For Quick Alerts
ALLOW NOTIFICATIONS  
For Daily Alerts

ಎಚ್-1ಬಿ ವೀಸಾ ಹೊಸ ಬಿಲ್: ದೇಶದ 10 ಐಟಿ ಕಂಪನಿಗಳಿಗೆ ಎದುರಾಗಿದೆ ಭೀತಿ

ಎಚ್-1ಬಿ ವೀಸಾ ನೀತಿ ಭಾರತದ ಮೇಲಂತೂ ಅತಿ ಕೆಟ್ಟ ಪರಿಣಾಮವನ್ನುಂಟು ಮಾಡಿದ್ದು, ದೇಶದ ಪ್ರಮುಖ ಐಟಿ(Information Technology) ಕಂಪನಿಗಳು, ಷೇರುಪೇಟೆ ಹಾಗೂ ದೇಶದ ಸಾವಿರಾರು ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

By Siddu
|

ಡೊನಾಲ್ಡ್ ಟ್ರಂಪ್ ಅಮೆರಿಕಾದ ಅಧ್ಯಕ್ಷರಾದ ನಂತರ ಜಗತ್ತಿನಾದ್ಯಂತ ಎಚ್-1ಬಿ ವೀಸಾ ನೀತಿ ಮತ್ತು ಅವರು ಕೈಗೊಳ್ಳಬಹುದಾದ ಪ್ರಮುಖ ನಡೆಗಳ ಬಗ್ಗೆ ಬಿಸಿಬಿಸಿ ಚರ್ಚೆಗಳು ಶುರುವಾಗಿವೆ. ಜತೆಗೆ ಟ್ರಂಪ್ ವಿರುದ್ದ ಅಮೆರಿಕಾದವರೇ ಹೋರಾಟ ಮಾಡುತ್ತಲೇ ಇದ್ದಾರೆ.

ಎಚ್-1 ಬಿ ವೀಸಾ ನೀತಿ ಭಾರತದ ಮೇಲಂತೂ ಅತಿ ಕೆಟ್ಟ ಪರಿಣಾಮವನ್ನುಂಟು ಮಾಡಿದ್ದು, ದೇಶದ ಪ್ರಮುಖ ಐಟಿ(Information Technology) ಕಂಪನಿಗಳು, ಷೇರುಪೇಟೆ ಹಾಗೂ ದೇಶದ ಸಾವಿರಾರು ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ದೇಶದ 10 ಐಟಿ ಕಂಪನಿಗಳು ಉದ್ಯೋಗಕ್ಕಾಗಿ ಸಲ್ಲಿಸಿದ ಒಟ್ಟು ಅಪ್ಲಿಕೇಶನ್ ಗಳ ಸಂಖ್ಯೆ ಹಾಗೂ ಸರಾಸರಿ ವೇತನ, ದೇಶದ ಪ್ರಮುಖ ಐಟಿ ಕಂಪನಿಗಳ ಮೇಲಿನ ಪ್ರಭಾವ, ಎಚ್-1 ಬಿ ವೀಸಾ ಬಿಲ್ ಹೊಸ ನಿಯಮ, ಅಮೆರಿಕಾದ ಸಮಸ್ಯೆ, ಹಾಗೂ ದೇಶದ ಐಟಿ ಉದ್ಯೋಗಗಳ ಮೇಲಾಗುವ ಪರಿಣಾಮಗಳು ಯಾವುವು ಎಂಬುದನ್ನು ನೋಡೋಣ...

