For Quick Alerts
ALLOW NOTIFICATIONS  
For Daily Alerts

H1-B ವೀಸಾ ಎಫೆಕ್ಟ್: ದೇಶದ 50 ಸಾವಿರ ಷೇರು ಮೌಲ್ಯ ನಷ್ಟ

ಅಮೆರಿಕಾದ H1-B ವೀಸಾ ನೀತಿಯ ಮರುಪರಿಶೀಲನೆಯಲ್ಲಿ ಆಗಬಹುದಾದ ಬದಲಾವಣೆಗಳು ದೇಶದ ಐಟಿ ಉದ್ಯಮದ ಮೇಲೆ ಭಾರೀ ಪರಿಣಾಮಕ್ಕೆ ಕಾರಣವಾಗಿದ್ದು, ಬರೊಬ್ಬರಿ ಶೇ.9ರಷ್ಟು ಷೇರು ಮೌಲ್ಯ ಕುಸಿದಿದೆ.

By Siddu
|

ಅಮೆರಿಕಾದ H1-B ವೀಸಾ ನೀತಿಯ ಮರುಪರಿಶೀಲನೆಯಲ್ಲಿ ಆಗಬಹುದಾದ ಬದಲಾವಣೆಗಳು ದೇಶದ ಐಟಿ ಉದ್ಯಮದ ಮೇಲೆ ಭಾರೀ ಪರಿಣಾಮಕ್ಕೆ ಕಾರಣವಾಗಿದ್ದು, ಬರೊಬ್ಬರಿ ಶೇ.9ರಷ್ಟು ಷೇರು ಮೌಲ್ಯ ಕುಸಿದಿದೆ.

 

ಅಮೆರಿಕಾದ ಸ್ಥಳೀಯರಿಗೆ ನೌಕರಿ ನೀಡುವ ಉದ್ದೇಶದಿಂದ ಎಚ್‌1-ಬಿ ವೀಸಾ ಮೇಲೆ ನಿರ್ಬಂಧ ಹಾಕಲು ಅಮೆರಿಕದ ಹೊಸ ಸರ್ಕಾರ ಮುಂದಾಗಿದ್ದು, ಇದು ದೇಶದ ಐಟಿ ಕಂಪನಿಗಳ ಮೇಲೆ ಭಾರಿ ಹೊಡೆತಕ್ಕೆ ಕಾರಣವಾಗಿದೆ.

ಸೆನ್ಸೆಕ್ಸ್ 204 ಅಂಕಗಳ ಕುಸಿತ

ಸೆನ್ಸೆಕ್ಸ್ 204 ಅಂಕಗಳ ಕುಸಿತ

ಭಾರತೀಯ ಷೇರುಮಾರುಕಟ್ಟೆ ಮೇಲೂ ಅಮೆರಿಕದH1-B ವೀಸಾ ನೀತಿ ಮರು ಪರಿಶೀಲನೆ ಪರಿಣಾಮ ಬೀರಿದ್ದು, ಸೆನ್ಸೆಕ್ಸ್ 204 ಅಂಕಗಳ ಕುಸಿತ ಕಂಡಿದೆ. ಆ ಮೂಲಕ 27,644.65 ಅಂಕಗಳಿಗೆ ಸೆನ್ಸೆಕ್ಸ್ ಕುಸಿದಿದ್ದು, ನಿಫ್ಟಿ ಕೂಡ 76.20 ಅಂಕಗಳ ಕುಸಿತದೊಂದಿಗೆ 8,556.55 ಕ್ಕೆ ಇಳಿಕೆಯಾಗಿದೆ.

ಐಟಿ ವಲಯ ತತ್ತರ

ಐಟಿ ವಲಯ ತತ್ತರ

ಭಾರತೀಯ ಐಟಿ ವಲಯದ ಪ್ರಮುಖ ಸಂಸ್ಥೆಗಳಾದ ಟಿಸಿಎಸ್, ವಿಪ್ರೋ ಟೆಕ್ ಮಹೀಂದ್ರಾ, ಎಚ್ಸಿಎಲ್ ಹಾಗೂ ಇನ್ಫೋಸಿಸ್ ಸಂಸ್ಥೆಗಳಿಗೆ ಭಾರಿ ನಷ್ಟ ಅನುಭವಿಸಿವೆ. ಇನ್ಫೋಸಿಸ್ ಷೇರುಗಳ ಮೌಲ್ಯದಲ್ಲಿ ಶೇ.4.6, ವಿಪ್ರೋ ಸಂಸ್ಥೆಯ ಷೇರು ಮೌಲ್ಯದಲ್ಲಿ ಶೇ.4.23ರಷ್ಟು ಕುಸಿತ ಕಂಡಿದೆ. ಟೆಕ್ ಮಹೀಂದ್ರ ಶೇ.9.7, ಹೆಚ್ ಸಿಎಲ್ ಶೇ. 6.3ರಷ್ಟು ಕುಸಿತವಾಗಿದೆ.

ಟ್ರಂಪ್ ವೀಸಾ ನೀತಿ ಎಫೆಕ್ಟ್
 

ಟ್ರಂಪ್ ವೀಸಾ ನೀತಿ ಎಫೆಕ್ಟ್

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ನೀತಿ ಹಾಗೂ ಹೆಚ್-1ಬಿ ವೀಸಾ ನೀತಿ ಮರು ಪರಿಶೀಲನೆ ನಿರ್ಧಾರಗಳು ಭಾರತೀಯ ಷೇರುಪೇಟೆಯ ಹೂಡಿಕೆದಾರರ ಮೇಲೆ ಪರಿಣಾಮ ಬೀರಿದ್ದು, ಹೂಡಿಕೆದಾರರು ಐಟಿ ವಲಯದತ್ತ ಆತಂಕ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಷೇರುಮೌಲ್ಯಗಳು ಕುಸಿತವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary

H-1B Visa Impact, Top 5 Indian IT Firms Lose 50,000 Crores In Market Value

The BSE IT index, which is a benchmark of IT stocks, fell over 4 per cent. Shares of outsourcing giant TCS fell 5.6 per cent, Tech Mahindra 9.7 per cent, HCL Tech 6.3 per cent, Infosys 4.6 per cent and Wipro 4.23 per cent.
Story first published: Tuesday, January 31, 2017, 15:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X