For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ 2016-17 ರ ಸಂಕ್ಷಿಪ್ತ ನೋಟ...

ಕೇಂದ್ರ ಬಜೆಟ್ 2017-18 ಮಂಡನೆಯಾಗಲಿರುವ ಸಂದರ್ಭದಲ್ಲಿ ಕಳೆದ 2016-17ರಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ ಕೇಂದ್ರ ಬಜೆಟ್ ನ ಕುರಿತು ಅವಲೋಕನ ಮಾಡಲಾಗಿದೆ.

By Siddu
|

ಕೇಂದ್ರ ಬಜೆಟ್ 2017-18 ಮಂಡನೆಯಾಗಲಿರುವ ಸಂದರ್ಭದಲ್ಲಿ ಕಳೆದ 2016-17ರಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ ಕೇಂದ್ರ ಬಜೆಟ್ ನ ಕುರಿತು ಅವಲೋಕನ ಮಾಡಲಾಗಿದೆ.

 

2016-17ರ ಬಜೆಟ್ ನಲ್ಲಿರುವ ಆರ್ಥಿಕ ಪ್ರಗತಿಯ ಸ್ತಂಭಗಳು, ತುಟ್ಟಿ-ಅಗ್ಗವಾಗಿರುವ ಸರಕುಗಳು, ತೆರಿಗೆ ಮತ್ತು ರಿಯಾಯತಿ, ಏರಿಕೆ ಮತ್ತು ಇಳಿಕೆ ಇತ್ಯಾದಿ ಅಂಶಗಳ ಸಂಕ್ಷಿಪ್ತ ನೋಟ ಇಲ್ಲಿದೆ.

ವಿತ್ತ ಸಚಿವ ಅರುಣ್ ಜೇಟ್ಲಿ ಬಡವರು ಮತ್ತು ರೈತರನ್ನು ಗಮನದಲ್ಲಿಟ್ಟುಕೊಂಡು, ಮಧ್ಯಮ ವರ್ಗದವರಿಗೆ ಲಾಭವಿಲ್ಲದ , ಶ್ರೀಮಂತರಿಂದ ಹೆಚ್ಚು ತೆರಿಗೆ ಸಂಗ್ರಹಿಸುವ ಉದ್ದೇಶದಿಂದ 2016-17ರ ಕೇಂದ್ರ ಆಯವ್ಯಯವನ್ನು 2016 ಫೆಬ್ರವರಿ 29ರಂದು ಮಂಡಿಸಿದ್ದರು.

ಕೇಂದ್ರ ಬಜೆಟ್ 2016-17ರ ಆರ್ಥಿಕ ಪ್ರಗತಿಯ ಆಧಾರ ಸ್ತಂಭಗಳು

ಕೇಂದ್ರ ಬಜೆಟ್ 2016-17ರ ಆರ್ಥಿಕ ಪ್ರಗತಿಯ ಆಧಾರ ಸ್ತಂಭಗಳು

* ಕೃಷಿ, ಗ್ರಾಮೀಣ ಮೂಲಸೌಕರ್ಯ ವೃದ್ಧಿ, ಸಾಮಾಜಿಕ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ, ಕೌಶಲ್ಯ ವೃದ್ಧಿ, ಉದ್ಯೋಗಾವಕಾಶ ಸೃಷ್ಟಿ, ಉದ್ಯಮ ಸ್ನೇಹಿ ನೀತಿ, ಆರ್ಥಿಕ ಶಿಸ್ತು, ತೆರಿಗೆ ಸುಧಾರಣೆ ಮತ್ತು ದೇಶವನ್ನು ಜ್ಞಾನದ ಕೇಂದ್ರವಾಗಿ ರೂಪಿಸುವುದು. ಇವು ಕಳೆದ ಬಾರಿಯ ಬಜೆಟ್ ಪ್ರಮುಖ ಅಂಶಗಳಾಗಿದ್ದವು. 