1. H1-B ವೀಸಾ ಏನು?

1. H1-B ವೀಸಾ ಏನು?

ವೀಸಾ ನೀತಿ H1-B ವೀಸಾದ ಅಡಿಯಲ್ಲಿ ಪ್ರತಿ ವರ್ಷ ಭಾರತದ ಐಟಿ ಇಂಡಸ್ಟ್ರಿ ಲಕ್ಷ ಲಕ್ಷ ಉದ್ಯೋಗಿಗಳನ್ನು ಯುಎಸ್ ಗೆ ಕಳುಹಿಸಿಕೊಡುತ್ತದೆ. ಇದರಿಂದಾಗಿ ಅಮೆರಿಕನ್ನರ ಉದ್ಯೋಗದ ಅವಕಾಶಗಳಿಗೆ ಹಾನಿ ಮಾಡಿದಂತಾಗುತ್ತದೆ ಎನ್ನುವುದು ಡೊನಾಲ್ಡ್ ಟ್ರಂಪ್ ಅಭಿಪ್ರಾಯ. H1-B ವೀಸಾ ಅಮೆರಿಕಾದ ಕಂಪನಿಗಳಲ್ಲಿ ಕೆಲಸ ಮಾಡಲು ವಿದೇಶದಿಂದ ತಜ್ಞ ನೌಕರರನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಅಮೆರಿಕಾದ ಕೆಲಸಗಾರರಿಗೆ ಉದ್ಯೋಗ ಸಿಗುತ್ತಿಲ್ಲ ಎನ್ನುವುದು ಟ್ರಂಪ್ ವಾದ. ಅದರಲ್ಲೂ ಭಾರತೀಯ ತಜ್ಞ ಉದ್ಯೋಗಿಗಳು ಯುಸ್ ನಲ್ಲಿ ಹೆಚ್ಚಿನ ಉದ್ಯೋಗಗಳನ್ನು ಪಡೆದುಕೊಳ್ಳುತ್ತಿರುವುದರಿಂದಾಗಿ ವಾಲ್ಟ್ ಡಿಸ್ನಿ ವರ್ಲ್ಡ್ ಉದ್ಯೋಗಿಗಳು ತಮ್ಮ ನೌಕರಿಯನ್ನು ಕಳೆದುಕೊಳ್ಳುತ್ತಿದ್ದಾರೆ.

2. ಅಮೆರಿಕನ್ನರ ಸಮಸ್ಯೆ ಏನು?

2. ಅಮೆರಿಕನ್ನರ ಸಮಸ್ಯೆ ಏನು?

2016ರ ಪ್ರಾರಂಭದಲ್ಲಿ, ವಾಲ್ಟ್ ಡಿಸ್ನಿ ವರ್ಲ್ಡ್ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ ನಂತರ ಭಾರತೀಯ ಕಂಪನಿಗಳಿಂದ ಅಗ್ಗದ ವಲಸೆ ನೌಕರರನ್ನು ನೇಮಿಸಿಕೊಳ್ಳುವುದರ ವಿರುದ್ದ ಯುಎಸ್ ನಲ್ಲಿ ಮೊಕದ್ದಮೆಗಳನ್ನು ಹೂಡಲಾಯಿತು. ವಾಲ್ಟ್ ಡಿಸ್ನಿ ವರ್ಲ್ಡ್ ನಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡಿ ಈಗ ವಜಾಗೊಂಡಿರುವ ದೇನಾ ಮೂರ್ "I don't have to be angry or cause drama," ಎಂದು ನ್ಯೂಯಾರ್ಕ್ ಟೈಮ್ಸ್ ಗೆ ಹೇಳಿದ್ದಾರೆ. H1-B ವೀಸಾ ಸಮಸ್ಯೆಯಿಂದಾಗಿ ವಿದೇಶಿಗರು ಯುಎಸ್ ನಲ್ಲಿ ಕೆಲಸ ಪಡೆದು ಶ್ರೀಮಂತರಾಗುತ್ತಿದ್ದು, ಇದರಿಂದಾಗಿ ಅಮೆರಿಕನ್ನರನ್ನು ಬಡವರಾಗುತ್ತಿದ್ದಾರೆ ಎಂದು ವಾಲ್ಟ್ ಡಿಸ್ನಿ ವರ್ಲ್ಡ್ ನಲ್ಲಿ ಕೆಲಸ ಕಳೆದುಕೊಂಡ ಹಿನ್ನಲೆಯಲ್ಲಿ ಹೇಳಿದ್ದರು. H1-B ವೀಸಾ ಬಿಲ್ ಜಾರಿ ಆದಲ್ಲಿ ಭಾರತದ 10 ಐಟಿ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

3. ಹೊಸ ಬಿಲ್ ನಲ್ಲಿ ಏನಿದೆ?

