For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ 2017: ನಿರೀಕ್ಷೆ ಮಾಡಬಹುದಾದ ಕುತೂಹಲಕಾರಿ ಅಂಶಗಳು ಇಲ್ಲಿವೆ.....

2017ರ ಕೇಂದ್ರ ಬಜೆಟ್ ನಲ್ಲಿರಬಹುದಾದ ಅಂಶಗಳು, ಕಾಯಿದೆ ತಿದ್ದುಪಡಿ, ಸಾಧಕ-ಭಾದಕಗಳ ಬಗ್ಗೆ ನಮ್ಮಲ್ಲಿ ಕುತೂಹಲ ಇದ್ದೆ ಇರುತ್ತದೆ.

By Siddu
|

ನೋಟು ರದ್ದತಿ ದೇಶದ ಆರ್ಥಿಕ ಬೆಳವಣಿಗೆ, ವಿತ್ತಿಯ ಕೊರತೆ, ಉದ್ಯೋಗ ಮತ್ತು ತೆರಿಗೆ ಮೇಲೆ ಭಾರಿ ಪರಿಣಾಮ ಬೀರಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ 2017ರ ಬಜೆಟ್ ಮೇಲೆ ಇದರ ಪರಿಣಾಮ ಗಾಢವಾಗಿ ಇರಲಿದ್ದು, ಅದಕ್ಕೆ ಪೂರಕವಾದ ಅಂಶಗಳು, ತಿದ್ದುಪಡಿ ಕಾಯಿದೆಗಳು ಬಜೆಟ್ ನಲ್ಲಿ ಇರಲಿವೆ ಎನ್ನುವುದು ತಜ್ಞರ ಅಭಿಪ್ರಾಯ. ಕೇಂದ್ರ ಬಜೆಟ್ 2017 ಬ್ರೇಕಿಂಗ್ ನ್ಯೂಸ್ ಮತ್ತು ಮುಖ್ಯಾಂಶಗಳು

2017ರ ಕೇಂದ್ರ ಬಜೆಟ್ ನಲ್ಲಿರಬಹುದಾದ ಅಂಶಗಳು, ಕಾಯಿದೆ ತಿದ್ದುಪಡಿ, ಸಾಧಕ-ಭಾದಕಗಳ ಬಗ್ಗೆ ನಮ್ಮಲ್ಲಿ ಕುತೂಹಲ ಇದ್ದೆ ಇರುತ್ತದೆ. ಅದರ ಬಗೆಗಿನ ನಿರೀಕ್ಷೆಗಳ ಒಂದು ಪಕ್ಷಿ ನೋಟ ಇಲ್ಲಿದೆ....

1. ಅನಾಣ್ಯೀಕರಣ

1. ಅನಾಣ್ಯೀಕರಣ

ಕೇಂದ್ರ ಸರ್ಕಾರ ಖೋಟಾ ನೋಟು ತಡೆ, ಭ್ರಷ್ಟಾಚಾರ ನಿರ್ಮೂಲನಕ್ಕಾಗಿ ಹಠಾತ್ ಆಗಿ ಹಳೆ ನೋಟುಗಳ ನಿಷೇಧ ಮಾಡಿ ದೇಶದಲ್ಲಿ ನಗದು ವ್ಯವಹಾರಕ್ಕಾಗಿ ಜನರನ್ನು ಉತ್ತೇಜಿಸುತ್ತಿದೆ.
ಹೀಗಾಗಿ ಕಾರ್ಡ್ ಮತ್ತು ಡಿಜಿಟಲ್ ವ್ಯವಹಾರ ಪ್ರೋತ್ಸಾಹಿಸಲು ತೆರಿಗೆ ರಿಯಾಯಿತಿ, ಇನ್ಸೆಂಟಿವ್ಸ್ ಗಳನ್ನು ಅರುಣ್ ಜೇಟ್ಲಿ ಈ ಬಜೆಟ್ ನಲ್ಲಿ ನೀಡಬಹುದೆಂದು ನಿರೀಕ್ಷಿಸಲಾಗಿದೆ.

