ಬಿಎಸ್ಇ ಸೀಮಿತ ಐಪಿಒ ಇಂದು ಬಿಡುಗಡೆ
ಬಾಂಬೆ ಸ್ಟಾಕ್ ಎಕ್ಸಚೆಂಜ್(ಬಿಎಸ್ಇ) ಕೇಂದ್ರವು ಇಂದು(ಜನೆವರಿ 23) ಆರಂಭಿಕ ಸಾರ್ವಜನಿಕ ಕೊಡುಗೆಯನ್ನು(ಐಪಿಒ) ಬಿಡುಗಡೆ ಮಾಡಲಿದೆ.
ಬಾಂಬೆ ಸ್ಟಾಕ್ ಎಕ್ಸಚೆಂಜ್(ಬಿಎಸ್ಇ) ಕೇಂದ್ರವು ಇಂದು(ಜನೆವರಿ 23) ಆರಂಭಿಕ ಸಾರ್ವಜನಿಕ ಕೊಡುಗೆಯನ್ನು(ಐಪಿಒ) ಬಿಡುಗಡೆ ಮಾಡಲಿದೆ.
ತಲಾ ರೂ. 2 ಮುಖಬೆಲೆಯ ಪ್ರತಿ ಷೇರಿನ ಬೆಲೆಯನ್ನು ರೂ. 805 ರಿಂದ 806ಕ್ಕೆ ನಿಗದಿ ಮಾಡಲಾಗಿದೆ. ಜನೆವರಿ 25 ಐಪಿಒ ನೀಡಿಕೆಯ ಕೊನೆ ದಿನವಾಗಿದ್ದು, ಕನಿಷ್ಠ 18 ಷೇರುಗಳನ್ನು ಹೂಡಿಕೆ ಮಾಡಬೇಕಿದೆ ಎಂದು ಬಿಎಸ್ಇ ತಿಳಿಸಿದೆ.
ಸಾರ್ವಜನಿಕ ಕೊಡುಗೆಯನ್ನು(ಐಪಿಒ) ಮೂಲಕ, 1.54 ಕೋಟಿ ಷೇರುಗಳನ್ನು ಬಿಡುಗಡೆ ಮಾಡಲಿದ್ದು, ಅಂದಾಜು ರೂ. 1,243 ಕೋಟಿಗಳಷ್ಟು ಬಂಡವಾಳ ಸಂಗ್ರಹಿಸುವ ಸಾಧ್ಯತೆ ಇದೆ.
ನ್ಯಾಷನಲ್ ಸ್ಟಾಕ್ ಎಕ್ಸಚೆಂಜ್(ಎನ್ಎಸ್ಇ) ಕೇಂದ್ರದಲ್ಲಿ ಫೆಬ್ರವರಿ 3 ರಿಂದ ಬಿಎಸ್ಇ ಷೇರಿನ ವಹಿವಾಟಿಗೆ ಚಾಲನೆ ಸಿಗಲಿದೆ ಎಂದು ತಿಳಿಸಲಾಗಿದೆ.
ಗೋಲ್ಡ್ಮನ್ ಸ್ಯಾಚ್ಸ್ ಅಸೆಟ್ ಮ್ಯಾನೆಜ್ಮೆಂಟ್, ಐಸಿಐಸಿಐ ಪ್ರುಡೆನ್ಶಿಯಲ್, ಮ್ಯೂಚುವಲ್ ಫಂಡ್, ಕೋಟಕ್ ಮ್ಯೂಚುವಲ್ ಫಂಡ್, ಸಿಟಿ ಗ್ರೂಪ್, ಐಡಿಎಫ್ಸಿ ಮ್ಯೂಚುವಲ್ ಫಂಡ್, ಡಿಎಸ್ಪಿ ಬ್ಲ್ಯಾಕ್ರಾಕ್, ಕ್ಯಾಪಿಟಲ್ ವರ್ಲ್ಡ್, ರಿಲಯನ್ಸ್ ಕ್ಯಾಪಿಟಲ್ ಟ್ರಸ್ಟೀ ಕಂಪನಿ ಮತ್ತು ಕುವೈತ್ ಇನ್ವೆಸ್ಟ್ಮೆಂಟ್ ಅಥಾರಿಟಿ ಫಂಡ್ ಮೂಲಕ ರೂ. 373 ಕೋಟಿ ಹಣ ಸಂಗ್ರಹ ಮಾಡಿದೆ.