3. ಹೊಸ ಬಿಲ್ ನಲ್ಲಿ ಏನಿದೆ?

ಹೊಸ ಬಿಲ್ ಪ್ರಕಾರ ಮೊದಲಿನದಕ್ಕಿಂತ ಎರಡು ಪಟ್ಟು ಸಂಬಳವನ್ನು ಹೆಚ್ಚಿಸಲಾಗುವುದು. 1989ರಿಂದ ಇಲ್ಲಿಯವರೆಗೆ 60,000 ಡಾಲರ್ ಸಂಬಳ ಇತ್ತು. ಈಗ ಅದನ್ನು 130,000 ಡಾಲರ್ ಗೆ ಏರಿಕೆ ಮಾಡಲಾಗಿದೆ. ಅಂದರೆ ಮೊದಲಿನ ಎರಡರಷ್ಟು ಹೆಚ್ಚಿಸಲಾಗಿದೆ. H1-B ವೀಸಾದ ಪ್ರಕಾರ ವಿದೇಶಿಯರು ಹೆಚ್ಚಿನ ಉದ್ಯೋಗ ಪಡೆಯುತ್ತಿದ್ದರು. ಆದರೆ ಇದೀಗ ಹೊಸ ನೀತಿ ಪ್ರಕಾರ ಈ ಉದ್ಯೋಗವನ್ನು ಸ್ಥಳಿಯರಿಗೆ ಕೊಡಬೇಕು ಎನ್ನುವುದು ಟ್ರಂಪ್ ವಾದ ಆಗಿದೆ.

4. ಬಿಲ್ ನೀತಿಯ ಕಸರತ್ತು

4. ಬಿಲ್ ನೀತಿಯ ಕಸರತ್ತು

'High-Skilled Integrity and Fairness Act of 2017' ಈ ಕಾಯಿದೆಯನ್ನು ಕ್ಯಾಲಿಫೊರ್ನಿಯ ಕಾಂಗ್ರೆಸ್ಮನ್ ಜೊಯಿ ಲೊಫ್ಗ್ರೆನ್ ಪ್ರಿಯಾರಿಟೈಸಸ್ ಪರಿಚಯಿಸಿದ್ದಾರೆ. ಯಾವ ಕಂಪನಿಗಳು ನಿರ್ಧರಿಸಿದ ವೇತನವನ್ನು ಶೇ. 200ರಷ್ಟು ಪಾವತಿಸಲು ಸಿದ್ದರಿರುವವೋ ಅವುಗಳಿಗೆ ವೀಸಾ ಮಂಜೂರಾತಿ ಮಾಡಲಾಗುವುದು ಎಂದು ಅವರು ಪ್ರತಿಪಾದಿಸಿದ್ದಾರೆ. 1989ರ ಪ್ರಾರಂಭದಿಂದ ಇದ್ದ 60,000 ಡಾಲರ್ ಸಂಬಳವನ್ನು ಈಗ 130,000 ಡಾಲರ್ ಗೆ ಏರಿಕೆ ಮಾಡಲು ಸೂಚಿಸಲಾಗಿದೆ.

5. ಇನ್ಫೋಸಿಸ್

5. ಇನ್ಫೋಸಿಸ್

ಉದ್ಯೋಗಕ್ಕಾಗಿ ಸಲ್ಲಿಸಿದ ಅಪ್ಲಿಕೇಶನ್ ಗಳ ಸಂಖ್ಯೆ: 25,405
ಸರಾಸರಿ ವೇತನ(ಡಾಲರ್): 81,705
(ತಲಾ ಒಂದು ಕಂಪನಿ ಉದ್ಯೋಗಕ್ಕಾಗಿ ಸಲ್ಲಿಸಿದ ಒಟ್ಟು ಅಪ್ಲಿಕೇಶನ್ ಗಳ ಸಂಖ್ಯೆ(Labor Condition Application-LCA)) ಹಾಗೂ ಸರಾಸರಿ ವೇತನದ ಮಾಹಿತಿ ನೀಡಲಾಗಿದೆ.)