2. ಜಿಎಸ್ಟಿ

2. ಜಿಎಸ್ಟಿ

ದೇಶದಾದ್ಯಂತ ಸರಕು ಮತ್ತು ಸೇವೆಗಳ ಮೇಲೆ ವಿಧಿಸಲಾಗುವ ಏಕರೂಪದ ಸಾಮಾನ್ಯ ಪರೋಕ್ಷ ತೆರಿಗೆ. ಇದು ರಾಷ್ಟ್ರಮಟ್ಟದ ತೆರಿಗೆ ವ್ಯವಸ್ಥೆಯಾಗಿರುತ್ತದೆ. ಇದು 2017 ಏಪ್ರಿಲ್ 1ರಿಂದ ಜಾರಿಯಾಗುವ ಸಾಧ್ಯತೆ ಇದೆ.
ಸರಕು ಮತ್ತು ಸೇವೆಗಳ ಮೇಲಿನ ಬಹುತೆರಿಗೆ ಪದ್ದತಿಯನ್ನು ತೊಡೆದು ಹಾಕುವುದು. ಅಂದರೆ ರಾಜ್ಯಗಳು ವಿಧಿಸುವ ವಿವಿಧ ರೂಪದ ತೆರಿಗೆಗಳನ್ನು ರದ್ದುಪಡಿಸುವುದು. ದೇಶವ್ಯಾಪಿ ಏಕರೂಪದ ತೆರಿಗೆಯನ್ನು ಜಾರಿ ಮಾಡುವುದು. ಒಂದೇ ರೀತಿಯ ಅರ್ಥವ್ಯವಸ್ಥೆ ಯನ್ನು ರೂಪಿಸುವುದು. ತೆರಿಗೆ ವಂಚನೆ ತಡೆಯಲು ಸಹಕಾರಿಯಾಗಲಿದೆ. ಎರಡು-ಮೂರು ಹಂತಗಳಲ್ಲಿ ತೆರಿಗೆ ಹೇರಿಕೆ ತಪ್ಪಿ ಎಲ್ಲ ಪರೋಕ್ಷ ತೆರಿಗೆಗಳು ಜಿಎಸ್ಟಿಯಲ್ಲಿ ಅಂತರ್ಗತಗೊಳ್ಳುತ್ತವೆ. ಉದ್ಯಮಗಳು ತೆರಿಗೆ ಪಾವತಿಸುವ ವ್ಯವಸ್ಥೆ ಸರಳವಾಗಿ, ತೆರಿಗೆ ಬದ್ದತೆ ಹೆಚ್ಚುತ್ತದೆ. ಪ್ರತಿಯೊಬ್ಬರೂ ಸ್ವಯೋಪ್ರೇರಿತರಾಗಿ ತೆರಿಗೆ ಪಾವತಿಸಲು ಉತ್ತೇಜನ ನೀಡುವಲ್ಲಿ ಸಹಕಾರಿಯಾಗಬಲ್ಲದು. ಹೀಗಾಗಿ ಈ ಬಜೆಟ್ ನಲ್ಲಿ ಜಿಎಸ್ಟಿ ಪ್ರಮುಖ ಅಂಶ ಆಗಿರಲಿದೆ.

3. ಆದಾಯ ತೆರಿಗೆ

3. ಆದಾಯ ತೆರಿಗೆ

ಜಿಎಸ್ಟಿ ಮಸೂದೆ ನಂತರದಲ್ಲಿ ಆದಾಯ ತೆರಿಗೆ ಸುಧಾರಣೆ ಈ ಸಾಲಿನ ಬಜೆಟ್ ನಲ್ಲಿನ ಆಕರ್ಷಕ ಬಿಂದು ಆಗಿದೆ. ಬೇರೆ ಬೇರೆ ತೆರಿಗೆ ಹಂತಗಳನ್ನು, ಪರಿಚ್ಛೇದಗಳನ್ನು ಹಾಗೂ ದರಗಳನ್ನು ಈ ಮುಂಗಡ ಪತ್ರದಲ್ಲಿ ನಿರೀಕ್ಷಿಸಲಾಗಿದೆ. ಅಂದರೆ ತೆರಿಗೆ ಹಂತಗಳನ್ನು ಪುನರ್ ರಚನೆ ಮಾಡುವ ಸಾಧ್ಯತೆ ಇದೆ. ತೆರಿಗೆಯ ಕನಿಷ್ಟ ಮಿತಿಯಲ್ಲಿ ಹೆಚ್ಚಳ, ವಿನಾಯಿತಿ ಮಿತಿಯಲ್ಲಿ ಹೆಚ್ಚಳ, 80c ಅಡಿಯಲ್ಲಿ ತೆರಿಗೆ ವಿನಾಯಿತಿ, ಹಿರಿಯ ನಾಗರಿಕರಿಗೆ ವಿನಾಯಿತಿ ಮಿತಿ, EPF, PPF, NPS ಹೂಡಿಕೆಗೆ ಪ್ರೋತ್ಸಾಹ, ಇಎಂಐ ಮೇಲೆ ಕಡಿತ, ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ಇತ್ಯಾದಿ ಅಂಶಗಳಲ್ಲಿ ಹಲವು ಬದಲಾವಣೆಗಳು ಸಾಧ್ಯತೆ ಇದೆ.