ಕೇಂದ್ರ ಬಜೆಟ್ 2016-17 ನಲ್ಲಿ ತುಟ್ಟಿ-ಅಗ್ಗ

ಕೇಂದ್ರ ಬಜೆಟ್ 2016-17 ನಲ್ಲಿ ತುಟ್ಟಿ-ಅಗ್ಗ

* ತುಟ್ಟಿ: ತಂಬಾಕು ಉತ್ಪನ್ನಗಳು, ಬ್ರಾಂಡೆಡ್ ಬಟ್ಟೆಗಳು, ಐಷಾರಾಮಿ ಕಾರುಗಳು, ಗುಟ್ಕಾ(ಅಡಿಕೆ ಉತ್ಪನ್ನಗಳು), ಚಿನ್ನಾಭರಣ, ವಜ್ರಾಭರಣ
ಅಗ್ಗ: ಬೀಡಿ, ಮದ್ಯ, ಬೆಳ್ಳಿ ಆಭರಣಗಳು, ಟಿವಿ, ಕಂಪ್ಯೂಟರ್, ರೆಫ್ರೀಜರೇಟರ್, ವಾಷಿಂಗ್‌ಮೆಷಿನ್, ಸೌಂದರ್ಯವರ್ಧಕಗಳು, ಮೊಬೈಲ್, ಟ್ಯಾಬ್ಲೆಟ್ ಗಳು, ಎ.ಸಿ, ಎಲ್.ಇ.ಡಿ.ಬಲ್ಬ್‌ಗಳು, ಪಾದರಕ್ಷೆಗಳು, ಡಯಾಲಿಸಿಸ್ ಯಂತ್ರಗಳ ಮೇಲಿನ ಸುಂಕ ಇಳಿಕೆ.

ತೆರಿಗೆ ಏರಿಕೆ
 

ತೆರಿಗೆ ಏರಿಕೆ

* ಸ್ಟಾರ್ಟ್ ಅಪ್ ಗಳಿಗೆ ಶೇ 100ರಷ್ಟು ತೆರಿಗೆ ವಿನಾಯಿತಿ ಘೋಷಣೆ. ಐಷಾರಾಮಿ ವಸ್ತುಗಳ ಮೇಲೆ ತೆರಿಗೆ ಹೆಚ್ಚಳ.
* ಐಷಾರಾಮಿ ಕಾರುಗಳ ಮೇಲೆ ಶೇ 4 ರಷ್ಟು ಪೆಟ್ರೋಲ್, ಡೀಸೆಲ್ ಸೆಸ್ ಹೆಚ್ಚಳ
* ಐಷಾರಾಮಿ ಸರಕು ಹಾಗೂ ಎಸ್ ಯುವಿ ಕಾರಿನ ಮೇಲೆ ಶೇ1ರಷ್ಟು ತೆರಿಗೆ.
* ಬೀಡಿ ಬಿಟ್ಟು ಎಲ್ಲಾ ತಂಬಾಕು ಉತ್ಪನ್ನಗಳ ಬೆಲೆ ಏರಿಕೆ.
* ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಶೇ 10 ರಿಂದ 15ರಷ್ಟು ಏರಿಕೆ. ಅಂದರೆ, ಸಿಗರೇಟು, ಗುಟ್ಕಾ ಬೆಲೆ ಏರಿಕೆ.
* ಬ್ರ್ಯಾಂಡೆಡ್ ಬಟ್ಟೆಗಳು. ಶರ್ಟು, ಪ್ಯಾಂಟು, ಚೂಡಿದಾರು ಮತ್ತಿತ್ತರ ಡ್ರೆಸ್ ಮೆಟಿರಿಯಲ್ಸ್.
* ಚಿನ್ನಾಭರಣ, ವಜ್ರಗಳು ಮತ್ತಷ್ಟು ದುಬಾರಿ.
* ಜಿಮ್, ಹೊಟೇಲ್ ರೂಮ್, ರೇಡಿಯೋ ಟ್ಯಾಕ್ಸಿ, ಜೀವ ವಿಮೆ.
* ಏಕ್ಸ್ ಪ್ರೆಸ್ ರೈಲು ಹಾಗೂ ವಿಮಾನಯಾನ ಪ್ರಯಾಣ ದರ ಏರಿಕೆ
* ಮಿನರಲ್ ವಾಟರ್, ಸಕ್ಕರೆ ಅಂಶವುಳ್ಳ ಪಾನೀಯ ಬೆಲೆ ದುಬಾರಿ.