6. ಟಿಸಿಎಸ್

6. ಟಿಸಿಎಸ್

ಅಪ್ಲಿಕೇಶನ್ ಗಳ ಸಂಖ್ಯೆ: 13,134
ಸರಾಸರಿ ವೇತನ(ಡಾಲರ್): 76,099

7. ವಿಪ್ರೊ

7. ವಿಪ್ರೊ

ಅಪ್ಲಿಕೇಶನ್ ಗಳ ಸಂಖ್ಯೆ: 10,607
ಸರಾಸರಿ ವೇತನ(ಡಾಲರ್): 72,720

8. ಕ್ಯಾಪ್ ಜೆಮಿನಿ(Capgemini)

8. ಕ್ಯಾಪ್ ಜೆಮಿನಿ(Capgemini)

ಅಪ್ಲಿಕೇಶನ್ ಗಳ ಸಂಖ್ಯೆ: 17,479
ಸರಾಸರಿ ವೇತನ(ಡಾಲರ್): 93,213

9. ಎಲ್ & ಟಿ

9. ಎಲ್ & ಟಿ

ಅಪ್ಲಿಕೇಶನ್ ಗಳ ಸಂಖ್ಯೆ: 3,092
ಸರಾಸರಿ ವೇತನ(ಡಾಲರ್): 76,755

10. ಅಸೆಂಚರ್

10. ಅಸೆಂಚರ್

ಅಪ್ಲಿಕೇಶನ್ ಗಳ ಸಂಖ್ಯೆ: 9,479
ಸರಾಸರಿ ವೇತನ(ಡಾಲರ್): 81,585

11. Deloitte

11. Deloitte

ಅಪ್ಲಿಕೇಶನ್ ಗಳ ಸಂಖ್ಯೆ: 1,646
ಸರಾಸರಿ ವೇತನ(ಡಾಲರ್): 75,705

12. ಸಿಟಿಎಸ್(CTS)

12. ಸಿಟಿಎಸ್(CTS)

ಅಪ್ಲಿಕೇಶನ್ ಗಳ ಸಂಖ್ಯೆ: 5,370
ಸರಾಸರಿ ವೇತನ(ಡಾಲರ್): 74,628

13. ಆಪಲ್

13. ಆಪಲ್

ಅಪ್ಲಿಕೇಶನ್ ಗಳ ಸಂಖ್ಯೆ: 1,660
ಸರಾಸರಿ ವೇತನ(ಡಾಲರ್): 141,294

14. ಐಬಿಎಂ(IBM)

14. ಐಬಿಎಂ(IBM)