4. ಕಾರ್ಪೊರೇಟ್ ತೆರಿಗೆ

4. ಕಾರ್ಪೊರೇಟ್ ತೆರಿಗೆ

ಪ್ರಸ್ತುತ ಬಜೆಟ್ ನಲ್ಲಿ ಸರ್ಕಾರ ಕಾರ್ಪೊರೇಟ್ ಆದಾಯ ತೆರಿಗೆ ದರಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ. ದೇಶದ ಕಾರ್ಪೊರೇಟ್ ವಲಯದಲ್ಲಿ ತೆರಿಗೆ ಸುಧಾರಣೆ ತರುವ ಹಿನ್ನೆಲೆಯಲ್ಲಿ ಅರುಣ್ ಜೇಟ್ಲಿ ಈ ಕುರಿತು ಈಗಾಗಲೇ ಘೋಷಣೆ ಮಾಡಿದ್ದಾರೆ.

5. ರೇಲ್ವೆ ಬಜೆಟ್

5. ರೇಲ್ವೆ ಬಜೆಟ್

92 ವರ್ಷಗಳ ಚರಿತ್ರೆ ಹೊಂದಿರುವ ಪ್ರತ್ಯೇಕ ರೈಲ್ವೆ ಬಜೆಟ್ ಮಂಡನೆ ಸಂಪ್ರದಾಯಕ್ಕೆ ಅಂತ್ಯ ಹಾಡಲಾಗಿದ್ದು, ಈ ಸಾಲಿನಿಂದ ಪ್ರತ್ಯೇಕ ರೈಲ್ವೆ ಬಜೆಟ್ ಮಂಡನೆ ಮಾಡದೆ, ಪ್ರಸ್ತುತ ಹಣಕಾಸು ಬಜೆಟ್ ನಲ್ಲಿ ರೈಲ್ವೆ ಬಜೆಟ್ ವಿಲೀನಗೊಳಿಸುವುದಕ್ಕೆ ಈಗಾಗಲೇ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ರೇಲ್ವೆ ಇಲಾಖೆ ಮೂಲಕ ದೇಶಕ್ಕೆ ಹೆಚ್ಚಿನ ಪ್ರಮಾಣದ ಆದಾಯ ಬರುತ್ತಿದ್ದು, ಇದರ ಪರಿಣಾಮಕಾರಿ ಸುಧಾರಣೆಗೆ ಚಿಂತಿಸಲಾಗುತ್ತಿದೆ ಎನ್ನಲಾಗಿದೆ.

6. ಕೃಷಿ

6. ಕೃಷಿ

ನೋಟು ನಿಷೇಧದಿಂದ ರೈತರು ಎದುರಿಸಿರುವ ಸಮಸ್ಯೆಗಳ ನೋವು ಕಡಿಮೆ ಮಾಡಲು ಅರುಣ್ ಜೇಟ್ಲಿ ಅನೇಕ ಹೊಸ ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ.
ನಗದು ರಹಿತವಾಗಿ ಬಿತ್ತನೆ ಬೀಜಗಳನ್ನು ಖರೀದಿಸಲು ಅವಕಾಶ ಮಾಡಿಕೊಡುವ ನಿರೀಕ್ಷೆ ಇದೆ.
ನೋಟು ನಿಷೇಧದ ನಂತರ ಆರ್ಥಿಕ ಬಿಕ್ಕಟ್ಟಿನಿಂದ ಸಮಸ್ಯೆಗೆ ಸಿಲುಕಿರುವ ರೈತರ ನೆರವಿಗೆ ಮುಂದಾಗಿರುವ ಸರ್ಕಾರ ಬೆಳೆ ಸಾಲ ಮರುಪಾವತಿಗೆ 60 ದಿನಗಳ ಕಾಲಾವಕಾಶ ನೀಡಿದೆ. ಜತೆಗೆ ಸಕಾಲದಲ್ಲಿ ಬೆಳೆ ಸಾಲ ಮರುಪಾವತಿಸುವ ರೈತರಿಗೆ ಹೆಚ್ಚುವರಿ ಶೇ. 3ರಷ್ಟು ಬಡ್ಡಿ ರಿಯಾಯಿತಿ ನೀಡುವುದಾಗಿ ಆರ್ಬಿಐ ಹೇಳಿದೆ. ಈಗಾಗಲೇ 2006-07ನೇ ಸಾಲಿನಿಂದ ಶೇ. 2ರಷ್ಟು ಬಡ್ಡಿ ರಿಯಾಯಿತಿ ಒದಗಿಸುವ ಯೋಜನೆ ಜಾರಿಯಲ್ಲಿದೆ. ಪ್ರಸ್ತುತ ಸಾಲಿನಿಂದ ರೈತರಿಗೆ ಹೆಚ್ಚುವರಿ ಶೇ. 3ರಷ್ಟು ಬಡ್ಡಿ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ.

