗಿದೆ. ನೋಟು ರದ್ದತಿಯಿಂದ ದೇಶದ ಆರ್ಥಿಕತೆಯಲ್ಲಿ ಶೇ.0.6ರಷ್ಟು ಹಿನ್ನಡೆಯಾದರೂ ದೀರ್ಘಾವಧಿಯ ಧನಾತ್ಮಕ ಪರಿಣಾಮ ಬೀರಲಿದೆ. ಭಾರತ ಆರ್ಥಿಕ ಸುಧಾರಣೆಗಾಗಿ ಉತ್ತಮ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದರಿಂದ ದೇಶದ ಉತ್ಪಾದನೆ ಹಾಗೂ ಪೂರೈಕೆ ಪ್ರಮಾಣ ಹೆಚ್ಚಲಿದೆ. ಬ್ಯಾಂಕುಗಳ ಹಣದ ಹರಿವಿನ ಪ್ರಮಾಣ ಕೂಡ ಹೆಚ್ಚಾಗಿದ್ದು, ಸಾಲದ ಮೇಲಿನ ಬಡ್ಡಿ ದರವೂ ಕಡಿಮೆಯಾಗಿದೆ.

English summary

India's GDP growth to remain strong: World Bank

Describing South Asia as a global growth hotspot, the World Bank has said India's GDP growth will remain strong at 7.6 percent in 2016 and 7.7 percent in 2017.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X