ಅಪ್ಲಿಕೇಶನ್ ಗಳ ಸಂಖ್ಯೆ: 12, 381
ಸರಾಸರಿ ವೇತನ(ಡಾಲರ್): 87,378

15. ಟ್ರಂಪ್ ವಿರುದ್ಧ ಮೈಕ್ರೋಸಾಫ್ಟ್, ಗೂಗಲ್, ಆಪಲ್ ಕಂಪನಿಗಳ ಆಕ್ರೋಶ

15. ಟ್ರಂಪ್ ವಿರುದ್ಧ ಮೈಕ್ರೋಸಾಫ್ಟ್, ಗೂಗಲ್, ಆಪಲ್ ಕಂಪನಿಗಳ ಆಕ್ರೋಶ

ಏಳು ಮುಸ್ಲಿಂ ರಾಷ್ಟ್ರಗಳಿಗೆ (ಇರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ, ಯೆಮನ್) ಅಮೆರಿಕ ಪ್ರವೇಶಿಸಲು ನಿರ್ಬಂಧ ಹೇರಿರುವ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕ್ರಮವನ್ನು ಸಿಲಿಕಾನ್ ವ್ಯಾಲಿಯ ದೈತ್ಯ ಕಂಪನಿಗಳಾದ ಮೈಕ್ರೋಸಾಫ್ಟ್, ಗೂಗಲ್, ಆಪಲ್ ಸೇರಿದಂತೆ 97 ಕಂಪನಿಗಳು ನೂತನ ವಲಸೆ ನೀತಿ ವಿರುದ್ಧ ನ್ಯಾಯಾಲಯದ ಮೊರೆ ಹೋಗಿವೆ. ಅಮೆರಿಕಾಧ್ಯಕ್ಷರ ನೂತನ ನಿಯಮಗಳು ಸಂವಿಧಾನ ಹಾಗೂ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಅಧ್ಯಕ್ಷರ ಈ ಆದೇಶದಿಂದಾಗಿ ಅಮೆರಿಕಾ ಕಂಪನಿಗಳ ಮೇಲೆ ಗಾಢವಾದ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಕಂಪನಿಗಳು ಅಲವತ್ತುಕೊಂಡಿವೆ. ಈ ಬಗ್ಗೆ ನ್ಯಾಯಾಲಯವು ಪರಾಮರ್ಶೆ ನಡೆಸಿ ಅಧ್ಯಕ್ಷರ ಆದೇಶಕ್ಕೆ ತಡೆ ನೀಡಬೇಕೆಂದು ಕಂಪನಿಗಳು ನ್ಯಾಯಪೀಠವನ್ನು ಪ್ರಾರ್ಥಿಸಿವೆ.

16. ನಾರಾಯಣಮೂರ್ತಿ ಏನ್ ಅಂತಾರೆ?

16. ನಾರಾಯಣಮೂರ್ತಿ ಏನ್ ಅಂತಾರೆ?

ನಾವು ಯಾವುದೇ ಸರ್ಕಾರದ ಜತೆ ಹೋರಾಡಲು ಸಾಧ್ಯವಿಲ್ಲ. ಇದು ಅಮೆರಿಕಾ, ಬ್ರಿಟನ್ ಅಥವಾ ಭಾರತ ಸರ್ಕಾರವೇ ಆಗಿರಬಹುದು. ಯಾವ ಬಿಸಿನೆಸ್ ಕೂಡ ಸರ್ಕಾರದೊಂದಿಗೆ ಹೋರಾಡಲು ಸಾಧ್ಯವಿಲ್ಲ ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹೇಳಿದ್ದಾರೆ.
ನಾವು ಸರ್ಕಾರದ ನಿರ್ಬಂಧಗಳ ಒಳಗೆ ಕೆಲಸ ಮಾಡಬೇಕಿದೆ. ಕಂಪನಿಗಳ ಸುರಕ್ಷತೆಗಾಗಿ ಹೊಸ ಅವಿಷ್ಕಾರ, ನಾವಿನ್ಯತೆಗಳನ್ನು ತರಬೇಕಿದೆ. ಆಗ ಮಾತ್ರ ಕಂಪನಿಗಳು ಚೆನ್ನಾಗಿ ಬೆಳೆಯಲು, ಲಾಭದಾಯಕ ಆದಾಯ ಗಳಿಸಲು ಸಾಧ್ಯ. ರಾಜಕಾರಣಿಗಳು ತಮ್ಮ ದೇಶದಲ್ಲಿನ ನಿರುದ್ಯೋಗ ಹೋಗಲಾಡಿಸಲು ಯಾರನ್ನು ದೂಷಿಸದೆ ಪ್ರಯತ್ನಿಸಬೇಕು ಎಂದರು.

English summary

top 10 companies that will be adversely affected due to US’ new H1-B visa rule

Top 10 companies that will be adversely affected on US new H1B visa bill. with new bill these will have to shell more money for visas. This is more than double of the current H-1B minimum wage of USD 60,000 which was established in 1989 and since then has remained unchanged
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X