For Quick Alerts
ALLOW NOTIFICATIONS  
For Daily Alerts

ಏರ್‌ಟೆಲ್‌ - ಜಿಯೋ ನಡುವೆ ಮತ್ತೆ ದರ ಸಮರ!

ಮೂರು ತಿಂಗಳಿಗಿಂತ ಹೆಚ್ಚಿನ ಕಾಲ ಉಚಿತ ಸೇವೆಯನ್ನು ನೀಡುವುದು ತಪ್ಪೆಂದು ತರಕಾರು ತೆಗೆದಿದ್ದ ಏರ್‌ಟೆಲ್‌ ವಿರುದ್ಧ ಜಿಯೋ ತಿರುಗಿ ಬಿದ್ದಿದ್ದು, ಜಾಹೀರಾತಿನ ಮೂಲಕ ಗ್ರಾಹಕರನ್ನು ಹಾದಿ ತಪ್ಪಿಸುತ್ತಿದೆ ಎಂದು ಟ್ರಾಯ್‌ಗೆ ಜಿಯೊ ದೂರು ನೀಡಿದೆ.

By Siddu
|

ರಿಲಾಯನ್ಸ್ ಜಿಯೋ ಪ್ರವೇಶದ ನಂತರ ದೇಶದ ಟೆಲಿಕಾಂ ರಂಗದಲ್ಲಿ ಹೊಸ ಸಂಚಲನ ಉಂಟಾಗಿ ಕಂಪನಿಗಳ ನಡುವೆ ಸಮರ ಏರ್ಪಟ್ಟಿದೆ. ಹೀಗಾಗಿ ಒಂದು ಕಂಪನಿ ಇನ್ನೊಂದು ಕಂಪನಿಯ ವಿರುದ್ಧ ದರ ಸಮರ, ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಲೇ ಇವೆ.

ರಿಲಯನ್ಸ್ ಜಿಯೋ ಮೂರು ತಿಂಗಳಿಗಿಂತ ಹೆಚ್ಚಿನ ಕಾಲ ಉಚಿತ ಸೇವೆಯನ್ನು ನೀಡುವುದು ತಪ್ಪೆಂದು ತರಕಾರು ತೆಗೆದಿದ್ದ ಏರ್‌ಟೆಲ್‌ ವಿರುದ್ಧ ಜಿಯೋ ತಿರುಗಿ ಬಿದ್ದಿದ್ದು, ಜಾಹೀರಾತಿನ ಮೂಲಕ ಏರ್‌ಟೆಲ್ ಗ್ರಾಹಕರನ್ನು ಹಾದಿ ತಪ್ಪಿಸುತ್ತಿದೆ ಎಂದು ಟ್ರಾಯ್‌ಗೆ ರಿಲಾಯನ್ಸ್ ಜಿಯೊ ದೂರು ನೀಡಿದೆ. ಜಿಯೊ ಎಫೆಕ್ಟ್: ಏರ್‌ಟೆಲ್‌ ಅನ್‍ಲಿಮಿಟೆಡ್ 4ಜಿ ಫ್ರೀ ಆಫರ್ ಘೋಷಣೆ

ಏರ್‌ಟೆಲ್‌ ವಿರುದ್ಧ ಜಿಯೋ ದೂರು

ಏರ್‌ಟೆಲ್‌ ವಿರುದ್ಧ ಜಿಯೋ ದೂರು

ಈ ಹಿಂದೆ ಜಿಯೋ 'ವೆಲ್‌ಕಮ್ ಆಫರ್' ಹೆಸರಿನಲ್ಲಿ ಮೂರು ತಿಂಗಳ ಕಾಲ ಉಚಿತ 4G ಡೇಟಾ ಮತ್ತು ಉಚಿತ ಅನಿಯಮಿತ ಕರೆ ಮಾಡುವ ಸೇವೆಯನ್ನು ನೀಡಿತ್ತು. ನಂತರ ಮತ್ತೆ ಮೂರು ತಿಂಗಳ ಕಾಲ ಈ ಸೇವೆಯನ್ನು ಮುಂದುವರೆಸುವುದಾಗಿ ಘೋಷಣೆ ಮಾಡಿತ್ತು. ಆ ಸಂದರ್ಭದಲ್ಲಿ ಏರ್‌ಟೆಲ್ ಕಂಪನಿಯೂ ಟ್ರಾಯ್‌ಗೆ ಜಿಯೋ ವಿರುದ್ಧ ದೂರು ದಾಖಲಿಸಿತ್ತು. ಇದೀಗ ಜಾಹೀರಾತಿನ ಮೂಲಕ ಏರ್‌ಟೆಲ್ ಗ್ರಾಹಕರನ್ನು ಹಾದಿ ತಪ್ಪಿಸುತ್ತಿದೆ ಎಂದು ರಿಲಾಯನ್ಸ್ ಜಿಯೋ ಟ್ರಾಯ್‌ಗೆ ದೂರು ನೀಡಿದೆ.