7. ಮ್ಯಾನುಫ್ಯಾಕ್ಚರಿಂಗ್

7. ಮ್ಯಾನುಫ್ಯಾಕ್ಚರಿಂಗ್

ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯ ಯೋಜನೆಯನ್ನು ಉತ್ತೇಜನಗೊಳಿಸಲು ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ, ಉದ್ಯೋಗ ಹೆಚ್ಚಳ, ರಪ್ತು ಪುನಶ್ಚೇತನ, ವಜ್ರ-ಆಭರಣಗಳ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಉತ್ಪಾದನೆಗೆ ಹೆಚ್ಚು ಉತ್ತೇಜನ ನೀಡುವ ಅಂಶಗಳು ಪ್ರಸ್ತುತ ಬಜೆಟ್ ನಲ್ಲಿರಲಿವೆ ಎಂದು ನಿರೀಕ್ಷಿಸಲಾಗಿದೆ.

8. ವಿದೇಶಿ ಒಳಹರಿವು

8. ವಿದೇಶಿ ಒಳಹರಿವು

ಪ್ರಸ್ತುತ ಬಜೆಟ್ ನಲ್ಲಿ ಹಣಕಾಸು ಸಚಿವರು ವಿದೇಶಿ ನೇರ ಹೂಡಿಕೆ(FDI), ಉದ್ದಿಮೆ ಬಂಡವಾಳದಾರರು(VCs), ಖಾಸಗಿ ಇಕ್ವಿಟಿ (PE, ಸಣ್ಣ ಉದ್ಯಮಗಳು ಮತ್ತು ಏಂಜಲ್ ಹೂಡಿಕೆದಾರರಿಗೆ ಅನುಕೂಲಕರವಾದ ವಾತಾವರಣ ನಿರ್ಮಿಸುವ ದೃಷ್ಟಿಯಿಂದ ವಿದೇಶಿ ಒಳಹರಿವಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವ ಸಾಧ್ಯತೆ ಇದೆ.

9. ಸ್ಟಾರ್ಟ್ಅಪ್ಸ್

9. ಸ್ಟಾರ್ಟ್ಅಪ್ಸ್

2017ರ ಕೇಂದ್ರ ಬಜೆಟ್ ಸ್ಟಾರ್ಟ್ಅಪ್ಸ್ ಗಳಿಗೂ ಶುಭ ಸುದ್ದಿ ಕೊಡುವ ನಿರೀಕ್ಷೆ ಇದೆ. ದೇಶದಲ್ಲಿನ ನವೋದ್ಯಮಗಳ ಸಬಲೀಕರಣಕ್ಕಾಗಿ ಮೂರು ವರ್ಷಗಳ ತೆರಿಗೆ ಮುಕ್ತ ಅವಧಿಯನ್ನು ಏಳು ವರ್ಷಗಳಿಗೆ ಹೆಚ್ಚಿಸುವ ಸಾಧ್ಯತೆ ಇದೆ. 'ಸ್ಟಾರ್ಟ್ಅಪ್ ಇಂಡಿಯಾ' ಯೋಜನೆ ಹಿನ್ನೆಲೆಯಲ್ಲಿ ಸಸ್ಟಾರ್ಟ್ಅಪ್ಸ್ ಗಳಿಗೆ ಭಾರೀ ಉತ್ತೇಜನ ಸಿಗಲಿದೆ.

English summary

Union Budget 2017: Nine important features to look out for...

The impact of note ban on economic growth, fiscal deficit, and jobs and taxes are set to feature prominently in Arun Jaitley's budget speech of 2017.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X