For Quick Alerts
ALLOW NOTIFICATIONS  
For Daily Alerts

ಎಲೆಕ್ಟ್ರಾನಿಕ್ ಪಾವತಿ(ಇ-ಪೇಮೆಂಟ್) ಪ್ರತ್ಯೇಕ ಪ್ರಾಧಿಕಾರ!

ಎಲೆಕ್ಟ್ರಾನಿಕ್ ಪಾವತಿ(ಇ-ಪೇಮೆಂಟ್) ವ್ಯವಸ್ಥೆಯನ್ನು ದೇಶದಾದ್ಯಂತ ಪರಿಣಾಮಕಾರಿಗೊಳಿಸಿ ಮತ್ತಷ್ಟು ಉತ್ತೇಜಿಸುವ ಉದ್ದೇಶದಿಂದ ಪ್ರತ್ಯೇಕ ನಿಯಂತ್ರಣ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತರುವುದಕ್ಕಾಗಿ ಕೇಂದ್ರ ಸರ್ಕಾರ ನಿರ್ಧರಿಸಿದೆ.

|

ನಗದು ರಹಿತ ವ್ಯವಹಾರಗಳಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿ ತರುತ್ತಿದ್ದು, ಪರಿಣಾಮಕಾರಿಯಾದ ಕಾರ್ಯರೂಪಕ್ಕಾಗಿ ಡಿಜಿಟಲ್ ಪೇಮೆಂಟ್ ಪ್ರತ್ಯೇಕ ನಿಯಂತ್ರಣ ಪ್ರಾಧಿಕಾರದ ಅಸ್ತಿತ್ವಕ್ಕೆ ಮುಂದಾಗಿದೆ. ಡಿಜಿಟಲ್ ವ್ಯವಹಾರಗಳನ್ನು ನಿಯಂತ್ರಿಸುವುದು ಈ ಪ್ರಾಧಿಕಾರದ ಮುಖ್ಯ ಧ್ಯೇಯವಾಗಿರಲಿದೆ.

ಎಲೆಕ್ಟ್ರಾನಿಕ್ ಪಾವತಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರ್ ಬಿಐ ಗಿಂತ ಸ್ವತಂತ್ರ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರುವುದು ಉತ್ತಮ ಎಂಬ ಶಿಫಾರಸನ್ನು ರತನ್ ವಾಟಾಳ್ ನೇತೃತ್ವದ ಸಮಿತಿ ಸರ್ಕಾರಕ್ಕೆ ನೀಡಿದೆ. ಆದರೆ ಇ-ಪಾವತಿ ವ್ಯವಸ್ಥೆಯ ನಿಯಂತ್ರಣವನ್ನು ಬಿಟ್ಟು ಕೊಡಲು ಆರ್ ಬಿಐ ನಿರಾಕರಿಸಿದ್ದು ರತನ್ ವಾಟಾಳ್ ನೇತೃತ್ವದ ಸಮಿತಿಯ ಕೆಲ ಅಂಶಗಳಿಗೆ ವಿರೋಧ ವ್ಯಕ್ತಪಡಿಸಿದೆ ಎನ್ನಲಾಗಿದೆ. ಪಾವತಿಗಳು ಬ್ಯಾಂಕಿಂಗ್ ನ ಹೊರತಾಗಿಯೂ ನಡೆಯಬಹುದಾಗಿದ್ದು, ಬ್ಯಾಂಕಿಂಗ್ ನಿಯಂತ್ರಣಕ್ಕಿಂತ ಪಾವತಿ ನಿಯಂತ್ರಣ ವಿಭಿನ್ನವಾಗಿದೆ. ಆದರೆ ರಿಸರ್ವ್ ಬ್ಯಾಂಕ್ ಮಾತ್ರ ಪ್ರತ್ಯೇಕ ಪ್ರಾಧಿಕಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಎಲೆಕ್ಟ್ರಾನಿಕ್ ಪಾವತಿ(ಇ-ಪೇಮೆಂಟ್) ಪ್ರತ್ಯೇಕ ಪ್ರಾಧಿಕಾರ!

English summary

Govt considering regulator for electronic payments

With digital transactions gaining traction, the Government is mulling setting up of a separate regulator for enabling electronic payment system in the country as well as regulate transaction charges.
Story first published: Monday, January 23, 2017, 16:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X