ಏರ್‌ಟೆಲ್‌ ಕೊಂಕು ನುಡಿ

ಏರ್‌ಟೆಲ್‌ ಕೊಂಕು ನುಡಿ

ಯಾವುದೇ ಟೆಲಿಕಾಂ ಕಂಪನಿಗಳು ಪ್ರೋಮೊಷನ್ ಆಫರ್ ಗಳನ್ನು 90 ದಿನಗಳಿಗಿಂತ ಹೆಚ್ಚಿನ ಅವಧಿಗೆ ಮುಂದುವರೆಸುವ ಹಾಗಿಲ್ಲವೆಂದು ಏರ್‌ಟೆಲ್ ಆರೋಪ ಮಾಡಿತ್ತು. ಅಲ್ಲದೇ ಇದು ಆರೋಗ್ಯಕರ ಸ್ಪರ್ಧೆಯಲ್ಲ ಎಂದು ಹೇಳಿತ್ತು. ಈಗ ಅದೇ ವಿಷಯವನ್ನು ಅಸ್ತ್ರವನ್ನು ಬಳಸಿರುವ ಜಿಯೋ ಏರ್‌ಟೆಲ್ ವಿರುದ್ಧ ಟ್ರಾಯ್‌ಗೆ ದೂರು ನೀಡಿ ಹೆಚ್ಚಿನ ಮೊತ್ತದ ದಂಡವನ್ನು ವಿಧಿಸುವಂತೆ ಮನವಿ ಮಾಡಿದೆ.

ಹಾದಿ ತಪ್ಪಿಸುತ್ತಿರುವ ಏರ್‌ಟೆಲ್

ಹಾದಿ ತಪ್ಪಿಸುತ್ತಿರುವ ಏರ್‌ಟೆಲ್

ಏರ್‌ಟೆಲ್‌ ಕಂಪನಿ ಜಿಯೋ ಗ್ರಾಹಕರನ್ನು ಹಾದಿ ತಪ್ಪಿಸುತ್ತಿದ್ದು, ಜಾಹಿರಾತಿನಲ್ಲಿ ಪ್ರೀಪೆಯ್ಡ್ ಮತ್ತು ಪೋಸ್ಟ್‌ ಪೇಯ್ಡ್ ಗ್ರಾಹಕರಿಗೆ ಉಚಿತ ಅನಿಯಮಿತ ಕರೆ ನೀಡುವುದಾಗಿ ಘೋಷಿಸಿದೆ. ಆದರೆ ಈ ವಿಶೇಷ ಟಾರಿಫ್‌ಗೆ ಏರ್‌ಟೆಲ್ ರೂ. 345 ವಿಧಿಸುತ್ತಿದೆ ಎಂದು ಆರೋಪ ಮಾಡಿದೆ.

ಉಚಿತ/ಅನಿಯಮಿತ ಕಟ್ಟು ಕತೆ

ಉಚಿತ/ಅನಿಯಮಿತ ಕಟ್ಟು ಕತೆ

ಪ್ರೀಪೇಯ್ಡ್ ಗ್ರಾಹಕರಿಗೆ ಫೇರ್‌ ಯುಸೇಜ್ ನಿಯಮದಂತೆ ಪ್ರತಿದಿನ ಕೇವಲ 300 ನಿಮಿಷ ಹಾಗೂ ಪ್ರತಿ ವಾರಕ್ಕೆ 1,200 ನಿಮಿಷ ನೀಡುತ್ತಿದೆ. ಇದು ಉಚಿತ ಅನಿಯಮಿತ ಹೇಗೆ ಆಗಲು ಸಾಧ್ಯ ಎಂದು ಪ್ರಶ್ನೆ ಮಾಡಿದೆ. ಇದೇ ಮಾದರಿಯಲ್ಲಿ ಪೋಸ್ಟ್‌ ಪೇಯ್ಡ್ ಗ್ರಾಹಕರಿಗೂ ಉಚಿತ ಸೇವೆ ಎಂದು ದರ ವಿಧಿಸುತ್ತಿದೆ ಎಂದು ಜಿಯೋ ಆರೋಪಿಸಿದೆ. 2017ರಲ್ಲಿ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುವ ಬ್ಯಾಂಕುಗಳು

ಏರ್‌ಟೆಲ್ ಡೇಟಾ ಉಚಿತ ಹೇಗೆ?

ಏರ್‌ಟೆಲ್ ಡೇಟಾ ಉಚಿತ ಹೇಗೆ?

12 ತಿಂಗಳಿಗೆ ರೂ. 9,000 ಮೌಲ್ಯದ ಉಚಿತ ಇಂಟರ್ನೆಟ್ ಎಂದು ಏರ್‌ಟೆಲ್ ಜಾಹಿರಾತಿನಲ್ಲಿ ಘೋಷಣೆ ಮಾಡಿರುವುದನ್ನು ಜಿಯೋ ಪ್ರಶ್ನೆ ಮಾಡಿದ್ದು, ಇದು ಉಚಿತವಾಗಲು ಸಾಧ್ಯವಿಲ್ಲ ಎಂದಿದೆ. ಗ್ರಾಹಕರು ಪ್ರತಿ ತಿಂಗಳು 3GB ಡೇಟಾ ಪಡೆಯಲು ರೂ. 450 ಪಾವತಿಸಬೇಕಾಗಿದೆ. ಹೀಗಿರುವಾಗ ಈ ಸೇವೆಗಳು ಉಚಿತವಾಗಲು ಹೇಗೆ ಸಾಧ್ಯ ಎಂದು ಆರೋಪಿಸಿದೆ. ರಿಲಾಯನ್ಸ್ ಜಿಯೊ 4ಜಿ ಮತ್ತು 'ಫ್ರೀ ಹೈಪ್' ಬಗ್ಗೆ ನಿಮಗೆ ಗೊತ್ತಿರದ ಕೆಲ ಅಂಶಗಳು

English summary

Reliance Jio asks TRAI to impose Penalty on Airtel for 'Misleading' Ads

Reliance Jio Infocomm has urged the telecom regulator to take the “strongest” action and impose the “highest” penalty on rival Bharti Airtel for violating rules by "falsifying" tariff information to subscribers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X