For Quick Alerts
ALLOW NOTIFICATIONS  
For Daily Alerts

ವಿಜಯ್ ಮಲ್ಯ ಬಾಕಿ ಸಾಲ ವಸೂಲಾತಿಗೆ ಡಿಆರ್‌ಟಿ ಆದೇಶ

ಮದ್ಯದ ದೊರೆ ವಿಜಯ್ ಮಲ್ಯ ಅವರು ಎಸ್‌ಬಿಐ ನೇತೃತ್ವದ ಒಕ್ಕೂಟ ಬ್ಯಾಂಕ್‌ಗಳಿಂದ ಪಡೆದಿದ್ದ ರೂ. 6,203 ಕೋಟಿ ಸಾಲವನ್ನು ಶೇ. 11.5ರ ಬಡ್ಡಿಯೊಂದಿಗೆ ವಸೂಲಾತಿ ಮಾಡುವಂತೆ ಸಾಲ ವಸೂಲಾತಿ ನ್ಯಾಯಾಧಿಕರಣ(ಡಿಆರ್‌ಟಿ) ಆದೇಶ ಹೊರಡಿಸಿದೆ.

|

ಮದ್ಯದ ದೊರೆ ವಿಜಯ್ ಮಲ್ಯ ಅವರು ಎಸ್‌ಬಿಐ ನೇತೃತ್ವದ ಒಕ್ಕೂಟ ಬ್ಯಾಂಕ್‌ಗಳಿಂದ ಪಡೆದಿದ್ದ ರೂ. 6,203 ಕೋಟಿ ಸಾಲವನ್ನು ಶೇ. 11.5ರ ಬಡ್ಡಿಯೊಂದಿಗೆ ವಸೂಲಾತಿ ಮಾಡುವಂತೆ ಸಾಲ ವಸೂಲಾತಿ ನ್ಯಾಯಾಧಿಕರಣ(ಡಿಆರ್‌ಟಿ) ಆದೇಶ ಹೊರಡಿಸಿದೆ.

 

ವಿಜಯ್ ಮಲ್ಯ ಅಧೀನದಲ್ಲಿದ್ದ UHBL, ಕಿಂಗ್‌ಫಿಷರ್‌ ಕಂಪೆನಿಗಳಿಂದ ವಾರ್ಷಿಕ ಬಡ್ಡಿ ಸಮೇತ ಸಾಲ ವಸೂಲಿಗೆ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿಆರ್‌ಟಿ ಆದೇಶ ಪತ್ರದಲ್ಲಿ ತಿಳಿಸಿದೆ.

 
ವಿಜಯ್ ಮಲ್ಯ ಬಾಕಿ ಸಾಲ ವಸೂಲಾತಿಗೆ ಡಿಆರ್‌ಟಿ ಆದೇಶ

20ಕ್ಕೂ ಹೆಚ್ಚು ದೂರುಗಳು ನ್ಯಾಯಾಧಿಕರಣಕ್ಕೆ ಬಂದಿದ್ದು, ಅರ್ಧಕ್ಕೂ ಹೆಚ್ಚು ವಿಜಯ್ ಮಲ್ಯ ವಿರುದ್ಧ ಸಲ್ಲಿಸಲಾಗಿದೆ. 17 ಬ್ಯಾಂಕುಗಳಿಂದ ಬಳಕೆ ಇಲ್ಲದ ವಿಮಾನಗಳ ಮೇಲೆ ಸಾಲ ಪಡೆದು ಬ್ಯಾಂಕುಗಳಿಗೆ ಮಲ್ಯ ವಂಚಿಸಿದ್ದಾರೆ ಎಂದು ಡಿಆರ್‌ಟಿಯ ಉನ್ನತ ಅಧಿಕಾರಿ ಕೆ.ಶ್ರೀನಿವಾಸ್‌ ಹೇಳಿದರು.

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮಲ್ಯರನ್ನು ಬಂಧಿಸಿ ಪಾಸ್‌ಪೋರ್ಟ್‌ ಮುಟ್ಟುಗೋಲು ಮಾಡುವಂತೆ ದೂರನ್ನು ಎಸ್‌ಬಿಐ ಸಲ್ಲಿಸಿತ್ತು. ಬ್ರಿಟಿಷ್ ಉದ್ಯಮ ಡಿಯಾಜಿಯೊ ದಿಂದ ಸ್ವೀಕರಿಸಿದ $ 40 ಮಿಲಿಯನ್ ಕುರಿತು ವಿಜಯ ಮಲ್ಯ ವಿವರವನ್ನು ನೀಡದಿರುವ ಬಗ್ಗೆ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಮತ್ತು ಆರ್ ಎಫ್ ನಾರಿಮನ್ ನ್ಯಾಯಪೀಠ ಅಕ್ಟೋಬರ್ ನಲ್ಲಿ ಪ್ರಶ್ನಿಸಿತ್ತು.

English summary

Vijay Mallya faces DRT heat

The Debt Recovery Tribunal on Thursday ordered the SBI-led consortium of banks to start the process of recovering Rs 6,203 crore, at annual interest rate of 11.5 per cent, from embattled tycoon Vijay Mallya and his companies in the Kingfisher Airlines case.
Story first published: Thursday, January 19, 2017, 17:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X