For Quick Alerts
ALLOW NOTIFICATIONS  
For Daily Alerts

ಅಂಬಾನಿ ಹೊಸ ಸಾಹಸ ಜಿಯೊ ಮೇಲೆ 4.4 ಬಿಲಿಯನ್ ಡಾಲರ್ ಹೂಡಿಕೆ!

ಟೆಲಿಕಾಂ ರಂಗದ ದಿಗ್ಗಜ ಕಂಪನಿ ರಿಲಯನ್ಸ್ ಇಂಡಸ್ಟ್ರಿಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಇನ್ನೊಂದು ಸಾಹಸಕ್ಕೆ ಮುಂದಾಗಿದ್ದು, ರಿಲಯನ್ಸ್ ಜಿಯೊ ಭಾರಿ ಸದ್ದು ಮಾಡುತ್ತಿದೆ.

By Siddu
|

ಟೆಲಿಕಾಂ ರಂಗದ ದಿಗ್ಗಜ ಕಂಪನಿ ರಿಲಯನ್ಸ್ ಇಂಡಸ್ಟ್ರಿಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಇನ್ನೊಂದು ಸಾಹಸಕ್ಕೆ ಮುಂದಾಗಿದ್ದು, ಸುಮಾರು 4.4 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದ್ದಾರೆ.

 

ಮುಕೇಶ್ ಅಂಬಾನಿ ಒಡೆತನದ ಜಿಯೋ ಆಫರ್ ಗಳು ಟೆಲಿಕಾಂ ರಂಗದಲ್ಲಿ ಸಖತ್ ಸುದ್ದಿ ಮಾಡುತ್ತಲಿದ್ದು, ದರ ಸಮರದ ಮೂಲಕ ಇತರೆ ಕಂಪನಿಗಳಿಗೆ ನಡುಕ ಹುಟ್ಟಿಸಿವೆ. ಇದೇ ಹಾದಿಯಲ್ಲಿ ಸಾಗಲು ಮತ್ತೆ ಜಿಯೋ ಮೇಲೆ ಸುಮಾರು 4.4 ಬಿಲಿಯನ್ ಡಾಲರ್ ಹೂಡಿಕೆಗೆ ಮುಕೇಶ್ ಅಂಬಾನಿ ಮುಂದಾಗಿದ್ದಾರೆ.

 
ಅಂಬಾನಿ ಹೊಸ ಸಾಹಸ ಜಿಯೊ ಮೇಲೆ 4.4 ಬಿಲಿಯನ್ ಡಾಲರ್ ಹೂಡಿಕೆ!

ದೊಡ್ಡ ಮಟ್ಟದಲ್ಲಿ 4G ಸೇವೆಯನ್ನು ಆರಂಭಿಸಲು ಸುಮಾರು 25 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದ ಮುಕೇಶ್ ಈ ಬಾರಿ ತಮ್ಮ ಮಾಲೀಕತ್ವದ ಜಿಯೋ ಸೇವೆಯನ್ನು ಸುಧಾರಿಸುವ ಸಲುವಾಗಿ ದೇಶದಲ್ಲಿ ಮೊದಲ ಬಾರಿಗೆ 4.4 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಚಿಂತನೆ ನಡೆಸಿದ್ದಾರೆ.

ಜಿಯೋ ಸೇವೆ ಆರಂಭಿಸಿ 4 ತಿಂಗಳು ಕಳೆಯುತ್ತಿದ್ದು, ಉಚಿತ ವೆಲ್ ಕಮ್ ಸೇವೆಗಳನ್ನು ಮಾರ್ಚ್ 31, 2017ರ ವರೆಗೆ ಘೋಷಿಸಲಾಗಿದೆ. ಈ ಹಿನ್ನಲೆಯಲ್ಲಿ ಪ್ರತಿ ನಿತ್ಯ ಸುಮಾರು 6 ಲಕ್ಷ ಮಂದಿ ಹೊಸ ಬಳಕೆದಾರರು ಜಿಯೋ ಸೇರುತ್ತಿದ್ದಾರೆ. ಇದುವರೆಗೂ ಇಡೀ ದೇಶದಾದ್ಯಂತ ಸುಮಾರು 72.4 ಮಿಲಿಯನ್ ಮಂದಿ ಜಿಯೋ ಗ್ರಾಹಕರಾಗಿದ್ದು, ಅಲ್ಲದೇ ಈ ಸಂಖ್ಯೆಯೂ ಏರುಗತಿಯಲ್ಲಿ ಸಾಗಿದೆ.

ಅಂಬಾನಿ ಹೊಸ ಸಾಹಸ ಜಿಯೊ ಮೇಲೆ 4.4 ಬಿಲಿಯನ್ ಡಾಲರ್ ಹೂಡಿಕೆ!

English summary

Mukesh Ambani Plows $4.4 Billion More Into Jio To Beat Competition

India's richest man isn't done yet. After plowing $25 billion into starting a national fourth-generation mobile network, billionaire Mukesh Ambani is spending more to boost coverage amid complaints from its largest rival that his free services are hurting competition.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X