For Quick Alerts
ALLOW NOTIFICATIONS  
For Daily Alerts

2040ರಲ್ಲಿ ಅಮೆರಿಕಾವನ್ನು ಹಿಂದಿಕ್ಕಲಿದೆ ಭಾರತ!

ಮುಂಬರಲಿರುವ ದಶಕಗಳಲ್ಲಿ ಜಾಗತಿಕ ಆರ್ಥಿಕತೆ ಸುಧಾರಿತದಿಂದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗೆ ಬದಲಾಗುವ ಸಾಧ್ಯತೆ ಇದೆ. 2040ರ ವೇಳೆಗೆ ಭಾರತದ ಕೊಳ್ಳುವ ಸಾಮರ್ಥ್ಯ ಅಮೆರಿಕಾವನ್ನು ಹಿಂದಿಕ್ಕಿ ವಿಶ್ವದಲ್ಲಿಯೇ 2ನೇ ಸ್ಥಾನಕ್ಕೇರಲಿದೆ.

By Siddu
|

ಜಾಗತಿಕವಾಗಿ ಭಾರತ ತುಂಬಾ ವೇಗವಾಗಿ ಬೆಳೆಯುತ್ತಿದ್ದು, ಈಗ ಎಲ್ಲರ ಕಣ್ಣು ಭಾರತದತ್ತ ನೆಟ್ಟಿದೆ. ಪ್ರಸ್ತುತ ದಿನಮಾನಗಳಲ್ಲಿ ಭಾರತ ಹಲವಾರು ಪ್ರಥಮಗಳಿಗೆ, ಸಾಹಸಗಳಿಗೆ ಕಾರಣವಾಗುತ್ತಿದೆ. ಇದೀಗ ಇನ್ನೊಂದು ವರದಿ ಪ್ರಕಾರ ಭಾರತ ಅಮೆರಿಕಾವನ್ನು ಹಿಂದಿಕ್ಕಲಿದೆ.!

ಮುಂಬರಲಿರುವ ದಶಕಗಳಲ್ಲಿ ಜಾಗತಿಕ ಆರ್ಥಿಕತೆ ಸುಧಾರಿತದಿಂದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗೆ ಬದಲಾಗುವ ಸಾಧ್ಯತೆ ಇದೆ. 2040ರ ವೇಳೆಗೆ ಭಾರತದ ಕೊಳ್ಳುವ ಸಾಮರ್ಥ್ಯ (Purchasing power parity) ದೊಡ್ಡಣ್ಣ ಖ್ಯಾತಿಯ ಅಮೆರಿಕಾವನ್ನು ಹಿಂದಿಕ್ಕಿ ವಿಶ್ವದಲ್ಲಿಯೇ 2ನೇ ಸ್ಥಾನಕ್ಕೇರಲಿದೆ ಎಂದು ಬಹುರಾಷ್ಟ್ರೀಯ ವೃತ್ತಿಪರ ಸೇವೆಗಳ ಜಾಲ PWC E7 (ಪಿಡಬ್ಲ್ಯುಸಿ ಇ7) ವರದಿ ಮಾಡಿದೆ.

PWC E7 (ಪಿಡಬ್ಲ್ಯುಸಿ ಇ7) ವರದಿ

PWC E7 (ಪಿಡಬ್ಲ್ಯುಸಿ ಇ7) ವರದಿ

ಮುಂಬರುವ 34 ವರ್ಷಗಳಲ್ಲಿ ಭಾರತ, ಬ್ರೆಝಿಲ್, ಚೀನಾ, ಇಂಡೋನೇಷಿಯಾ, ಮೆಕ್ಸಿಕೋ, ರಷ್ಯಾ ಮತ್ತು ಟರ್ಕಿಯ ಆರ್ಥಿಕತೆ ವಾರ್ಷಿಕವಾಗಿ ಸುಮಾರು 3.5ರಷ್ಟು ಏರಿಕೆಯಾಗಲಿದೆ ಎಂದು ವ್ಯಾಪಾರ ಸಲಹೆಗಾರ ಸಂಸ್ಥೆ PWC E7 (ಪಿಡಬ್ಲ್ಯುಸಿ ಇ7) ವರದಿ ಮಾಡಿದೆ.

