For Quick Alerts
ALLOW NOTIFICATIONS  
For Daily Alerts

ನೋಟು ರದ್ದತಿ ಎಫೆಕ್ಟ್: ಮ್ಯೂಚುವಲ್‌ ಫಂಡ್ ಹೂಡಿಕೆಗಳಲ್ಲಿ ಹೆಚ್ಚಳ

ನೋಟು ರದ್ದತಿ ನಡುವೆಯೂ ದೇಶದ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ಆಸ್ತಿ ನಿರ್ವಹಣೆಯು 2016ರಲ್ಲಿ ರೂ. 3.5 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದ್ದು, ಇದರಿಂದ ಒಟ್ಟು ಆಸ್ತಿ ಮೌಲ್ಯ ರೂ. 17 ಲಕ್ಷ ಕೋಟಿಗಳಿಗೆ ತಲುಪಿದೆ.

By Siddu
|

ನೋಟು ರದ್ದತಿ ನಡುವೆಯೂ ದೇಶದ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ಆಸ್ತಿ ನಿರ್ವಹಣೆಯು 2016ರಲ್ಲಿ ರೂ. 3.5 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದ್ದು, ಇದರಿಂದ ಒಟ್ಟು ಆಸ್ತಿ ಮೌಲ್ಯ ರೂ. 17 ಲಕ್ಷ ಕೋಟಿಗಳಿಗೆ ತಲುಪಿದೆ.

ಅನಾಣ್ಯೀಕರಣದಿಂದ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದರೂ ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಆಸ್ತಿ ನಿರ್ವಹಣೆಗೆ ಸಂಬಂಧಪಟ್ಟಂತೆ ಇದು ದಾಖಲೆಯ ಮೊತ್ತವಾಗಿದೆ. ಸತತ ನಾಲ್ಕು ವರ್ಷಗಳಿಂದಲೂ ಮ್ಯೂಚುವಲ್ ಫಂಡ್ ಉದ್ಯಮದ ಆಸ್ತಿ ನಿರ್ವಹಣೆ ಹೆಚ್ಚಾಗುತ್ತಲೇ ಸಾಗಿದೆ.

ನೋಟು ರದ್ದತಿ ಎಫೆಕ್ಟ್: ಮ್ಯೂಚುವಲ್‌ ಫಂಡ್ ಹೂಡಿಕೆಗಳಲ್ಲಿ ಹೆಚ್ಚಳ

ಹೂಡಿಕೆದಾರರು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಹೆಚ್ಚು ಆಸಕ್ತಿ ತೋರುತ್ತಿರುವುದು ಸಂಸ್ಥೆಗಳ ಆಸ್ತಿ ಮೌಲ್ಯದಲ್ಲಿ ಏರಿಕೆಗೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಬ್ಯಾಂಕುಗಳಿಗೆ ನಗದು ಒಳಹರಿವು ಪ್ರಮಾಣ ಹೆಚ್ಚಾದಂತೆ ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಪ್ರಮಾಣದಲ್ಲಿಯೂ ಏರಿಕೆ ಕಂಡುಬಂದಿದೆ.

ನೋಟು ರದ್ದತಿ ಎಫೆಕ್ಟ್: ಮ್ಯೂಚುವಲ್‌ ಫಂಡ್ ಹೂಡಿಕೆಗಳಲ್ಲಿ ಹೆಚ್ಚಳ

ನೋಟು ರದ್ದತಿ ಪರಿಣಾಮ:
ಹೆಚ್ಚು ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ್ದರಿಂದ ಮ್ಯೂಚುವಲ್‌ ಫಂಡ್ ಉದ್ಯಮಕ್ಕೆ ಅನುಕೂಲವಾಗಿದ್ದು, ನಗದನ್ನು ಆರ್ಥಿಕ ಹೂಡಿಕೆಯಾಗಿ ಪರಿವರ್ತಿಸುವ ಪ್ರಕ್ರಿಯೆ ಹೆಚ್ಚಾಗಿದೆ. ಇದರಿಂದ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಹೆಚ್ಚಾಗುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. 2017ರಲ್ಲಿ ಮ್ಯೂಚುವಲ್‌ ಫಂಡ್ ಉದ್ಯಮ ಹೆಚ್ಚಿನ ಬಂಡವಾಳ ಆಕರ್ಷಿಸಲಿದ್ದು, ಉತ್ತಮ ಪ್ರಗತಿ ಕಾಣುವ ನಿರೀಕ್ಷೆ ಇದೆ ಎನ್ನಲಾಗಿದೆ.

English summary

An Increased in Mutual Fund Investments

An Increased in Mutual Fund Investments.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X