ರಿಯಾಯತಿ/ಇಳಿಕೆ

ರಿಯಾಯತಿ/ಇಳಿಕೆ

* 60 ಚದರ ಮೀಟರ್ ತನಕದ ಮನೆ ನಿರ್ಮಾಣದ ಮೇಲೆ ಸೇವಾ ತೆರಿಗೆ ವಿನಾಯಿತಿ.
* ಇಪಿಎಫ್ಒ ನೀಡುವ ಸೇವೆಗಳಿಗೆ ಸೇವಾ ತೆರಿಗೆ ಅನ್ವಯವಾಗುವುದಿಲ್ಲ.
* ಮದ್ಯದ ಮೇಲೆ ಯಾವುದೇ ಅಬಕಾರಿ ಸುಂಕ ಹೆಚ್ಚಳವಿಲ್ಲ.
* ಡಯಾಲಿಸೀಸ್ ಯಂತ್ರಗಳ ಮೇಲಿನ ತೆರಿಗೆ ಇಳಿಕೆ.
* ಸಣ್ಣ ತೆರಿಗೆದಾರರಿಗೆ: ಬಾಡಿಗೆ ಭತ್ಯೆ ಮಿತಿ ವಾರ್ಷಿಕ 24 ಸಾವಿರ ರೂ.ನಿಂದ 60,000ರೂ.ಗೆ ಹೆಚ್ಚಳ.
* 50 ಲಕ್ಷ ರು ಮೌಲ್ಯದ ತನಕ ಮನೆ ಖರೀದಿ ಮಾಡುವವರಿಗೆ 50 ರೂ. ವಿನಾಯಿತಿ

ಬಜೆಟ್ ಸಂಕ್ಷಿಪ್ತ ನೋಟ

ಬಜೆಟ್ ಸಂಕ್ಷಿಪ್ತ ನೋಟ

ವರಮಾನ ಮತ್ತು ಕೊರತೆ - 2015-16 ರ ಹೋಲಿಕೆಯೊಂದಿಗೆ
2016-17ರ ಬಜೆಟ್ ಸಾರಾಂಶ(ಕೋಟಿ ರೂ.ಗಳಲ್ಲಿ)

 2015-162015-162016-17
ವಿವರ ಬಜೆಟ್ ಅಂದಾಜು ಪರಿಷ್ಕೃತ ಅಂದಾಜು ಬಜೆಟ್ ಅಂದಾಜು
ವರಮಾನ ಜಮೆ 11,41,575 12,06,084 13,77,022
ಬಂಡವಾಳ ಜಮೆ 6,35,902 5,79,307 6,01,038
ಒಟ್ಟು ಜಮೆ 17,77,477 17,85,391 19,78,060
ಯೋಜನೇತರ ವೆಚ್ಚ 13,12,200 13,08,194 14,28,050
ಯೋಜನಾ ವೆಚ್ಚ 4,65,277 4,77,197 5,50,010
ಒಟ್ಟು ವೆಚ್ಚ 17,77,477 17,85,391 19,78,060
ವರಮಾನ ಕೊರತೆ 3,94,472 3,41,589 3,54,015
ವಿತ್ತೀಯ ಕೊರತೆ 5,55,649 5,35,090 5,33,904
ಮೂಲ ಕೊರತೆ 99,504 92,469 41,234

English summary

Union Budget 2016-17 brief look ...

Here are few interesting facts and brief look about the Union Budget 2016-17.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X