ಜಿ-7 ದೇಶಗಳ ಬೆಳವಣಿಗೆ ಎಷ್ಟು?

ಜಿ-7 ದೇಶಗಳ ಬೆಳವಣಿಗೆ ಎಷ್ಟು?

ಬೆಳವಣಿಗೆ ಹೊಂದಿದ ಜಿ-7 ದೇಶಗಳಾದ ಫ್ರಾನ್ಸ್, ಕೆನಡಾ, ಜರ್ಮನಿ, ಇಟಲಿ, ಜಪಾನ್, ಇಂಗ್ಲೆಂಡ್ ಮತ್ತು ಅಮೆರಿಕಾಗಳಲ್ಲಿ ಆರ್ಥಿಕ ಬೆಳವಣಿಗೆ ಶೇಕಡಾ 1.6ರಷ್ಟು ಇರಲಿದೆ ಎಂದು PricewaterhouseCoopers(PwC) ತಿಳಿಸಿದೆ.

ಮೂರನೇ ಸ್ಥಾನದಲ್ಲಿ ಭಾರತ

ಮೂರನೇ ಸ್ಥಾನದಲ್ಲಿ ಭಾರತ

ಕೊಳ್ಳುವ ಸಾಮರ್ಥ್ಯದಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದು 2040ರ ವೇಳೆಗೆ ಅಮೆರಿಕಾವನ್ನು ಭಾರತ ಹಿಂದಿಕ್ಕಲಿದೆ. ಚೀನಾ ಈಗಾಗಲೇ ಕೊಳ್ಳುವ ಸಾಮರ್ಥ್ಯದಲ್ಲಿ ಅಮೆರಿಕಾವನ್ನು ಹಿಂದಿಕ್ಕಿದೆ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು

ಮುಂಬರುವ 30 ವರ್ಷಗಳ ನಂತರ ಭಾರತ, ಬಾಂಗ್ಲಾದೇಶ ಮತ್ತು ವಿಯೆಟ್ನಾಂ ಈ ಮೂರು ದೇಶಗಳು ವಿಶ್ವದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾಗಲಿವೆ ಎಂದು ವರದಿ ಮಾಡಿದೆ.

ಅಭಿವೃದ್ಧಿ ಸುಧಾರಣೆಗಳು

ಅಭಿವೃದ್ಧಿ ಸುಧಾರಣೆಗಳು

ಈ ಬೆಳವಣಿಗೆಯ ವೇಗವನ್ನು ಸಾಧಿಸಲು ಸರ್ಕಾರಗಳು ಉದಯೋನ್ಮುಖ ಮಾರುಕಟ್ಟೆ, ಬೃಹತ್ ಆರ್ಥಿಕ ಸ್ಥಿರತೆ, ನೈಸರ್ಗಿಕ ಸಂಪನ್ಮೂಲಗಳ ಸಮರ್ಪಕ ಬಳಕೆ, ಪರಿಣಾಮಕಾರಿ ರಾಜಕೀಯ ಮತ್ತು ಕಾನೂನು ಸಂಸ್ಥೆಗಳ ಅಭಿವೃದ್ಧಿ ಸಾಧಿಸಬೇಕು. ದೀರ್ಘಾವಧಿಯ ಆರ್ಥಿಕ ಅಭಿವೃದ್ಧಿಗಾಗಿ ನೀತಿಗಳನ್ನು ರೂಪಿಸುವುದು ತುಂಬಾ ಕಠಿಣ ಸವಾಲು. ಹೀಗಾಗಿ ಅಂತಹ ಉತ್ತಮ ಸಮರ್ಥ ತಜ್ಞರ ಅಗತ್ಯ ಇರುತ್ತದೆ. ಜಾಗತಿಕವಾಗಿ ಅಭಿವೃದ್ಧಿ ಸಾಧಿಸುವುದು, ನಷ್ಟ ಅನುಭವಿಸುವುದು ಸಾಮಾನ್ಯ. ಸ್ಥಿರತೆ, ಅಸ್ಥಿರತೆ, ನಿಶ್ಚಿತತೆ, ಅನಿಶ್ಚಿತತೆ ಎದುರಾಗುವುದು ಸಾಮಾನ್ಯ.

ಭಾರತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆ

ಭಾರತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆ

ಎಕನಾಮಿಸ್ಟ್ ಗ್ರೂಪ್ ನ ಸಂಶೋಧನ ಮತ್ತು ವಿಶ್ಲೇಷಣಾ ವಿಭಾಗದ ಅಂಗಸಂಸ್ಥೆ ಎಕನಾಮಿಸ್ಟ್ ಇಂಟಲಿಜೆನ್ಸ್ ಯುನಿಟ್(ಇಐಯು) ಭಾರತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆ ಎಂದು ವರದಿ ಮಾಡಿದೆ. ಭಾರತ ತುಂಬಾ ವೇಗವಾಗಿ ಬೆಳೆಯುತ್ತಿರುವ ಅತಿದೊಡ್ಡ ಆರ್ಥಿಕತೆಯಾಗಿದ್ದು, ಚೀನಾವನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಇರಾನ್ ಉತ್ತಮ ಪ್ರಗತಿ ಸಾಧಿಸುತ್ತಿದ್ದು, ಆಪ್ರಿಕಾ ಖಂಡದ ಕೆಲ ದೇಶಗಳು ಉತ್ತಮ ಬೆಳವಣಿಗೆ ಸಾಧಿಸುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅನಾಣ್ಯೀಕರಣದಿಂದಾಗಿ ನಗದು ಕೊರತೆ ಉಂಟಾಗಿರುವ ಕಾರಣ 2016-17ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಶೇ. 7.3 ರಿಂದ 6.5ಕ್ಕೆ ಕುಸಿದಿದೆ ಎಂದು ಹೇಳಿದೆ. ಇದಾಗ್ಯೂ, ಭಾರತ ತುಂಬಾ ವೇಗವಾಗಿ ಬೆಳೆಯುತ್ತಿರುವ ಜಗತ್ತಿನ ಅತಿದೊಡ್ಡ ಆರ್ಥಿಕತೆ ಎಂದು ವರದಿ ಮಾಡಿದೆ.

ಭಾರತ ಜಗತ್ತಿನ 7ನೇ ಶ್ರೀಮಂತ ದೇಶ

ಭಾರತ ಜಗತ್ತಿನ 7ನೇ ಶ್ರೀಮಂತ ದೇಶ

ಭಾರತ ಅತಿ ದೊಡ್ಡ ಜನಸಂಖ್ಯೆಯಿಂದಾಗಿ ಭಾರತವು ಜಗತ್ತಿನ 10 ಸಿರಿವಂತ ದೇಶಗಳ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ. ಭಾರತ ಜಗತ್ತಿನಲ್ಲಿ ತಂತ್ರಜ್ಞಾನ ಆಧಾರಿತ, ತಂತ್ರಜ್ಞಾನ ರಹಿತ, ಸ್ಟಾರ್ಟ್ಅಪ್, ಇ-ಕಾಮರ್ಸ್ ಕ್ಷೇತ್ರದಲ್ಲಿ ಮೇಲುಗೈ ಸಾಧಿಸುತ್ತಿದೆ. ಅಲ್ಲದೇ ತಂತ್ರಜ್ಞಾನ ಮತ್ತು ಉದ್ದಿಮೆ ವಹಿವಾಟಿನ ಪ್ರಮುಖ ದೇಶವಾಗಿದೆ. ಭಾರತವು ಒಟ್ಟು ರೂ. 375 ಲಕ್ಷಕೋಟಿ ಸಂಪತ್ತನ್ನು ಹೊಂದಿದೆ. ಭಾರತ ತುಂಬಾ ವೇಗವಾಗಿ ಬೆಳೆಯುತ್ತಿರುವ ದೇಶಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ.

English summary

Indian Economy Will Overtake US By 2040-pwc

The global economic order is expected to shift from advanced to emerging economies over the next few decades, and by 2040 India could edge past the US to become the world's second largest economy in purchasing power parity (PPP) terms, says pwc report
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X